ಸದಸ್ಯ:Shreya.t.v/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಮನೋವಿಜ್ಞಾನದಲ್ಲಿ ,

ಸಾಮಾಜಿಕ ಮನೋವಿಜ್ಞಾನ

[೧] ವೈಜ್ಞಾನಿಕವಾಗಿ ಮನುಷ್ಯರ ಮಾನವ ಚಿಂತನೆಗಳು ,ಭಾವನೆಗಳು , ನಡವಳಿಕೆಗಳು ಇವು ನಿಜವಾದ ಅಥವ ಕಲ್ಪಿಕವಾದ ಪ್ರಭಾವ ಅಥವ ಇತರರ ಸೂಚಿಸುತ್ತದೆ ಉಪಸ್ಥಿತಿಗಳಾಗ ಬಹುದು.ಸಾಮಾಜಿಕ ಮನಶಾಸ್ತ್ರಜ್ಞರು ನಮ್ಮ ಮಾನವ ಭಾವನೆ ಹಾಗು ನಡವಳಿಕೆಗಳ ಮೂಲ ಕಾರಣವು ಮಾನವ ವರ್ತನೆಗಳು ಹಾಗು ನಮ್ಮ ಸಾಮಾಜಿಕ ಸಂದರ್ಭಗಳು.ಸಾಮಾಜಿಕ ಮನಶಾಸ್ತ್ರಜ್ಞರು ಮನುಷ್ಯರ ವರ್ತನೆಗಳು ಮತ್ತು ಮನುಷ್ಯರು ಬೆರೆ ಜನರ ಮುಂದೆ ಹೇಗೆ ತಮ್ಮ ಚಿಂತನೆಗಳು ,ಭಾವನೆಗಳು ಹಾಗು ತಮ್ಮ ನಡವಳಿಕೆಗಳು ಪ್ರಕಟಿಸುತಿರುವುದನ್ನು ಹಾಗು ಇದರ ಕಾರಣಗಳನ್ನು ಕುರಿತು ಆಧ್ಯಾಯನ ಮಾಡುವರು.ಸಾಮಾಜಿಕ ಮನೋವಿಜ್ಞಾನ ಸಮಾಜಶಸ್ತ್ರಾ ಹಾಗು ಮನೋವಿಜ್ಞಾನದ ಅಂತರವನ್ನು ಕಡಿಮೆ ಮಾಡುತ್ತದೆ .

ಇತಿಹಾಸ[ಬದಲಾಯಿಸಿ]

