ಸದಸ್ಯ:Srujana U Shankar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸೃಜನ. ನಾನು ಕ್ರಿಸ್ಟ್ ಯೂನಿವೆರ್ಸಿಟಿಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದೇನೆ.

ಸಾಧನೆ[ಬದಲಾಯಿಸಿ]

ಸಣ್ಣ ವಯಸ್ಸಿನಿಂದಲೂ ನೃತ್ಯದಲ್ಲಿ ಅಪಾರ ಆಸಕ್ತಿ ಉಳ್ಳ ನನ್ನನ್ನು ನನ್ನ ತಂದೆ ಮತ್ತು ತಾಯಿ ಭರತನಾಟ್ಯ ತರಬೇತಿ ಕೇಂದ್ರಕ್ಕೆ ಸೇರಿಸಿದರು. ನಾನು ನನ್ನ ಏಳನೇ ವಯಸ್ಸಿನಲ್ಲಿ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದೆನು. ನನ್ನ ಈ ಅಭ್ಯಾಸದಿಂದ ಶಾಲೆಯಲ್ಲೂ ಸಹ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತವು. ಇದರಿಂದ ನನ್ನ ಏಕಾಗತೆಯು ಹೆಚ್ಚಿ ಓದಿನಲ್ಲೂ ಸಹ ಒಳ್ಳೆಯ ಅಂಕಗಳನ್ನು ಪಡೆಯಲು ಸುಲಭವಾಯಿತು. ನೃತ್ಯವನ್ನು ಹೊರತುಪಡಿಸಿ ನನಗೆ ಹಾಡುವ ಹಾಗು ಪುಸ್ತಕಗಳನ್ನು ಓದುವ ಹವ್ಯಾಸವಿದೆ. ಇದಲ್ಲದೆ ಶಾಲೆಯಲ್ಲಿ ಹಲವಾರು ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವಾರು ಪ್ರಶಸ್ತಿಗಳೂ ದೊರೆತಿವೆ. ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಒಮ್ಮೆ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದ್ದೇನೆ. ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿದ್ದೆ. ಹತ್ತನೇ ತರಗತಿಯಲ್ಲಿ ೯೩% ಬಂದ ಕಾರಣ ವಿಜ್ಞಾನವನ್ನು ಆರಿಸಿಕೊಂಡೆ. ನಂತರ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು , ಆದ ಕಾರಣ ತಂದೆ ತಾಯಿಯೊಡನೆ ಚರ್ಚಿಸಿ ಕೊನೆಗೆ ಕಲಾ ವಿಭಾಗವನ್ನು ಆರಿಸಿಕೊಂಡೆ.

ಪ್ರವಾಸ[ಬದಲಾಯಿಸಿ]

ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರಿನ ಸ್ವತಂತ್ರ ಉದ್ಯಾನವನ , ಹೈಕೋರ್ಟಿನಲ್ಲೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದೇನೆ. ಹಾಡಿನಲ್ಲೂ ಆಸಕ್ತಿಯುಳ್ಳ ನಾನು ಸಂಗೀತದಲ್ಲೂ ನನ್ನ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಪ್ರದರ್ಶನ ವಿಭಾಗಕ್ಕೆ ಸೇರಿದ ಕಾರಣ ಹಲವಾರು ನಾಟಕಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ದೊರೆತಿವೆ. ಒಬ್ಬ ಕಲಾವಿದೆಯಾಗಿ ಏನೆಲ್ಲಾ ಅರಿತಿರಬೇಕೆಂಬುದನ್ನು ಇದರಿಂದ ಕಲಿಯಲು ಸಹಾಯವಾಗುತ್ತಿದೆ.

ಹವ್ಯಾಸ[ಬದಲಾಯಿಸಿ]

ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರಿನ ಸ್ವತಂತ್ರ ಉದ್ಯಾನವನ , ಹೈಕೋರ್ಟಿನಲ್ಲೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದೇನೆ. ಹಾಡಿನಲ್ಲೂ ಆಸಕ್ತಿಯುಳ್ಳ ನಾನು ಸಂಗೀತದಲ್ಲೂ ನನ್ನ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಪ್ರದರ್ಶನ ವಿಭಾಗಕ್ಕೆ ಸೇರಿದ ಕಾರಣ ಹಲವಾರು ನಾಟಕಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ದೊರೆತಿವೆ. ಒಬ್ಬ ಕಲಾವಿದೆಯಾಗಿ ಏನೆಲ್ಲಾ ಅರಿತಿರಬೇಕೆಂಬುದನ್ನು ಇದರಿಂದ ಕಲಿಯಲು ಸಹಾಯವಾಗುತ್ತಿದೆ. ನನ್ನ ಓದನ್ನು ಖುಷಿಯಾಗಿ ಸ್ವೀಕರಿಸುವ ಅವಕಾಶ ನನಗೆ ಸಿಕ್ಕಿದೆ.

