ಸರಸ್ವತಿ ರಾಜಮಣಿ
ಸರಸ್ವತಿ ರಾಜಮಣಿ | |
---|---|
ಜನನ | |
ಮರಣ | 13 January 2018 | (aged 91)
ರಾಷ್ಟ್ರೀಯತೆ | ಭಾರತೀಯ |
ಗಮನಾರ್ಹ ಕೆಲಸಗಳು | ಐಎನ್ಎ ದಲ್ಲಿ ಅತ್ಯಂತ ಕಿರಿಯ ಗೂಢಚಾರ |
ಸರಸ್ವತಿ ರಾಜಮಣಿ ಅವರು ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) ಅನುಭವಿಯಾಗಿದ್ದರು. ಅವರು ಸೇನೆಯ ಮಿಲಿಟರಿ ಗುಪ್ತಚರ ವಿಭಾಗದಲ್ಲಿ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಸರಸ್ವತಿ ರಾಜಮಣಿ ಅವರು ಯುಟ್ಯೂಬ್‌ನಲ್ಲಿ ಲಭ್ಯವಿರುವ ಕೌಶಿಕ್ ಶ್ರೀಧರ್ ನಿರ್ದೇಶನದ 'ವಾಯ್ಸ್ ಆಫ್ ಆನ್ ಇಂಡಿಪೆಂಡೆಂಟ್ ಇಂಡಿಯನ್' ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಬಾಲ್ಯ
[ಬದಲಾಯಿಸಿ]ರಾಜಮಣಿ ಅವರು ೧೯೨೭ ರ ಜನವರಿ ೧೧ ರಂದು ಬರ್ಮಾದ (ಇಂದಿನ ಮ್ಯಾನ್ಮಾರ್ ) ರಂಗೂನ್‌ನಲ್ಲಿ ಜನಿಸಿದರು. ಅವರ ತಂದೆ ಚಿನ್ನದ ಗಣಿ ಹೊಂದಿದ್ದರು ಮತ್ತು ರಂಗೂನ್‌ನ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದರು. ಅವರ ಕುಟುಂಬವು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕಟ್ಟಾ ಬೆಂಬಲಿಗರಾಗಿದ್ದರು ಮತ್ತು ಚಳುವಳಿಗೆ ಹಣವನ್ನು ಸಹ ನೀಡಿದ್ದರು. [೧]
ರಾಜಮಣಿ ಅವರು ೧೬ ವರ್ಷದವರಿದ್ದಾಗ, ನೇತಾಜಿ ಸುಭಾಷ್ ಚಂದ್ರ ಬೋಸ್ ರಂಗೂನ್‌ನಲ್ಲಿ ಮಾಡಿದ ಭಾಷಣದಿಂದ ಪ್ರೇರಿತರಾಗಿ ರಾಜಮಣಿ ಅವರು ತನ್ನೆಲ್ಲಾ ಆಭರಣಗಳನ್ನು ಐಎನ್‌ಎಗೆ ದಾನ ಮಾಡಿದರು. ಯುವತಿಯು ಆಭರಣವನ್ನು ನಿಷ್ಕಪಟವಾಗಿ ದಾನ ಮಾಡಿರಬಹುದು ಎಂದು ಅರಿತುಕೊಂಡ ನೇತಾಜಿ ಅದನ್ನು ಹಿಂದಿರುಗಿಸಲು ಅವಳ ಮನೆಗೆ ಭೇಟಿ ನೀಡಿದರು. ಆದರೆ, ಆಭರಣಗಳನ್ನು ಸೇನೆಗೆ ಬಳಸಿಕೊಳ್ಳುವುದಾಗಿ ರಾಜಮಣಿ ಹಠ ಹಿಡಿದಿದ್ದರು. ಆಕೆಯ ನಿರ್ಣಯದಿಂದ ಪ್ರಭಾವಿತರಾದ ನೇತಾಜಿ ಅವರು ರಾಜಮಣಿ ಅವರಿಗೆ ಸರಸ್ವತಿ ಎಂದು ಮರುನಾಮಕರಣ ಮಾಡಿದರು. [೨]
ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಕೆಲಸ
[ಬದಲಾಯಿಸಿ]೧೯೪೨ ರಲ್ಲಿ, ರಾಜಮಣಿ ಅವರು ಐಎನ್ಎ ಯ ರಾಣಿ ಆಫ್ ಝಾನ್ಸಿ ರೆಜಿಮೆಂಟ್‌ಗೆ ನೇಮಕಗೊಂಡರು ಮತ್ತು ಸೈನ್ಯದ ಮಿಲಿಟರಿ ಗುಪ್ತಚರ ವಿಭಾಗದ ಭಾಗವಾಗಿದ್ದರು. [೩] ಅವರು ಮೊದಲ ಭಾರತೀಯ ಮಹಿಳಾ ಗೂಢಚಾರಿಕೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎರಡನೆಯ ಮಹಾಯುದ್ಧದ ಸಮಯದಲ್ಲಿ, ಬ್ರಿಟಿಷರ ರಹಸ್ಯಗಳನ್ನು ಪಡೆಯಲು ಮತ್ತು ಅವುಗಳನ್ನು ಐಎನ್ಎ ಯೊಂದಿಗೆ ಹಂಚಿಕೊಳ್ಳಲು ಕೋಲ್ಕತ್ತಾದ ಬ್ರಿಟಿಷ್ ಮಿಲಿಟರಿ ನೆಲೆಗೆ ಕೆಲಸಗಾರನ ವೇಷದಲ್ಲಿ ರಾಜಮಣಿಯನ್ನು ಗೂಢಚಾರಿಕೆಯಾಗಿ ಕಳುಹಿಸಲಾಯಿತು. ೧೯೪೩ ರಲ್ಲಿ ಭಾರತದ ಗಡಿಗಳಿಗೆ ಬೋಸ್ ಅವರ ರಹಸ್ಯ ಭೇಟಿಯ ಸಂದರ್ಭದಲ್ಲಿ ಬ್ರಿಟಿಷರು ಹತ್ಯೆ ಮಾಡುವ ಯೋಜನೆಯನ್ನು ಬಹಿರಂಗಪಡಿಸುವಲ್ಲಿ ರಾಜಮಣಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಸುಮಾರು ಎರಡು ವರ್ಷಗಳ ಕಾಲ, ರಾಜಮಣಿ ಮತ್ತು ಅವರ ಕೆಲವು ಮಹಿಳಾ ಸಹೋದ್ಯೋಗಿಗಳು ಹುಡುಗರಂತೆ ವೇಷ ಧರಿಸಿ ಬುದ್ಧಿವಂತಿಕೆಯನ್ನು ಸಂಗ್ರಹಿಸಿದರು. ಹುಡುಗನ ವೇಷ ಧರಿಸಿದ್ದ ರಾಜಮಣಿ ತನ್ನ ಹೆಸರನ್ನು ಮಣಿ ಎಂದು ಬದಲಾಯಿನಸಿದ್ದರು. ಒಮ್ಮೆ, ಆಕೆಯ ಸಹೋದ್ಯೋಗಿಯೊಬ್ಬರು ಬ್ರಿಟಿಷ್ ಪಡೆಗಳಿಗೆ ಸಿಕ್ಕಿಬಿದ್ದರು. ಅವಳನ್ನು ರಕ್ಷಿಸಲು, ರಾಜಾಮಣಿ ನರ್ತಕಿಯಂತೆ ವೇಷ ಧರಿಸಿ ಬ್ರಿಟಿಷ್ ಶಿಬಿರಕ್ಕೆ ನುಸುಳಿದಳು. ಉಸ್ತುವಾರಿ ವಹಿಸಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಮದ್ದು ನೀಡಿ ತನ್ನ ಸಹೋದ್ಯೋಗಿಯನ್ನು ಅಲ್ಲಿಂದ ಬಿಡಿಸಿಕೊಂಡು ಬಂದರು. ಅವರು ಅಲ್ಲಿಂದ ತಪ್ಪಿಸಿಕೊಳ್ಳುವಾಗ, ರಾಜಮಣಿಯ ಕಾಲಿಗೆ ಬ್ರಿಟಿಷ್ ಕಾವಲುಗಾರ ಗುಂಡು ಹಾರಿಸಿದರು ಆದರೂ, ರಾಜಮಣಿ ಅವರು ಬ್ರಿಟಿಷ್ ಕೈಯಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದರು. [೪] [೫] [೬]