ಎರಡನೇ ಮಹಾಯುದ್ಧದ ನಂತರ ಮನಶಾಸ್ತ್ರಜ್ಞರು ಹಾಗು ಸಮಾಜಶಸ್ತ್ರಾರು ಸೇರಿ ಹಲವು ಸಂಶೋದನೆಗಳು ನಡೆಸಿದ್ದಾರೆ.ಆದರೆ ಇವೆರಡು ವಿಶಯಗಳು ಬೇರೆ ಬೇರೆ ಪ್ರತ್ಯೇಕವಾದ ವಿಶಯಗಳ ಕುರಿತು ಸಂಶೋದನೆಯನ್ನು ನಡೆಸುವರು,ಅದರಲ್ಲಿ ಅಮೆರಿಕಾದ ಸಂಶೋದಕರು ವ್ಯಕ್ತಿಯ ನಡವಳಿಕೆಗಳು ,ಅವರ ಚಿಂತನೆಗಳ ಕುರಿತು ಸಂಶೋದನೆಯನ್ನು ಮಾಡಿದ್ದರು. ಯೋರೋಪಿನ ಸಂಶೋದಕರು ಸಾಮಾಜಿಕ ಜನರ ಗಂಪುಗಳ ಕುರಿತು ಸಂಶೋದನೆ ನಡೆಸುವರು. ಪ್ಲೇಟೊ ಮೊದಲು ಸಾಮಾಜದ ಜನರ ವರ್ತನೆಗಳನ್ನು ಕುರಿತು ೧೮೦೦ ರಲ್ಲಿ ಹೇಳಿದರು.ಇದರ ನಂತರ ಎರಡನೇಯ ಮಹಾಯುದ್ಧದ ನಂತರ ಸಮಾಜದಲ್ಲಿ ನಡೆದ ಬದಲಾವನೆಗಳ ಕಾರಣ ಈ ವಿಶಯದಲ್ಲಿ ಹೆಚ್ಚು ಸಂಶೋದನೆಗಳನ್ನು ಮಾಡಿದರು. ೨೦ನೇ ಶತಮಾನದಲ್ಲಿ ಈ ಸಾಮಾಜಿಕ ಮನೋವಿಜ್ಞಾನದಲ್ಲಿ ಹೆಚ್ಚು ಸಂಶೋದನಗಳು ನಡೆದವು. ಈ ವಿಶಯದಲ್ಲಿ ಮೊದಲು ಪ್ರಕಟಿತವಾದ ಪ್ರಯೊಗ ೧೮೯೮ರಲ್ಲಿ ನೊರ್ಮನ್ ತ್ರಿಪಲೆತ್ತ್ ಅವರು ಪ್ರಕಟಿಸಿದ್ದರು. ಸಮಾಜಿಕ ಮನೋವಿಜ್ಞಾನದಲ್ಲಿ ಹೆಚ್ಚಾಗಿ ಮನುಷ್ಯರ ವರ್ತನೆಗಳು ಹಾಗು ಸಮಾಜಿಕ ಗುಂಪುಗಳನ್ನು ಕುರಿತು ಹೆಚ್ಚು ಪ್ರಧಾನ್ಯ ನೀಡಲಾಗಿದೆ. ಎರಡನೇ ಮಹಾಯುದ್ಧದ ನಂತರ ಮನಶಾಸ್ತ್ರಜ್ಞರು ನಮ್ಮ ಸಮಾಜದಲ್ಲಿ ನಡೆದ ಹೆಣ್ಣು ಮತ್ತು ಗಂಡುಗಳ ನಡುವೆರುವ ಸಮಸ್ಯೆಗಳು ಮತ್ತು ಜಾನಾಂಗಗಳಲ್ಲಿ ಭೇದ ಮತ್ತು ವರ್ಣ ಭೇದ ಇವುಗಳನ್ನು ಕುರಿತು ಸಂಶೋದನೆಯನ್ನು ನಡೆಸಿದ್ದರು.