ಸಾಮಾಜಿಕ ಉದ್ಯಮಶೀಲತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾಜಿಕ ಉದ್ಯಮಶೀಲತೆ ಎಂಬುದು ಸಮಾಜ ಸೇವಕ ನೊಬ್ಬನು ಕೈಗೊಳ್ಳುವ ಕೆಲಸವಾಗಿದೆ. ಯಾವುದೇ ಸಮಾಜ ಸೇವಕನೊಬ್ಬ ಸಮಾಜದ ಸಮಸ್ಯೆಯೊಂದನ್ನು ಗುರುತಿಸಿ, ಬಳಿಕ ತನ್ನ ಉದ್ಯಮಶೀಲ ತತ್ವಗಳನ್ನು ಬಳಸಿಕೊಂಡು ವಾಣಿಜ್ಯ ಉದ್ಯಮವೊಂದನ್ನ ಹುಟ್ಟುಹಾಕಿ, ವ್ಯವಸ್ಥಿತ ರೀತಿಯಲ್ಲಿ ಅದನ್ನು ಪೋಷಿಸುತ್ತ, ಬೆಳೆಸಿಕೊಂಡು ಹೋಗುವುದನ್ನು ಮತ್ತು ಆ ಮೂಲಕ ಸಮಾಜ ಮತ್ತು ಉದ್ಯಮ ಕ್ಷೇತ್ರಗಳೆರಡರಲ್ಲೂ ಒಂದು ಸಾಮಾಜಿಕ ಬದಲಾವಣೆಯನ್ನು ತರುವ ಸಾಮಾಜಿಕ ಸಾಹಸದ ಪ್ರಯತ್ನವನ್ನೇ ಸಾಮಾಜಿಕ ಉದ್ಯಮಶೀಲತೆ ಅಥವಾ ಸಮಾಜಸೇವೆ ಎಂದು ಕರೆಯಬಹುದಾಗಿದೆ. ವ್ಯಾಪಾರೋದ್ಯಮಿಯೊಬ್ಬನು ಏನೇ ಮಾಡಿದರೂ ಅದು ತನ್ನ ಲಾಭದ ಮತ್ತು ತನಗೆ ಸಿಕ್ಕುವ ಆದಾಯದ ಕುರಿತೇ ಆಗಿರುತ್ತದೆ. ಆದರೆ ಸಮಾಜೋದ್ಯಮಿಯ ಮಾತು ಹಾಗಲ್ಲ. ಒಬ್ಬ ಸಮಾಜೋದ್ಯಮಿಯ ಗುರಿ ಸಂಪೂರ್ಣವಾಗಿ ಸಮಾಜಕ್ಕೆ ದಕ್ಕುವ ಲಾಭದ ಕುರಿತೇ ಆಗಿರುತ್ತದೆ. ಹೀಗೆ, ಸಮಾಜೋದ್ಯಮಿಯ ಅಥವಾ ಸಮಾಜಸೇವಕನೊಬ್ಬನ ಬಹುಮುಖ್ಯ ಮತ್ತು ಉದ್ದೇಶಿತ ಗುರಿಯೆಂದರೆ ಸಾಮಾಜಿಕ ಮತ್ತು ಪರಿಸರಾತ್ಮಕ ಬೆಳವಣಿಗೆಗೆ ಶ್ರಮಿಸುವುದೇ ಆಗಿದೆ. ಆದರೂ, ಸಾಮಾನ್ಯವಾಗಿ ಸಮಾಜೋದ್ಯಮಿಯಾಗಲಿ ಅಥವಾ ಸಮಾಜಸೇವಕನಾಗಲಿ ಸ್ವಯಂಸೇವೆಯನ್ನು ನಿರೀಕ್ಷಿಸುವ ಮತ್ತು ಲಾಭರಹಿತ ಕ್ಷೇತ್ರಗಳಲ್ಲೇ[೧] ಕೆಲಸ ಮಾಡಬೇಕಾಗಿ ಬರುತ್ತದೆ. ಇಲ್ಲಿ ಯಾವ ಲಾಭಾಂಶದ ನಿರೀಕ್ಷೆಯೂ ಇರಲಾರದು ಎಂಬುದನ್ನು ಗಮನಿಸಬೇಕು. ಇದನ್ನೂ ಗಮನಿಸಿ ಸಾಂಸ್ಥಿಕ ಸಮಾಜ ಸೇವಾ ಸಂಸ್ಥೆಗಳು

ಇತಿಹಾಸ[ಬದಲಾಯಿಸಿ]

1960 ಮತ್ತು 1970ರ ದಶಕದಲ್ಲಿ ಸಾಮಾಜಿಕ ಬದಲಾವಣೆ ಎಂಬುದರ ಕುರಿತಾದ ವಿಶ್ಲೇಷಣೆಯಲ್ಲಿ ಸಮಾಜೋದ್ಯಮ ಮತ್ತು ಸಾಮಾಜಿಕ ಉದ್ಯಮಶೀಲತೆ ಎಂಬೆರಡು ಪದಗಳ ಬಳಕೆಯಾದದ್ದು ಕಂಡು ಬರುತ್ತದೆ.[೨] Ashoka: Innovators for the Public,[೩] ನ ಸಂಸ್ಥಾಪಕ ಬಿಲ್ ಡ್ರೆಟನ್ ಮತ್ತು ಚಾರ್ಲ್ಸ್ ಲೆಡ್ ಬೀಟರ್[೪] ಮೊದಲಾದವರುಗಳಿಂದ ಮೊಟ್ಟ ಮೊದಲ ಸಲ ಬಳಕೆಗೊಂಡು, ಮನ್ನಣೆ ಸಾಧಿಸಿದ ಈ ಪದ ಇತ್ತೀಚಿಗೆ ಅಂದರೆ 1980 ಮತ್ತು 1990ರ ದಶಕದಿಂದೀಚೆಗಷ್ಟೇ ವ್ಯಾಪಕವಾಗಿ ಬಳಸಲ್ಪಡುತ್ತಿದೆ ಎಂಬುದು ತಿಳಿದುಬರುತ್ತದೆ. 1950 ರಿಂದ 1990 ರ ತನಕವೂ ಮಿಷೆಲ್ ಯಂಗ್ ಎನ್ನುವವರು ಸಾಮಾಜಿಕ ಉದ್ಯಮದ ಮೂಲ ಮತ್ತು ಬಹುಮುಖ್ಯ ಉತ್ತೇಜನಕಾರರಾಗಿದ್ದುದು ತಿಳಿದು ಬರುತ್ತದೆ. ಮುಂದೆ 1980 ರಲ್ಲಿ, ಹಾರ್ವರ್ಡ್ ನ ಪ್ರಾಧ್ಯಾಪಕ ಡೇನಿಯಲ್ ಬೆಲ್ ಅವರು ಮಿಷೆಲ್ ಯಂಗ್ ರನ್ನು 'ವಿಶ್ವದ ಅತ್ಯಂತ ಯಶಸ್ವಿ ಸಮಾಜೋದ್ಯಮಿ' ಎಂದೇ ಬಣ್ಣಿಸುತ್ತಾರೆ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ವಿಶ್ವದಾದ್ಯಂತ ಮಿಷೆಲ್ ಯಂಗ್ ಅವರು ಅತ್ಯಂತ ಯಶಸ್ವಿಯಾಗಿ 60ಕ್ಕೊ ಹೆಚ್ಚು ಸಾಮಾಜಿಕ ಸಂಸ್ಥೆಗಳನ್ನು ಹುಟ್ಟುಹಾಕಿರುವುದು ಮತ್ತು ಅಷ್ಟೇ ಅಲ್ಲದೆ UKಯಲ್ಲಿ, ಸಮಾಜೋದ್ಯಮದ ಸರಣಿ ಶಾಲೆಗಳನ್ನು ಸ್ಥಾಪಿಸಿರುವುದು. ಮತ್ತೊಬ್ಬ ಪ್ರಭಾವಿ ಮತ್ತು ಯಶಸ್ವಿ ಸಮಾಜೋದ್ಯಮಿಯನ್ನು ಹೆಸರಿಸುವುದಾದರೆ ಲಾರ್ಡ್ ಮೊಸನ್ OBE.ಅಂದ್ರ್ಯೂ ಮೊಸನ್ ಅವರನ್ನಂತೂ 2007ರಲ್ಲಿ, ಅವರು ಸಮಾಜೋದ್ಯಮದ ಕ್ಷೇತ್ರದಲ್ಲಿ ಮೊಟ್ಟಮೊದಲಿಗರಾಗಿ ಮಾಡಿದ ಅನನ್ಯ ಸುಧಾರಣಾ ಸೇವೆಗಳು ಮತ್ತು ಸಾಧನೆಯನ್ನು ಗಮನಿಸಿ, ಅತ್ಯಂತ ಗರಿಷ್ಠ ಪದವಿಯನ್ನು ನೀಡಿ ಗೌರವಿಸಲಾಗಿದೆ. ಪೂರ್ವ ಲಂಡನ್ ನಲ್ಲಿ ಅವರು ಸ್ಥಾಪಿಸಿರುವ 'ಬ್ರೋಮ್ಲಿ ಬೌ ಸೆಂಟರ್'ನ್ನೂ ಇಲ್ಲಿ ಹೆಸರಿಸಬಹುದಾಗಿದೆ. ಸಮಾಜೋದ್ಯಮ: ಸಮುದಾಯಗಳು ಕಾರ್ಯ ನಿರ್ವಹಿಸುವಂತೆ ಮಾಡುವುದು ಹೇಗೆ?[೫] ಎಂಬ ಕೃತಿಯಲ್ಲಿ ಅವರೇ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ, ಅಂದ್ರ್ಯೂ ಮೊಸನ್ ಸಹಯೋಗಿತ್ವದಲ್ಲಿ ಬೇರೆಯವರು ಕೂಡ ಈ ಸಾಮಾಜಿಕ ಪುನರುಜ್ಜೀವನದ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಕುರಿತು ಸಲಹೆ, ಸಹಾಯಗಳನ್ನೂ ಒದಗಿಸುತ್ತಿದ್ದಾರೆ.[೬]

