ವಿಷಯಕ್ಕೆ ಹೋಗು

ಸಹೋದರರ ಸವಾಲ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಹೋದರರ ಸವಾಲ್ 1977 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಇದನ್ನು ಕೆ. ಎಸ್. ಆರ್. ದಾಸ್ ನಿರ್ದೇಶಿಸಿದ್ದಾರೆ. ಇದರಲ್ಲಿ ವಿಷ್ಣುವರ್ಧನ್ ಮತ್ತು ರಜನಿಕಾಂತ್ ನಟಿಸಿದ್ದಾರೆ.[] ಕನ್ನಡದಲ್ಲಿ ರಜನಿಕಾಂತ್ ನಟಿಸಿದ ಕೆಲವೇ ಚಿತ್ರಗಳಲ್ಲಿ ಇದೂ ಒಂದು.[] ಈ ಚಲನಚಿತ್ರವನ್ನು ತೆಲುಗಿನಲ್ಲಿ ಅನ್ನದಮ್ಮುಲ ಸವಾಲ್ ಮತ್ತು ಹಿಂದಿಯಲ್ಲಿ ಚೋರ್ ಕಾ ಭಾಯಿ ಚೋರ್ (1978) ಎಂದು ಮರುನಿರ್ಮಾಣ ಮಾಡಲಾಯಿತು. ಇದನ್ನು ತಮಿಳಿಗೆ ಸಹೋದರ ಸಪಥಂ ಮತ್ತು ಹಿಂದಿಗೆ ದಿಲೇರ್ (1979) ಎಂದು ಡಬ್ ಮಾಡಲಾಯಿತು.[]

ಸಹೋದರರ ಸವಾಲ್ (ಚಲನಚಿತ್ರ)
ಸಹೋದರರ ಸವಾಲ್
ನಿರ್ದೇಶನಕೆ.ಎಸ್.ಆರ್.ದಾಸ್
ನಿರ್ಮಾಪಕಎ.ಆರ್.ರಾಜು
ಪಾತ್ರವರ್ಗವಿಷ್ಣುವರ್ಧನ್, ರಜನೀಕಾಂತ್ ಭವಾನಿ ಕವಿತ, ಲೀಲಾವತಿ
ಸಂಗೀತಸತ್ಯಂ
ಛಾಯಾಗ್ರಹಣಎಸ್.ಎಸ್.ಲಾಲ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಅಜಂತಾ ಕಂಬೈನ್ಸ್

ಪಾತ್ರವರ್ಗ

[ಬದಲಾಯಿಸಿ]


ಧ್ವನಿಮುದ್ರಿಕೆ

[ಬದಲಾಯಿಸಿ]

ಸಹೋದರರ ಸವಾಲ್ ಸಂಗೀತವನ್ನು ಚೆಲ್ಲಪಿಳ್ಳ ಸತ್ಯಂ ಸಂಯೋಜಿಸಿದ್ದಾರೆ. "ಹೇ ನನಗಾಗಿಯೇ" ಹಾಡು ಜನಪ್ರಿಯವಾಯಿತು. 'ಹೇ ನನಗಾಗಿಯೇ' ಹಾಡನ್ನು ತೆಲುಗು ಆವೃತ್ತಿಯಲ್ಲಿ "ನಾಕೋಸಮೇ ನೀವುನ್ನಧಿ" ಎಂದು ಉಳಿಸಿಕೊಳ್ಳಲಾಗಿದೆ.


ಹಾಡುಗಳ ಪಟ್ಟಿ
ಸಂ.ಹಾಡುसंगीतकारಹಾಡುಗಾರರುಸಮಯ
1."ಓ ನಲ್ಲನೆ ಸವಿ ಮಾತೊಂದ"ಸತ್ಯಂ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ 
2."ಹೇ ನನಗಾಗಿಯೇ"ಸತ್ಯಂಎಸ್.ಪಿ.ಬಾಲಸುಬ್ರಹ್ಮಣ್ಯಂ4:12
3."ಏಕೆ ನೋಡುವೆ ಹಾಗೆ"ಸತ್ಯಂಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ 
4."ಮಾತೊಂದ"ಸತ್ಯಂಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ 

ಉಲ್ಲೇಖಗಳು

[ಬದಲಾಯಿಸಿ]



  1. "Rajinikanth's Kannada movies one must watch on his birthday, today". The Times of India. 12 December 2020.
  2. []
  3. "Diler (1979) Super Hit Action Movie | Rajnikant, Vishnu Vardhan".
  4. ೪.೦ ೪.೧ Ramachandran 2014, p. 68.