ಸದಸ್ಯ:Sharanya R Urs

ವಿಕಿಪೀಡಿಯ ಇಂದ
Jump to navigation Jump to search
ಬಿಳಿಗಿರಿ ರಂಗನ ಬೆಟ್ಟ

ಪರಿಚಯ[ಬದಲಾಯಿಸಿ]

ಶರಣ್ಯ.ಆರ್.ಅರಸ್ ಎಂಬ ನಾನು ೧೨.೦೫.೨೦೦೦ ರಂದು ಜನಿಸಿದೆ. ನನ್ನ ಹುಟ್ಟೂರು ಬೆಂಗಳೂರು. ತಂದೆಯ ಹೆಸರು ರಂಗನಾಥ ರಾಜ್ ಅರಸ್ ಹಾಗೂ ತಾಯಿಯ ಹೆಸರು ವಿನುತಾ ಮಣಿ. ನನ್ನ ಅಪ್ಪ ಅಮ್ಮನಿಗೆ ಎರಡು ಮಕ್ಕಳು. ನಾನು ಎರಡನೆಯವಳು. ನನ್ನ ಅಣ್ಣನ ಹೆಸರು ಆರ್.ತೋಷಿತ್ ರಾಜ್ ಅರಸ್. ನನ್ನ ಸ್ವಂತ ಸ್ಥಳ ಮೈಸೂರು. ನನ್ನ ಎರಡು ಕಡೆಯ ಅಜ್ಜಂದಿರು 'ವಾಟಾಳು' ಎಂಬ ಹಳ್ಳಿಯಲ್ಲಿ ವಾಸವಾಗಿದ್ದರು. ನಂತರ ಬೆಂಗಳೂರಿಗೆ ತೆರಳಿದರು. ನಮ್ಮ ಹಳ್ಳಿಯಲ್ಲಿ ಹಲವಾರು ಗದ್ದೆ-ತೋಟಗಳು ಇದ್ದು ಅಲ್ಲಿ ಬಾಳೇಹಣ್ಣು, ಕಬ್ಬು, ಅರಿಶಿನ, ಅಡಿಕೆ, ಮೆಣಸು,ಬೆಂಡೆಕಾಯಿ, ಬದನೆಕಾಯಿ, ಟೊಮಾಟೋ ಮುಂತಾದ ಹಣ್ಣು ಮತ್ತು ತರಕಾರಿಗಳನ್ನು ಬಳೆಯಲಾಗಿದೆ.

ಈಗಲು ಸಹ ನಮ್ಮ ಸಂಬಂಧಿಕರು ಮೈಸೂರು ಹಾಗು ವಾಟಾಳಿನಲ್ಲಿ ವಾಸವಾಗಿದ್ದಾರೆ. ನಮ್ಮ ಜನಾಂಗ ಮೈಸೂರು ಅರಮನೆಯ ಮನೆತನದಿಂದ ಜನಿಸಿದೆ. ನಮ್ಮ ಕುಟುಂಬ ಹಾಸನದಲ್ಲಿ ಇರುವ 'ಅರಸಮ್ಮ' ದೇವಿಯ ದೇವಸ್ಥಾನವನ್ನು ಸ್ಥಾಪಿಸಿ ಇಂದಿಗೂ ಅದನ್ನು ಪೂಜಿಸುತ್ತಾ ಬಂದಿದ್ದಾರೆ.

ನಮ್ಮ ಕುಟುಂಬದ ಮನೆ ದೇವರು ಬಿಳಿಗಿರಿ ರಂಗನಾಥನ ಬೆಟ್ಟ ದಲ್ಲಿರುವ ರಂಗನಾಥ ಸ್ವಾಮಿ.


ಕ್ರೈಸ್ಟ್ ವಿಶ್ವವಿದ್ಯಾನಿಲಯ ಸಭಾಂಗಣ

ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ಬಾಲ್ಯದ ವಿದ್ಯಾಭ್ಯಾಸ ಬೆಂಗಲೂರಿನಲ್ಲಿ ನಡೆಯಿತು.