ಸಾಮಾಜಿಕ ಉದ್ಯಮಿಗಳು ಮತ್ತು ಸಾಮಾಜಿಕ ಉದ್ಯಮಶೀಲತೆ ಅಥವಾ ಸಮಾಜಸೇವೆ ಎಂಬ ಪದಗಳು ಕೇಳುವುದಕ್ಕೆ ಹೊಸವೆನಿಸಿದರೂ, ಇತಿಹಾಸದ ತುಂಬೆಲ್ಲ ಅವುಗಳ ಬಳಕೆಯಾಗಿರುವುದು ಕಾಣಸಿಗುತ್ತವೆ. ಇತಿಹಾಸ ಸ್ಮರಣೀಯರಾದ ಹಲವಾರು ಸಮಾಜಸೇವಕರ, ಸಮಾಜೋದ್ಯಮಿಗಳ ಕೆಲ ಅಭೂತಪೂರ್ವ ಉದಾಹರಣೆಗಳನ್ನಿಲ್ಲಿ ನಾವು ಪಟ್ಟಿ ಮಾಡುವುದಾದರೆ, ಅಗ್ರಸ್ಥಾನದಲ್ಲಿ ನಿಲ್ಲುವವರೆಂದರೆ ಫ್ಲಾರೆನ್ಸ್ ನೈಟಿಂಗೆಲ್ (ಮೊಟ್ಟಮೊದಲು ಶುಶ್ರೂಷಕಿಯರ ಶಾಲೆಯನ್ನು ಸ್ಥಾಪಿಸಿದವರು ಮತ್ತು ಅಧುನಿಕ ಶುಶ್ರೂಷಣಾ ಪದ್ಧತಿಯನ್ನು ರೂಢಿಗೆ ತಂದವರು), ರಾಬರ್ಟ್ ಓವೆನ್ (ಸಹಕಾರ ಚಳುವಳಿಯನ್ನು ಹುಟ್ಟುಹಾಕಿದವರು), ಮತ್ತು ವಿನೋಬಾ ಭಾವೆ (ಭಾರತದ ಭೂದಾನ ಚಳುವಳಿಯ ಹರಿಕಾರ). 19ನೆಯ ಮತ್ತು 20ನೆಯ ಶತಮಾನಗಳೆರಡರಲ್ಲೂ ಕೆಲವು ಅತ್ಯಂತ ಯಶಸ್ವೀ ಸಮಾಜ ಸೇವಾ ಸಂಸ್ಥೆಗಳು ನಾಗರಿಕ, ರಾಜಕೀಯ, ಮತ್ತು ವ್ಯಾಪಾರೋದ್ಯಮ ಮೊದಲಾದ ಮೂರು ಮೂರು ದೋಣಿಗಳಲ್ಲಿ ಕಾಲ್ಗಳನ್ನಿಟ್ಟು ಪಯಣ ಮಾಡಿದ ಉದಾಹರಣೆಗಳೂ ಇವೆ. ಆ ಸಮಯದಲ್ಲಿ ಅವು ಹುಟ್ಟುಹಾಕಿದ ತತ್ವಗಳು ಮುಂದೆ ಸಮಾಜದ ಮುಖ್ಯವಾಹಿನಿ ನಾಗರೀಕ ಸೇವೆಗಳಾದ ಸಾಮಾಜಿಕ ಕ್ಷೇಮಾಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಬಳಸಲ್ಪಟ್ಟಿವೆ.

ಪ್ರಚಲಿತ ಪದ್ಧತಿಗಳು[ಬದಲಾಯಿಸಿ]

ಸಮಕಾಲೀನ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಯಶಸ್ಸು ಸಾಧಿಸಿರುವ, ಸುಪ್ರಸಿದ್ಧ ಸಮಾಜೋದ್ಯಮಿ ಮೊಹಮ್ಮದ್ ಯೂನಸ್ ಅವರನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವರು ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಹಾಗೂ ಅಭಿವೃದ್ಧಿ ಹೊಂದುತ್ತಲೇ ಇರುವ ಅದರ ಸಾಮಾಜಿಕ ಸೇವಾ ಉದ್ಯಮಗಳ ಬೃಹತ್ ಸರಣಿಯು ಅವರಿಗೆ 2006ರ ನೊಬೆಲ್ ಶಾಂತಿ ಪುರಸ್ಕಾರವನ್ನು ಕೊಡಮಾಡಿಕೊಟ್ಟಿದೆ.[೭] ಯೂನಸ್ ಮತ್ತವರ ಗ್ರಾಮೀಣ ಬ್ಯಾಂಕ್ ಸೇವೆಗಳು ಪ್ರತಿಧ್ವನಿಸುವ ಬಹುಮುಖ್ಯ ಉದ್ದೇಶಗಳು ಆಧುನಿಕ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಖಂಡವಾದ ಒಡಂಬಡಿಕೆಗಳು ಮತ್ತು ಲಾಭದಾಯಕ ವ್ಯಾಪಾರೋದ್ಯಮದ ತತ್ವಗಳನ್ನು ಅಳವಡಿಸಿ, ಆ ಮೂಲಕ ಸಾಮಾಜಿಕ ಉನ್ನತಿಯನ್ನು ಸಾಧಿಸಬಹುದೆಂಬುದನ್ನು ಒತ್ತಿಹೇಳುತ್ತವೆ.[೮] ಬಾಂಗ್ಲಾದೇಶ ಮತ್ತು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಅಮೇರಿಕೆಯಂತಹ (USA) ಕೆಲ ದೇಶಗಳಲ್ಲಿ ಕೂಡ, ಸಾಮಾಜಿಕ ಸೇವಾಸಂಸ್ಥೆಗಳು, ಸರಕಾರದಿಂದ ಮಾಡಲಿಕ್ಕಾಗದೇ ಇರುವ ಕೆಲಸವನ್ನು ಸಾಧಿಸಿ ತೋರಿಸಿವೆಯಲ್ಲದೆ, ಆ ಮೂಲಕ ಒಂದಷ್ಟು ಕಂದರವನ್ನು ಮುಚ್ಚಿಹಾಕಿವೆ. ಇನ್ನು, ಯೂರೋಪ್ ಮತ್ತು ದಕ್ಷಿಣ ಅಮೇರಿಕೆಯಂತಹ ದೇಶಗಳಲ್ಲಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳೆರಡರಲ್ಲೂ ಈ ಕೆಲಸವನ್ನು ಹೆಚ್ಚಾಗಿ ಸಾರ್ವಜನಿಕ ಸಂಸ್ಥೆಗಳೇ ನಿರ್ವಹಿಸಿಸುವ ಕಡೆಗೆ ಅವರು ಗಮನವನ್ನು ಕೊಟ್ಟಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ ಸಾಮಾಜಿಕ ಸಂಸ್ಥೆಯೊಂದನ್ನು ನಡೆಸುವ ವ್ಯಕ್ತಿಯೇ ಆ ಸಂಸ್ಥೆಯ ನಿರ್ಮಾತೃವೋ, ಸಹ-ನಿರ್ಮಾತೃವೋ ಅಥವಾ ಮುಖ್ಯ ಕಾರ್ಯದರ್ಶಿಯೋ (ಅಧ್ಯಕ್ಷ, ಖಜಾಂಚಿ, ಅಥವಾ ಮುಖ್ಯ ಕಾರ್ಯನಿರ್ವಾಹಕ (CEO), ಪ್ರಧಾನ ಅಧಿಕಾರಿ) ಆಗಿರುತ್ತಾನೆ. ಇಂಥ ಸಂಸ್ಥೆಗಳನ್ನು ಸಾಮಾನ್ಯವಾಗಿ NGOಗಳೆಂದು ಕರೆಯಲಾಗುತ್ತದೆ ಮತ್ತು ಈ ಸಂಸ್ಥೆಗಳು ಕೆಲ ಸೇವಾಕಾರ್ಯಗಳ ಮೂಲಕವೇ ಸಂಸ್ಥೆಗೆ ಬೇಕಾಗುವ ಹಣವನ್ನು, ಕೆಲವೊಮ್ಮೆ ವಸ್ತುರೂಪದಲ್ಲಿ ಕೊಡುಗೆಗಳನ್ನು ಸಂಗ್ರಹಿಸುತ್ತವೆ. ಇವನ್ನು ಸಾಮಾನ್ಯವಾಗಿ ನಿಧಿ ಸಂಗ್ರಹಣಾ ಚಟುವಟಿಕೆಗಳು ಅಥವಾ ಸಾಮುದಾಯಿಕ ಚಟುವಟಿಕೆಗಳೆಂದು ಕರೆಯಲಾಗುತ್ತದೆ. 'ಬಾಲ ಹಕ್ಕುಗಳು ಮತ್ತು ನೀವು' (Child Rights and You) ಎಂಬ ಸಂಸ್ಥೆಯ ರಿಪ್ಪನ್ ಕಪೂರ್ ಅಥವಾ ಯೂತ್ ಯುನೈಟೆಡ್(Youth United) ನ ಜ್ಯೋತೀಂದ್ರನಾಥ - ಇವರೆಲ್ಲ ಕ್ರಮವಾಗಿ ತಾವೇ ಹುಟ್ಟು ಹಾಕಿದ ಸಮಾಜ ಸೇವಾಸಂಸ್ಥೆಗಳಿಗೆ ಸ್ವತಃ ತಾವೇ ನಿರ್ಮಾತೃಗಳಾದವರು. ಭಾರತದಲ್ಲಿನ ಹಸಿವಿನ ಸಮಸ್ಯೆಯನ್ನು ಹೋಗಲಾಡಿಸುವುದಕ್ಕೊಸ್ಕರವೇ, ಭೂಕ್.ಕಾಂ ನ ಜೇ ವಿಕಾಸ್ ಸುತಾರಿಯಾ ಅವರು ಸಂಪೂರ್ಣವಾಗಿ ಅಂತರ್ಜಾಲದ ಮೊರೆ ಹೋಗಿ ಅದರ ಶಕ್ತಿಯನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿರುವವರು.

