ಸಸ್ಯಕ್ಷೀರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರದಿಂದ ರಬ್ಬರ್ ಉತ್ಪಾದನೆಗಾಗಿ ಸಸ್ಯಕ್ಷೀರವನ್ನು ತೆಗೆಯುತ್ತಿರುವುದು

ಸಸ್ಯಕ್ಷೀರ (ಹಾಲ್ನೊರೆ) ಎಂದರೆ ಜಲೀಯ ಮಾಧ್ಯಮದಲ್ಲಿರುವ ಪಾಲಿಮರ್ ಸೂಕ್ಷ್ಮಕಣಗಳ ಸ್ಥಿರ ಚದರಿಕೆ (ಎಮಲ್ಷನ್). ಇದು ಪ್ರಕೃತಿಯಲ್ಲಿ ಕಂಡುಬರುತ್ತದೆ, ಆದರೆ ಪಾಲಿಮರೀಕರಣದಿಂದ ಕೃತಕ ಹಾಲ್ನೊರೆಗಳನ್ನು ತಯಾರಿಸಬಹುದು.

ಪ್ರಕೃತಿಯಲ್ಲಿ ದೊರಕುವ ಸಸ್ಯಕ್ಷೀರವು ಹಾಲಿನಂಥ ದ್ರವವಾಗಿದ್ದು, ಶೇಕಡ ೧೦ ರಷ್ಟು ಹೂಬಿಡುವ ಸಸ್ಯಗಳಲ್ಲಿ ಕಂಡುಬರುತ್ತದೆ.[೧] ಇದು ಸಂಕೀರ್ಣವಾದ ಇಮಲ್ಷನ್ ಆಗಿದ್ದು ಪ್ರೋಟೀನ್‍ಗಳು, ಆಲ್ಕಲಾಯ್ಡ್‌ಗಳು, ಪಿಷ್ಟಗಳು, ಸಕ್ಕರೆಗಳು, ತೈಲಗಳು, ಟ್ಯಾನಿನ್‍ಗಳು, ರಾಳಗಳು ಮತ್ತು ಅಂಟುಗಳನ್ನು ಹೊಂದಿರುತ್ತದೆ. ಗಾಳಿಗೆ ಒಡ್ಡಿದಾಗ ಘನೀಕರಿಸುತ್ತದೆ. ಸಾಮಾನ್ಯವಾಗಿ ಅಂಗಾಂಶ ಗಾಯವಾದಾಗ ಇದು ಸ್ರವಿಸುತ್ತದೆ. ಬಹುತೇಕ ಸಸ್ಯಗಳಲ್ಲಿ ಹಾಲ್ನೊರೆಯು ಬೆಳ್ಳಗಿರುತ್ತದೆ, ಆದರೆ ಕೆಲವು ಸಸ್ಯಗಳು ಹಳದಿ, ಕಿತ್ತಳೆ ಅಥವಾ ಕಡುಗೆಂಪು ಬಣ್ಣದ ಹಾಲ್ನೊರೆಯನ್ನು ಹೊಂದಿರುತ್ತವೆ. ಇದು ಮುಖ್ಯವಾಗಿ ಸಸ್ಯಾಹಾರಿ ಕೀಟಗಳ ವಿರುದ್ಧ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Anurag A. Agrawal; d Kotaro Konno (2009). "Latex: a model for understanding mechanisms, ecology, and evolution of plant defense Against herbivory". Annual Review of Ecology, Evolution, and Systematics. 40: 311–331. doi:10.1146/annurev.ecolsys.110308.120307.