ಸದಸ್ಯ:Srividya Srinivasa/ನನ್ನ ಪ್ರಯೋಗಪುಟ
ಸಿಕಾಡ
ವಿಶೇಷ ಜೀವನ ಶೈಲಿ
[ಬದಲಾಯಿಸಿ]ಸಿಕಾಡಗಳ ಜೀವನ ಶೈಲಿಯೇ ವಿಷಿತ್ರ ೧೭ ವರ್ಷ ಕಾಲ ಭುಮಿಯ ಮೇಲ್ಮೈನಿಂದ ಕಡಿಮೆ ಎಂದರೂ ೧೨ ಇಂಚುಗಳಷ್ಟು ಆಳದಲ್ಲಿ ಮರದ ಬೇರುಗಳನ್ನೇ ತಮ್ಮ ಆಹಾರವನ್ನಾಗಿಸಿಕೊಂಡು ಅವುಗಳ ಅಪ್ಸರೆ ಕೀಟಗಳು ಜೀವಿಸುತ್ತಿರುತ್ತವೆ. ಸರಿಯಾದ ಜಾಗದಲ್ಲಿ ಅಗೆದು ನೋಡಿದ್ದೇ ಆದರೆ ಸುಮಾರು ೩೦ ಸೆಂ. ಮೀಟರುಗಳಷ್ಟು ಆಳದಲ್ಲಿ, ೦.೧ ಚದರ ಮೀಟರ್ ಸುತ್ತಳತೆಯಷ್ಟು ವ್ಯಾಪ್ತಿಯಲ್ಲಿಯೇ ೩೦ ರಿಂದ ೫೦ ಅಪ್ಸರೆ ಕೀಟಗಳನ್ನು ಕಾಣಬಹುದು.
ಮೇ ತಿಂಗಲ ಮಧ್ಯಭಾಗದಿಂದ ಕೊನೆಯ ಭಾಗದ ಒಳಗೆ ಮಳೆಗೆ ನೆಂದ ನೆಲ ಸೂಕ್ತವಾಗಿ ಮೃದುವಾದಾಗ, ಮಣ್ಣಿನ ಉಷ್ಟಾಂಶ ೧೮ ಡಿಗ್ರಿ ಸೆಲ್ಷಿಯಸ್ (೬೪ ಡಿಗ್ರಿ ಫ್ಯಾರೆನ್ ಹೀಟ್) ಅನ್ನು ತಲುಪಿದಾಗ ಅವು ಭುವಿಯಿಂದ ಲಕ್ಷ -ಕೋಟಿಗಳ ಸಂಖ್ಯೆಯಲ್ಲಿ ಹೊರ ಬೀಳಲಾರಂಭಿಸುತ್ತದೆ.
ಅಪ್ಸರೆ ಕೀಟಗಳು
[ಬದಲಾಯಿಸಿ]ಹಾಗೆ ನೋಡಿದರೆ ಈಗ ಹೊರಬಿದ್ದಿರುವ ಸಿಕಾಡಗಳು ೧೭ ವರ್ಷಗಳ ಹಿಂದೆ ಎಂದರೆ ೧೯೮೭ರಲ್ಲಿ ಹುಟ್ಟಿ ಭುವಿಯ ಒಡಲನ್ನು ಸೇರಿದ್ದ ಅಪ್ದರೆ ಕೀಟಗಳು. ಅಪ್ಸರೆ ಕೀಟಗಳು ಎಂದರೆ ಆಗಷ್ಟೆ ಮೊಟ್ಟೆಯಿಂದ ಹೊರಬಿದ್ದ ಸಿಕಾಡಗಳ ಅಪೂರ್ಣ ರೂಪಗಳು. ಇವುಗಳ ಶರೀರ ರಚನೆ ಪ್ರಾಯಾವಸ್ಥೆಯಲ್ಲಿ ಇದ್ದರೂ ರೆಕ್ಕೆ ಮತ್ತು ಬಾಹ್ಯ ಜನನೇಂದ್ರಿಯಗಳು ಪೂರ್ತಿಯಾಗಿ ಬೆಳೆದಿರುವುದಿಲ್ಲ. ಆ ಅಪ್ಸರೆ ಕೀಟಗಳು ಈಗ ಭುವಿಯಿಂದ ಹೊರಬಿದ್ದ ನಂತರ ಪ್ರಾಯವನ್ನು ತಲುಪಿ ನಿಜವಾದ ಪ್ರೌಢ ಸಿಕಾಡಗಳಿಗೆ ರೂಪುಗೊಳ್ಲುತ್ತವೆ. ಇದು ಸಾವಿನತ್ತ ಮೊದಲ ಹೆಜ್ಜೆ ಎಂದೂ ಹೇಳಬಹುದು.