ಸಾಮಾಜಿಕ ಮನೋವಿಜ್ಞಾನದಲ್ಲಿ ೧೯೮೦ ರಿದ್ದ ೧೯೯೦ ಈ ಕಾಲದಲ್ಲಿ ಹಲವಾರು ಸಿದ್ದಾಂತಗಳು ಮತ್ತು ಹಲವು ಪ್ರಯೋಗಗಳನ್ನು ನಡೆಸಿದ್ದರು .ಸಾಂಸ್ಕತಿಕ ಹಾಗು ಬಗುಸಾಂಸ್ಕತಿಕ ಈ ವಿಷಯಗಲ್ಲಿ ಅಧ್ಯಯನವನ್ನು ಮಡಿದರು.ಅಧುನಿಕ ಮನಶಾಸ್ತ್ರಜ್ಞರು ಇನ್ನೂ ಹಲವರು ಬೇರೆ ಹೊಸ ಸಮಾಜಿಕ ವಿಷಯಗಳನ್ನು ಕುರಿತು ಅಧ್ಯಯನಗಳನ್ನು ಮಾಡುತ್ತಿದ್ದಾರೆ.ಸಾಮಾಜಿಕ ಮನೋವಿಜ್ಞಾನ ಇವಲ್ಲದೆ ನಮ್ಮ ಸಮಾಜಿಕ ಆರೋಗ್ಯ ,ನಮ್ಮ ಪರಿಸರ ಹಾಗು ನಮ್ಮ ಕಾನೂನು ಕ್ರಮಗಳ ಮೇಲೆಯು ಸಹ ಸಂಶೋದನೆ ಹಾಗು ಅಧ್ಯಯನಗಳನ್ನು ನಡೆಸಿದ್ದಾರೆ.ಸಾಮಾಜಿಕ ಮನೋವಿಜ್ಞಾನ ಮಾನವನ ನಡುವಿನ ಪರಸ್ಪರ ಸಂಭಂದಗಳು ಮತ್ತು ಆಂತರಿಕ ವೈಯುಕ್ತಿಕ ಈ ವಿಶಯಗಳ ಮೇಲೆ ವಿಶಷ ಅಧ್ಯಾಯನಗಳು ನಡೆಸಿದ್ದಾರೆ. ಸಾಮಾಜಿಕ ಮನೋವಿಜ್ಞಾನದಲ್ಲಿ ನಮ್ಮ ಮನೋವೃತ್ತಿಯ ಮೇಲೆ ಹೆಚ್ಚು ಪ್ರಮುಖ್ಯತೆಯನ್ನು ನೀಡಿದೆ, ನಮ್ಮ ವರ್ತನೆಗಳು ಸರಳವಾಗಿ ಹೇಳಬೇಕೆಂದರೆ ,ನಮ್ಮ ಮೂಲ ಪದವಿನ್ಯಾಸಗಳಾದ ಅನುಮತಿ ಹಾಗು ಅಸಮ್ಮತಿಗಳು,ನಮ್ಮಗೆ ಇಷ್ಟವಾದವುಗಳು ಮತ್ತು ನಮಗೆ ಇಷ್ಟವಾಗದಿರುವವುಗಳ ಕುರಿತು ಹಾಗು ಅವುಗಳು ನಮ್ಮ ಜೀವನದಲ್ಲಿ ಹೇಗೆ ಬಿಂಬಿಸುತ್ತದೆ.ಉದಾಹರನೆಗೆ ನಮಗೆ ಕೆಲವು ಆಹಾರ ಪದಾರ್ಥಗಳ ಮೇಲಿನ ಆಸೆ ,ನಾವು ನಮ್ಮ ಜೀವನದಲ್ಲಿ ನಮಗೆ ಇಷ್ಟವಾದ ರಾಷ್ರೀಯ ನಿಯಮಗಳನ್ನು ಅಳವಡಿಸುವುದು ,ಇವೆಲ್ಲವನ್ನು ಕುರಿತು ಸಂಶೋದನೆಗಳನ್ನು ನಡೆಸುತ್ತಾರೆ. 

