ವಿಷಯಕ್ಕೆ ಹೋಗು

ಸದಸ್ಯ:Supritha.g.vaidya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂಚಲ ನಕ್ಷತ್ರಗಳು

[ಬದಲಾಯಿಸಿ]
ಸಫೈಡ್ ನಕ್ಷತ್ರ

ಸಫೈಡ್ ನಕ್ಷತ್ರಳು

[ಬದಲಾಯಿಸಿ]

ಸಫೈ ಎನ್ನುವ ನಕ್ಷತ್ರದ ಪ್ರಕಾಶ ನಿಯತಕಾಲಿಕಾವಾಗಿ ಬದಲಾಗುತ್ತಿದ್ದನ್ನು ೧೭೮೪ರಲ್ಲಿ ಕಂಡುಹಿಡಿಯಲಾಗಿದ್ದು ಇಂತಹ ನಕ್ಷತ್ರಗಳಿಗೆ ಸಫೈಡ್ ಎನ್ನುವ ಹೆಸರು ಬಂದಿತು. ಅನೇಕ ನಕ್ಷತ್ರಗಳು ಸಮೂಹಗಳಲ್ಲಿ ಇಂತಹ ನಕ್ಷತ್ರಗಳು ಸಾಧಾರಣವಾದಗಿ ಅತಿ ಪ್ರಕಾಶಮಾನವಾಗಿದ್ದು - ಸೂರ್ಯನಿಗಿಂತ ೧೦೦೦೦ದಷ್ಟಾದರೂ ಹೆಚ್ಚು - ಅವುಗಳನ್ನು ಬರೀಗಣ್ಣುಗಳಿಂದಲೇ ನೊಡಬಹುದು.ನಕ್ಷತ್ರದ ಉಬ್ಬು ಮತ್ತು ಇಳಿತಗಳಿಂದ ಪ್ರಕಾಶ ಬದಲಾಗುತ್ತಿರುತ್ತದೆ..ಈಗಿನ ಧ್ರುವತಾರೆಯೂ ಈ ಬಗೆಯ ನಕ್ಷತ್ರವೇ ಅಗಿದ್ದು, ನಮ್ಮ ಗೆಲಕ್ಸಿಯಲ್ಲೇ ೬೦೦ಕ್ಕೂ ಹೆಚ್ಚು ಇಂತಹ ನಕ್ಷತ್ರಗಳು ಇವೆ.

ಇವುಗಳ ಪ್ರಕಾಶದ ಬದಲಾವಣೆಯ ಕಾಲಮಾನಕ್ಕೂ ಮತ್ತು ಪ್ರಕಾಶಕ್ಕೂ ಸಂಬಂಧವನ್ನು ಕಂಡುಹಿಡಿದವರಲ್ಲಿ ಹೆನ್ರಿಯಟ್ಟಾ ಲೆವಿಟ್ ಮುಖ್ಯರು.೧೯೦೮ರಲ್ಲಿ  ಲೆವಿಟ್ ಮೆಗಲನಿಕ್ ಕ್ಲೌಡ್ ಎಂಬ ಪಕ್ಕದ ಗೆಲಕ್ಸಿಯಲ್ಲಿ ಇಂತಹ ಅನೇಕ ತಾರೆಗಳನ್ನು ವೀಕ್ಷಿಸಿ ಗರಿಷ್ಟ ಪ್ರಕಾಶಕ್ಕಿರುವ ಸಂಬಂಧವನ್ನು ಕಂಡುಹಿಡಿದರು :ಹೆಚ್ಚು ಪ್ರಕಾಶದ ನಕ್ಷತ್ರಗಳು ಹೆಚ್ಚು ಸಮಯ ಪ್ರಕಾಶವಾಗಿರುತ್ತವೆ.ಇವುಗಳ ಪ್ರಕಾಶದಿಂದ ನಕ್ಷತ್ರದ ದೂರವನ್ನು ಅಳೆಯಲು ಖಗೋಳ ವಿಜ್ಞಾನದಲ್ಲಿ ಬಹಳ ಉಪಯೋಗಿಸಬಹುದು ಆದರೆ ಅದಕ್ಕಿಂತ ಹೆಚ್ಚು ,ದೂರಗಳಿಗೆ,ಅಂದರೆ ೬೦ ಮಿಲಿಯ ಜ್ಯೋತಿವರ್ಷಗಳ ತನಕ ಈ ಸಫೈಡ್ ನಕ್ಷತ್ರಗಳನ್ನು ಉಪಯೋಗಿಸಬಹುದು. ಕಳೆದ ಶತಮಾನದಲ್ಲಿ ಅನೇಕ ಸಫೈಡ್ ತಾರೆಗಳನ್ನು ಕಂಡುಹಿಡಿಯಲಾಯಿತು. ಈ ವಿಧಾನವನ್ನು ಅನುಸರಿಸಿ ೧೯೨೯ರಲ್ಲಿ ಏಡ್ವಿನ್ ಹಬಲ್ ಪಕ್ಕದ ಗೆಲಾಕ್ಸಿಯಾದ ಆಂಡ್ರೊಮೆಡಾದ ದೂರವನ್ನು ಸರಿಯಾಗಿ ೨೫ ಲಕ್ಷ  ಜ್ಯೋತಿವರ್ಷಗಳೆಂದು ಕಂಡುಹಿಡಿದು ಖಗೋಳ ವಿಜ್ಞಾನದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದರು.
 ಸೆಫಿ ನಕ್ಷತ್ರಗಳ ಕ್ರಮಬದ್ಧವಾದ ಪ್ರಕಾಶದ ನಕ್ಷತ್ರಗಳು ನಿಧಾನವಗಿ ಬದಲಾಗುತ್ತವೆ.ಈ ಪ್ರಕಾಶದ ಬದಲಾವಣೆಯನ್ನು ೧೯೧೭ರಲ್ಲಿ ಎಡ್ದಿಂಗ್ಟನ್ ವಿವರಿಸಲು ಪ್ರಯತ್ನಿಸಿದರು.ಈ ಪ್ರಕ್ರಿಯೆಯಲ್ಲಿ ತಾರೆಯ ಹೊರಗಿನ ಪದರಗಳು ಪಾತ್ರ ವಹಿಸುತ್ತವೇ ವಿನಃ ಕೇಂದ್ರದ ದ್ರವ್ಯರಾಶಿಯಲ್ಲ.ಪ್ರಾರಂಭದಲ್ಲಿ ಇದ್ದ ನಕ್ಷತ್ರದ ಜಲಜನಕವೆಲ್ಲ ಮುಗಿದುಹೋದಾಗ ಈ ರೀತಿಯ ಅಸ್ಥಿರತೆ ಬಂದು ಹೀಲಿಯಮ್ಮಿನಲ್ಲಿನ ಪ್ರಕ್ರಿಯೆಗಳು ಮಾತ್ರ ನಡೆಯುತ್ತಿರುತ್ತವೆ. ಹೊರ ಎಲೆಕ್ಟ್ರೌನನ್ನೂ ಕಳೆದುಕೊಂಡಾಗ ಪಾರದಶಕತೆ ಕಡಿಮೆಯಾಗಿ ಇದರ ಪ್ರಕಾಶ ಕನಿಷ್ಟ ಮೌಲ್ಯವನ್ನು ಮುಟ್ಟುತ್ತದೆ. ಇದರಿಂದ ಉಷ್ಣತೆ ಹೆಚ್ಚಿ ತಾರೆ ಉಬ್ಬುತ್ತದೆ ; ಆಗ ಹೀಲಿಯ ಒಂದು ಎಲೆಕ್ಟ್ರೌನನ್ನು ಗಳಿಸಿಕೊಂಡಾಗ ಪಾರದಶಕತೆ ಹೆಚ್ಚುತ್ತದೆ. ಆದ್ದರಿಂದ ಹೆಚ್ಚು ಫ್ರೋಟಾನಗಳು ನಕ್ಷತ್ರದಿಂದ ಹೊರಬರುತ್ತವೆ. ಹೀಗೆ ನಕ್ಷತ್ರ ಹಿಗ್ಗುತ್ತ ಕುಗ್ಗುತ್ತ ಹೋಗುತ್ತದೆ. ಈ ಉಬ್ಬರ ಇಳಿತಗಳಲ್ಲಿ ಉಷ್ಣತೆ ೫೫೦೦ ರಿಂದ ೬೦೦೦ ಡಿಗ್ರಿಯವರೆವಿಗೆ ಬದಲಾಗುತ್ತಲ್ಲದೆ ನಕ್ಷತ್ರದ ಗಾತ್ರದಲ್ಲೂ ೧೫% ರಷ್ಟು ಬದಲಾವಣೆ ಇರುತ್ತವೆ.ಗೋಳೀಯ ಗುಚ್ಚಗಳಲ್ಲಿನ (ಗ್ಲಾಬ್ಯುಲರ್ ಕ್ಲಸ್ಟರ್) ಕೆಲವು ತಾರೆಗಳೂ ಮತ್ತು ಆರ್ ಆರ್ ಲೈರೆ ನಕ್ಷತ್ರಗಳೂ ಈ ಗುಂಪಿಗೇ ಸೇರಿವೆ.ಆರ್ ಆರ್ ಲೈರೆ ನಕ್ಷತ್ರಗಳಲ್ಲಿ ಕಡಿಮೆ ದ್ರವ್ಯರಾಶಿಯಿದ್ದು ಪ್ರಕಾಶದ ಕಾಲಮಾನ ಸುಮಾರು ಒಂದು ದಿನ. ಇವುಗಳ ದೂರಗಳನ್ನು ಕಂಡುಹಿಡಿಯಲು ಉಪಯೋಗಿಸುತ್ತಾರೆ.
ಸಫೈಡ್ ನಕ್ಷತ್ರ

