ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ
ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ | |
---|---|
Directed by | ರಿಷಬ್ ಶೆಟ್ಟಿ |
Written by | ರಿಷಬ್ ಶೆಟ್ಟಿ ಸಂಭಾಷಣೆ: ಅಭಿಜಿತ್ ಮಹೇಶ್ ರಾಜ್ ಬಿ. ಶೆಟ್ಟಿ |
Screenplay by | ರಿಷಬ್ ಶೆಟ್ಟಿ |
Story by | ರಿಷಬ್ ಶೆಟ್ಟಿ |
Produced by | ರಿಷಬ್ ಶೆಟ್ಟಿ |
Starring | ಅನಂತ್ ನಾಗ್ ರಂಜನ್ ಸಂಪತ್ ಪ್ರಮೋದ್ ಶೆಟ್ಟಿ ಸಪ್ತಾ ಪಾವೂರ್ ಮಹೇಂದ್ರ ಸೋಹನ್ ಶೆಟ್ಟಿ ಪ್ರಕಾಶ್ ತೂಮಿನಾಡು ಮನೀಶ್ ಹೇರೂರ್ |
Cinematography | ಎ. ವೆಂಕಟೇಶ್ |
Edited by | ಪ್ರದೀಪ್ ರಾವ್ ಪ್ರತೀಕ್ ಶೆಟ್ಟಿ |
Music by | ವಾಸುಕಿ ವೈಭವ್ ಹಿನ್ನೆಲೆ ಸಂಗೀತ: ಬಿ.ಅಜನೀಶ್ ಲೋಕನಾಥ್ |
Production company | ರಿಷಬ್ ಶೆಟ್ಟಿ ಫಿಲ್ಮ್ಸ್ |
Distributed by | ಜಯಣ್ಣ ಫಿಲ್ಮ್ಸ್ ಮೂಲಕ ರಿಷಬ್ ಶೆಟ್ಟಿ ಫಿಲ್ಮ್ಸ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Country | ಭಾರತ |
Language | ಕನ್ನಡ |
Budget | ₹2 ಕೋಟಿ |
Box office | ಸುಮಾರು ₹35 ಕೋಟಿ |
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : ಕೊಡುಗೆ ರಾಮಣ್ಣ ರೈ ಚಿತ್ರವನ್ನು ರಿಷಭ್ ಶೆಟ್ಟಿ ಅವರು ನಿರ್ಮಿಸಿ, ಬರೆದು, ನಿರ್ದೇಶಿಸಿದ್ದಾರೆ.[೧][೨][೩][೪][೫] ಈ ಚಿತ್ರದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಸರಗೋಡು , ಮಂಗಳೂರು , ಸುಳ್ಯ ಪರಿಸರದಲ್ಲಿ ನಡೆದಿದ್ದು, ಕೆಲವು ಭಾಗಗಳು ಮಡಿಕೇರಿ ಮತ್ತು ಮೈಸೂರಿನಲ್ಲಿ ನಡೆದಿವೆ..
ತಾರಾಗಣ
[ಬದಲಾಯಿಸಿ]- ಅನಂತ್ ನಾಗ್ :ಅನಂತ ಪದ್ಮನಾಭ. ಪಿ ( ಪಿ ಫಾರ್ ಪಿಕಾಕ್ ) , ನಿವೃತ್ತ ಕ್ರಿಮಿನಲ್ ಅಧ್ಯಾಪಕ, ಸ್ವಯಂ ಘೋಷಿತ ಸಾಮಜಿಕ ಕಾರ್ಯಕರ್ತ.
