ಸಾಫ್ಟ್ ವೇರ್ ಗಂಡ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಫ್ಟ್ ವೇರ್ ಗಂಡ 2014 ರ ಭಾರತೀಯ ಕನ್ನಡ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ವೆಂಕಟೇಶ್ ನಿರ್ದೇಶಿಸಿದ್ದಾರೆ ಮತ್ತು ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್ ಮತ್ತು ನಿಕಿತಾ ತುಕ್ರಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸಾಕ್ಷಿ ಅಗರ್ವಾಲ್ ಮತ್ತು ಶ್ರೀನಾಥ್ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಸಂಗೀತವನ್ನು ವೀರ್ ಸಮರ್ಥ್ ಅವರು ಸಂಯೋಜಿಸಿದ್ದಾರೆ , ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. [೧] ಚಿತ್ರವು 5 ಡಿಸೆಂಬರ್ 2014 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಪ್ರಮುಖ ದೂರದರ್ಶನ ಚಾನೆಲ್‌ ಒಂದಕ್ಕೆ 16 ಕೋಟಿಗೆ ಮಾರಾಟ ಮಾಡಲಾಗಿದೆ. [೨] ಈ ಚಿತ್ರವು 2012 ರ ಮಲಯಾಳಂ ಚಲನಚಿತ್ರ ಮೈ ಬಾಸ್ [೩] ನ ರಿಮೇಕ್ ಆಗಿದೆ, ಇದು ಸ್ವತಃ 2009 ರ ಚಲನಚಿತ್ರ ದಿ ಪ್ರಪೋಸಲ್ ಅನ್ನು ಆಧರಿಸಿದೆ.

ಕಥಾವಸ್ತು[ಬದಲಾಯಿಸಿ]

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮನು, ತನ್ನ ಸಿಟ್ಟಿನ ಸ್ವಭಾವದ ಎನ್‌ಆರ್‌ಐ ಬಾಸ್‌ಳ ಅಡಿಯಲ್ಲಿ ಕೆಲಸ ಮಾಡಲು ಕಷ್ಟಪಡುತ್ತಾನೆ. ವೀಸಾ ಸಮಸ್ಯೆಗಳಿಂದ ಪ್ರಿಯಾ ಭಾರತವನ್ನು ತೊರೆಬೇಕಾಗಿ ಬಂದು ತನ್ನ ಸ್ವಾರ್ಥಕ್ಕಾಗಿ ಮನುವನ್ನು ಮದುವೆಯಾಗಲು ನಿರ್ಧರಿಸುತ್ತಾಳೆ.

ಪಾತ್ರವರ್ಗ[ಬದಲಾಯಿಸಿ]

ಸಂಗೀತ[ಬದಲಾಯಿಸಿ]

ಚಿತ್ರದ ಸಂಗೀತವನ್ನು ವೀರ್ ಸಮರ್ಥ್ ಸಂಯೋಜಿಸಿದ್ದಾರೆ ಮತ್ತು ಆಡಿಯೊವನ್ನು ಆನಂದ್ ಆಡಿಯೊ ಲೇಬಲ್ ಮೂಲಕ ಹೊರತಂದಿದ್ದಾರೆ. [೪] ಸಾಹಿತ್ಯವನ್ನು ಡಾ.ನಾಗೇಂದ್ರ ಪ್ರಸಾದ್ ಮತ್ತು ಹೃದಯ ಶಿವ ಬರೆದಿದ್ದಾರೆ. ಅಟ್ಲಾಂಟಾ ಮೂಲದ ಗಾಯಕಿ ರೇಖಾ ಪಲ್ಲತ್ ಈ ಚಿತ್ರದ ಮೂಲಕ ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು.

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಕುಡಿತ ಬೇಡ ಬೇಡ"ಹೃದಯ ಶಿವವಿಜಯ್ ಪ್ರಕಾಶ್ 04:34
2."ಸಾರಿ ವೆರಿ ಸಾರಿ"ವಿ. ನಾಗೇಂದ್ರ ಪ್ರಸಾದ್ಚೇತನ್ ಗಂಧರ್ವ, ರೇಖಾ ಪಲ್ಲತ್04:28
3."ಸನಿಹ ಸನಿಹ"ಹೃದಯ ಶಿವರಾಜೇಶ್ ಕೃಷ್ಣನ್, ಲಕ್ಷ್ಮಿ ನಟರಾಜ್04:10
4."ಪ್ಯಾಟೆಗಿಂತ"ಹೃದಯ ಶಿವರಾಜೇಶ್ ಕೃಷ್ಣನ್, ಶಮಿತಾ ಮಲ್ನಾಡ್03:44

ಉಲ್ಲೇಖಗಳು[ಬದಲಾಯಿಸಿ]

  1. "Software Ganda film clears Censor". Archived from the original on 2016-03-04. Retrieved 2022-02-10.
  2. Software Ganda TV rights sold for 1.6 Cr
  3. "'Ganda' is Software - Kannada News - IndiaGlitz.com".
  4. Soundtrack playlist

ಬಾಹ್ಯ ಕೊಂಡಿಗಳು[ಬದಲಾಯಿಸಿ]