ನೇತಾಜಿ ಎರಡನೇ ಮಹಾಯುದ್ಧದ ನಂತರ ಐಎನ್ಎ ಅನ್ನು ವಿಸರ್ಜಿಸಿದಾಗ ಸೈನ್ಯದಲ್ಲಿ ರಾಜಮಣಿ ಅವರ ಕೆಲಸವು ಕೊನೆಗೊಂಡಿತು. [೭] [೮]
ನಂತರದ ವರ್ಷಗಳು
[ಬದಲಾಯಿಸಿ]ಎರಡನೆಯ ಮಹಾಯುದ್ಧದ ನಂತರ, ರಾಜಮಣಿಯ ಕುಟುಂಬವು ಚಿನ್ನದ ಗಣಿ ಸೇರಿದಂತೆ ಎಲ್ಲಾ ಸಂಪತ್ತನ್ನು ಬಿಟ್ಟು ಭಾರತಕ್ಕೆ ಮರಳಿತು. [೯] ೨೦೦೫ ರಲ್ಲಿ, ಪತ್ರಿಕೆಯೊಂದು ರಾಜಮಣಿ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯಿಂದ ಅವರು ಉಳಿಸಿಕೊಂಡಿದ್ದರೂ, ಅವರು ತಮ್ಮ ಜೀವನವನ್ನು ಪೂರೈಸಲು ಹೆಣಗಾಡುತ್ತಿದ್ದಾರೆ ಎಂದು ವರದಿ ಮಾಡಿತು. ರಾಜಮಣಿ ಅವರು ತಮ್ಮ ಸಹಾಯಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆಗಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ₹೫ ಲಕ್ಷ ಉಡುಗೊರೆಯಾಗಿ ಮತ್ತು ಬಾಡಿಗೆ ರಹಿತ ಹೌಸಿಂಗ್ ಬೋರ್ಡ್ ಫ್ಲಾಟ್ ರೂಪದಲ್ಲಿ ನೆರವು ನೀಡಿದರು. [೧೦] [೧೧]
ಒಡಿಶಾದ ಕಟಕ್‌ನಲ್ಲಿರುವ ನೇತಾಜಿ ಸುಭಾಷ್ ಜನ್ಮಸ್ಥಳದ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಐಎನ್‌ಎ ಗ್ಯಾಲರಿಗೆ ಅವರು ಚಿಹ್ನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. [೧೨]
೨೦೧೬ ರಲ್ಲಿ , ಇಪಿಐಸಿ ಚಾನೆಲ್‌ನಲ್ಲಿ ಅದೃಶ್ಯ ಎಂಬ ದೂರದರ್ಶನ ಸರಣಿಯಲ್ಲಿ ಅವರ ಕಥೆಯು ಒಳಗೊಂಡಿತ್ತು. [೧೩] ರಾಜಮಣಿ ಅವರು ಅವರ ಆತ್ಮಚರಿತ್ರೆಯನ್ನೂ ಸಹ ಬರೆದಿದ್ದಾರೆ. ಅವರ ಆತ್ಮಚರಿತ್ರೆ ಹಿಂದಿಯಲ್ಲಿ ಹಾರ್ ನಹಿ ಮನುಂಗಿ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.