ಸ್ವಾರ್ಥ ಲಾಭಗಳ ನಿರೀಕ್ಷೆಯಿರದೇ, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತದಲ್ಲಿನ ಮತ್ತೊಂದು ಸಮಾಜ ಸೇವಾ ಸಂಸ್ಥೆಯೆಂದರೆ 'ರಂಗ್ ದೇ'.[೧] ರಾಮಕೃಷ್ಣ ಮತ್ತು ಸ್ಮಿತಾ ಅವರುಗಳಿಂದ ಜನವರಿ 2008ರಲ್ಲಿ ನಿರ್ಮಿತವಾದ ಈ ಸಂಸ್ಥೆಯು, ಅಂತರ್ಜಾಲವನ್ನು ಒಂದು ಉತ್ತಮ ವೇದಿಕೆಯನ್ನಾಗಿಸಿಕೊಂಡು, ತುಂಬಾ ಕಡಿಮೆ ಬೆಲೆಗೆ, ಮೈಕ್ರೋ ಕ್ರೆಡಿಟ್ ಕಾರ್ಡುಗಳನ್ನು ಗ್ರಾಮೀಣ ಮತ್ತು ನಗರದ ಬಡಜನತೆಗೆ ಒದಗಿಸಿಕೊಡುವಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತಿದೆ. ಒಬ್ಬ ಜನಸಾಮಾನ್ಯನೂ ಕೂಡಾ ಭಾರತದಾದ್ಯಂತ ನೇರ ಹಣ ಹೂಡಿಕೆಯನ್ನು ಈ ವ್ಯವಸ್ಥೆಯಲ್ಲಿ ಮಾಡಬಹುದಾಗಿದೆ. ಇಲ್ಲಿ ಪ್ರತಿಯೊಬ್ಬರ ಹೂಡಿಕೆಗೆ ಸಂಬಂಧಿಸಿದ ವಿವರಗಳನ್ನು ನೇರ ಅಂತರ್ಜಾಲದಲ್ಲಿ ನೋಡಬಹುದಾಗಿದೆ ಹಾಗೂ ಅವರವರ ಹೂಡಿಕೆಗಳ ವಿವರಗಳನ್ನು ನೇರವಾಗಿಯೇ ಪಡೆಯಬಹುದಾಗಿದೆ. ಜೊತೆಗೆ, ಪ್ರತಿ ವ್ಯಕ್ತಿಯ ಆದಾಯವೂ ಸಹ ನಿಗದಿತ ಸಮಯಕ್ಕೆ ಆಯಾಯ ಹೂಡಿಕೆದಾರನಿಗೆ 2% ಶುಲ್ಕದೊಂದಿಗೆ ಸಿಕ್ಕುಬಿಡುತ್ತದೆ.

ROI

ಇವತ್ತು, ಇಡೀ ವಿಶ್ವದಲ್ಲಿಯೇ, ಲಾಭರಹಿತ ಸಂಸ್ಥೆಗಳಾಗಲಿ, ಸರಕಾರೇತರ ಸಂಸ್ಥೆಗಳಾಗಲಿ, ಸರಕಾರಗಳಾಗಲಿ, ಪ್ರತಿಷ್ಠಾನಗಳಾಗಲಿ ಅಥವಾ ಸ್ವತಂತ್ರ ವ್ಯಕ್ತಿಯಾಗಲಿ, ಪ್ರತಿಯೊಬ್ಬರೂ ಈ ಸಾಮಾಜಿಕ ಸಂಘ-ಸಂಸ್ಥೆಗಳನ್ನು ನಿರ್ಮಿಸುವಲ್ಲಿ, ನಿಧಿ ಸಂಗ್ರಹಿಸುವಲ್ಲಿ, ಅಥವಾ ಇಂಥ ಸಂಸ್ಥೆಗಳಿಗೆ ಸಲಹೆ ನಿರ್ದೇಶನಗಳನ್ನು ನೀಡುವಲ್ಲಿ - ಈ ಎಲ್ಲದರಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ. ಸಂಖ್ಯಾತ್ಮಕವಾಗಿ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿರುವ ಪದವಿ ವಿದ್ಯಾಲಯಗಳು, ವಿಶ್ವವಿದ್ಯಾಲಯಗಳು ಸಹ ಸಮಾಜೋದ್ಯಮದ ಕುರಿತು ಶಿಕ್ಷಣ ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು, ತರಬೇತಿ ಕಾರ್ಯಾಗಾರಗಳನ್ನು ರೂಪಿಸುತ್ತಲೇ ಇವೆ.

