ಸದಸ್ಯ:Vinu Sujitha Michael/ನನ್ನ ಪ್ರಯೋಗಪುಟ/3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀಲೆಂಟರೇಟಾ (ಕುಟುಕುಕಣವಂತುಗಳು)[ಬದಲಾಯಿಸಿ]

thumb|ಕುಟುಕುಕಣವಂತುಗಳ ಜೀವನ ಚಕ್ರ thumb|ಫೈಸೆಲಿಯಾ thumb|ಒಬಿಲಿಯಾ ಈ ವಂಶಕ್ಕೆ ಸೇರಿದ ಪ್ರಾಣಿಗಳನ್ನು ಸೀಲೇಂಟರೇಟಾ ಎಂದು ಕರೆಯಲಾಗಿದೆ ಈ ಪ್ರಾಣಿಗಳ ದೇಹದ ಒಳಗೆ ಜೀರ್ಣಕ್ರಿಯೆಯ ಸಹಕರಿಸುವ ಜಠರಾವಕಾಶ- ಸೀಲೆಂಟರಾನ್ (ಉದ್ದವಾದ ಖಾಲಿ ಸ್ಥಳ - ಗಾಸ್ಟ್ರೊವಾಸ್ಕ್ಯುಲಾರ್ ಕಾವಿಟಿ) ಇದೆ. ಶತ್ರುಗಳಿಂದ ರಕ್ಶಿಸಿಕೊಳ್ಳಲು ಮತ್ತು ಆಹಾರ ಪಡೆದುಕೊಳ್ಳಲು ಕುಟುಕುಕಣ(ನಿಡೋಬ್ಲಾಸ್ಟ್) ಎಂಬ ವಿಶೇಷ ಕೋಶಗಳನ್ನು ಹೊಂದಿರುವುದರಿಂದ ಈ ಪ್ರಾಣಿಗಳನ್ನು ಕುಟುಕುಕಣವಂತುಗಳು(ನೈಡೆರಿಯ) ಎಂದು ಕರೆಯಲಾಗಿದೆ. ಕುಟುಕುಕಣವಂತುಗಳು ಜಲವಾಸಿಗಳು. ಹೆಚ್ಚಾಗಿ ಸಮುದ್ರವಾಸಿಗಳು ಮತ್ತು ಕೆಲವು ಪ್ರಾಣಿಗಳು ಸಿಹಿ ನೀರಿನಲ್ಲೂ ಕಂಡುಬರುತ್ತದೆ.ಈ ಪ್ರಾಣಿಗಳು ಮೂರು ಗುಂಪುಗಳಾಗಿ ವಿಭಾಗಿಸಲಾಗಿದೆ. ಅಚಲ ಆನ್ತೊಸೊವ, ಈಜುವ ಸ್ಕೈಫೊಸೊವ ಮತ್ತು ಹೈಡ್ಡ್ರೊಸೊವ. [೧]

ದೇಹದ ರಚನೆ[ಬದಲಾಯಿಸಿ]

ದೇಹಭಿತ್ತಿಯು ಎರಡು ಪದರಗಳನ್ನು ಒಳಗೊಂಡಿದೆ. ಇವುಗಳನ್ನು ಇಪ್ಪದರದ ಪ್ರಾಣಿಗಳು(ಡಿಪ್ಲೊಬ್ಲಾಸ್ಟಿಕ್) ಎಂದು ಕರೆಯಲಾಗಿದೆ. ಹೊರಪದರವನ್ನು ಹೊರದರ್ಮ(ಎಕ್ಟೋಡೆರ್ಮ್) , ಒಳಪದರವನ್ನು ಒಳದರ್ಮ (ಎನ್ಡೋಡರ್ಮ್) ಎಂಬ ಹೆಸರುಗಳಿವೆ. ಇವೆರಡು ಪದರಗಳ ನಡುವೆ ಜೀವಕೋಶಗಳಿಲ್ಲದ ಲೋಳೆ ರೂಪದ ರಚನೆ ಇದೆ. ಈ ವಿಶಿಷ್ಟವಾದ ರಚನೆಯನ್ನು ಮೀಸೋಗ್ಲಿಯಾ ಎಂದು ಕರೆಯಲಾಗಿದೆ. ಇವುಗಳು ಅಂಗಾಂಶ ಮಟ್ಟದ ಸಂಘಟನೆಯನ್ನು ಪ್ರದರ್ಶಿಸುತ್ತವೆ. ಈ ಪ್ರಾಣಿಗಳು ಎರಡು ದೇಹ ರೂಪಗಳನ್ನು ತೋರಿಸುತ್ತದೆ, ಈಜುವ ಮೆಡ್ಯೂಸಾ ಮತ್ತು ಅಚಲ ಪಾಲಿಪ್.ಇಂತಹ ಪರಿಸ್ಥಿಥಿಯನ್ನು ಬಹುರೂಪತೆ ಎಂದು ಕರೆಯಲಾಗಿದೆ. ಈ ಎರಡೂ ರೂಪುಗಳು ತ್ರಿಜ್ಯೀಯ ಸಮ್ಮಿತಿಯಲ್ಲಿದೆ.ಪಾಲಿಪ್ನ ಮೀಸೋಗ್ಲಿಯಾ ಮೆದುವಾಗಿ ತೆಳುವಾಗಿ ಇರುತ್ತದೆ, ಆದರೆ ಮೆಡ್ಯೂಸಾನ ಮೀಸೋಗ್ಲಿಯಾ ದಟ್ಟವಾಗಿ ಇರುತ್ತದೆ.