- ರಂಜನ್: 7 ನೇ ಗ್ರೇಡ್ ಮೂರು ಬಾರಿ ವಿಫಲವಾದ ವಿದ್ಯಾರ್ಥಿ ಪ್ರವೀಣ ಕುಮಾರ್
- ಸಂಪತ್ ಕುಮಾರ್: 6 ನೇ ದರ್ಜೆಯ ವಿದ್ಯಾರ್ಥಿ ಮಮ್ಮೊಟ್ಟಿ
- ಪ್ರಮೋದ್ ಶೆಟ್ಟಿ: ಶಾಂತರಾಮ ಉಪಾಧ್ಯಾಯ , ಒಬ್ಬ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಕನ್ನಡಪರ ಕಾರ್ಯಕರ್ತ
- ಸುಪೀತಾ ಶೆಟ್ಟಿ: ಉಪಾಧ್ಯಾಯ ಪತ್ನಿ ವಸಂತ ಉಪಾಧ್ಯಾಯ
- ಸಪ್ತಾ ಪಾವೂರ್:ಪಲ್ಲವಿ, ಉಪಾಧ್ಯಯನ ಪುತ್ರಿ ಮತ್ತು 7 ನೇ ತರಗತಿಯ ವಿದ್ಯಾರ್ಥಿನಿ
- ಮಹೇಂದ್ರ ಪ್ರಸಾದ್: ಮಹೇಂದ್ರ , 7 ನೇ ತರಗತಿಯ ವಿದ್ಯಾರ್ಥಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
- ಮನೀಶ್ ಹೆರೂರ್: 7 ನೇ ತರಗತಿಯ ವಿದ್ಯಾರ್ಥಿ ಮತ್ತು ಪ್ರವೀಣನ ಸ್ನೇಹಿತ
- ಡೆಮೊಕ್ರಸಿ ಸೋಹನ್ ಶೆಟ್ಟಿ: 7 ನೇ ದರ್ಜೆಯ ವಿದ್ಯಾರ್ಥಿಯ ಸತೀಶ
- ಪ್ರಕಾಶ ತೂಮಿನಾಡ್ ಭುಜಂಗ : ಅಧಿಕಪ್ರಸಂಗಿ, ಹೊಟ್ಟೆಬಾಕ, ಊರೆಲ್ಲಾ ಖಾಲಿ ಬಿದ್ದುಕೊಂಡು ಇರುವವ
- ರಮೇಶ್ ಭಟ್ : ಅನಂತ ಪದ್ಮನಾಭ ಸ್ವಾಮೀ ಎಮ್ ( ಎಂ ಫಾರ್ ಮ್ಯಾಚ್ ಫಿಕ್ಸಿಂಗ್ ) ಸಾಮಾಜಿಕ ಕಾರ್ಯಕರ್ತ ಮತ್ತು ಅನಂತ ಪದ್ಮನಾಭ ಸ್ವಾಮೀ ಪಿ ಅವರ ನೆರೆಹೊರೆಯ ವ್ಯಕ್ತಿ
- ರಿಷಬ್ ಶೆಟ್ಟಿ : ಮೈಸೂರು ಪೋಲಿಸ್ ಇನ್ಸ್ಪೆಕ್ಟರ್
- ಶನಿಲ್ ಗುರು: ರಘು , ಉಪಾಧ್ಯಾಯನ ಮನೆಯಲ್ಲಿ ಅಡುಗೆ ಸಹಾಯಕ
- ಬಾಲಕೃಷ್ಣ ಪಣಿಕ್ಕರ್: ಕಾಸರಗೋಡು ಸಹಾಯಕ ಶಿಕ್ಷಣ ಅಧಿಕಾರಿ
- ರಾಧಾಕೃಷ್ಣ : ಸೆಬಾಸ್ಟಿಯನ್, ಕುಡುಕ, ದುಬೈ ನಲ್ಲಿರುವ ಏನ್ ಆರ್ ಐ ಅವರ ಮನೆಯ ಕಾವಲುಗಾರ
ಚಿತ್ರೀಕರಣ
[ಬದಲಾಯಿಸಿ]ಚಿತ್ರೀಕರಣವನ್ನು ಸುಮಾರು 55 ದಿನಗಳ ಕಾಲ ನಡೆಸಲಾಗಿತ್ತು. ಇದನ್ನು ಕಾಸರಗೋಡು, ಕುಂಬ್ಳೆ, ಬೇಕಲಕೋಟೆ, ಅನಂತಪುರ, ಸುಳ್ಯ, ಮಡಿಕೇರಿ, ಮೈಸೂರಿನಲ್ಲಿ ನಡೆಸಲಾಗಿತ್ತು. ಈ ಚಿತ್ರದ ಕೊನೆಯ ಕೋರ್ಟ್ ಸೀನ್ ಅನ್ನು ಕೇವಲ ಸಿಂಗಲ್ ಶಾಟ್ ನಲ್ಲಿ ತೆಗೆಯಲಾಗಿತ್ತು. ಈ ಸೀನ್ ನಲ್ಲಿನ ಅಭಿನಯಕ್ಕೆ ಅನಂತ್ ನಾಗ್ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ.[೬]
