ಸದಸ್ಯ:Shashwatiharish/sandbox

ವಿಕಿಪೀಡಿಯ ಇಂದ
Jump to navigation Jump to search

ಸುಬೋಧ್ ಘೋಷ್[ಬದಲಾಯಿಸಿ]

ಸುಬೋಧ್ ಘೋಷ್ ಒಬ್ಬ ಖ್ಯಾತ ಬಂಗಾಳಿ ಲೇಖಕ ಹಾಗು ಪತ್ರಕರ್ತ.ಕೊಲ್ಕತ್ತದಲ್ಲಿ ಆನಂದ ಬಾಜರ ಪಾತ್ರಿಕಾಯೆಂಬ ಪತ್ರಿಕೆಯಲ್ಲಿ ಇವರು ಪತ್ರಕರ್ತರಾಗಿದ್ದರು. ಭಾರತ್ ಪ್ರೇಮ್ ಕಥಾ ಇವರ ಅತಿ ಖ್ಯಾತವಾದ ಬರವಣಿಗೆ. ಇದು ಮಹಾಕಾವ್ಯಗಳಲ್ಲಿ ಬರುವ ಪಾತ್ರದಾರಿಗಳ ನಡುವೆಇರುವ ರೊಮಾಂಚನವನ್ನು ವ್ಯಕ್ತ ಪಡಿಸಿದ್ದಾರೆ.ಇದು ಬೆಂಗಾಲಿ ಸಾಹಿತ್ಯದಲ್ಲಿ ಅತಿ ಪ್ರಸಿದ್ಧವಾಗಿದೆ. ಇವರ ಬಹಳಾ ಕಥೆಗಳು ಭಾರತೀಯ ಸಿನಿಮಾಗಳಲ್ಲಿ ಅತ್ತ್ಯುತ್ರುಷ್ಟವಾಗಿದೆ. ಮುಖ್ಯವಾಗಿ ರಿಥ್ವಿಕ್ ಘಟಕ್ ಅವರ ಅಜಂತ್ರಿಕ್ ಹಾಗು ಬಿಮಲ್ ರಾಯ್ ಅವರ ಸುಜಾತ. ಇಂದೂ ಸಹ ಚಲನಚಿತ್ರನವರು ಸೂಕ್ತ ಕಥಾವಸ್ತುವಿಗೆ ಇವರ ಕಥೆಗಳನ್ನು ಹುಡುಕುತ್ತಾರೆ. ಬಿಮಲ್ ರಾಯ್ ಅವರ ಸುಜಾತ ಹಾಗು ಗುಲ್ಜಾರ್ ಅವರ ಇಜ಼್ಜತ್ ಎಂಬ ಪ್ರಮೂಖ ಸಿನಿಮಾಗಳಿಗೆ, ಇವರಿಗೆ ಫಿಲ್ಮ್ ಫೇರ್ ಪ್ರಶಸ್ತಿಗಳು ಎಂಬ ಸಂಭ್ರಮದಲ್ಲಿ ಅತ್ತ್ಯುತ್ತಮ ಕಥೆಯ ಪ್ರಶಸ್ತಿಯು ದೊರಕಿತು.

ಆರಂಭಿಕ ಜೀವನ ಹಾಗು ವಿದ್ಯಾಭ್ಯಾಸ[ಬದಲಾಯಿಸಿ]

ಇವರು ೧೪ನೇ ಸೆಪ್ಟೆಂಬರ್ ೧೯೦೯ ರಂದು ಹಜಾರಿಬಾಗ್, ಝಾರ್ಖಂಡ್‌ನಲ್ಲಿ ಜನಿಸಿದರು. ಇವರು ಸಂತ ಕೊಲುಂಬಿಯಾ ಕಾಲೇಜಿನಲ್ಲಿ ಓದಿದರು. ಇವರು ವಿಧ್ಯಾಭ್ಯಾಸವನ್ನು ಖ್ಯಾತವಾದ ತತ್ರಜ್ನಾನಿ ಹಾಗು ವಿದ್ವಾಂನರಾದ ಮಹೇಶ ಚಂದ್ರ ಘೋಷ್'ರ ಕೆಳಗೆ ಮುಂದುವರಿಸಿದರು.