ಜೀರ್ಣಕ್ರಿಯೆ[ಬದಲಾಯಿಸಿ]

ಇವುಗಳ ಬಾಯಿಯನ್ನು ಹೈಪೊಸ್ಟೋಮ್ ಎಂದು ಕರೆಯಲಾಗಿದೆ, ಇದನ್ನು ಸುತ್ತಿ ನಿಡೋಬ್ಲಾಸ್ಟ್ ಅಥವ ನೆಮಾಟೋಸಿಸ್ಟ್ ಕೋಶಗಳಿಂದ ಕೂಡಿರುವ ಗ್ರಹಣಾಂಗಗಳು ಇವೆ. ಈ ಕೋಶಗಳು ಲಂಗರಿಳಿಸುವಿಕೆ, ಆಹಾರ ಸೆರೆಹಿಡಿಯುವುದಕ್ಕೆ, ಬಾಗಲು, ಹಿಗ್ಗಲು, ಕುಗ್ಗಲು, ರಕ್ಶಣೆಗೆ ಉಪಯೋಗವಾಗುತ್ತದೆ. ಸೀಲೆಂಟರಾನ್ ಅಥವಾ ಜಥರಾವಕಾಶವು ಸರಳವಾಗಿರಬಹುದು, ಕವಲೊಡೆದಿರಬಹುದು ಅಥವಾ ಬಾಯಿಯ ಸುತ್ತಲೂ ಸಂಕುಚಿಸಬಲ್ಲ ಕರಬಳ್ಳಿಗಳಾಗಿರಬಹುದು. ಕರಬಳ್ಳಿಗಳಲ್ಲಿ ಕುಟುಕುಕಣಗಳು ಸಂಗ್ರಹವಾಗಿ ಸಹಕರಿಸುತ್ತದೆ. ಇವುಗಳು ಪ್ಲ್ಯಾಂಕ್ಟನುಗಳನ್ನು, ಡೈನೋಫಲಾಜೆಲ್ಲೇಟುಗಳನ್ನು ತಿನ್ನುತ್ತದೆ.

ನರ ಮಂಡಲ[ಬದಲಾಯಿಸಿ]

ಹೊರದರ್ಮದ ಕೆಲವು ಕೋಶಗಳು ನರಕೋಶಗಳಾಗಿ ಮಾರ್ಪಟ್ಟು ಮೀಸೋಗ್ಲಿಯಾ ಭಾಗದಲ್ಲಿ ನರಜಾಲವನ್ನು ರಚಿಸುತ್ತದೆ. ಇದರಿಂದ ಪ್ರಚೋದನೆಗಳನ್ನು ಗ್ರಹಿಸಲು, ಸಾಗಿಸಲು ಮತ್ತು ಪ್ರತಿಕ್ರಿಯೆಗಳನ್ನು ಸೂಚಿಸಲು ಸಾಧ್ಯವಾಗುತ್ತದೆ. [೨]

ಉಸಿರಾಟ ಮತ್ತು ವಿಸರ್ಜನೆ[ಬದಲಾಯಿಸಿ]

ಅಲ್ಲದೇ ಹೊರದರ್ಮದ ಮತು ಒಳದರ್ಮದ ಕೋಶಗಳು, ವಿಸರಣದಿಂದ ಉಸಿರಾಟ ಮತ್ತು ವಿಸರ್ಜನ ಕ್ರಿಯೆಯನ್ನೂ ನಡೆಸುತ್ತದೆ.

