ವಿಷಯಕ್ಕೆ ಹೋಗು

ಸದಸ್ಯ:Srujana U Shankar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಷಯ: ಡಾ. ಉಮೇಶ್ ಜಿ ಜಾದವ್

[ಬದಲಾಯಿಸಿ]

ಕ್ಷೇತ್ರ ಪರಿಚಯ:

[ಬದಲಾಯಿಸಿ]

ಚಿಂಚೋಳಿ ಕಲಬುರಗಿ ಜಿಲ್ಲೆಯ ಸಣ್ಣ ತಾಲೂಕು. ಚಿಂಚೋಳಿ ತಾಲೂಕು ಕೇಂದ್ರವೂ ಹೌದು. ಜಿಲ್ಲಾ ಕೇಂದ್ರ ಕಲಬುರಗಿಯಿಂದ ಬರೋಬ್ಬರಿ 85 ಕಿಲೋ ಮೀಟರ್ ದೂರವಿದೆ. ಮುಲ್ಲಾಮಾರಿ ಕೆಳದಂಡೆ ಜಲಾಶಯ, ಕುಂಚವರಂ ಅರಣ್ಯ ಪ್ರದೇಶ, ಚಂದ್ರಂಪಳ್ಳಿ ಜಲಾಶಯ, ಎತ್ತಿ ಪೋತಾ ಜಲಪಾತಗಳನ್ನು ಈ ತಾಲೂಕಿನಲ್ಲಿ ಕಾಣಬಹುದು.

ಕ್ಷೇತ್ರದ ಇತಿಹಾಸ :

[ಬದಲಾಯಿಸಿ]

2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಖಾತೆ ತೆರೆಯಿತು. ಈ ಬಾರಿ ಅಖಾಡದಲ್ಲಿ ಎಲ್ಲಾ ಹೊಸ ಹುಲಿಗಳೇ ಇದ್ದರು. ಬಿಜೆಪಿಯ ಸುನಿಲ್ ವಲ್ಯಾಪುರೆ ಕಾಂಗ್ರೆಸ್ ನ ಬಾಬುರಾವ್ ಚೌಹಾಣ್ ರನ್ನು ಸೋಲಿಸಿದರು. 2013ರಲ್ಲಿ ಮಾತ್ರ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂತು. ಡಾ. ಉಮೇಶ್ ಜಿ. ಜಾಧವ್ ಕೆಜಿಪಿಯಿಂದ ಸ್ಪರ್ಧಿಸಿದ್ದ ಸುನಿಲ್ ವಲ್ಯಾಪುರೆಗೆ 26 ಸಾವಿರ ಮತಗಳ ಭಾರೀ ಅಂತರದಿಂದ ಸೋಲುಣಿಸಿದರು. ಇತ್ತೀಚಿನ ದಿನಗಳಲ್ಲಿ ಚಿಂಚೋಳಿ ಯಾರ ಭದ್ರ ಕೋಟೆಯಾಗಿಯೂ ಇಳಿದಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳೂ ವಿಜಯ ಪತಾಕೆಗಳನ್ನು ಹಾರಿಸುತ್ತಾ ಬಂದಿವೆ. ಆದರೆ ಸದ್ಯ ಕ್ಷೇತ್ರದಲ್ಲಿ ಜೆಡಿಎಸ್ ಸೊರಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.

ಶಾಸಕರ ಹಿನ್ನೆಲೆ:

[ಬದಲಾಯಿಸಿ]

ಡಾ ಉಮೇಶ್ ಜಿ ಜಾಧವ್ ಚಿಂಚೋಳಿ ತಾಲೂಕಿನ ಶಾಸಕರಾಗಿದ್ದಾರೆ. ಇವರ ತಂದೆಯ ಹೆಸರು ಶ್ರೀ ಗೋಪಾಲದೇವ. ಇವರು ಗುಲ್ಬರ್ಗ ಜಿಲ್ಲೆಯ ಜೇವರ್ಗಿ ರಸ್ತೆಯಲ್ಲಿ ವಾಸವಾಗಿದ್ದಾರೆ. ಇವರು ಸ್ನಾತಕೋತ್ತರ ಪದವೀಧರರಾಗಿದ್ದರೆ. ಉದ್ಯೋಗದಲ್ಲಿ ವೈದ್ಯರಾಗಿದ್ದಾರೆ. ಇವರ ಒಟ್ಟು ಸ್ವತ್ತು ಸುಮಾರು ೨ ಕೋಟಿ ಬೆಲೆ ಬಾಳುತ್ತದೆ.ಇವರಿಗೆ ಈಗ ೫೮ ವರ್ಷ ವಯಸ್ಸಾಗಿದೆ. ಇವರ ವಿರುದ್ಧ ಯಾವುದೇ ದೂರು ಪ್ರಕಟವಾಗಿಲ್ಲ.

೨೦೧೮ ಚುನಾವಣೆ:

[ಬದಲಾಯಿಸಿ]

thumb|gulbarga ಇವರು ೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ನಿಂತು ಚಿಂಚೋಳಿಯ ಶಾಸಕರಾಗಿ ಗೆದ್ದಿದ್ದಾರೆ.ಇವರು ಬಿಜೆಪಿಯ ಸುನಿಲ್ ವೈ ವಾಲ್ಲ್ಯಾಪುರೆಯವರನ್ನು ೧೯೨೧೨ ಮತಗಳಿಂದ ಸೋಲಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಜನತಾ ದಳ ಪಕ್ಷದ ಸುಶೀಲಾಬಾಯಿ ನಿಂತಿದ್ದಾರೆ. ಇವರಿಗೆ ಒಟ್ಟು ೧೬೨೧ ಮಠಗಳು ದೊರೆತಿವೆ. ಉಮೇಶ್ ಜಾದವ್ರವರಿಗೆ ಒಟ್ಟು ೭೩೯೦೫ ಮತಗಳು ದೊರೆತು ಅವರು ಚುನಾವಣೆಯನ್ನು ಗೆದ್ದಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು ೧೩೦೨೧೯ ಜನರು ತಮ್ಮ ಮತ ಚಲಾಯಿಸುವ ಹಕ್ಕನ್ನು ಸದುಪಯೋಗ ಪಡೆಸಿಕೊಂಡು ಡಾ.ಉಮೇಶ್ ಜಿ ಜಾದವ್ರನ್ನು ಗೆಲ್ಲಿಸಿದ್ದಾರೆ.

ಉಲ್ಲೇಖಗಳು:

[ಬದಲಾಯಿಸಿ]

http://myneta.info/karnataka2013/candidate.php?candidate_id=53

http://www.elections.in/karnataka/mla/dr.-umesh-g.-jadhav.html