ಮೊದಲಿಗೆ, ನಾನು 'ಸ್ಮಿತಿ ಪ್ಲೇ ಶಾಲೆ' ಯಲ್ಲಿ ಶಿಕ್ಶಣವನ್ನು ಪ್ರಾರಂಭಿಸಿದೆ. ನಂತರ ನನ್ನ ಪ್ರಾಥಮಿಕ ಶಿಕ್ಶಣಕ್ಕೆ ಜೆ.ಎಸ್.ಎಸ್ ಪಬ್ಲಿಕ್ ಶಾಲೆ ಯಲ್ಲಿ ನೇಮಕವಾಯಿತು. ಒಂದನೆ ತರಗತಿಯಿಂದ ಹತ್ತನೆಯ ತರಗತಿವರೆಗೆ ಇದೇ ಶಾಲೆಯಲ್ಲಿ ನನ್ನ ಶಿಕ್ಶಣವನ್ನು ನಡೆಸಿದೆ. ಆ ಹತ್ತು ಸಾಲಿನ ಅನುಭವಗಳು ನನ್ನ ಜೀವನದ ಬಹಳ ಸ್ಮರಣೀಯವಾದ ಹಂತ.

ನಂತರ ಪಿ.ಯು ಶಿಕ್ಶಣದ ಜೀವನವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪ್ರಾರಂಭಿಸಿದೆ. ಮನೋವಿಜ್ಞಾನ,ರಾಜಕೀಯ ವಿಜ್ಞಾನ,ಸಮಾಜಶಾಸ್ತ್ರಅರ್ಥಶಾಸ್ತ್ರ ಇವೆಲ್ಲವೂ ಇರುವ ಸಂಯೋಜನೆಯನ್ನು ಆರಿಸಿಕೊಂಡೆನು.ಈ ಕಾಲೆಜಿನಲ್ಲಿ ಪಡೆದ ಅನುಭವ ನನಗೆ ಜೀವನದಲ್ಲಿ ಮುಂದುವರೆಯಲು ಬಹಳಷ್ಟು ಸಹಾಯ ಹಾಗು ಪ್ರೋತ್ಸಾಹ ನೀಡಿದೆ.

ನನ್ನ ಪದವಿ ಶಿಕ್ಶಣಕ್ಕೆ ಅದೇ ಕ್ಯಾಂಪಸ್ನಲ್ಲಿರುವ. ಕ್ರೈಸ್ಟ್ ವಿಶ್ವವಿದ್ಯಾನಿಲಯ - Christ (Deemed to be University)[೧]ದಲ್ಲಿ ಪ್ರವೇಶ ಮಾಡಲಾಯಿತು. ಪ್ರಸ್ತುತ ಸಂವಹನ ಮತ್ತು ಮಾಧ್ಯಮ, ಬ್ರಿಟಿಷ್ ಸಾಹಿತ್ಯ ಮತ್ತು ಮನೋವಿಜ್ಞಾನ ಶಿಕ್ಶಣವನ್ನು ನಡೆಸುತಿದ್ದೇನೆ. ಇದು ಮೂರು ವರ್ಷದ ಕೋರ್ಸ್ ಆಗಿದ್ದು ನಾನು ಒಂದು ಅದ್ಭುತವಾದ ಅನುಭವವನ್ನು ನಿರೀಕ್ಷಿಸುತ್ತಿದ್ದೇನೆ.


ಹವ್ಯಾಸಗಳು[ಬದಲಾಯಿಸಿ]

ನನ್ನ ಬಾಲ್ಯದಲ್ಲಿ ನಾನು ಹಲವಾರು ಚಟುವಟಿಕೆಗಳಲ್ಲಿ ತೊಡಗಿದ್ದೆ.