ಹಾಡುಗಳು
[ಬದಲಾಯಿಸಿ]ಹಿನ್ನಲೆ ಸಂಗೀತವನ್ನು ಬಿ.ಅಜನೀಶ್ ಲೋಕನಾಥ್ ಅವರು ನಿರ್ದೇಶಿಸಿದ್ದಾರೆ. ಹಾಡುಗಳನ್ನು ವಾಸುಕಿ ವೈಭವ್ ಅವರು ಸಂಯೋಜಿಸಿದ್ದಾರೆ. [೭]
Track list | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕರು | ಸಮಯ |
1. | "ಅರೆರೆ ಅವಳ ನಗುವ" | ತ್ರಿಲೋಕ್ ತ್ರಿವಿಕ್ರಮ | ವಾಸುಕಿ ವೈಭವ್ | 03:28 |
2. | "ನೂರಾರು ಬಣ್ಣಗಳು" | ಕೆ. ಕಲ್ಯಾಣ್ | ಮಾಧುರಿ ಶೇಷಾದ್ರಿ | 02:51 |
3. | "ಹೇ ಶಾರದೆ" | ಕೆ. ಕಲ್ಯಾಣ್ | ಆಶಾ, ಸುನಿಧಿ | 03:00 |
4. | "ದಡ್ಡ ಪ್ರವೀಣ" | ತ್ರಿಲೋಕ್ ತ್ರಿವಿಕ್ರಮ | ವಾಸುಕಿ ವೈಭವ್ | 02:53 |
5. | "ಬಲೂನ್ ಸಾಂಗ್" | ವೀರೇಶ್ ಶಿವಮೂರ್ತಿ, ತ್ರಿಲೋಕ್ ತ್ರಿವಿಕ್ರಮ, ಗೋಕುಲ್ ಅಭಿಶೇಕ್ | ಜ್ಞಾನೇಶ್ವರ್ | 03:29 |
6. | "ಅಲೆಯೋ ಅಲೆಗೆ ಈಗ" | ವಾಸುಕಿ ವೈಭವ್ | ವೆಂಕಟೇಶ್ ಡಿ ಸಿ | 03:22 |
ಉಲ್ಲೇಖಗಳು
[ಬದಲಾಯಿಸಿ]- ↑ Desai, Dhwani (5 July 2018). "A government school plays a pivotal role in Rishab Shetty's". The Times of India. Retrieved 20 March 2019.
- ↑ "When film titles are sentences". The Hindu.
- ↑ "It's destination Kasargod for Rishab Shetty's next film". Times of India.
- ↑ "Meet the life of the sarkari shaale". Times of India.
- ↑ "What is Kirik Party director up to now?". Times of India.
- ↑ "Shooting a children's film was a beautiful experience': Rishab Shetty". The New Indian Express.
- ↑ "A prayer song for kids, sung by kids". Times of India.