ಕಂಡು ಬರುವ ಜಾಗಗಳು
[ಬದಲಾಯಿಸಿ]ನೆಲ, ಗೋಡೆ, ಕಂಬ, ಗಿಡ, ಮರ, ಕಾರು, ಬಸ್ಸು ಹೀಗೆ ಯಾವುದನ್ನೂ ಪರಿಗಣಿಸದೆ ಎಲ್ಲೆಲ್ಲೂ ಶತಕೋಟಿಗಟ್ಟಲೆ ಕಪ್ಪು ದೇಹದ, ಒಂದು ಇಂಚು ಉದ್ದದ. ಹೆಚ್ಚಿನ ಪಾಲು ಮಿಡತೆಯನ್ನು ಹೋಲುವ, ಪಾರಕ ರೆಕ್ಕೆಗಳನ್ನುಳ್ಳ ಈ ಕೀಟಗಳು.[೧] ಕೆಂಪು ಕಣ್ಣುಗಳನ್ನು ಹೊಂದಿದು, ಅದನು ಹತ್ತಿರದಿಂದ ನೋಡಿದರೆ ಸಾಕ್ಷಾತ್ ಜ್ವಾಲೆಯೇ ಪ್ರಜ್ಜಲಿಸುತ್ತಿರುವಂತೆ ಭಾಸವಾಗುತ್ತದೆ.
ಸಿಕಾಡಗಳ ಹಾವಳಿ
[ಬದಲಾಯಿಸಿ]ಗಂಡು ಸಿಕಾಡಗಳು ಪ್ರಣಯೋನ್ಮಾದದಿಂದ ಹೊರಡಿಸುವ ವಿಚಿತ್ರ ಕೀರಲು ಧ್ವನಿ ಸುತ್ತಲಿನ ಪರಿಸರವನ್ನು ತಾನೇತಾನಾಗಿ ತುಂಬಿಕೊಳ್ಳುತ್ತದಲ್ಲ, ಅದರಿಂದ ಜನ ಬೆಚ್ಚಿ ಬೀಳುತ್ತಾರೆ. ಆ ಪರಿ ಇರುತ್ತದೆ ಆ ಧ್ವನಿ. ಅಮೆರಿಕದ ಪೂರ್ವ ರಾಜ್ಯಗಳಲ್ಲಿ ಇಂಡಿಯಾನ, ಟೆನಿಸ್ಸೀಯ ದಕ್ಷಿಣ ಭಾಗ ಮೊದಲಾದ ಕಡೆ ಕಂಡುಬರುತ್ತಿದೆ. ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆಯೆಂದರೆ ಆರ್ಥಿಕ ಸಾಧ್ಯತೆ ಹೊಂದಿರುವ ಸಾಕಷ್ಟು ಅಮೆರಿಕನ್ನರು ಸಿಕಾಡಗಳ ಹಾವಳಿ ಇಲ್ಲದ ಪಶ್ಚಿಮ ರಾಜ್ಯಗಳಿಗೆ ವಲಸೆ ಹೋಗತೊಡಗಿದ್ದಾರೆ. ಸಿಕಾಡಗಳ ಬಗ್ಗೆ ಕಣ್ಣಿಡಲೆಂದೇ ಸಿಕಾಡ ಮೇನಿಯ ಎಂಬ ವೆಬ್ ಸೈಟ್ ಪ್ರಾರಂಭಗೊಂಡಿದೆ.