ಸಾಹಿತ್ಯ[ಬದಲಾಯಿಸಿ]

ಫ಼ಾಸಿಲ್ ಅಂತಹ ಕಥೆಗಳ ನಂತರ ಇವರು ಬಹಳ ಜನಪ್ರಿಯರಾದರು. ಇದಾದ ಮೇಲೆ ಅವರು ತರಹ ತರಹದ ಕಥೆಗಳನ್ನು ಬರೆಯಲು ಆರಂಭಿಸಿದರು. ಭಾರತ್ ಪ್ರೇಮ್ ಕಥೆಯು ಶಾಶ್ವತವಾದ ಪ್ರೇಮ ಕಥೆಗಳನ್ನು ತೋರಿಸಿತು. ಇವರು ಬರೆದ ಕಿಂಗ್ಬದನ್ತಿರ್ ದೇಶೆ ಎಂಬ ಕಥೆಯು ನಿಜವಾಗಿಯೂ ನೆಡೆದಿದೆ ಎಂದು ಜನ ನಂಬಿದ್ದರು. ಈ ಕಥೆಯು ಸ್ಥಳೀಯ ಪುರಾಣದ ಮೇಲೆ ಬೆಳಕು ಬೀರುತ್ತದೆ.ಇವರಿಗೆ ಆದಿವಾಸಿಗಳು ಎಂಬ ಬುಡಕಟ್ಟಿನದ ಜೀವಾನದ ಬಗ್ಗೆ ಹಾಗು ಐತಿಹಾಸದ ಬಗ್ಗೆ ಬಹಳ ಜ್ನಾನವಿತ್ತು. ಪ್ರದೀಪ್ ಭಟ್ಟಚಾರ್ಯ್ಯ ಅವರು ಭಾರತ್ ಪ್ರೇಮ್ ಕಥಾವನ್ನು ಆಂಗ್ಲ ಭಾಷೆಗೆ ಲವ್ ಸ್ಟೋರಿಸ್ ಫ಼್ರೊಮ್ ಮಹಾಭಾರತ ಎಂಬ ಪುಸ್ತಕದ ಮೂಲಕ ಅನುವಾದಿಸಿದ್ದಾರೆ. ಇವರ ಹೊಉಸ ಕಂಬಸ್ಟಿಬಲ್ (ಜತೋಗ್ರಿಹದ ಆಂಗ್ಲ ಅನುವಾದ), ಸುಧೀರ್ ಕಕ್ಕ್ರ್ ಅವರ ಇನ್ಡಿಯನ್ ಲವ ಸ್ಟೋರಿಸ್ನಲ್ಲಿ ಒಂದು ಪ್ರಮುಖ ಪಾತ್ರಗಳಸಿದೆ.

ಸಾಹಿತ್ಯ ಕ್ರುತಿಗಳು[ಬದಲಾಯಿಸಿ]

ಇವರ ಕಥೆಗಳು ಶಾಲಾ ಪಠ್ಯ ಕ್ರಮದಲ್ಲಿ ಬಂಗಾಳಿ ಸಾಹಿತ್ಯದ ಭಾಗದಿಲ್ಲಿ ಪಶ್ಚಿಮ ಬಂಗಾಳ ಹಾಗು ಬಾಂಗ್ಲಾದೇಶ'ನಲ್ಲಿ ಅನುಸರಿಸಿಕೊಂಡಿದ್ದರು.

ಕಾದಂಬರಿಗಳು[ಬದಲಾಯಿಸಿ]

 • ತಿಲನ್ಜೋಲಿ
 • ಗಂಗೋತ್ರಿ
 • ತ್ರಿಜ್ಮ
 • ಪ್ರೇಯೊಹಯ್
 • ಸತ್ಕಿಯ
 • ಸುಜಾತ
 • ಸುನೋ ಬೊರೊನಾರಿ
 • ಬೊಸೊಂತೊ ತಿಲೊಕ್
 • ಜಿಯವೊರ್ಲಿ
 • ಬಾಗ್ದತ್ತ

ಕಥೆ ಪುಸ್ತಕ[ಬದಲಾಯಿಸಿ]

 • ಫ಼ಾಸಿಲ್
 • ಪರಶುರಾಮೆರ್ ಕುಥಾರ್
 • ಗೊತ್ರಾನ್ತಾರ್
 • ಸುಕ್ಲವಿಶಾರ್
 • ಗ್ರಾಮ್ ಜಮುನಾ
 • ಜತುಗ್ರಿಹೊ
 • ಮೊನ್ ವ್ರಮರ್
 • ರ್ಥಿಭಿಜುರಿ
 • ಕುಸುಮೇಶು
 • ಭಾರತ್ ಪ್ರೆಮ್ ಕಥಾ