ಯುಕೆ(UK) ಯಲ್ಲೂ ಕೂಡ 2002ರಲ್ಲಿ ಸುಮಾರು ಏಳು ಲಾಭರಹಿತ ಸೇವಾ ಸಂಸ್ಥೆಗಳನ್ನು ಅನ್ ಲಿಮಿಟೆಡ್(UnLtd)ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಸುಮಾರು 100ಮಿಲಿಯನ್ ಪೌಂಡುಗಳ ದತ್ತಿಯನ್ನು ಹೊಂದಿದ್ದು ಅದರ ಮುಖ್ಯ ಉದ್ದೇಶ ಯುಕೆ(UK)ಯಲ್ಲಿನ ಸಮಾಜ ಸೇವಾಸಂಸ್ಥೆಗಳ ಅಭಿವೃದ್ಧಿ ಕಾರ್ಯಗಳಲ್ಲಿ ಈ ಹಣವನ್ನು ಹೂಡುವುದಾಗಿದೆ. ಅನ್ ಲಿಮಿಟೆಡ್(UnLtd)ಸಂಸ್ಥೆಯು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಧನರೂಪದ ಪುರಸ್ಕಾರಗಳನ್ನು ನೀಡುತ್ತದೆಯಲ್ಲದೆ, ತರಬೇತಿ, ಶಿಕ್ಷಣ, ಮತ್ತು ಅಂತರ್ಜಾಲದ ಮುಖಾಂತರ ಪರಸ್ಪರರೊಡನೆ ಸಂಪರ್ಕದಲ್ಲಿರಲು ಸಾಧ್ಯವಾಗುವಂತೆ ಪ್ರಾಯೋಗಿಕವಾಗಿ ತರಬೇತಿಯನ್ನು ಕೊಡುತ್ತಲೇ ಬಂದಿದೆ. ಈ ಎಲ್ಲ ಅಂಶಗಳೂ, ಸಾಮುದಾಯಿಕ ಯೋಜನೆಗಳನ್ನು ಅಭಿವೃದ್ಧಿಗೊಳಿಸುವಲ್ಲಿ ತುಂಬಾ ಸಹಾಯಕಾರಿಯಾಗಿವೆ. ಅನ್ ಲಿಮಿಟೆಡ್(UnLtd)ಸಂಸ್ಥೆಯ ಮತ್ತೊಂದು ಬಹುಮುಖ್ಯ ವ್ಯಾಪಾರೀ ಹೆಜ್ಜೆಯೆಂದರೆ, ಆಂತರಿಕವಾಗಿ ಸಲಹಾ ಘಟಕವೊಂದನ್ನು ಸ್ಥಾಪಿಸುವುದು ಮತ್ತು ಹಲವಾರು ಅತ್ಯುತ್ತಮ ಸೇವಾ ಸಂಸ್ಥೆಗಳಿಗೆ ವ್ಯಾಪಾರದಲ್ಲಿ ಬೆಂಬಲ ಕೊಡುವುದು ಮತ್ತು ಅವುಗಳಿಗೆ ತಂತಮ್ಮ ಸಾಂಸ್ಥಿಕ ಮಿತಿಯಲ್ಲಿ, ಹೆಚ್ಚಿನ ಮಟ್ಟದ ಸ್ಥಾನ ತಲುಪಲು ಹೂಡಿಕೆಯ ಹಣವನ್ನು ಸದಾ ಜಾರಿಯಲ್ಲಿಟ್ಟಿರುವುದು - ಇವೇ ಮೊದಲಾದ ಉದ್ದೇಶಗಳನ್ನು ಹೊಂದಿದೆ. ಅನ್ ಲಿಮಿಟೆಡ್(UnLtd)ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಮತ್ತೊಂದು ಮುಖ್ಯವಾದ ಅಂಶವೆಂದರೆ ವಿಶ್ವದ ಮೊದಲ ದರ್ಜೆಯ ಗುರುತಿನ ಆಕರವಾಗುವುದು ಮತ್ತು ಸಮಾಜೋದ್ಯಮವನ್ನೇ ಕೇಂದ್ರವಾಗಿಟ್ಟುಕೊಂಡು ಯೋಚಿಸುವುದು. ಇದರ ಬಹುಮುಖ್ಯ ಉದ್ದೇಶ, ಸಾಮುದಾಯಿಕ ಪುನುರುತ್ಪನ್ನದಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ, ಮತ್ತು ಅಭಿವೃದ್ಧಿಯ ತಂತ್ರಗಾರಿಕೆಯಲ್ಲಿ ಸಾಮಾಜಿಕ ಉದ್ಯಮಶೀಲತೆಯ ಪಾತ್ರದ ಕುರಿತು ಜಾಗತಿಕ ವ್ಯಾಪಾರ, ಸಾರ್ವಜನಿಕ ಧೋರಣೆಗಳು, ಹಾಗೂ ಶೈಕ್ಷಣಿಕ ಚರ್ಚೆಗಳನ್ನು ಮುನ್ನಡೆಸುವುದಾಗಿದೆ.

ದಿ ಜಾರ್ಜ್ ಫೌಂಡೆಶನ್ ನವರ ಮಹಿಳಾ ಸಶಕ್ತೀಕರಣ ಕಾರ್ಯಕ್ರಮವು ಮಹಿಳೆಯರ ಅಭಿವೃದ್ಧಿಯನ್ನು ಮುಖ್ಯವಾಗಿಟ್ಟುಕೊಂಡು ಅವರಿಗೆ, ಶಿಕ್ಷಣ, ಸಹಕಾರಿ ಪದ್ಧತಿಯ ವ್ಯವಸಾಯ, ಉದ್ಯೋಗ, ಉಳಿತಾಯದ ಬಗೆಗೆ ಮಾಹಿತಿ ಮತ್ತು ವ್ಯಾಪಾರ ಅಭಿವೃದ್ಧಿ ಮೊದಲಾದವುಗಳ ಬಗ್ಗೆ ಉತ್ತಮ ತರಬೇತಿಯನ್ನು ಒದಗಿಸುತ್ತಿದೆ. 2006ರಲ್ಲಿ, ಬಲದೇವ್ ಫಾರ್ಮ್ಸ್ ಎಂಬುವರಿಂದ ಸಹಕಾರ ಕೃಷಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಕ್ಷಿಣ ಭಾರತದಲ್ಲೇ ಎರಡನೆಯ, ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಬಾಳೆ ಬೆಳೆಯುವುದಕ್ಕೆ ಹೆಸರಾಗಿರುವ ಬಲದೇವ್ ಫಾರ್ಮ್ಸ್ ನವರು ಆ ವರ್ಷ 250 acres (1.0 km2)ಕಡಿಮೆ ಸಾಗುವಳಿ [೯] ಮಾಡಿದ್ದರು. ತಮ್ಮ ಫಾರ್ಮ್ ನಿಂದ ಬಂದ ಲಾಭವನ್ನೆಲ್ಲ ಅವರು ತಮ್ಮ ಕೆಲಸಗಾರರ ಆರ್ಥಿಕ ಸುಧಾರಣೆಗಾಗಿ ಮತ್ತು ಸಂಸ್ಥೆಯ ಇತರ ಧರ್ಮಾರ್ಥ ಕಾರ್ಯಗಳಿಗಾಗಿ ವಿನಿಯೋಗಿಸಿದ್ದರು.[೯]

ಈ ಕ್ಷೇತ್ರದ ಇನ್ನೂ ಕೆಲವರು ಲಾಭ ಮತ್ತು ಬದಲಾವಣೆ ಎರಡಕ್ಕೂ ಎಂಬಂತೆ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇದಕ್ಕೆ ತೀರ ಇತ್ತೀಚಿನ ಒಂದು ಸಂಗತಿಯನ್ನು ಉದಾಹರಿಸುವುದಾದರೆ, ಆಂಧ್ರಪ್ರದೇಶದ ವಿಕ್ರಂ ಅಕುಲ ಎಂಬುವವರು SKS ಮೈಕ್ರೋಫೈನಾನ್ಸ್ ಎಂಬ ಸಮಾಜಸೇವಾ ಸಂಸ್ಥೆಯನ್ನು ಸ್ಥಾಪಿಸಿ, ಅದಕ್ಕೆ ತಾವೇ ಮುಖ್ಯ ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮ್ಯಾಕ್ ಕಿನ್ಸ್ಲೆ ಹಳೆಯ ವಿದ್ಯಾರ್ಥಿ ಬಳಗದ ಪ್ರಮುಖರೂ ಆಗಿರುವ ಅವರು ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಮೈಕ್ರೋಲೆಂಡಿಂಗ್ ಅಂದರೆ ಸೂಕ್ಷ್ಮಸಾಲ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಲಾಭ ತೆಗೆಯುವುದಾಗಿದ್ದರೂ, ಅದು ಅಲ್ಲಿನ ಹಳ್ಳಿಗಳಲ್ಲಿ, ಮುಖ್ಯವಾಗಿ ಗ್ರಾಮೀಣ ಬಡ ಮಹಿಳೆಯರಲ್ಲಿ ತುಂಬಾ ಚುರುಕಾದ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡಿದೆ. ಬ್ರೆಂಟ್ ಫ್ರೀಮನ್ [೨] Archived 2010-07-24 ವೇಬ್ಯಾಕ್ ಮೆಷಿನ್ ನಲ್ಲಿ., ನೋರ್ಮಾ ಲರೋಸ [೩] Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ನಿಕ್ ರೆಡರ್ [೪] Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬುವರು ಜಂಟಿಯಾಗಿ ಸ್ಥಾಪಿಸಿ, ನಡೆಸಿಕೊಂಡು ಹೋಗುತ್ತಿರುವ MARCsMovement.com [೫] Archived 2010-07-31 ವೇಬ್ಯಾಕ್ ಮೆಷಿನ್ ನಲ್ಲಿ. ಸಾಮಾಜಿಕ ಸಂಸ್ಥೆಯು ಕೆಲವಷ್ಟು ಶ್ರೇಷ್ಠವೆನಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ನೈತಿಕ ಮತ್ತು ಜವಾಬ್ದಾರಿಯುತ ಸಂಸ್ಥೆಗಳ ಸಮೂಹ ಎಂದೇ ಹೆಸರಾಗಿರುವ MARCs ಅಮೇರಿಕಾದ ತನ್ನ ಅಂತರ್ಜಾಲದ ನೇರ ವಹಿವಾಟುದಾರರಿಗೆ ಕ್ರಮವಾಗಿ ನಾಲ್ಕು ವಿಭಾಗಗಳಲ್ಲಿ ಸಾಮಾಜಿಕ ಕೆಲಸಗಳಿಗೆ ಬೆಂಬಲ ಮತ್ತು ಉತ್ತೇಜನವನ್ನು ನೀಡುತ್ತಿದೆ. ಆ ಮೂಲಕ ಅಂತರ್ಜಾಲದ ತನ್ನ ಗ್ರಾಹಕರು ತಾವು ಕೊಂಡುಕೊಂಡ ಯಾವುದೇ ಉತ್ಪನ್ನದ ಶೇಕಡಾ 5ರಷ್ಟನ್ನು, ತಮ್ಮ ಆಯ್ಕೆಯ MARCsನ ದತ್ತಿನಿಧಿಗೆ ಕೊಟ್ಟುಬಿಡುವಲ್ಲಿ ಅದರ ಪಾತ್ರ ತುಂಬಾ ಪ್ರಮುಖವಾದುದು. ಅಂತರ್ಜಾಲದ ಮೂಲಕ ನಡೆಯುವ ಈ ವಹಿವಾಟುವಿನ ಮುಖ್ಯ ಗುರಿಯೆಂದರೆ ದಿನನಿತ್ಯ ಅಂತರ್ಜಾಲಕ್ಕೆ ಭೇಟಿ ಕೊಡುವ ಆನ್ ಲೈನ್ ಗ್ರಾಹಕರು ತಮ್ಮ ನಿತ್ಯದ ಕೊಂಡುಕೊಳ್ಳುವ ಪ್ರಕ್ರಿಯೆಯ ಮೂಲಕ ಮಾಡುವ ಕೆಲಸದಲ್ಲಿ ಒಂದಷ್ಟು ಬದಲಾವಣೆ ಮತ್ತು ಪ್ರಪಂಚಕ್ಕೆ ತಮ್ಮ ಈ ಅಳಿಲು ಸೇವೆಯ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ, ಪ್ರತಿ ಮಾರಾಟದ ಜೊತೆಗೆ ಕೆಳರೇಖೆಯ ಬೆಲೆಯ ಎರಡರಷ್ಟನ್ನು ತನ್ನ ಗ್ರಾಹಕರಿಗೆ ಕೊಡುವ ವಾಗ್ದಾನವನ್ನು ಅದು ನಿರ್ವಹಿಸುತ್ತಿದೆ.