ಪ್ರೌಢಾವಸ್ಥೆ
[ಬದಲಾಯಿಸಿ]ಅದು ಕಂಬ, ಗೋಡೆ, ವಾಹನ ಏನಾದರೂ ಆದೀತು - ಅದರೆ ಮೇಲೆ ಹತ್ತಿ ನೇರಕ್ಕೆ ಮೇಲೇರಲಾರಂಭಿಸುತ್ತವೆ. ಆ ರೀತಿ ಸಾಕಷ್ಟು ಮೇಲಕ್ಕೆ ಹತ್ತಿದೆ ಎನ್ನಿಸದಾಗ ಅಲ್ಲಯೇ ಗಟ್ಟಿಯಾದ ಕುಳಿತುಕೊಳ್ಲುತ್ತವೆ. ಆ ರಾತ್ರಿ ಸಿಕಾಡಗಳ ಜೀವನದಲ್ಲಿ ವಿಶಿಷ್ಟ ಬದಲಾವಣೆಯನ್ನು ಉಂಟುಮಾಡುವ ರಾತ್ರಿ ಗಟ್ಟಿಯಾಗಿ ಕಚ್ಚಿಕೊಂಡು ಕುಳಿತ ಆಪ್ಸರೆ ಕೀಟಗಳು ರಾತ್ರೋರಾತ್ರಿ ಪ್ರೌಢಾವಸ್ಥೆಯನ್ನು ತಲುಪುತ್ತವೆ. ಹಾಗೆ ಪ್ರೌಢಾವಸ್ಥೆಯನ್ನು ತಲುಪುವ ವಿಧಾನವೂ ವಿಚಿತ್ರವೇ. ಅಪ್ಸರೆ ಕೀಟದ ದೇಹದ ಹೊರಕೋಶವನ್ನು ಸೀಳಿಕೊಂಡು ಹಾಲುಬಿಳಿ ಬಣ್ಣದ ಪ್ರೌಢಸಿಕಾಡ ಹೊರಬೀಳುತ್ತದೆ. ತುಸು ಹಸಿಹಸಿಯಾಗಿರುವಂತಹ ಅದರ ಸಿಥ್ರೂ ರೆಕ್ಕರೆಗಳು ಬಿಚ್ಚಿಕೊಳ್ಳುತ್ತವೆ. ಹೀಗೆ ಮೂಲದೇಹವನ್ನು ಭೇದಿಸಿಕೊಂಡು ಹೊರಹೊರಟ ಸಿಕಾಡದ ಹೊರಮೈ ಒಣಗಿ ಗಟ್ಟಿಯಾದಂತೆಲ್ಲ ದೇಹದ ಬಣ್ಣ ಹಾಲು ಬಿಳಿಯಿಂದ ಗಾಢಕಪ್ಪಿಗೆ ತಿರುಗಲಾರಂಭಿಸುತ್ತದೆ. ಈ ಅವಧಿ ನಾಯಿಗಳು, ಬೆಕ್ಕುಗಳು, ಪಕ್ಷಿಗಳು, ಜಿಂಕೆ, ಅಳೀಲು, ಇಲಿ, ಇರುವೆ ಎಲ್ಲವಕ್ಕೂ ಮಹದೌತಣದಕಠಾಲ. ಕೋಟಿ ಕೋಟಿ ಸಂಖ್ಯೆಯಲ್ಲಿ ಹೊರಬೀಳುವ ಸಿಕಾಡಗಳು ಕಚ್ಚುವುದಿಲ್ಲ, ಕುಟುಕುವುದಿಲ್ಲ. ತಿಂದರೆ ವಿಷವೂ ಅಲ್ಲ. ಹೀಗಾಗಿ ಎಷ್ಟು ತಿಂದರೂ ಮುಗಿಯಲಾರದ ಮಹಾಭೋಜನ. ಮಾನವರು ಕೂಡ ಸಿಕಾಡಗಳನ್ನು ತಿನ್ನುತ್ತಾರೆ. ಅಪ್ಸರೆ ಕೀಟದ ಚರ್ಮವನ್ನು ಹರಿದುಕೊಂಡು ಸಿಕಾಡ ಹೊರಬೀಳುತ್ತದಲ್ಲ. ಆ ಮೃದರತ್ವವನ್ನು ತಿಂದು ಅನುಭವಿಸಬೇಕು ಎಂಬುದು ಚಪ್ಪರಿಸಿ ತಿನ್ನುವವರ ಸಲಹೆ. ಹೀಗಾಗಿ ಚಿತ್ರವಿಚಿತ್ರ ಭಕ್ಷ್ಯಗಳನ್ನು ಸಿಕಾಡದಿಂದ ಮಾಡಲಾಗುತ್ತದೆ. ವಿದೇಶಿ ಬಾಣಸಿಗರು ಕಂಡುಕೊಂಡ ಪ್ರಕಾರ ಬೇರೆಲ್ಲ ಕೀಟಗಳಲ್ಲಿಯಂತೆಯೇ ಸಿಕಾಡ್ಗಳಲ್ಲಿಯೂ ಸಾಕಷ್ಟು ವಿಟಮಿನ್ ಗಳಿವೆ; ಮೇದಸ್ಸು ಕಡಿಮೆ ಪ್ರಮಾಣದಲ್ಲಿದೆ ಹೆಣ್ಣು ಸಿಕಾಡಗಳು ಹೆಚ್ಚು ಪ್ರೊಟೀನ್ ಹೊಂದಿವೆ. ಗಂಡು ಸಿಕಾಡಗಳು ಮರಗಳ ಮೇಲೆ ಸಾಕಷ್ಟು ಬಿಸಿಲು ಬೀಳೂವ ಜಾಗವನ್ನು ಹುಡುಕಿ ಕುಳಿತುಕೊಳ್ಳುತ್ತವೆ. ಆ ಬಳಿಕ ಪ್ರಣಯೋತ್ಸಾಹದಿಂದ ವಿಚಿತ್ರ ಕೀರಲು ಧ್ವನಿಯನ್ನು ಹೊರಡಿಸಲಾರಂಭಿಸುತ್ತವೆ. ಅದು ಹೆಣ್ಣಿಗೆ ಅವು ನೀಡುವ ಆಹ್ನಾನ. ಈ ರೀತಿ ಶಬ್ದವನ್ನು ಹೊರಡಿಸಲೆಂದೇ ಗಂಡುಗಳ ಹೊಟ್ಟೆಯ ಎರಡೂ ಬದಿಯಲ್ಲಿ 'ಟಿಂಬಲ್ಸ್' ಎಂದು ಕರೆಯಲಾಗುವ ವಿಶೇಷ ಪೊರೆಗಳಿರುತ್ತವೆ, ಗಂಡುಗಳು ಹೆಚ್ಚೆಚ್ಚು ಬಿಸಿಲಿಗೆ ಮೈಯ್ಯೊಡ್ಡುತ್ತವೆ. ದೇಹದ ಉಷ್ಣಾಂಶವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತವೆ. ಈ ಕ್ರಿಯೆಯಿಂದಾಗಿ ಅವಕ್ಕೆ ಇನ್ನೂ ಹೆಚ್ಚು ತೀವ್ರವಾಗಿ ಹಾಗೂ ಹೆಚ್ಚು ಗಟ್ಟಿಯಾಗಿ 'ಪ್ರೇಮ ನಿವೇದನೆ' ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂತೂ ಹೆಣ್ಣು ಸಿಕಾಡವೊಂದು ಗಂಡಿನತ್ತ ಆಕರ್ಷಣೆಗೊಂಡು ಬರುತ್ತದೆ. ಅವೆರಡು ಸಂಗಾತಿ ನೃತ್ಯ ನಡೆಸುವಾಗಲೂ ಗಂಡು ಶಬ್ದಮಾಡುತ್ತಲೇ ಇರುತ್ತದೆ. ಸಮಾಗಮ ಸಂಭ್ರಮದ ಸಂದರ್ಭದಲ್ಲಿ ಮಾತ್ರ ಈ ಶಬ್ದ ಹೊಮ್ಮಿಸುವಿಕೆಯನ್ನು ನಿಲ್ಲಿಸುತ್ತದೆ. ಹೀಗೆ ಸಮಾಗಮ ಹೊಂದಿದ ಕೆಲವೇ ಕ್ಷಣಗಳಲ್ಲಿ ಗಂಡು ಸಿಕಾಡ ಸತ್ತು ಹೋಗುತ್ತದೆ. ಹೆಣ್ಣು ಸಿಕಾಡ ತಾನು ಇಡಲಿರುವ ೬೦೦ಕ್ಕೂ ಹೆಚ್ಚು ಮೊಟ್ಟೆಗಳಿಗೆ ಸೂಕ್ತಗೂಡನ್ನು ರೂಪಿಸಲು ಹೊರಡುತ್ತದೆ. ಹಾಗೆ ಹೊರಡುವ ಹೆಣ್ಣು ಸಿಕಾಡಗಳು ಮರದ ಮೃದು ಕೊಂಬೆಯಲ್ಲಿ ಬಿರುಕನ್ನು ಕೊರೆದು ಅದರೊಳಗೆ ಮೊಟ್ಟೆಗಳನ್ನು ಇಡುತ್ತವೆ. ತನ್ನ ದೇಹದಲ್ಲಿರುವ ಕಟ್ಟಕಡೆಯ ಮೊಟ್ಟೆಯನ್ನು ಆ ಬಿಡುಕಿನಲ್ಲಿ ಇರಿಸಿದ ಬಳೀಕ ದೈಹಿಕ ದೌರ್ಬಲ್ಯತೆಯ ಕಾರಣ ಅದು ಮರಣವನ್ನಪ್ಪುತ್ತದೆ. ಮೊಟ್ಟೆ ಇಟ್ಟ ೬ ರಿಂದ ೮ ವಾರಗಳ ಬಳಿಕ ಮೊಟ್ಟೆ ಒಡೆದು ಚಿಕ್ಕಚಿಕ್ಕ ಅಪ್ಸರೆ ಕೀಟಗಳು ಹೊರಬರುತ್ತವೆ. ಅಲ್ಲಿಂದ ಬಿದ್ದು ನೆಲದ ಮೇಲ್ಮೈ ತಲುಪುವ ಅವು ಮಣ್ಣನ್ನು ಕೊರೆದುಕೊಂಡು ಸುಮಾರು ೧೨ ಇಂಚಯಗಳಷ್ಷು ಕೆಳಗೆ ಹೋಗುತ್ತವೆ. ಅಲ್ಲಿಂದ ಮತ್ತೊಂದು ೧೭ ವರ್ಷಗಳ ಚೈತ್ರಯಾತ್ರೆ ಪ್ರಾರಂಭಗೊಳ್ಳುತ್ತದೆ. ವಿಶ್ವದಾದ್ಯಂತ ಗಮನಿಸಿದ್ದೇ ಆದರೆ ಉಷ್ಣವಲಯ ಹಾಗೂ ಸಮಶೀತೊಷ್ಣ ವಲಯಗಳಲ್ಲಿ ಕಡಿಮೆ ಎಂದರೂ ೨೦೦೦ ಪ್ರಭೇಧಗಳು ಹರಡಿಹೋಗಿವೆ. ಉತ್ತರ ಅಮೆರಿಕದಲ್ಲಿಯೇ ಒಟ್ಟು ನೂರು ಪ್ರಭೇದಗಳಿವೆ. ಅವುಗಳಲ್ಲಿ ಎರಡು