ಬೇರೆ[ಬದಲಾಯಿಸಿ]

 • ಭಾರತೀಯೊ ಫ಼ೊಉಜೆರ್ ಇತಿಹಾಶ್
 • ಕಿಂಗ್ಬೊದಾಂತಿರ್ ದೇಶೆ
 • ಅಮ್ರಿತೊಪೊತೊಜಾತ್ರಿ

ಪ್ರಸಿದ್ಧ ಕಥೆಗಳು[ಬದಲಾಯಿಸಿ]

 • ಬಹುರುಪಿ
 • ಓಲಿಕ್
 • ಸ್ವಾಶನ್ಚಂಪಾ
 • ಓರ್ಕಿಡ್
 • ಜೊತುಗ್ರಿಹ
 • ಬಾರ್ಬಾಧು
 • ಚತುರ್ಭುಜ್ ಕ್ಲಬ್
 • ಥೋಗಿನಿ
 • ಫ಼ೋಸಿಲ್ಲ್
 • ಪೊಲಾಶೇರ್ ನೇಶ
 • ಅಬಿಶ್ಕರ್
 • ಅಜಂತ್ರಿಕ್
 • ಶಾಕ್ ಥೆರಪಿ
 • ಸುಪ್ರಿಯಾ
 • ಪುಶ್ಪಕೀತ್
 • ತೀನ್ ಓದ್ಧೇ
 • ರಾತೇರ್ ಪಾಖಿ
 • ಸುಂದರಾಮ್
 • ಶುಕ್ಲಾವಿಶಾರ್
 • ಕೊಟೇಶನ್
 • ಚತುರ್ಥ ಪನಿಪಥೆರ್ ಜುದ್ಧ
 • ಮೊನೊಬಸೀತ
 • ಲಘು ಅರನಾಯಕ್
 • ಜಲ್ ರಾಖ್ಹೋಸ್
 • ಕ್ಯಕ್ಟ್ಸ್
 • ಕ್ಯಲ್ಪುರಸ್
 • ಖಡ್ಡ್ಯೊತ್
 • ಪರಷುರಾಮೇರ್ ಕುಥಾರ್
 • ಸುಕ್ಲ ನಬೊಮಿ
 • ಪಿಛು ದಾಕೆ
 • ಗೆರೊಲ್ ಅಮಿಯೊ ವೆಲ್
 • ಭಟ್ ತಿಲಕ್ ರಾಯ್
 • ಗುಹಾಮನಬ್
 • ಒನಾತ್ಮಿಕ್

ರೂಪಾಂತರಗಳು[ಬದಲಾಯಿಸಿ]