ಇಷ್ಟರ ನಡುವೆಯೂ, ನಿಜವಾದ ಸಮಾಜ ಸೇವಕರೆಂದರೆ ಅಥವಾ ಸಮಾಜೋದ್ಯಮಿಗಳೆಂದರೆ ಯಾರು ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆಗಳಾಗುತ್ತಲೇ ಇವೆ. ಕೆಲವರ ನಿರ್ದಿಷ್ಟ ವ್ಯಾಖ್ಯೆಯ ಪ್ರಕಾರ, ಸಮಾಜೋದ್ಯಮವೆಂದರೆ, ಯಾವುದೇ ಸಮಾಜಸೇವಾ ಸಂಸ್ಥೆಯೊಂದರ ನಿರ್ಮಾತೃಗಳು ತಮಗೆ ನಿರ್ದಿಷ್ಟ ಕಾಲಕ್ಕೆ ದೊರಕುವ ಆದಾಯವನ್ನು ಅವಲಂಬಿಸಿರುತ್ತಾರೆ. ಅಂದರೆ, ಈ ಆದಾಯವು ಅವರಿಗೆ ಅವರ ಹಣ ಕೊಟ್ಟು ಕೊಂಡುಕೊಳ್ಳುವ ಗ್ರಾಹಕರಿಂದ ನೇರವಾಗಿ ಸಿಗುವಂಥದಾಗಿರುತ್ತದೆ ಇನ್ನೂ ಕೆಲವರ ಪ್ರಕಾರ, ಸಾಮಾಜಿಕ ಸೇವೆಗಳ ಬಗ್ಗೆ, ಸಮಾಜೋದ್ಯಮದ ಬಗ್ಗೆ ಬೇರೆಯದೇ ಆದ ವಿಚಾರಗಳಿವೆ. ಅವರ ಪ್ರಕಾರ ಅದೊಂದು ನಾಗರೀಕ ಸೇವೆಗಳಿಗಾಗಿ ಸಂಸ್ಥೆಗಳು ಪಡೆದುಕೊಳ್ಳುವ ಗುತ್ತಿಗೆ ಕೆಲಸ. ಮತ್ತೆ ಕೆಲವರಿಗೆ ಅನುದಾನ, ದತ್ತಿ, ದಾನ-ಧರ್ಮ ಇತ್ಯಾದಿ ಆಗಿದೆ. ಈ ಎಲ್ಲ ಗೊಂದಲಭರಿತ ವಿಚಾರಗಳಿಗೆ ಸಧ್ಯದಲ್ಲೇ ಉತ್ತರ ಸಿಗುವುದೆಂಬ ಯಾವ ಆಶಾಭಾವವೂ ಇಲ್ಲ. ಉದಾಹರಣೆಗೆ, ಪೀಟರ್ ಡ್ರಕರ್ ಒಂದೆಡೆ ಉಲ್ಲೇಖಿಸುವ ಹಾಗೆ ಒಂದು ಒಳ್ಳೆಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕಿಂತ ಹೆಚ್ಚಿನ ಸಮಾಜೋದ್ಯಮದ ಕೆಲಸ ಮತ್ತೊಂದಿರಲಾರದು. ಇಷ್ಟಾದರೂ, ಹಲವಾರು ಮುಂದುವರೆದ ದೇಶಗಳಲ್ಲಿ, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸರಕಾರವೇ ಹಣ ಬಿಡುಗಡೆ ಮಾಡಬೇಕಾದಂಥ ಸಂದರ್ಭಗಳೂ ಇವೆ.

ಸ್ಕಾಲ್ ಫೌಂಡೆಶನ್, ಒಮಿಡಿಯರ್ ನೆಟ್ವರ್ಕ್, ಸಮಾಜೋದ್ಯಮಕ್ಕಾಗಿಯೇ ಮೀಸಲಾಗಿರುವ ಶ್ವಾಬ್ ಫೌಂಡೆಶನ್, ಕೆನಡಿಯನ್ ಸೋಶಿಯಲ್ ಎಂಟರ್ಪ್ರ್ಯುನರ್ ಶಿಪ್ ಫೌಂಡೆಶನ್ನ್ಯೂ ಪ್ರಾಫಿಟ್ Inc, ಮತ್ತು ಎಕೊಯಿಂಗ್ ಗ್ರೀನ್ ಮೊದಲಾದ ಹಲವಾರು Ashoka: Innovators for the Publicಸಮಾಜ ಸಂಸ್ಥೆಗಳು ಸಕ್ರಿಯವಾಗಿದ್ದು, ಪ್ರಪಂಚದಾದ್ಯಂತ ತೆರೆಮರೆಯಲ್ಲಿ ಎಂಬಂತೆ ಸದ್ದಿಲ್ಲದೇ ಸಮಾಜಸೇವೆ ಮಾಡುವವರನ್ನು ಬೆಂಬಲಿಸುತ್ತಿವೆ ಮತ್ತು ಪ್ರೋತ್ಸಾಹಿಸುತ್ತಿವೆ. ಅಶೋಕಾ'ಸ್ ಚೇಂಜ್ ಮೇಕರ್ಸ್ ನ 'ಸಾಮಾಜಿಕ ಪರಿಹಾರಗಳ ಮುಕ್ತ ಒದಗುವಿಕೆ' ಎಂಬ ಉದ್ಯಮಶೀಲತಾ ತತ್ವಗಳನ್ನಾಧರಿಸಿದ ಯೋಜನೆಯೊಂದು, ಅಂತರ್ಜಾಲವನ್ನೇ ತನ್ನ ವೇದಿಕೆಯನ್ನಾಗಿಸಿಕೊಂಡಿದೆ. ಆ ಮೂಲಕ ತನ್ನ ಬದಲಾವಣೆಯ ವಕ್ತಾರರೆಲ್ಲ ಸ್ಪರ್ಧಾತ್ಮಕವಾಗಿ ಒಂದುಗೂಡಿ, ಪ್ರಸ್ತುತ ಜ್ವಲಂತ ಸಮಸ್ಯೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಸಮುದಾಯಗಳೆಲ್ಲ ಕೆಲಸಮಾಡುವಂತೆ ಪ್ರೇರೇಪಿಸುತ್ತಿದೆ.