ಶಾಲೆಯಲ್ಲಿ ನನಗೆ ಹಲವಾರು ಕ್ರೀಡೆಗಳಲ್ಲಿ ಆಸಕ್ತಿ ಇದ್ದು ಥ್ರೋಬಾಲ್, ಬ್ಯಾಸ್ಕೆಟ್ಬಾಲ್,ಖೋ ಖೋ, ಕಬ್ಬಡಿ,ಅಥ್ಲೆಟಿಕ್ಸ್ ಮುಂತಾದ ತಂಡಗಳ ಭಾಗವಾಗಿದ್ದೆ.

ನಾನು ಭವಿಷ್ಯದಲ್ಲಿ ಕ್ರೀಡಾ ಪತ್ರಕರ್ತೆ (Sports Journalist)[೨] ಆಗಬೆಕೆಂದು ಬಹಳ ಆಸೆ ಹಾಗು ಆಸಕ್ತಿ ಇದೆ.

ನನಗೆ ಎಲ್ಲಾ ಕ್ರೀಡೆಗಳಲ್ಲೂ ಆಸಕ್ತಿಯಿದ್ದು, ಕ್ರಿಕೆಟ್ ಇವೆಲ್ಲದಕ್ಕಿಂತ ಅಚ್ಚುಮೆಚ್ಚು.ಆದ್ದರಿಂದ ಕ್ರಿಕೆಟ್ ಆಟಗಾರರನ್ನು ಬೇಟಿ ಮಾಡಿ ಅವರೊಡನೆ ಮಾತನಾಡಿ ಅವರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ಬಹಳ ಸಂತಸ ಅಡಗಿದೆ.

ನನಗೆ ಅಚ್ಚುಮೆಚ್ಛಿನ ಹವ್ಯಾಸವೆಂದರೆ ನೃತ್ಯ. ಸುಮಾರು ೫ ವರುಷದ ಹುಡುಗಿಯಾಗಿದ್ದಾಗ ನೃತ್ಯವನ್ನು ಕಲಿತು ಇಂದಿನವರೆಗೂ ಮುಂದುವರಿಸಿಕೊಂಡು ಬಂದಿದ್ದೇನೆ. ನಾನು ಮೊದಲು ನೃತ್ಯ ಕಲಿತ್ತದ್ದು 'Genesis' [೩]ಎಂಬ ಸ್ಟುಡಿಯೊದಲ್ಲಿ. ನನ್ನ ಮೊದಲು ಗುರುಗಳು ಪ್ರವೀಣ್ ಕುಮಾರ್ ಹಾಗು ರೋಹಿತ್ ಶೆಟ್ಟಿ. ಈ ಅಕಾಡೆಮಿಯಿಂದ ನನಗೆ ಬಹಳ ಅವಕಾಶಗಳು ದೊರಕಿವೆ.

ಸದ್ಯಕ್ಕೆ ಕಾಲೇಜಿನ ಸಾಂಸ್ಕೃತಿಕ ತಂಡ (ನೃತ್ಯ) ದಲ್ಲಿ ಆಯ್ಕೆಯಾಗಿದ್ದು ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದೇನೆ.

ನನ್ನ ನೃತ್ಯದಲ್ಲೂ ಸಹ ಇನಷ್ಟು ಸುಧಾರಣೆ ಮಾಡಿಕೊಂಡು ಇನ್ನೂ ಹೆಚ್ಚು ಕಲಿತು ಮುಂದುವರಿಯಬೇಕೆಂಬ ಆಸೆಯಿದೆ.


ಬೂಗೀ ವೂಗೀ (Boogie Woogie) ರಿಯಾಲಿಟಿ ಶೋ

ಸಾಧನೆಗಳು[ಬದಲಾಯಿಸಿ]

ಇಂದು ನನ್ನ ಹವ್ಯಾಸಗಳು ಬಲವಾಗಿ ಮುಂದುವರಿಯಲು ಆ ಕ್ಶೇತ್ರದಲ್ಲಿನ ಹಿಂದಿನ ಅನುಭವ ಹಾಗೂ ಸಾಧನೆಗಳು ಕಾರಣ.