೨.ನೋವಾ ಆಸ್ಛೋಟನೆಗಳು

[ಬದಲಾಯಿಸಿ]
     ಇದ್ದಕ್ಕಿದ್ದ ಹಾಗೆ ಪ್ರಕಾಶಮಾನವಾಗುವ ನಕ್ಷತ್ರಗಳಿಗೆ ನೋವಾ ಎಂಬ ಹೆಸರು. ದಿನ ಅಥವಾ ವಾರಗಳ ಅವಧಿಯಲ್ಲಿ ನಕ್ಷತ್ರ ಪ್ರಕಾಶಮಾನವಾಗುತ್ತಾ ಹೋಗುತ್ತಿದ್ದು ಅದು ಮೊದಲಿಗಿಂತ ಹೆಚ್ಚು ಲಕ್ಷದಷ್ಟು ಪ್ರಕಾಶವೂ ಆಣಬಹುದು.ಗರಿಷ್ಟ ಪ್ರಕಾಶವನ್ನು ತಲುಪಿದ ನಂತರ ನಿಧಾನವಾಗಿ,ತಿಂಗಳುಗಳ ನಂತರ ,ಮತ್ತೆ ಯಥಾ ಸ್ಥಿತಿಗೆ ಮರಳುತ್ತವೆ.ಕೆಲವು ನಕ್ಷತ್ರಗಳಲ್ಲಿ ಈ ಘಟನೆ ನಡೆಯುವುದು ಒಂದೇ ಬಾರಿ. ಇದಕ್ಕೂ ಸೂಪೆರ್ನೂವಾಗಳಿಗೂ ಬಹಳ ವ್ಯತ್ಯಾಸಗಳಿದ್ದು ಇವನ್ನು ಪುಟ್ಟ ಸೂಪೆರ್ನೂವಾಗಳೆಂದು ತಪ್ಪು ತಿಳಿಯಬಾರದು.ಕಳೆದ ಶತಮಾನದಲ್ಲಿ ಅನೇಕ ನೋವಾ ನಕ್ಷತ್ರಗಳು ಕಂಡುಹಿಡಿಯಲ್ಪಟ್ಟಿವೆ. ಈ ನೋವಾ ವಿದ್ಯಾಮಾನಗಳು ನಮ್ಮ ಗೆಲಕ್ಸಿಯ ಕೇಂದ್ರದ ಬಳಿ ಹೆಚ್ಚು ನಡೆಯುತ್ತಿದ್ದು,ವರ್ಷಕ್ಕೆ ೩೦-೬೦ ನೋವಾ ಆಸ್ಛೋಟನೆಗಳು ನಡೆಯುತ್ತವಾದರೂ ಸಾಧಾರಣವಾಗಿ ಹತ್ತು ಮಾತ್ರ ಕಾಣಿಸುತ್ತವೆ.