ಸಂಶೋಧನೆಗಳು[ಬದಲಾಯಿಸಿ]

ಸಾಮಾಜಿಕ ಮನೋವಿಜ್ಞಾನದ್ದಲ್ಲಿ ನಮ್ಮ ಮನೋವೃತ್ತಿಗಳು ಹೇಗೆ ನಿರ್ಮನವಾಗುತ್ತದೆ ,ಹೇಗೆ ಅವು ನಮ್ಮ ಸಮಾಜದ ಕಾರಣಗಳಂದ ಬದಲಾವಣೆಯಾಗುತ್ತದೆ ,ಅದರ ಕರ್ತವ್ಯಗಳು ,ನಮ್ಮ ಮನೋವೃತ್ತಿ ಹಾಗು ನಮ್ಮ ನಡನಳಿಕೆಗಳ ನಡುವಿನ ಸಂಬಂಧಗಳನ್ನು ಕುರಿತು ಅಧ್ಯಯನವನ್ನು ಮಾಡುವರು. ಸಾಮಾಜಿಕ ಮನೋವಿಜ್ಞಾನ ನಮ್ಮ ಸಮಾಜಿಕ ಅರಿವು (ಸೋಶಿಯಲ್ ಕಾಗ್ನಿಶನ್ ) ಕುರಿತು ಇತಿಚಿಗೆ ಹಲವಾರು ಸಂಶೋಧನೆ ನಡೆಸಲಾಗಿದೆ.ನಮ್ಮ ಸಮಾಜಿಕ ಅರಿವು ಹೇಗೆ ಮನುಷ್ಯರು ಕಾರ್ಯಗಳನು ಗ್ರಹಿಸುವುದು/ನೋಡುವುದು ,ಹೇಗೆ ಮನುಷ್ಯರು ಬೇರೆ ಬೇರೆ ಕಾರ್ಯಗಳನ್ನು ಆಲೋಚಿಸುವುದು , ಮಾನವ ಹೇಗೆ ಸಮಾಜದ ಹಾಗು ವ್ಯಕ್ತಿಗಳ ಕಾರ್ಯಗಳನ್ನು ಮತ್ತು ಮಾಹಿತಿಗಳನ್ನು ನೆನಪಿಸಿಕೊಳ್ಳುತ್ತಾರೆ ,ಎಂಬುವುದನ್ನು ಕುರಿತು ಸಂಶೋದನೆಯ ನಡೆಸುತ್ತಿದಾರೆ . ಸಮಾಜಿಕ ಅರಿವಿನ ಪರಿಶೋಧನೆಯಲ್ಲಿ ಮುಖ್ಯವಾಗಿ ಆರೋಪಣೆಗಳ ಕುರಿತು ಅಧ್ಯಾಯನ ಹಾಗು ಸಂಶೋದನೆಗಳನ್ನು ನಡೆಸುತ್ತಾರೆ.ಸಾಮಾಜಿಕ ಮನೋವಿಜ್ಞಾನದಲ್ಲಿ ಸೆಲ್ಫ್-ಕಾನ್ಸೆಪ್ಟ್ /ಸಾಮಾನ್ಯ ಜ್ಞಾನ ಇವು ಮನುಷ್ಯರು ಹೇಗೆ ಅವರು ತಮ್ಮ ನಡವಳಿಕೆಗಳನ್ನು ನೋಡುತ್ತರೆ ಎಂಬುವುದರ ಕುರಿತು ಅಧ್ಯಯನೆಗಳನ್ನು ಮಾಡುತ್ತಾರೆ. ಹೇಸಲ್ ಮಾರ್ಕುಸ್ ನಮ್ಮ ಸೆಲ್ಫ್-ಕಾನ್ಸೆಪ್ಟ್ ಎಂಬುವುದು "ಸೆಲ್ಫ್-ಸ್ಕೀಮಾ" ಎಂಬುವುದರ ಕಾರಣಗಳಿಂದ ರೋಪಿಕವಾಗುತ್ತದೆ.ಇದರ ಉದಾಹರನೆಯಾಗಿ , ಒಬ್ಬ ವಿದ್ಯರ್ಥಿ ತನ್ನ ಕೆಲಸಗಳಾದ ಓದು ಬರಹ ಮಾಡಿವುದು,ಶಾಲೆಗೆ ಹೋಗಿ ಪಾಟ್ಯ -ಪುಸ್ತಕಗಳನ್ನು ಓದುವುದು ,ಶಿಕ್ಷಣವ ಮಾಡುವುದು ಒಬ್ಬ ವಿದ್ಯರ್ಥಿಯ ಲಕ್ಶಣಗಳು, ಇವುಗಳನ್ನು ಅರಿತು ಮಾಡುವದು ,ನಮ್ಮ ಕರ್ತವ್ಯಗಳನ್ನು ಅರಿತು ಮಾಡುವುದನ್ನು ನಮ್ಮ ಸೆಲ್ಫ್-ಕಾನ್ಸೆಪ್ಟ್ /ನಮ್ಮನ್ನು ಕುರಿತು ನಾವು ತಿಳಿದು