ವಿಷಯಕ್ಕೆ ಹೋಗು

ಸದಸ್ಯ:Thrupthi thattanda12/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಾಸೀಟ್

[ಬದಲಾಯಿಸಿ]

ಕೊಡಗು ಜಿಲ್ಲೆಯ ಮಡಿಕೇರಿ ಯಲ್ಲಿರುವ ರಾಜಾಸೀಟ್[] ಒಂದು ಪ್ರವಾಸಿ ತಾಣ[]. ಕೊಡಗಿನ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯಲ್ಲಿರುವ ರಾಜಾಸೀಟ್ ಪ್ರಮುಖ ಸಂದರ್ಶನ ತಾಣವಾಗಿದೆ.

ವೈಶಿಷ್ಟ್ಯಗಳು

[ಬದಲಾಯಿಸಿ]

ಇದು ನಿರ್ದಿಷ್ಟವಾದಿಯಲ್ಲಿ ಹೂಬಿಡುವ ಹೂಗಳ ಮತ್ತು ಕಾರಂಜಿಗಳ ಒಂದು ಉದ್ಯಾನವನ. ಈ ಕಾರಂಜಿಗಳು ಸಂಗೀತ ಮಯವಾಗಿದ್ದು ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕಂತೆ ಹಾರಿಸಲಾಗುತದೆ.ಮುಂಜಾನೆ,ಸಂಜೆ ಮಾತ್ರವಲ್ಲ ಮಟ ಮಟ ಮದ್ಯಾನದಲ್ಲಿಯೂ ಇಲ್ಲಿ ತಂಗಾಳಿ ಬೀಸುತಿರುತ್ತದೆ.ಹಾಗೆಯೇ ಉದ್ಯಾನವನಕ್ಕೆ ಕೊಡಗಿನ ರಾಜರ ನೆನಪಿಗೆ ಈ ಹೆಸರನ್ನು ಇಡಲಾಗಿದೆ.ಮಡಿಕೇರಿ ನಗರದ ಅಂಚಿನಲ್ಲಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನದಿಂದ ಇಣುಕಿ ನೋಡಿದರೆ ಒಂದೆಡೆ ಮೈಜುಮ್ಎನಿಸುವ ಕಂದಕ ಕಂಡರೆ ಮತ್ತೊಂದೆಡೆ ಪ್ರಕೃರ್ತಿಯ ವಿಹಂಗಮ ನೋಟ ಮನವನ್ನು ಪುಳಕಗೊಳಿಸುತ್ತದೆ.

ಇತಿಹಾಸ

[ಬದಲಾಯಿಸಿ]