ಈ ವಿದ್ಯಮಾನಗಳ ಬಗ್ಗೆ ಮೊದಲು ತಿಳಿದಾಗ, ೨ ನಕ್ಷತ್ರಗಳು ಡಿಕ್ಕಿ ಹೊಡೆದಾಗ ಇಂತಹ ನೋವಾ ವಿದ್ಯಮಾನ ಉಂಟಾಗುತ್ತದೆ ಎಂದು ಅಭಿಪ್ರಾಯವಿದ್ದಿತು.ಆದರೆ ಇಂತಹ ಡಿಕ್ಕಿಗಳು ಬಹಳ ಅಪರೂಪ.ಅದಲ್ಲದೆ ಡಿಕ್ಕಿ ನಡೆದರೆ ಅಪಾರ ಪ್ರಮಾಣದಲ್ಲಿ ಶಕ್ತಿಯುತ ವಿದ್ಯಮಾನವಲ್ಲ. ಮಾರ್ಟಿನ್ ಶ್ವಾರ್ಶೈಲ್ಡ್ ಈ ವಿದ್ಯಮಾನಕ್ಕೆ ಬೇರೆಯ ವಿವರಣೆ ಕೊಟ್ಟೆರು.ಬೈಜಿಕ ಸಂಲಯನ ನಡೆಯುತ್ತಾ ತಾರೆಯ ಕೇಂದ್ರದಲ್ಲಿ ಹೀಲಿಯಮ್ಮಿನ ಪ್ರಮಾಣ ಹೆಚ್ಚಾಗುತ್ತ ಹೋಗುತ್ತದೆ.ಕೆಲವು ಯಮಳ ನಕ್ಷತ್ರಗಳಲ್ಲಿ ಶ್ವೇತ ಕುಬ್ಜ ಮತ್ತು ಒಂದು ದೊಡ್ಡ ನಕ್ಷತ್ರ ಜೊತೆಗಿರುವುದು ಉಂಟು. ಆ ದೊಡ್ಡ ನಕ್ಷತ್ರ ಕೆಂಪು ದೈತ್ಯವೊ ಇರಬಹುದು. ಈ ವ್ಯವಸ್ಥೆಯಲ್ಲಿ ದೊಡ್ದ ನಕ್ಷತ್ರ ಉಬ್ಬುತ್ತಾ ಶೇತಕುಬ್ಬಕ್ಕೆ ದ್ರವ್ಯರಾಶಿಯ ವರ್ಗವಣೆ ನೆಡೆಯುತ್ತದೆ. ಈ ದ್ರವ್ಯರಾಶಿ ಮುಖ್ಯವಾಗಿ ಜಲಜನಕದ ರೂಪದಲ್ಲಿರುತ್ತದೆ. ಕೋನೀಯ ಸಂವೇಗ ವ್ಯಯವಾಗಬಾರದಾದ್ದರಿಂದ ಇದು ಒಂದು ಚಕ್ರ ರೂಪವನ್ನು ಪಡೆಯುತ್ತದೆ. ಇದರಲ್ಲಿನ ದ್ರವ್ಯರಾಶಿ ಶ್ವೇತಕುಬ್ಜದ ಮೇಲೆ ಎರೆಗಿದಾಗ ಉಷ್ಣತೆ ಮಿಲಿಯಡಿಗ್ರಿಗಳಿಗೂ ಹೆಚ್ಚಾಗುತ್ತದೆ. ಅಂತಹ ಸ್ಥಿತಿಯಲ್ಲಿ ಜಲಜನಕ ದ ಪ್ರೋಟಾನುಗಳು ಒಟ್ಟಿಗೆ ಸೇರಿ ಬೈಜಿಕ ಸಂಲಯನ ಪ್ರಕ್ರಿಯೆ ಪ್ರಾರಂಭವಾಗುತ್ತದೆ.ಈ ಬದಲಾವಣೆಯಲ್ಲಿ ಉಷ್ಣತೆಯು ಸುಮಾರು ೧೦೦೦ ಡಿಗ್ರಿಗಳು ಬದಲಿಸಬಹುದು, ಹಾಗೂ ಅದರ ಗಾತ್ರವೂ ೧೫% ಬದಲಾಗಬಹುದು.