ವರ್ತಿಸುವುದನ್ನು ನೋಡುತ್ತಾರೆ,ಇದರ ಮೇಲೆ ಅಧ್ಯಯನವನ್ನು ನಡೆಸುತ್ತಾರೆ. ಸಾಮಾಜಿಕ ಮನಶಾಸ್ತ್ರಜ್ಞರು ಸಾಮಾಜಿಕ ಮನೋವಿಜ್ಞಾನ ಮತ್ತು ನಮ್ಮ ವ್ಯಕ್ತಿತ್ವಗಳ ಸಂಬಂಧಗಳನ್ನು ಕುರಿತು ಹಲವು ಅಧ್ಯಯನಗಳನ್ನು ಮಾಡಿದ್ದಾರೆ. ಇವಲ್ಲದೆ ನಮ್ಮ ಸಮಾಜವು ನಮ್ಮಲಿ ಬೀರುವ ಪ್ರಭವಗಳನ್ನು ,ಬಹಳ ಮೂಖ್ಯವಾದ ಪಾತ್ರವಹಿಸುತ್ತದೆ. ಸೋಶಿಯಲ್-ಇನ್ ಫ್ಲುಯೆನ್ಸ್(ಸಮಾಜದ ಪ್ರಭಾವ) ಇದು ಸಾಮಾಜಿಕ ಮನೋವಿಜ್ಞಾನದ ಒಂದ ಬಹಳ ಮೂಖ್ಯ ಪಾತ್ರವಹಿಸುತ್ತದೆ.ಸೋಶಿಯಲ್-ಇನ್ ಫ್ಲುಯೆನ್ಸ್ ಮೂರು ವಿಭಾವಗಳು : ಅನುರೂಪ ( ಕನ್ ಫಾರ್ಮಿಟಿ ) ,ಅನುಸಾರಣೆ (ಕಂಪ್ಲಾಯನ್ಸ್) ,ವಿಧೇಯತೆ (ಒಬೀಡಿಯಂನ್ಸ್).ಸಾಮಾಜಿಕ ಮನೋವಿಜ್ಞಾನದಲ್ಲಿ ಗ್ರುಪ್ ಡಾಯ್ನಮಿಕ್ಸ್ ,ಒಂದು ಗ್ರುಪ್(ಗುಂಪು) ಎಂದರೆ ಸಮಾಜಿಕ ಗುಂಪು ,ಇದು ಎರಡು ಅಥವ ಹೆಚ್ಚು ವ್ಯತ್ತಿಗಳು ಸೇರಿ ಒಂದು ಸಾಮಾಜಿಕ ಗುಂಪನ್ನು ಸ್ರಿಶ್ತಿಸುವುದು,ಇದರಿಂದ ಈ ಗುಂಪುಗಳಲ್ಲಿ ಒಬ್ಬ ವ್ಯಕ್ತಿ ಹೇಗೆ ಒಂದುಗೋಡಿ ಕಾರ್ಯಗಳನ್ನು ನಡೆಸುವುದು ,ಸಾಮಾಜಿಕ ಗುಂಪುಗಳಲ್ಲಿ ಅವರ ನಡವಳಿಕೆಗಳು,ಒಗ್ಗಟುಗಳನ್ನು ಕುರಿತು ಅಧ್ಯಾಯನೆಯ ಮಾಡುತ್ತಾರೆ.ಪರಿಶೋಧಣೆಯಲ್ಲಿ ಸಾಮಾಜಿಕ ಮನೋವಿಜ್ಞಾನ ,ಅನುಭವಜನ್ಯ ವೈಜ್ಞಾನಿಕವಾಗಿ ಎಲ್ಲಾ ಮಾನವನ ಸಮಾಜಿಕ ನಡವಳಿಕೆಗಳಿಗೆ ಪ್ರಶ್ನೆಗಳಿಗೆ ಉತ್ತರವ ನೀಡಿವೆ,ಈ ಸಮಾಜಿಕ ಮನೋವಿಜ್ಞಾನದ ಪರಿಶೋಧಣೆಗಳು ,ಪ್ರಯೋಗಶಾಲೆಯಲ್ಲಿ ಹಾಗು ನಮ್ಮ ಸಾಮಾಜಿಕ ಕಾರ್ಯಕ್ಶೇತ್ರದಲ್ಲಿ ನಡೆಸುತ್ತಾರೆ.ಸಮಾಜಿಕ ಮನೋವಿಜ್ಞಾನದ ಪರಿಶೋಧಣೆಗಳನ್ನು ಮೂರು ಮಾರ್ಗ/ಪ್ರಕಾರದಲ್ಲಿ ಮಾಡಬಹುದು,ಅವು : ಎಕ್ಸ್ ಪೆರಿಮೆಂಟಲ್ ಮೆಥಡ್ (ಹಲವು ಪ್ರಯೋಗ/ಪರೀಕ್ಶೆಯ ಮಾರ್ಗ್) , ಕೋರಿಲೇಷಣ್ ಮೆಥಡ್ (ಪರಸ್ಪರ ಸಂಬಂದಿಸಿ ಪರಿಶೋಧಿಸುವ ಮಾರ್ಗ ) , ಆಬ್ಝರ್ವೆಶನ್ ಮೆಥಡ್ (ಅವಲೋಕನ ಮಾರ್ಗ) .