ನನಗೆ ಪ್ರಯಾಣವೆಂದರೆ ಬಹಳ ಅಚ್ಚುಮೆಚ್ಚು. ಹಸಿರು ಪ್ರೇಮಿಯಾದ ನಾನು, ಹಲವು ಬಾರಿ ಇಂತಹ ಜಾಗಗಳನ್ನೇ ಆರಿಸಿಕೊಳ್ಳುತ್ತೇನೆ. ನಾನು ಒಬ್ಬ ನಾಯಿ ಪೇರ್ಮಿಯೂ ಹೌದು. ಮನೆಯಲ್ಲೇ ಒಂದು ನಾಯಿಯನ್ನು ಸಾಕಿದ್ದೇನೆ. ಅದರ ಪಾಲನೆ, ಪೋಷಣೆ ಮಾಡುವುದರಲ್ಲೇ ನನಗೆ ಆನಂದ ಸಿಗುತ್ತದೆ. ಅದರ ಸೂಕ್ಷ್ಮತೆಯನ್ನು ನೋಡಿ ಆನಂದವಾಗುತ್ತದೆ. ಮನೆಯಲ್ಲಿ ನಾಯಿ ಇದ್ದರೆ ಅದೆಷ್ಟೋ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ನನಗೆ ಚಿಕ್ಕಂದಿನಿಂದ ಕನ್ನಡ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ. ಇದರಿಂದ ನನಗೆ ಕನ್ನಡವನ್ನು ಸರಾಗವಾಗಿ ಓದುವ, ಬರೆಯುವ ನೈಪುಣ್ಯತೆ ಇದೆ. ಚಿಕ್ಕ ವಯಸ್ಸಿನಲ್ಲಿ ಅಮ್ಮನ ಬಲವಂತದಿಂದ ಸುಧಾ ಮತ್ತು ತರಂಗದಲ್ಲಿ ಮಕ್ಕಳ ವಿಭಾಗದಲ್ಲಿ ಬರುತ್ತಿದ್ದ ಕಥೆಗಳನ್ನು ಓದುವ ಹವ್ಯಾಸ ಈಗ ನನ್ನ ನೆಚ್ಚಿನ ಚಟುವಟಿಕೆಯಾಗಿ ಬದಲಾಗಿದೆ. ನನಗೆ ಕನ್ನಡ ಪಾಠವನ್ನು ಕೇಳಲು ಬಹಳ ಇಷ್ಟ, ಸುಲಭವಾಗಿ ಅರ್ಥವಾಗುತ್ತದೆ. ನನ್ನ ಬಗ್ಗೆ ಈ ಕೆಲವು ವಾಕ್ಯಗಳಲ್ಲಿ ಪರಿಚಯಿಸಿ ಕೊಟ್ಟಿದ್ದೇನೆ.[೧][೧]

ಮನೋವಿಜ್ಞಾನದಲ್ಲೂ ಆಸಕ್ತಿಯುಳ್ಳ ನನಗೆ ಮುಂದೆ ಇದರಲ್ಲೇ ನನ್ನ ವೃತ್ತಿಯನ್ನು ರೂಪಿಸಿಕೊಳ್ಳುವ ಕನಸು ಕಟ್ಟಿಕೊಂಡಿದ್ದೇನೆ. ನನಗೆ ಪ್ರಯಾಣವೆಂದರೆ ಬಹಳ ಅಚ್ಚುಮೆಚ್ಚು. ಹಸಿರು ಪ್ರೇಮಿಯಾದ ನಾನು, ಹಲವು ಬಾರಿ ಇಂತಹ ಜಾಗಗಳನ್ನೇ ಆರಿಸಿಕೊಳ್ಳುತ್ತೇನೆ. ನಾನು ಒಬ್ಬ ನಾಯಿ ಪೇರ್ಮಿಯೂ ಹೌದು. ಮನೆಯಲ್ಲೇ ಒಂದು ನಾಯಿಯನ್ನು ಸಾಕಿದ್ದೇನೆ. ಅದರ ಪಾಲನೆ, ಪೋಷಣೆ ಮಾಡುವುದರಲ್ಲೇ ನನಗೆ ಆನಂದ ಸಿಗುತ್ತದೆ. ಅದರ ಸೂಕ್ಷ್ಮತೆಯನ್ನು ನೋಡಿ ಆನಂದವಾಗುತ್ತದೆ. ಮನೆಯಲ್ಲಿ ನಾಯಿ ಇದ್ದರೆ ಅದೆಷ್ಟೋ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ನನಗೆ ಚಿಕ್ಕಂದಿನಿಂದ ಕನ್ನಡ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ. ಇದರಿಂದ ನನಗೆ ಕನ್ನಡವನ್ನು ಸರಾಗವಾಗಿ ಓದುವ, ಬರೆಯುವ ನೈಪುಣ್ಯತೆ ಇದೆ. ಚಿಕ್ಕ ವಯಸ್ಸಿನಲ್ಲಿ ಅಮ್ಮನ ಬಲವಂತದಿಂದ ಸುಧಾ ಮತ್ತು ತರಂಗದಲ್ಲಿ ಮಕ್ಕಳ ವಿಭಾಗದಲ್ಲಿ ಬರುತ್ತಿದ್ದ ಕಥೆಗಳನ್ನು ಓದುವ ಹವ್ಯಾಸ ಈಗ ನನ್ನ ನೆಚ್ಚಿನ ಚಟುವಟಿಕೆಯಾಗಿ ಬದಲಾಗಿದೆ. ನನಗೆ ಕನ್ನಡ ಪಾಠವನ್ನು ಕೇಳಲು ಬಹಳ ಇಷ್ಟ, ಸುಲಭವಾಗಿ ಅರ್ಥವಾಗುತ್ತದೆ. ನನ್ನ ಬಗ್ಗೆ ಈ ಕೆಲವು ವಾಕ್ಯಗಳಲ್ಲಿ ಪರಿಚಯಿಸಿ ಕೊಟ್ಟಿದ್ದೇನೆ.

  1. srujana