ಘೋಷ್ ಅವರು ಬಂಗಾಳಿ ಜನರ ಮಧ್ಯೆ ಬಹಳ ಜನಪ್ರಿಯರಾಗಿದ್ದರು.ಆದರೆ ಹೊರ ಜಗತ್ತಿನ ಜನರಿಗೆ ಇವರ ಬಗ್ಗೆ ತಿಳುವಳಿಕೆ ಇರಲ್ಲಿಲ್ಲ.ಹಿಂದಿ ಭಾಷೆಯ ಚಲನಚಿತ್ರಗಳು ಇವರನ್ನು ಬೆಳಕಿಗೆ ತಂದಿತು. ಇವರ ಕಥೆಗಳನ್ನು ಬಂಗಾಳಿ ಚಲನಚಿತ್ರಗಳಲ್ಲಿಯೂ ಬಳಸಲಾಗಿದೆ. ಉದಯೆರ್ ಪಾಥೆ (೧೯೪೪) ಬಿಡುಗಡೆ ಆದಮೇಲೆ, ಬಿಮಲ್ ರಾಯ್ ಅವರು ಫ಼ಾಸಿಲ್ಲ್ ಎಂಬ ಪುಸ್ತಕವನ್ನು ಅನ್ಜನ್ಗರ್ಹ್ ಎಂಬ ಚಲನಚಿತ್ರವನ್ನು ೧೯೪೮'ರಲ್ಲಿ ನಿರ್ದೇಶಿಸಿದರು. ಈ ಕಥೆಯು ಒಂದು ರಾಜಕೀಯ ನಾಟಕ.ಮುಂದೆ ೧೯೭೧ ರಲ್ಲಿ, ಮ್ರಿನಾಲ್ ಸೇನ್ ಅವರು ಗೊತ್ರಾನ್ತಾರ್ ಎಂಬ ಪುಸ್ತಕವನ್ನು ತೆಗೆದುಕೊಂಡು ಹಿಂದಿಯಲ್ಲಿ ಏಕ್ ಅಧೂರಿ ಕಹಾನಿ ಎಂಬ ಚಲನಚಿತ್ರವನ್ನು ನಿರ್ದೇಶಿಸಿದರು. ತಾಪನ್ ಸಿನ್ಹಾ ಅವರು ಅದೇ ಶೀರ್ಷಿಕೆಯಿಂದ ಇನ್ನೊಂದು ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರವು ಜಾತುಗ್ರಿಹ ಎಂಬ ಪುಸ್ತಕದ ಮೇಲೆ ಆಧಾರವಾಗಿತ್ತು. ರಿಥ್ವಿಕ್ ಘಟಕ್ ಅವರ ಅಜಂತ್ರಿಕ್, ಸುಜಾತ ಎಂಬ ಕಥೆಯ ಮೇಲೆ ಆಧಾರವಾಗಿತ್ತು. ಈ ಚಿತ್ರ ಘೋಷ್‌ರನ್ನು ಬೆಳೆಕಿಗೆ ತಂದಿತು. ಸುನಿಲ್ ದತ್ ಹಾಗು ನೂತನ್ ಈ ಚಿತ್ರದ ಅಭೀನೇತ್ರರಾಗಿದ್ದರು. ಇದು ಒಬ್ಬ ಬ್ರಾಮ್ಹಣ ಹುಡುಗ ಹಾಗು ಕೆಳ ಜಾತಿಯ ಹುಡುಗಿಯ ನಡುವೆ ಇರುವ ಪ್ರೇಮ ಕಥೆ. ಈ ಚಿತ್ರಕ್ಕೆ, ಘೋಷ್ ಅವರಿಗೆ ಫ಼ಿಲ್ಮ್ರ್ ಫ಼ೆರ್ ಪ್ರಶಸ್ತಿಗಳಲ್ಲಿ ಅತ್ತ್ಯುತ್ತಮ ಕಥೆಯ ಭಾಗದಲ್ಲಿ ಪ್ರಶಸ್ತಿ ದೊರಕಿತು. ಎರಡನೇ ಬಾರಿ ಇದೇ ಪ್ರಶಸ್ತಿ ಗುಲ್ಜಾರ್ ಅವರ ಇಜ಼್ಜತ್ ಅಂಬ ಚಲನಚಿತ್ರಕ್ಕೆ ದೊರಕಿತು. ಇದು ಜಾತುಗ್ರಿಹೊ ಕಥೆಯ ಮೇಲೆ ಆಧಾರವಾಗಿತ್ತು. ಇದೆ ಕಥೆಯನ್ನು ಅವರ ದ್ ವೈಟಿನ್ಗ್ ರೂಮ್ ಚಲನಚಿತ್ರದ ಮೂಲಕ ಮೊಸ್ತಫ಼ ಸರ್ವಾರ್ ಫ಼ರೂಕಿ ಪ್ರದರ್ಶಿಸಿದರು. ಚಿತ್ತಚಕೋರ್ ಕಥೆಯ ಆಧಾರವಾಗಿ ಬಾಸು ಚಾಟರ್ಜಿಅವರು ಚಿಟ್ಛೋರ್ ಎಂಬ ಸಿನಿಮಾವನ್ನು ನಿರ್ದೇಶಿಸಿದರು.ಇತ್ತೀಚೆಗೆ ಬಿಡುಗಡೆಯಾದ ಸೂರಜ್ ಆರ್. ಬಾರ್ಜಾಟ್ಯ ಅವರ ಮೆ ಪ್ರೆಮ್ ಕಿ ದಿವಾನಿ ಹ್ಹೊಂ ಎಂಬ ಚಲನಚಿತ್ರವೂ ಇವರ ಕಲ್ಪನೆಯ ಮೇಲಾಧಾರಿತವ್ವಗಿದೆ.

ಹೊರಗಿನ ಸಂಪರ್ಕ[ಬದಲಾಯಿಸಿ]

ಉಲ್ಲೇಖನಗಳು[ಬದಲಾಯಿಸಿ]