ಸದಸ್ಯರ ಚರ್ಚೆಪುಟ:Srujana U Shankar/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸಂಗೀತ[ಬದಲಾಯಿಸಿ]

[[೧]]ದಲ್ಲಿ ಪ್ರಸಿದ್ದವಾದ ಕರ್ನಾಟಕ ಸಂಗೀತದ ರಾಗಗಳ ಮಹತ್ವ ಹಾಗು ಕೆಲವು ರಾಗಗಳ ಲಕ್ಷಣವನ್ನು ಈ ಪುಟದಲ್ಲಿ ಚರ್ಚಿಸಲಾಗುವುದು. ರಾಗಗಳ ಮುಖ್ಯ ಅಂಶಗಳು ನಾದ, ಸ್ವರ, ಶ್ರುತಿ ಮತ್ತು ಗಮಕ. ಕರ್ನಾಟಕ ಸಂಗೀತದ ರಾಗಗಳಲ್ಲಿ ಎರಡು ವಿಧ: ೧. ಜನಕ ರಾಗ ೨. ಜನ್ಯ ರಾಗ

ಜನಕ ರಾಗ[ಬದಲಾಯಿಸಿ]

ಜನಕ ರಾಗಕ್ಕೆ ಸಂಪೂರ್ಣ ರಾಗ ಎಂದೂ ಕೂಡ ಕರೆಯಲಾಗುತ್ತದೆ.ಜನಕ ರಾಗಗಳಿಂದ ಜನ್ಯ ರಾಗಗಳು ರಚಿಸಲ್ಪಟ್ಟಿದೆ. ಜನಕ [[೨]]ದಲ್ಲಿ ಎಲ್ಲ ಏಳು ಸ್ವರಗಳಿರುತ್ತವೆ. ಜನಕ ರಾಗದಲ್ಲಿ  ಸ್ವರಗಳನ್ನು ಕ್ರಮಬದ್ಧವಾಗಿ ಹಾಡುವ ಅಭ್ಯಾಸವಿದೆ. ಕೆಲವು ಮೇಳಕರ್ತ ರಾಗಗಳ ಉದಾಹರಣೆ: ಶಂಕರಾಭರಣ, ಕಲ್ಯಾಣಿ, ಹರಿಕಾಂಭೋಜಿ, ಮಾಯಾಮಾಳವಗೌಳhttps://commons.wikimedia.org/wiki/File:%22Floyera%22_(1-5._Cane_flutes),_Museum_of_Greek_Folk_Musical_Instruments.jpg
ಮುಂತಾದವು.

ಜನ್ಯ ರಾಗ[ಬದಲಾಯಿಸಿ]

ಜನಕ ರಾಗಗಳಿಂದ ಹುಟ್ಟಿಕೊಂಡ ರಾಗಗಳನ್ನು ಜನ್ಯ ರಾಗ ಎಂದು ಕರೆಯುತ್ತಾರೆ. ಈ ರಾಗಗಳಲ್ಲಿ ಏಳಕ್ಕಿಂತ ಕಡಿಮೆ ಸ್ವರಗಳಿದ್ದರೂ ಇರಬಹುದು. ಜನ್ಯ ರಾಗದ ಕೆಲವು ವಿಧಗಳು:

೧.ವಕ್ರ ರಾಗ ೨. ಔಡವ ರಾಗ ವಕ್ರ ರಾಗ: ವಕ್ರ ರಾಗದಲ್ಲಿ ಸ್ವರಗಳು ಕ್ರಮಬದ್ದವಾಗಿರುವುದಿಲ್ಲ. ಉದಾಹರಣೆ: ರಾಗ ಶ್ರೀ ಆರೋಹಣ: ಸ ರಿ ಮ ಪ ನೀ ಸ ಅವರೋಹಣ: ಸ ನೀ ಪ ಮ ರೀ ಗ ರೀ ಸ ಔಡವ ರಾಗ: ಐದು ಅಕ್ಷಗಳುಳ್ಳ ರಾಗಗಳನ್ನು ಔಡವ ರಾಗಗಳೆಂದು ಕರೆಯಲಾಗುವುದು. ಉದಾಹರಣೆ: ಮೋಹನ ರಾಗ. ಆರೋಹಣ: ಸ ರೀ ಗ ಪ ಡಾ ಸ ಅವರೋಹಣ:ಸ ದ ಪ ಗ ರೀ ಸ ಈ ಪುಟದಲ್ಲಿ ಎರಡು ರಾಗಗಳ ಲಕ್ಷಣಗಳನ್ನು ಪರಿಚಯ ಮಾಡಿಕೊಡಲಾಗುವುದು. ರಾಗ:ಕಲ್ಯಾಣ ಆರೋಹಣ: ಸ ರೀ ಗ ಮ ಪ ದ ನೀ ಸ ಅವರೋಹಣ:ಸ ನೀ ದ ಪ ಮ ಗ ರೀ ಸ ಈ ರಾಗವು ೬೫ನೇ ಮೇಳಕರ್ತ ೧೧ನೇ ರುದ್ರ ಚಕ್ರದಲ್ಲಿ ೫ನೇ ರಾಗ. ಈ ರಾಗಕ್ಕೆ ಬರುವ ಸ್ವರಗಳು ಷಡ್ಜ, ಚತುಶ್ರುತಿ ರಿಷಭ, ಅಂತರ ಗಾಂಧಾರ , ಪ್ರತಿ ಮಾಧ್ಯಮ, ಚತುಶ್ರುತಿ ದೈವತ, ಕಾಕಲಿ ನಿಷಾದ. ಕ ಟ ಪ ಯಾದಿ ಸೂತ್ರಕ್ಕೆ ಅನುಸಾರವಾಗಿ ಮೆಚಕಲ್ಯಾಣಿ ಎಂಬ ಹಸರು ಬಂದಿರುತ್ತದೆ. ಸರ್ವಗಮಕವರಿಕ, ರಕ್ತಿರಾಗ, ಆರೋಹಣ, ಅವರೋಹಣದಲ್ಲಿ ಬರುವ ಸ್ವರಗಳೂ ರಾಗ ಛಾಯಾಸ್ವರಗಳು. ರಿಷಭ, ಗಾಂಧಾರ, ದೈವತ, ನಿಷಾದ ಸ್ವರಗಳು ನ್ಯಾಸ ಸ್ವರಗಳು. ಸಾರ್ವಕಾಲಿಕ ರಾಗ. ರಚನೆಗಳು ಷಡ್ಜ, ಚತುಶ್ರುತಿ ರಿಷಭ, ಅಂತರಂಗಾಂಧಾರ, ಪಂಚಮ, ನಿಷಾದ ಸ್ವರಗಳಲ್ಲಿ ಪ್ರಾರಂಭವಾಗಿವೆ. ಕಲ್ಯಾಣಿ ಪ್ರಸಿದ್ಧ ರಾಗ. ದಾಟುಸ್ವರ ಪ್ರಯೋಗ- ವಿಶೇಷ ಪ್ರಯೋಗ. ಗಾಂಧಾರ, ಪಂಚಮಗಳು, ದೀರ್ಘಸ್ವರಗಳು. ಷಡ್ಜ, ಪಂಚಮಗಳನ್ನು ವರ್ಜ್ಯಮಾಡಿ ಹಾಡುವುದು ಒಂದು ವಿಶೇಷ.

ರಾಗ: ಮೋಹನ ಆರೋಹಣ: ಸ ರೀ ಗ ಪ ದ ಸ ಅವರೋಹಣ: ಸ ದ ಪ ಗ ರೀ ಸ ೨೮ನೇಮೇಳಕರ್ತ ಹರಿಕಾಂಭೋಜಿಯಲ್ಲಿ ಜನ್ಯ. ಈ ರಾಗಕ್ಕೆ ಬರುವ ಸ್ವರಗಳು ಷಡ್ಜ, ಚತುಶ್ರುತಿ ರಿಷಭ, ಅಂತರ ಗಾಂಧಾರ, ಪಂಚಮ, ಚತುಶ್ರುತಿ ದೈವತ. ಔಡವ-ಔಡವ ರಾಗ. ಮಾಧ್ಯಮ, ನಿಷಾದಗಳು ವರ್ಜ್ಯ, ಉಪಾಂಗ ರಾಗ. ಚತುಶ್ರುತಿ ರಿಷಭ, ಚತುಶ್ರುತಿ ದೈವತ, ಅಂತರ ಗಾಂಧಾರ ಜೀವಸ್ವರಗಳು, ಗಾಂಧಾರ ಪಂಚಮ ಅಂಶಸ್ವರಗಳು., ಸಾರ್ವಕಾಲಿಕ ರಾಗ, ತ್ರಿಸ್ಥಾಯಿಯಲ್ಲೂ ಹಾಡಬಹುದು. ರಚನೆಗಳು ಷಡ್ಜ, ಗಾಂಧಾರ, ದೈವತಗಳಿಂದ ಪ್ರಾರಂಭವಾಗಿದೆ. ರಿಷಭ, ಗಾಂಧಾರ, ದೈವತಗಳು ರಾಗ ಛಾಯಾಸ್ವರಗಳು. ಜಂಟಿಸ್ವರಗಳು, ಧಾತುಸ್ವರಗಳು ಈ ರಾಗಕ್ಕೆ ರಂಜನೀಯ. ಸಂಚಾರ: ದಸದಾಪ, ಗದಾಪಾಡಾಪಗರಿಸ ಮುಂತಾದವು ಪ್ರಸಿದ್ಧ ರಚನೆಗಳು: ತ್ಯಾಗರಾಜರ ಎವರು ರಾ ನಿನ್ನುವಿನಾ,ಮೈಸೂರು ವಾಸುದೇವಾಚಾರ್ಯರ ರಾ ರಾ ರಾಜೀವ ಲೋಚನ ರಾಮ ಎಂಬ ಕೃತಿಗಳು.