ಉತ್ತರ ಅಮೇರಿಕಾದ ಕೆಲ ಸಂಸ್ಥೆಗಳು ಈ ವಿಷಯವಾಗಿ ಬೆರಳೆಣಿಕೆಯ ಕೆಲವೇ ಕೆಲವು ಭಿನ್ನ ಜನನಾಯಕರುಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಿವೆ ಮತ್ತು ಈ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾದ ನಿಲುವನ್ನು ಹೊಂದಿವೆ. ಅದೇ, ಏಶಿಯ ಅಥವಾ ಯುರೋಪುಗಳು ಸಮಾಜೋದ್ಯಮದಲ್ಲಿ ನಿರ್ಮಿತಗೊಂಡ ತಂಡಗಳಾಗಲಿ, ವ್ಯಕ್ತಿಜಾಲಗಳಾಗಲಿ, ಅಥವಾ ಬದಲಾವಣೆ ತರಬೇಕೆಂದೇ ಪಣ ತೊಟ್ಟಿರುವ ಚಳುವಳಿಗಳಾಗಲಿ, ಹೇಗೆ ಅವು ಕೆಲಸ ಮಾಡಬಲ್ಲವು ಎಂಬುವುದರ ಕಡೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿವೆ. ಈಬೇಸ್ ನ ಮೊದಲ ಕಾರ್ಯಾಧ್ಯಕ್ಷ ಜೆಫ್ಫ್ ಸ್ಕಾಲ್ ನಿಂದ ಆರಂಭಗೊಂಡ ಸ್ಕಾಲ್ ಫೌಂಡೆಶನ್ ತನ್ನದೇ ಆದ ಕೆಲವು ನಿಯಮಗಳನ್ನು ಅನುಸರಿಸುತ್ತದೆ. ಆ ಪ್ರಕಾರ, ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಕ್ಕಾಗಿ ಖ್ಯಾತ 'ಮೆಜನಿನ್ ಲೆವೆಲ್'(ಅಂತಸ್ತು ಅಂತಸ್ತುಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವುದು) ಅದು ಅನುಸರಿಸುವ ತಂತ್ರವಾಗಿದೆ. ಅದರಂತೆ, ಸಮಾಜದಲ್ಲಿ ಅದಾಗಲೇ ಕಾರ್ಯಕ್ಷಮತೆಯ ಒಂದು ಒಳ್ಳೆಯ ಹಂತ ತಲುಪಿರುವ ಸಾಮಾಜಿಕ ಸಂಸ್ಥೆಗಳನ್ನು ಗುರುತಿಸಿ, ಅವನ್ನು ಸ್ಕಾಲ್ ಫೌಂಡೆಶನ್ನಿನ ವಾರ್ಷಿಕ ಜಾಗತಿಕ ಮೇಳದ ಚರ್ಚಾ ವೇದಿಕೆಗೆ ಮತ್ತು 'ಸೋಶಿಯಲ್ ಎಡ್ಜ್' ಎಂದು ಕರೆಯಲಾಗುವ ಫೌಂಡೆಶನ್ನಿನ ಅಂತರ್ಜಾಲದ ಸಮುದಾಯದಕ್ಕೆ ಪರಿಚಯಿಸಿಕೊಡುತ್ತದೆ. ಅಲ್ಲಿ, ಈ ಸಂಸ್ಥೆಗಳ ಕಾರ್ಯಗಳನ್ನು ಗುರುತಿಸಿ, ಅವು ಮತ್ತೆ ಸನ್ಡಾನ್ಸ್ ಇನ್ಸ್ಟಿಟ್ಯುಟ್, ಫ್ರಂಟ್ಲೈನ್ ವರ್ಲ್ಡ್, ನ್ಯೂಸ್ ಅವರ್, ಮತ್ತು ಇತರ ಚಿತ್ರ ಮತ್ತು ಶ್ರವಣ ಮಾಧ್ಯಮಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತದೆ. ಇಷ್ಟಲ್ಲದೆ, ಸ್ಕಾಲ್ ಫೌಂಡೆಶನ್, ಆಕ್ಸಫಾರ್ಡ್ ವಿಶ್ವವಿದ್ಯಾಲಯಬ್ಯುಸಿನೆಸ್ ಶಾಲೆಯನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಇತರ ಯೋಜನೆಗಳಾದ 'ಸ್ಕಾಲ್ ಸೆಂಟರ್ ಫಾರ್ ಸೋಶಿಯಲ್ ಎಂಟರ್ ಪ್ರ್ಯುನರ್ಶಿಪ್' ಮೂಲಕ ಸಮಾಜೋದ್ಯಮವನ್ನು ಬೆಂಬಲಿಸುತ್ತದೆ.

ಯುವ ಸಮಾಜೋದ್ಯಮ ವಂತೂ ಅತಿ ಹೆಚ್ಚಿನ ಗತಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಯುವವಾಣಿಯು ಹೆಚ್ಚು ಹೆಚ್ಚಾಗಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪ್ರೇರೇಪಣೆ ನೀಡುತ್ತಿದೆ. ಯುವ ಸಂಘಸಂಸ್ಥೆಗಳು ಮತ್ತು ಕೆಲ ಕಾರ್ಯಕ್ರಮಗಳು ಯುವ ಜನತೆ ಪಾಲ್ಗೊಳ್ಳುವ ಇಂಥ ಸಾಮಾಜಿಕ ಕಾಳಜಿಯ ಕೆಲಸಗಳಿಗೆ, ಪ್ರಯತ್ನಗಳಿಗೆ ಅತ್ಯಾಕರ್ಷಕ ಮತ್ತು ವಿಭಿನ್ನ ರೀತಿಯ ಪ್ರೋತ್ಸಾಹಕರ ಧನಸಹಾಯವನ್ನೂ ಒದಗಿಸುತ್ತ ಬೆಂಬಲ ನೀಡುತ್ತಿವೆ.[೧೦] 'ಯಂಗ್ ಸೋಶಿಯಲ್ ಪಯೋನಿಯರ್ಸ್' ಎಂಬ ಒಂದು ಕಾರ್ಯಕ್ರಮವನ್ನು ಇಲ್ಲಿ ಉದಾಹರಿಸಬಹುದಾಗಿದೆ. ಈ ಸಂಸ್ಥೆಯು ಆಸ್ಟ್ರೇಲಿಯಾದ ಯುವ ನಾಯಕರುಗಳ ವಾಗ್ದಾನ ಮತ್ತು ಅಧಿಕಾರಗಳಲ್ಲಿ ಭರವಸೆಯನ್ನು ಕಾಣುತ್ತಿದೆ. ಯುವ ಆಸ್ಟ್ರೇಲಿಯನ್ನರು ರೂಪಿಸಿ, ಕಟ್ಟಿಕೊಂಡಿರುವ 'ದಿ ಫೌಂಡೆಶನ್ ಫಾರ್ ಯಂಗ್ ಆಸ್ಟ್ರೆಲಿಯನ್ಸ್' ಎಂಬ ಕಾರ್ಯಕ್ರಮವು ಯುವಜನತೆಯು ಧನಾತ್ಮಕವಾಗಿ ಯೋಚಿಸುವಂತೆ, ಆ ನಿಟ್ಟಿನಲ್ಲಿಯೇ ಕೆಲಸ ಮಾಡುವಂತೆ, ಅವರ ವಿಚಾರಗಳನ್ನು ಬೆಂಬಲಿಸುವ, ಬಲಗೊಳಿಸುವ ಹಾಗೂ ಪ್ರಾಮಾಣಿಕವಾಗಿ ಅದೆಲ್ಲವನ್ನೂ ಆಚರಿಸುವ ರೀತಿಯಲ್ಲಿ ಅವರಿಗೆ ಉತ್ತೇಜನ ಕೊಡುತ್ತದೆ. ತಮ್ಮದೇ ಸಮುದಾಯದಲ್ಲಿ ಒಂದು ಧನಾತ್ಮಕ ಬದಲಾವಣೆಯನ್ನು ತಂದುಕೊಳ್ಳಲು ಅವರಿಗೆ ಇದು ತುಂಬಾ ಸಹಾಯ ಮಾಡುತ್ತದೆ. ಫೇಸ್ ಇಂಟರ್ ನ್ಯಾಷನಲ್ ಸಂಸ್ಥೆಯ [೬] Archived 2017-11-19 ವೇಬ್ಯಾಕ್ ಮೆಷಿನ್ ನಲ್ಲಿ. ಕುರಿತು ಹೇಳುವುದಾದರೆ ಅದು ಮುಖ್ಯವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಯೋಜನೆಗಳನ್ನು ರೂಪಿಸಿಕೊಂಡಿದೆ. ಆ ಪ್ರಕಾರ, ಈ ಸಂಸ್ಥೆಯು ಸಮಾಜೋದ್ಯಮದ ಪ್ರಮುಖ ಆಶಯಗಳನ್ನು ಪ್ರಾಥಮಿಕ, ಪ್ರೌಢ ಹಾಗೂ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದು, ಅವರಿಗೆ ಬಡ್ಡಿರಹಿತ ಸಾಲ, ದತ್ತಿಗಳು, ಮತ್ತು ಧನಸಹಾಯವನ್ನು ಒದಗಿಸುತ್ತದೆ. ಅವರ ವಿದ್ಯಾಭ್ಯಾಸಕ್ಕೂ ಮಾರ್ಗದರ್ಶನ ನೀಡುವ ಕೆಲಸವನ್ನೂ ಅದು ಮಾಡುತ್ತದೆ. ಅಂತರ್ಜಾಲದ ಸಹಾಯವನ್ನು ಪಡೆಯುವ ಮೂಲಕ, ಅವರು ಮಾಧ್ಯಮಿಕ, ಪ್ರೌಢ ಮತ್ತು ಪದವಿ ವಿದ್ಯಾರ್ಥಿಗಳಿಗೆ ಕೂಡ ಸಮಾಜೋದ್ಯಮದ ಕುರಿತಾಗಿ, ಶಾಲಾ ಅವಧಿಯ ನಂತರ ತರಬೇತಿ ಕೊಡುತ್ತಾರೆ. 'ದಿ ಮಾರ್ಕ್ಸ್ ಮೂವ್ಮೆಂಟ್ ಬ್ಯುಸಿನೆಸ್ ಮಾಡೆಲ್'[೭] Archived 2010-07-31 ವೇಬ್ಯಾಕ್ ಮೆಷಿನ್ ನಲ್ಲಿ. ಕೂಡ ಹೆಚ್ಚೂ ಕಡಿಮೆ ಇಂಥದ್ದೇ ಕಾರ್ಯಕ್ರಮವನ್ನು ಹೋಲುವ, ಅದಕ್ಕೆ ಅನುಗುಣವಾದ 'ಪೇಯಿಂಗ್ ಇಟ್ ಫಾರ್ವರ್ಡ್' ಎನ್ನುವ ಕಾರ್ಯಕ್ರಮವೊಂದನ್ನು ಆಯೋಜಿಸಿಕೊಂಡಿದ್ದು, ಸಮಾಜದ ಮೂಲಭೂತ ಆದ್ಯತೆಗಳು ಮತ್ತು ಸಮಾಜೋದ್ಯಮದ ಜವಾಬ್ದಾರಿಗಳ ಬಗ್ಗೆ ಇವತ್ತಿನ ಯುವ ಜನತೆಗೆ ಅರಿವು ಮೂಡಿಸುವ ಹಾಗೂ ಆ ಮೂಲಕ ಅವರು ಭವಿತವ್ಯದ ದಿಟ್ಟ ನಾಯಕರುಗಳಾಗುವಲ್ಲಿ ಶ್ರಮಿಸುತ್ತಿದೆ.