ನಕ್ಷತ್ರ
ಕೆಲವು ನಕ್ಷತ್ರಗಳಲ್ಲಿ ಈ ಘಟನೆ ಆಗಾಗ್ಗೆ ನಡೆಯುತ್ತ್ತಿರುತ್ತದೆ. ಆದರೆ ಅವುಗಳಲ್ಲಿ ಅಷ್ಟು ಪ್ರಕಾಶವಿರುವುದಿಲ್ಲ. 'ಯು-ಸ್ಕಾರ್ಪಿ' ಎಂಬ ನಕ್ಷತ್ರದಿಂದ ಕೆಳೆದ ೧೫೦ ವರ್ಷಗಳಲ್ಲಿ ಎಂಟು ಬಾರಿ ಆಸ್ಟೋಟನೆಯಾದಾಗ ಜಲಜನಕದ ಜೊತೆ ಹಲವಾರು ಲಘು ದ್ರವ್ಯರಾಶಿಯ ಮೂಲಧಾತುಗಳೂ ಹೊರಬರುತ್ತವೆ. ಸೊಪರ್ನೊವಾ ಆಸ್ಟೋಟನೆಗೆ ಹೋಲಿಸಿದರೆ ನೋವಾ ಅತಿ ಕಡಿಮೆ ಶಕ್ತಿಯ ಘಟನೆ;ಅದರ ದ್ರವ್ಯರಾಶಿಯ ೧/೫೦ ಭಾಗದಷ್ಟು ಮಾತ್ರ ಹೊರಬರುತ್ತದೆ. ೧೯೭೫ರಲ್ಲಿ ಸಿಗ್ನಸ್ ನಕ್ಷತ್ರಪುಂಜದಲ್ಲಿದ್ದ ನಕ್ಷತ್ರವೊಂದು ಇದ್ದಕ್ಕಿದ್ದ ಹಾಗೆ ಅದರ ಹಿಂದಿನ ಪ್ರಕಾಶಕ್ಕಿಂತ ೧೦ಲಕ್ಷದಷ್ಟು ಹೆಚ್ಚಾಯಿತು; ಅದರ ಹೆಸರು ಇ ನೋವಾ ಸಿಗ್ನೈ ೧೯೭೫!!!..ಶ್ವೇತಕುಬ್ಜವು ದೊಡ್ಡ ನಕ್ಷತ್ರದಿಂದ ದ್ರವ್ಯರಾಶಿಯನ್ನು ಸೆಳೆಯುತ್ತದೆ. ಈ ಸೆಳೆತದಲ್ಲಿ ಚಕ್ರ ಉಂಟಾಗಿ ಇದರ ಮೂಲಕ ಶ್ವೇತಕುಬ್ಜಕ್ಕೆ ದ್ರವ್ಯರಾಶಿಯ ವರ್ಗವಣೆ ನಡೆಯುತ್ತದೆ.

[] []

  1. https://en.wikipedia.org/wiki/Cepheid_variable
  2. https://www.cfa.harvard.edu/~pberlind/atlas/htmls/cephstars.html