ಪುಸ್ತಕಗಳು ಹಾಗು ಜರ್ನಲ್[ಬದಲಾಯಿಸಿ]

ಸಮಾಜಿಕ ಮನೋವಿಜ್ಞಾನವ ಕುರಿತು ಬರೆದ ಪುಸ್ತಕಗಳು ( ಜರ್ನಲ್) : ಏಷ್ಯನ್ ಜರ್ನಲ್ ಆಫ್ ಸೋಶಿಯಲ್ ಸೈಕಾಲಜಿ ,ಬ್ರಿಟಿಷ್ ಜರ್ನಲ್ ಆಫ್ ಸೋಶಿಯಲ್ ಸೈಕಾಲಜಿ, ಯುರೋಪಿಯನ್ ಜರ್ನಲ್ ಆಫ್ ಸೋಶಿಯಲ್ ಸೈಕಾಲಜಿ,ಜರ್ನಲ್ ಆಫ್ ಅಪ್ಲೈಡ್ ಸೋಶಿಯಲ್ ಸೈಕಾಲಜಿ,ಜರ್ನಲ್ ಆಫ್ ಎಕ್ಸ್ಪರಿಮೆಂಟಲ್ ಸೋಷಿಯಲ್ ಸೈಕಾಲಜಿ,ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ, ಜರ್ನಲ್ ಆಫ್ ಸೋಶಿಯಲ್ ಸೈಕಾಲಜಿ,ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ ರಿವ್ಯೂ ಇವೆಲ್ಲವು ಸಾಮಾಜಿಕ ಮನೋವಿಜ್ಞಾನವ ಕುರಿತು ಬರೆದ ಜರ್ನಲ್ (ಪುಸ್ತಕಗಳು).

<ref>https://en.wikipedia.org/wiki/Social_psychology<ref> <ref>http://www.simplypsychology.org/social-psychology.html<ref> <ref>https://www.sciencedaily.com/terms/social_psychology_(psychology).htm<ref>

<ref>http://study.com/academy/lesson/what-is-social-psychology-definition-professions-in-the-field.html<ref>

  1. "ಸಾಮಾಜಿಕ ಮನೋವಿಜ್ಞಾನ". Retrieved 8 ಫೆಬ್ರುವರಿ 2017.  Check date values in: |access-date= (help)