ಮೇ 2010ರಲ್ಲಿ ಇಸ್ತಾನ್ಬುಲ್ ಬಿಲ್ಗಿ ವಿಶ್ವವಿದ್ಯಾಲಯವು ಕೂಡ 'ಬಿಲ್ಗಿ ಯಂಗ್ ಸೋಶಿಯಲ್ ಎಂಟರ್ ಪ್ರ್ಯುನರ್ ಅವಾರ್ಡ್ಸ್ ' ಎಂಬ ಯೋಜನೆಯ ಮೂಲಕ ಟರ್ಕಿಯ ಯುವ ಸಮಾಜೋದ್ಯಮಿಗಳಿಗೆ ಈ ವಿಷಯವಾಗಿ ಅಗತ್ಯ ತರಬೇತಿ, ಶಿಕ್ಷಣ, ಮತ್ತು ಆರ್ಥಿಕ ಬೆಂಬಲವನ್ನು ಕೊಡುವ ಮೂಲಕ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದೆ. ಅಂತರರಾಷ್ಟ್ರೀಯ ಯುವ ಸಮಾಜ ಸೇವಾ ಸಂಸ್ಥೆಯಾಗಿರುವ ಸಿಲ್ವನ್/ಲಾರಿಯೇಟ್ ಫೌಂಡೆಶನ್ ಮತ್ತು TEGV ಮೂಲಕ ವಿಸ್ತೃತ ಉದ್ಯಮ ಕೌಶಲವನ್ನು ಉಪಯೋಗಿಸಿಕೊಂಡು, ಇಸ್ತಾನ್ಬುಲ್ ಬಿಲ್ಗಿ ವಿಶ್ವವಿದ್ಯಾಲಯವು ತಂತಮ್ಮ ಸಮುದಾಯಗಳಲ್ಲಿ ಜನಜಾಗೃತಿ ಮೂಡಿಸುವ ಹುಮ್ಮಸ್ಸಿರುವ, ಸಮಾಜದಲ್ಲಿ ಹೊಸ ಬದಲಾವಣೆಯ ಅಲೆ ಮೂಡಿಸಲು ತಯಾರಿರುವ ನಾಗರಿಕರನ್ನೆಲ್ಲ ಒಗ್ಗೂಡಿಸಿಕೊಂಡು ಒಂದು ಸದೃಢ ಸಮಾಜವನ್ನು ನಿರ್ಮಿಸಲು ಅಣಿಯಾಗುವ ಯಾವುದೇ ಕೆಲಸಕ್ಕೆ ಬೆಂಬಲ ನೀಡುತ್ತದೆ. ಅರ್ಜಿ ನೀಡಲು ನೀವು ಸಂಪರ್ಕಿಸಬೇಕಾದ ಕೊಂಡಿ, www.bilgiggo.com

ಟರ್ಕಿಯಲ್ಲೇ ಇರುವ ಮತ್ತೊಂದು ಪ್ರಮುಖ ಸಮಾಜಸೇವಾ ಸಂಸ್ಥೆಯೆಂದರೆ SOLGA [೮] Archived 2011-02-10 ವೇಬ್ಯಾಕ್ ಮೆಷಿನ್ ನಲ್ಲಿ.(The Academy of Young Social Entrepreneurs). SOLGA ಪಯೋನಿಯರ್ಸ್ ಎಂದು ಕರೆಯಲಾಗುವ ಈ ಸಂಸ್ಥೆಯು ಯುವ ಸಮಾಜ ಸೇವಾಕಾಂಕ್ಷಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣವನ್ನು, ಅಭ್ಯುದಯದ ಆಕಾಂಕ್ಷಿಗಳಿಗೆ ಬೆಂಬಲವನ್ನು, ತಮ್ಮ ಹೊಸ ವಹಿವಾಟು ಅಥವಾ ಉದ್ಯಮವನ್ನು ಪ್ರಾರಂಭಿಸುವವರಿಗೆ ಅಗತ್ಯ ಸಹಾಯವನ್ನು ಒದಗಿಸುತ್ತದೆ.

ಫಾಸ್ಟ್ ಕಂಪನಿ ಮ್ಯಾಗಜೈನ್ ಪತ್ರಿಕೆಯು ವರ್ಷಕ್ಕೊಮ್ಮೆ 25 ಅತ್ಯುತ್ತಮ ಸಮಾಜೋದ್ಯಮಿಗಳು ಎನ್ನುವ ಸರ್ವೆ ನಡೆಸಿ ಅದನ್ನು ಪ್ರಕಟಿಸುತ್ತದೆ. ಅದರ ಅಧ್ಯಯನದ ಪ್ರಕಾರ, ಸಂಸ್ಥಾತ್ಮಕ ಶಿಸ್ತುಗಳನ್ನು ಅಳವಡಿಸಿಕೊಂಡು ಸಮಾಜದ ಸಮಸ್ಯೆಗಳನ್ನು ಕಿತ್ತೊಗೆಯುವಲ್ಲಿ ಶ್ರಮಿಸುವ ಸಂಸ್ಥೆಗಳು ಈ ಸರ್ವೆಯಲ್ಲಿ ಸ್ಥಾನ ಪಡೆಯುತ್ತವೆ.[೧೧] 2009ರಲ್ಲಿ ಬ್ಯುಸಿನೆಸ್ ವೀಕ್ ಕೆಲ ಅಂಶಗಳನ್ನು ಅನುಸರಿಸಿ, ಅಮೇರಿಕಾದ ಇಪ್ಪತೈದು ಅತ್ಯುತ್ತಮ ಸಮಾಜೋದ್ಯಮಿಗಳ ಪಟ್ಟಿಯನ್ನು ಪ್ರಕಟಿಸುತ್ತಾ, 'ವ್ಯಾಪಾರೀ ನೀತಿಗಳನ್ನು ಅಳವಡಿಸಿಕೊಂಡು ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ಸಾಧನೆ ಮಾಡಿದ್ದಕಾಗಿ ಕೊಡಮಾಡಿದ ಪ್ರಶಸ್ತಿಗಳು' ಎಂದು ಹೇಳಿಕೊಂಡಿದೆ.[೧೨]

==ಇವನ್ನೂ ಗಮನಿಸಿ ==

]]

]]

==ಹೆಚ್ಚಿನ ಓದಿಗಾಗಿ ==

 • ಡೇವಿಡ್ ಬರ್ನ್ಸ್ ಟೀನ್, ಹೌ ಟು ಚೇಂಜ್ ದಿ ವರ್ಲ್ಡ್: ಸೋಶಿಯಲ್ ಎಂಟರ್ ಪ್ರ್ಯುನರ್ಸ ಅಂಡ್ ದಿ ಪವರ್ ಆಫ್ ನ್ಯೂ ಅಯ್ಡಿಯಾಸ್ ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ಅಂಡ್ ಅದರ್ಸ್ .