ವಿಧ. ೨ ರಿಂದ ೮ ವರ್ಷಗಳ ಕಡಿಮೆ ಜೀವನಾವಧಿಯನ್ನು ಹೊಂದಿರುವ ಸಿಕಾಡಗಳು. ಇವನ್ನು 'ವಾರ್ಷಿಕ ಅಥವಾ ಡಾಗ್ ಡೇ ಸಿಕಾಡಗಳು' ಎಂಬ ಕರೆಯುತ್ತಾರೆ. ಅವು ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭುವಿಯಿಂದ ಹೊರ ಬೀಳುತ್ತವೆ. ಇವು ಗಾಢ ವರ್ಣದವಾಗಿದ್ದು ದೇಹದ ಮೇಲೆ ಹಸಿರು ಗುರುತುರುಗಳಿರುತ್ತವೆ. ಇನ್ನುಳಿದವೆಂದರೆ ೧೩ ವರ್ಷಗಳ ಅಥವಾ ೧೭ ವರ್ಷಗಳ ಜೀವನಚಕ್ರವನ್ನು ಹೊಂದಿರುವ ಸಿಕಾಡಗಳು. ಅವನ್ನು 'ಪಿರಿಯಾಡಿಕ್ ಸಿಕಾಡಗಳು' ಎಂದು ಕರೆಯುತ್ತಾರೆ. ಅವುಗಳದು ಕೆಂಪು ಕಣ್ಣುಗಳು, ಕಿತ್ತಳೆ ಬಣ್ಣದ ಕಾಲುಗಳು. ಸದ್ಯಕ್ಕೆ ಅಮೆರಿಕದಲ್ಲಿ ಕಾಣಿಸಿಕೊಂಡಿರುವವು ೧೭ ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಸಿಕಾಡಗಳು.
ಅಪಾಯಕಾರಿ-ಉಪಕಾರಿ ಸಿಕಾಡಗಳು
[ಬದಲಾಯಿಸಿ]ಸಿಕಾಡಗಳು ಹಣ್ಣಿನ ಗಿಡಗಳ ರೆಂಬೆಕೊಂಬೆಗಳು ಮುರಿಯುವುದಕ್ಕೆ ಕಾರಣವಾಗಿ ಆರ್ಥಿಕ ನಷ್ಟ ಉಂಟು ಮಾಡುತ್ತವೆ ಎಂಬುದು ಆರೋಪ. ಅವುಗಳ ಕಾರಣದಿಂದ ಕೊಂಬೆಗಳು ಕತ್ತರಿಸಿ ಹೋಗುವುದರಿಂದ ನೈಸರ್ಗಿಕವಾಗಿ ಪ್ರೊನಿಂಗ್ ಉಂಟಾಗುತ್ತದೆ. ಮುಂದಿನ ವರ್ಷ ಫಸಲು ಜಾಸ್ತಿ ಬರುತ್ತದೆ. ಅವು ಭೂಮಿಯಿಂದ ಹೊರಬೀಳುವಾಗ ಸಾಕಷ್ಟು ಮಣ್ಣನ್ನು ಮೇಲೆ ಕೆಳಗೆ ಮಾಡಿ ಫಲವತ್ತಾಗಿಸುತ್ತವೆ. ಸತ್ತ ಸಿಕಾಡಗಳ ಭುವಿಗೆ ಗೊಬ್ಬರವಾಗುತ್ತವೆ ಎಂಬ ವಾದವೂ ಉಂಟು.[೨]