ಸಾವು
[ಬದಲಾಯಿಸಿ]ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ಸರಸ್ವತಿ ರಾಜಮಣಿ ಅವರು ಜನವರಿ ೧೩, ೨೦೧೮ ರಂದು ಹೃದಯ ಸ್ತಂಭನದಿಂದ ನಿಧನರಾದರು. ಅವರ ಅಂತಿಮ ಸಂಸ್ಕಾರ ಚೆನ್ನೈನ ರಾಯಪೆಟ್ಟಾದ ಪೀಟರ್ಸ್ ಕಾಲೋನಿಯಲ್ಲಿ ನಡೆಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "An INA veteran lives in penury". The Hindu. 17 ಜೂನ್ 2005. Retrieved 30 ನವೆಂಬರ್ 2016."An INA veteran lives in penury". The Hindu. 17 ಜೂನ್ 2005. Retrieved 30 ನವೆಂಬರ್ 2016.
- ↑ "An INA veteran lives in penury". The Hindu. 17 ಜೂನ್ 2005. Retrieved 30 ನವೆಂಬರ್ 2016.
- ↑ "Jaya dole for Netaji spy". The Telegraph. 22 ಜೂನ್ 2005. Retrieved 30 ನವೆಂಬರ್ 2016.
- ↑ "An INA veteran lives in penury". The Hindu. 17 June 2005. Retrieved 30 November 2016. []
- ↑ "The forgotten spy". Reddif.com. 26 ಆಗಸ್ಟ್ 2005. Retrieved 30 ನವೆಂಬರ್ 2016."The forgotten spy". Reddif.com. 26 August 2005. Retrieved 30 November 2016.
- ↑ "INA veteran has something to give too". The Hindu. 21 ಜೂನ್ 2005. Retrieved 30 ನವೆಂಬರ್ 2016.[ಮಡಿದ ಕೊಂಡಿ]
- ↑ "An INA veteran lives in penury". The Hindu. 17 ಜೂನ್ 2005. Retrieved 30 ನವೆಂಬರ್ 2016."An INA veteran lives in penury". The Hindu. 17 June 2005. Retrieved 30 November 2016. []
- ↑ "The forgotten spy". Reddif.com. 26 ಆಗಸ್ಟ್ 2005. Retrieved 30 ನವೆಂಬರ್ 2016."The forgotten spy". Reddif.com. 26 August 2005. Retrieved 30 November 2016.
- ↑ "The forgotten spy". Reddif.com. 26 ಆಗಸ್ಟ್ 2005. Retrieved 30 ನವೆಂಬರ್ 2016."The forgotten spy". Reddif.com. 26 August 2005. Retrieved 30 November 2016.
- ↑ "Jaya dole for Netaji spy". The Telegraph. 22 ಜೂನ್ 2005. Retrieved 30 ನವೆಂಬರ್ 2016."Jaya dole for Netaji spy". The Telegraph. 22 June 2005. Retrieved 30 November 2016.
- ↑ "INA veteran has something to give too". The Hindu. 21 ಜೂನ್ 2005. Retrieved 30 ನವೆಂಬರ್ 2016."INA veteran has something to give too". The Hindu. 21 June 2005. Retrieved 30 November 2016.[ಮಡಿದ ಕೊಂಡಿ] []
- ↑ "INA memorabilia to be displayed in Netaji museum". Hindustan Times. 17 ಅಕ್ಟೋಬರ್ 2008. Retrieved 30 ನವೆಂಬರ್ 2016.
- ↑ "Watch Adrishya - Epic TV Series - India's Greatest Spies - epicchannel.com". Epic Channel. Archived from the original on 10 ಜುಲೈ 2016. Retrieved 30 ನವೆಂಬರ್ 2016.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from April 2021
- Articles with invalid date parameter in template
- Short description is different from Wikidata
- Use Indian English from September 2016
- All Wikipedia articles written in Indian English
- Use dmy dates from October 2019
- Articles with hCards
- Articles with dead external links from April 2021
- ಸ್ವಾತಂತ್ರ್ಯ ಹೋರಾಟಗಾರರು
- ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