ಅಸ್ಥಿಪಂಜರ ವ್ಯವಸ್ಥೆ[ಬದಲಾಯಿಸಿ]

ಹೈಡ್ರಾ ತಮ್ಮ ಬಾಯಿಯನ್ನು ತಿನ್ನದೆ ಇರುವಾಗ ಮುಚ್ಚಿರುತ್ತದೆ, ಸೀಲೆಂಟಾರಾನ್ ಎಂಬ ಖಾಲಿ ಜಾಗದಲ್ಲಿ ನೀರು ತುಂಬಿರುವುದರಿಂದ , ಆ ನೀರು ಅಸ್ಥಿಪಂಜರವಾಗಿ ಕಾರ್ಯ ನಿರ್ವಹಿಸುತ್ತದೆ.ಸೀ ಪೆನ್ಸ್ ತಮ್ಮ ಮೀಸೋಗ್ಲಿಯಾವನ್ನು ಕ್ಯಾಲ್ಸಿಯಂ ಕಾರ್ಬೋನೇಟ್ನಿಂದ ಗಟ್ಟಿಗೊಳಿಸಿಕೊಳ್ಳುತ್ತದೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಲೈಂಗಿಕ ಸಂತಾನೋತ್ಪತ್ತಿಯು ಲಿಂಗಾಣುಗಳು ಉತ್ಪತ್ತಿ ಮತ್ತು ನಿಶೇಚನದಿಂದ ನಡೆಯುತ್ತದೆ, ಎರಡೂ ಪಾಲಿಪ್ ಮತ್ತು ಮೆಡ್ಯೂಸಾವನ್ನು ಒಳಗೊಂಡಿದೆ.ಪೀಳಿಗೆಯ ಪರ್ಯಾಯವನ್ನು ಪ್ರದರ್ಶಿಸುತ್ತಿತ್ತು. ನಿರ್ಲಿಂಗ ರೀತಿಯ ಸಂತಾನೋತ್ಪತ್ತಿಯು ಅಂಕುರ ಮೊಗ್ಗುಗಳ ಬೆಳವಣಿಗೆಯಿಂದ (ಬಡ್ಡಿಂಗ್) ನಡೆಯುತ್ತದೆ . ತಾಯಿ ಪ್ರಾಣಿಯ ಶರೀರದಿಂದ ತಳಭಾಗದಿಂದ ಅಂಕುರ ಒಂದು ಚಾಚಿಕೆಯಂತೆ ಮೂಡುತ್ತದೆ. ಇಲ್ಲಿ ದೇಹದ ಒಂದು ಭಾಗ ಮೊಗ್ಗಿನಂತೆ ಹೊರಕ್ಕೆ ಚಾಚಲ್ಪಡುತ್ತದೆ. ನಂತರ ಅಗತ್ಯವಿರುವ ದೇಹದ ಭಾಗಗಳನ್ನು ಬೆಳೆಸಿಕೊಂಡು ತಾಯಿ ಪ್ರಾಣಿಯ ಶರೀರದಿಂದ ಬೇರ್ಪಡೆಯಾಗುತ್ತದೆ.

ಉದಾಹರಣೆ[ಬದಲಾಯಿಸಿ]

ಹೈಡ್ರಾ, ಒಬೀಲಿಯಾ, ಪೈಸೇಲಿಯಾ, ಅರೀಲಿಯಾ, ಕಡಲ ಹೂ, ಲೋಳೆ ಮೀನು ಮುಂತಾದವು. [೩] [೪]

  1. https://www.askiitians.com/biology/animal-kingdom/phylum-coelenterata.html
  2. http://www.iaszoology.com/classification-of-coelenterata/
  3. http://www.onlinebiologynotes.com/phylum-cnidariacoelenterata-general-characteristic-classification/
  4. http://www.microbiologynotes.com/short-description-of-phylum-coelenterata/