೮ನೇ ತರಗತಿಯಲ್ಲಿ ನನ್ನ ಶಾಲೆಯ "ಸ್ಪೋರ್ಟ್ಸ್ ಗರ್ಲ್" ಎಂದು ನಾಮನಿರ್ದೇಶನ ಮಾಡಿ ಉಡುಗರೆ ಕೊಟ್ಟರು. ಅದಲ್ಲದೆ ೮ನೇ ತರಗತಿಯಲ್ಲೇ 'ಹೌಸ್ ಕ್ಯಾಪ್ಟನ್' ಮತ್ತು ೧೦ನೇ ತರಗತಿಯಲ್ಲಿ "ಸ್ಕೋಲ್ ಹೆಡ್ ಗರ್ಲ್' ಎಂದು ನನ್ನನ್ನು ಆಯ್ಕೆ ಮಾಡಲಾಗಿತ್ತು.

ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ 'Student Welfare Office(SWO)'[೪], ಎಂಬ ಸಂಸ್ಥೆಯ ಸದಸ್ಯೆಯಾಗಿ ಕಾಲೇಜಿನ ಎಲ್ಲಾ ಕರ್ಯಕ್ರಮಗಳಲ್ಲಿ ನನ್ನದೊಂದು ಕೈಯಿತ್ತು.

ಅಲ್ಲಿಯೂ ಸಹ ಕಾಲೇಜಿನ ಸಾಂಸ್ಕೃತಿಕ ತಂಡದ ಭಾಗವಾಗಿದ್ದು ಹಲವಾರು 'ಇಂಟರ್ ಕಾಲೇಜ್ ಸಮಾರಂಭ'ಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದೇನೆ. ಅದರಲ್ಲೂ ಸಹ ಎಂ.ಸಿ.ಸಿ ಕಾಲೇಜು ಸಮಾರಂಭದಲ್ಲಿ ಏಕವ್ಯಕ್ತಿಯಾಗಿ ಭಾಗವಹಿಸಿ ವಿಜೇತಗೊಂಡೆ.

೨೦೧೩ರಲ್ಲಿ "All India Dance Championship 2013"[೫] ಸ್ಪರ್ದೆಯಲ್ಲಿ ಭಾಗವಹಿಸಿ ೩ನೇ ಸ್ಥಾನವನ್ನು ಪಡೆದುಕೊಂಡೆ.

ಅದಲ್ಲದೆ 'ಕುಣಿಯೋಣು ಬಾರ' ಎಂಬ ಜ಼ೀ ಕನ್ನಡ ಚಾನಲ್ ರಿಯಾಲಿಟಿ ಶೋನಲ್ಲಿ ನಮ್ಮ ತಂಡ ನೃತ್ಯ ಪ್ರದರ್ಶನವನ್ನು ನೀಡಿದೆವು. ನಂತರ ಬಾಂಬೆಯಲ್ಲಿ ನಡೆದ " ಬೂಗೀ ವೂಗೀ"(Boogie Woogie)[೬] ರಿಯಾಲಿಟಿ ಶೋನಲ್ಲಿ ನಮ್ಮ ತಂಡ ಉದ್ಘಾಟನ ಪ್ರದರ್ಶನ ನೀಡಿದೆವು.

ಒಟ್ಟಿನಲ್ಲಿ ಹಲವಾರು ಅನುಭವ ಮತ್ತು ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡು ಮುಂದಿನ ಜೀವನಕ್ಕೆ ತಯಾರಾಗುತಿದ್ದೇನೆ.


ಉಲ್ಲೇಖನ[ಬದಲಾಯಿಸಿ]

{{Reflist}}

  1. https://en.wikipedia.org/wiki/Christ_University
  2. https://en.wikipedia.org/wiki/Sports_journalism
  3. https://www.justdial.com/Bangalore/Genesis-The-Fitness-Forum-Near-Sri-Raghavendra-Mutt-Jayanagar-5th-Block/080PJDYPBG43229_BZDET
  4. https://christuniversity.in/student-welfare-office
  5. https://www.facebook.com/All-India-Dance-Championship-2013-440631829351305/
  6. https://en.wikipedia.org/wiki/Boogie_Woogie_(TV_series)