ISBN 0-19-513805-8

 • ಚಾರ್ಲ್ಸ್ ಲೀಡ್ ಬೀಟರ್, ದಿ ರೈಸ್ ಆಫ್ ದಿ ಸೋಶಿಯಲ್ ಎಂಟರ್ ಪ್ರ್ಯುನರ್ , ಡೆಮೊಸ್, 1996
 • ಜೋವನ್ನಾ ಮೈರ್, ಜೆಫ್ಫ್ರೆ ರಾಬಿನ್ಸನ್ ಅಂಡ್ ಕಾಯ್ ಹಾಕರ್ತ್ಸ್, ಸೋಶಿಯಲ್ ಎಂಟರ್ ಪ್ರ್ಯುನರ್ಶಿಪ್ , ಪಾಲ್ಗ್ರೆವ್ 2006. ISBN 1403996644
 • ಪೆರೆಡೋ, A . M., & ಮ್ಯಾಕ್ ಲಿನ್, M. 2006 ಸೋಶಿಯಲ್ ಎಂಟರ್ ಪ್ರ್ಯುನರ್ಶಿಪ್: ಅ ಕ್ರಿಟಿಕಲ್ ರೆವ್ಯೂ ಆಫ್ ದಿ ಕಾನ್ಸೆಪ್ಟ್ ಜರ್ನಲ್ ಆಫ್ ವರ್ಲ್ಡ್ ಬ್ಯುಸಿನೆಸ್, 41(1): 56-65.
 • ಜಾನ್ ಎಲ್ಕಿಂಗ್ಟನ್ ಅಂಡ್ ಪಮೇಲಾ ಹಾರ್ತಿಗನ್, ದಿ ಪವರ್ ಆಫ್ ಅನ್ ರೀಸನೇಬಲ್ ಪೀಪಲ್: ಹೌ ಎಂಟರ್ ಪ್ರ್ಯುನರ್ಸ ಕ್ರಿಯೇಟ್ ಮಾರ್ಕೆಟ್ಸ್ ಟು ಚೇಂಜ್ ದಿ ವರ್ಲ್ಡ್ , ಹಾರ್ವರ್ಡ್ ಬ್ಯುಸಿನೆಸ್ ಪ್ರೆಸ್, 2008
 • ರಾಬರ್ಟ್ ಗನ್ ಅಂಡ್ ಕ್ರಿಸ್ಟೋಫರ್ ಡರ್ಕಿನ್, ಸೋಶಿಯಲ್ ಎಂಟರ್ ಪ್ರ್ಯುನರ್ಶಿಪ್: ಅ ಸ್ಕಿಲ್ಸ್ ಅಪ್ರೋಚ್ , ಪಾಲಿಸಿ ಪ್ರೆಸ್, 2000
 • ಮಾರ್ಕ್ ಬಿ. ದ್ಯುರಿಎಕ್ಸ್ ಅಂಡ್ ರಾಬರ್ಟ್ ಎ. ಸ್ತೆಬ್ಬಿನ್ಸ್, ಸೋಶಿಯಲ್ ಎಂಟರ್ ಪ್ರ್ಯುನರ್ಶಿಪ್ ಫಾರ್ ಡಮ್ಮೀಸ್ , ವಿಲೇ, 2010

ಆಕರಗಳು[ಬದಲಾಯಿಸಿ]

 1. ತಾಂಪ್ಸನ್, J .L ., ದಿ ವರ್ಲ್ಡ್ ಆಫ್ ಸೋಶಿಯಲ್ ಎಂಟರ್ ಪ್ರ್ಯುನರ್, ಅಂತರರಾಷ್ಟ್ರೀಯ ಪಬ್ಲಿಕ್ ಸೆಂಟರ್ ಮ್ಯಾನೇಜ್ಮೆಂಟ್, 15(4/5) , 2002, ಪ. ೪೦೩.
 2. ಉದಾಹರಣೆಗೆ, ರಾಬರ್ಟ್ ಒವೆನ್ನನ ಈ ವ್ಯಾಖ್ಯೆಯ ವಿವರಣೆಯನ್ನು J ಬ್ಯಾಂಕಿನಲ್ಲಿ ಕೊಡಲಾಗಿದೆ. ಸಾಮಾಜಿಕ ಚಳುವಳಿಗಳ ಸಮಾಜಶಾಸ್ತ್ರ , ಲಂಡನ್, ಮ್ಯಾಕ್ಮಿಲನ್, 1972
 3. "The Social Entrepreneur Bill Drayton". US News & World Report. 2005-10-31. Retrieved 2006-11-03.
 4. ದಿ ರೈಸ್ ಆಫ್ ದಿ ಸೋಶಿಯಲ್ ಎಂಟರ್ ಪ್ರ್ಯುನರ್, ಡೆಮೊಸ್, ಲಂಡನ್, 1996
 5. http://www.amazon.co.uk/Social-Entrepreneur-Making-Communities-Work/dp/1843546612
 6. "ಆರ್ಕೈವ್ ನಕಲು". Archived from the original on 2008-12-05. Retrieved 2010-07-27.
 7. "The Nobel Peace Prize 2006". Nobel Foundation. 2006. Retrieved 2006-11-02.
 8. "Business-Social Ventures Reaching for Major Impact". Changemakers. 11-2003. Archived from the original on 2006-06-14. Retrieved 2006-11-03. {{cite web}}: Check date values in: |date= (help)
 9. ೯.೦ ೯.೧ ಮರಿಯನ್ ಬ್ರೇ, ಫಾರ್ ರೂರಲ್ ವಿಮೆನ್, ಲ್ಯಾಂಡ್ ಮೀನ್ಸ್ ಹೋಪ್, CNN.com, 2005-10-03. 2007-02-15 ರಂದು ಪುನಃ ಸಂಪಾದಿಸಿದ್ದು
 10. ಶೀಲಾ ಕಿಂಕಡೆ ಕ್ರಿಸ್ತೀನಾ ಮೇಸಿ, ಅವರ್ ಟೈಮ್ ಇಸ್ ನೌ: ಯಂಗ್ ಪೇಪಾಲ್ ಚೆನ್ಜಿಂಗ್ ದಿ ವರ್ಲ್ಡ್ , ISBN 0977231909
 11. "25 Entrepreneurs who are changing the world". Archived from the original on 2012-03-15. Retrieved 2006-10-15.
 12. "ಅಮೇರಿಕಾಸ್ ಮೋಸ್ಟ್ ಪ್ರಾಮಿಸಿಂಗ್ ಸೋಶಿಯಲ್ ಎಂಟರ್ ಪ್ರ್ಯುನರ್ಸ್". Archived from the original on 2010-08-14. Retrieved 2010-07-27.

ಬಾಹ್ಯ ಕೊಂಡಿಗಳು[ಬದಲಾಯಿಸಿ]

 • TOMS ಶೂಸ್ Archived 2009-10-11 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರತೀ ಒಂದು ಜೊತೆ ಶೂ ಕೊಂಡಾಗ, TOMS ಮತ್ತೊಂದು ಜೊತೆ ಶೂವನ್ನು ಅಗತ್ಯವಿರುವ ಮಗುವಿಗೆ ಕೊಡುವುದು.
 • ದಿ ಪಲ್ಸೆರಾ ಪ್ರಾಜೆಕ್ಟ್: ಅಮೇರಿಕಾದ ಲಾಭರಹಿತ ಸೇವಾ ಸಂಸ್ಥೆಯೊಂದು ನಿಕರ್ಗುವಾದ ಬೀದಿ ಮಕ್ಕಳು ತಯಾರಿಸಿದ ಕಡಗಗಳನ್ನು ಮಾರುತ್ತದೆ ಮತ್ತು ಬಂದ ಲಾಭವೆಲ್ಲ ಮಕ್ಕಳ ಸಲುವಾಗಿ ಖರ್ಚಾಗುತ್ತದೆ.
 • ಮುಂಬಯಿಯ ಟಾಟಾ ಅಧ್ಯಯನ ಸಂಸ್ಥೆಯಲ್ಲಿ, 'ಸಾಮಾಜಿಕ ಸಮಾಜೋದ್ಯಮ ವಿಜ್ಞಾನ' ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ. [೯] Archived 2010-10-05 ವೇಬ್ಯಾಕ್ ಮೆಷಿನ್ ನಲ್ಲಿ.