ರಾಜಾಸೀಟಿನಲ್ಲಿ ಸಣ್ಣದಾದ ಪೆವಿಲಿಯನ್ ಇದ್ದು ಇದನ್ನು ಕಲ್ಲು ಮತ್ತೆ ಗಾರೆಯಿಂದ ಮಾಡಲಾಗಿದೆ.ನಾಲ್ಕು ಕಂಬಗಳನ್ನು ಬೆಂಬಲಕ್ಕೆ ನಿರ್ಮಿಸಿ ಕಮಾನನ್ನು ಕೂಡ ನಿರ್ಮಿಸಲಾಗಿದೆ.ಕೊಡಗು ರಾಜರು ತಮ್ಮ ರಾಣಿಯರ ಜೊತೆ ಈ ಉದ್ಯಾನದಲ್ಲಿ ಸಮಯ ಕಳೆಯುತ್ತಿದ್ದರು.ಕೊಡಗು ರಾಜರ ನೆನಪನ್ನು ಈ ನಿರ್ಮಾಣವು ಮಾಡುತ್ತದೆ.ದೂರದಲ್ಲಿ ಮುಗಿಲೆತ್ತರದಲ್ಲಿ ಬೆಳೆದು ಪೈಪೋಟಿ ನೀಡಲೇನೋ ಎಂಬಂತೆ ನಿಂತಿರುವ ಗಿರಿ ಶಿಖರಗಳು.ಅವುಗಳ ನಡುವಿನ ಇಳಿ ಜಾರಿನಲ್ಲಿ ಬೆಳೆದು ನಿಂತ ಹೆಮ್ಮರಗಳು.ಕಾಫಿ,ಏಲಕ್ಕಿ,ತೋಟಗಳ ನಡುವಿನ ಗದ್ದೆ ಬಯಲುಗಳು.ಪಕ್ಕದ ಗುಡ್ಡದಲ್ಲಿ ಒಥೋತಾಗಿ ಎದ್ದು ನಿಂತ ಜನ ವಸತಿಗಳು.ಕೆಳಗಿನ ಕಂದಕದ ಅಂಕು ಡೊಂಕಾದ ರಸ್ತೆಯಲ್ಲಿ ಸಾಗಿ ಬರುವ ವಾಹನಗಳು.ಹೀಗೆ ಒಂದೆರಡಲ್ಲ ಹತ್ತಾರು ದೃಶ್ಯಗಳು ಕಣ್ಣಿಗೆ ರಾಜುತ್ತದೆ.ಆ ವಾತಾವರಣ ಮತ್ತು ಸಣ್ಣ ಹಾಗೂ ದೊಡ್ಡ ಪರ್ವತಗಳು ಮಂಜಿನಿಂದ ಕವಿದಿದ್ದು,ಈ ಪ್ರದೇಶವು ಕೊಡಗು ರಾಜರ ಪ್ರಜ್ಞೆಯನ್ನು ನೆನಪಿಸುತ್ತದೆ.ಸುತ್ತಲಿನ ಬಂಡೆ ಮತ್ತು ಪರ್ವತಗಳಿಗಿಂತ ಎತ್ತರದಲ್ಲಿ ನಿರ್ಮಾಣ ಮಾಡಲಾಗಿರುವುದರಿಂದ ರಾಜಾಸೀಟ್ನಲ್ಲಿ ಕೂತು ಸುತ್ತಲಿನ ಪರಿಸರವನ್ನು ನೋಡಿ ಆನಂದಿಸಬಹುದು.ಇಡೀ ಕಣಿವೆಗೆ ಬಂಗಾರದ ಕಿರಣಗಳನ್ನು ಹೊಮ್ಮಿಸುವ ಸೂರ್ಯೋದಯ ಮತ್ತು ಸೂರ್ಯಾಸ್ತ್ರವನ್ನು ನೋಡುವುದು ಒಂದು ಅನುಭವ. ಇಲ್ಲಿ ಮಕ್ಕಳು ಆಟ ಆಡುವುದಕ್ಕೆ ಕೂಡ ಸೌಲಭ್ಯ ಒದಗಿಸಲಾಗಿದೆ.ಮುಂಜಾನೆಯಲ್ಲಿ ಸದಾ ಮಡಿಕೇರಿಗೆ ಮುತ್ತಿಕ್ಕುವ ಮಂಜಿಗೆ ರಾಜಾಸೀಟು ದೃಶ್ಯ ಬರೆಯುವ ಕ್ಯಾನ್ವಾಸ್.ಗುಡ್ಡದಲ್ಲಿ ಬೆಳ್ಳಿಯಂತೆ ಸುರಿದು ಕಂದಕಗಳನ್ನೆಲ್ಲ ತುಂಬಿ ಮಂಜಿನ ಸಾಗರ ಸೃಷ್ಟಿಸಿ ನೋಡುಗರನ್ನು ತಬ್ಬಿಬ್ಬು ಗೊಳಿಸುವ ಆ ಗುಡ್ಡ ಈ ಗುಡ್ಡ ಮದ್ಯದ ಕಣಿವೆಗೆ ಸೇತುವೆ ಕಟ್ಟಿ ಒಂದೆಡೆಯಿಂದ ಮತ್ತೊಂದೆಡೆಗೆ ಲಾಗ ಹೊಡೆಯುವ ಮಂಜಿನ ಮಂಗನಾಟಕ್ಕೆ ಕಣಿವೆಗಳ ನಡುವಿನ ಹಾವು ಸರಿದಂತಿರುವ ರಸ್ತೆಯಲ್ಲಿ ಸಾಗಿ ಬರುವ ವಾಹನಗಳ ಮಂದ ದೀಪಗಳು ಹೊಸ ಅನುಭವಕ್ಕೆ ರಾಜಾಸೀಟ್ ಸಾಕ್ಷಿಯಾಗುತ್ತದೆ.

ಪ್ರಾರಂಭ

[ಬದಲಾಯಿಸಿ]

ಹಾಗೆ ನೋಡಿದರೆ ಇವತ್ತು ಉದ್ಯಾನವನವಾಗಿ ಕಂಗೊಳಿಸುವ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟಿಷರ ಮಸಣವಾಗಿತ್ತು.ಕಾಲಕ್ರಮೇಣ ಇಲ್ಲಿದ್ದ ಬ್ರಿಟಿಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತದೆ.ಈ ಉದ್ಯಾನಕ್ಕೆ ರಾಜಾಸೀಟ್ ಎಂಬ ಹೆಸರು ಹೇಗೆ ಬಂತೆಂಬುವುದರ ಬಗ್ಗೆ ಇತಿಹಾಸದ ಪುಟಗಳನ್ನೂ ತಿರುವಿದರೆ ಒಂದಷ್ಟು ಮಾಹಿತಿ ದೊರೆಯುತ್ತದೆ.ಹಿಂದೆ ಚಿಕ್ಕ ವೀರರಾಜನ ಕಾಲದಲ್ಲಿ ರಾಜ ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರ ದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದಂತೆ.ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು.ಬ್ರಿಟಿಷರ ಆಡಳಿತಾವಧಿಯಲ್ಲಿ ಇಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪIವನ್ನು ನಿರ್ಮಿಸಲಾಯಿತು.ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. https://www.thehindubusinessline.com/life/2005/06/17/stories/2005061700090200.htm
  2. http://www.coorgtourisminfo.com/rajas-seat/
  3. ಸ್ಥಳ ಪರಿಚಯ,ಡಿಸ್ಕವರ್ ಕೂರ್ಗ್,(ಸಂ)ಪಿ.ಟಿ.ಬೋಪಣ್ಣ, 2010