ಸದಸ್ಯ:Sachidananda Hullahalli/ಡಿ. ಕೆ. ದಾತರ್
ಪಂಡಿತ ದಾಮೋದರ್ ಕೇಶವ್ ದಾತಾರ್ (೧೪ ಅಕ್ಟೋಬರ್ ೧೯೩೨ - ೧೦ ಅಕ್ಟೋಬರ್ ೨೦೧೮) ಇವರು ಡಿ.ಕೆ. ದಾತಾರ್ ಎಂದೇ ಜನಪ್ರಿಯರಾಗಿದ್ದರು. ಇವರು ಭಾರತೀಯ ಪಿಟೀಲು ವಾದಕರಾಗಿದ್ದರು. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕುರುಂದವಾಡ ನಲ್ಲಿಜನಿಸಿದರು. ಇವರ ಸಹೋದರ ನಾರಾಯಣರಾವ್ ಇವರನ್ನು ಸಂಗೀತಕ್ಕೆ ಪರಿಚಯಿಸಿದರು. ಇವರು ಮುಂಬೈನ ದಿಯೋಧರ್ ಸ್ಕೂಲ್ ಆಫ್ ಇಂಡಿಯನ್ ಮ್ಯೂಸಿಕ್‌ನಲ್ಲಿ ಕಲಿಸುತ್ತಿದ್ದ ಪಂಡಿತ ವಿಘ್ನೇಶ್ವರ ಶಾಸ್ತ್ರಿ ಯವರಿಂದ ಪಿಟೀಲು ಕಲಿತರು . ದಾತಾರ್ ತಮ್ಮ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿದ ನಂತರ ಸಂಗೀತವನ್ನೇ ವೃತ್ತಿಯನ್ನಾಗಿ ಮಾಡಿಕೂಂಡರು. ಇವರು ತಮ್ಮ ಸೋದರಮಾವ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಡಿವಿ ಪಲುಸ್ಕರ್ ರಿಂದ ಸಂಗೀತದ ಅಧ್ಯಯನ ಮಾಡಿದರು. ಪಲುಸ್ಕರ್‌ನಿಂದ ಪ್ರಭಾವಿತರಾದ ದಾತಾರ್ ತಮ್ಮ ಪಿಟೀಲು ವಾದನ ತಂತ್ರವನ್ನು ಗಾಯನದ ಶೈಲಿಗೆ ಹೊಂದಿಸಿಕೋಂಡರು ಮತ್ತು ಗ್ವಾಲಿಯರ್ ಘರಾನಾದ, ಖ್ಯಾಲ್ ಶೈಲಿಯ ಪ್ರಕಾರ ಪಿಟೀಲು ನುಡಿಸಿದರು. ಖ್ಯಾಲ್ ಜೊತೆಗೆ, ಅವರು ಭಜನ್, ಠುಮ್ರಿ ಮತ್ತು ನಾಟ್ಯ ಸಂಗೀತ ಶೈಲಿಗಳಲ್ಲಿ ಜನಪ್ರಿಯವಾಗಿ ವಾದಕರೆನಿಸಿದರು. ಹೊರ ದೇಶಗಳಾದ ಯುರೋಪ್, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಜಪಾನ್ ದೇಶಗಳಲಿಲ್ಲಿಸಂಗೀತ ಕಛೇರಿಗಳನ್ನು ನಡೆಸಿದರು. ಅವರು ಫಿಲ್ಮ್ಸ್ ಡಿವಿಷನ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದರು ಮತ್ತು ನಿಯಮಿತವಾಗಿ ವಿವಿಧ ಸಾಕ್ಷ್ಯಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಒದಗಿಸಿದರು. ಅವರು 1995 ರಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು ಮತ್ತು 2004 ರಲ್ಲಿ ಭಾರತದ 4 ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅವರು 10 ಅಕ್ಟೋಬರ್ 2018 ರಂದು ಮುಂಬೈನ ಗೋರೆಗಾಂವ್‌ನಲ್ಲಿರುವ ತಮ್ಮ ನಿವಾಸದಲ್ಲಿ ವೃದ್ಧಾಪ್ಯದಿಂದ ನಿಧನರಾದರು. [೧] [೨] [೩] [೪]
ಪ್ರಶಸ್ತಿಗಳು
[ಬದಲಾಯಿಸಿ]- 1995 - ಹಿಂದೂಸ್ತಾನಿ ಸಂಗೀತದಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
- 2004 - ಪದ್ಮಶ್ರೀ
ಉಲ್ಲೇಖಗಳು
[ಬದಲಾಯಿಸಿ]- ↑ "जगप्रसिद्ध व्हायोलिनवादक डी. के. दातार यांचे मुंबईत निधन" (in ಮರಾಠಿ). Sakal. 11 October 2018. Retrieved 12 February 2019.
- ↑ Dhaneshwar, Amarendra (12 October 2018). "Legendary violinist Pt D K Datar bids adieu". Afternoon DC. Retrieved 12 February 2019.
- ↑ Datar, Smita Dr. (14 October 2018). "दातारांच्या घरात..." (in ಮರಾಠಿ). Maharashtra Times. Retrieved 12 February 2019.
- ↑ "D K Datar". Sangeet Natak Akademi. 1995. Retrieved 12 February 2019.
ಟೆಂಪ್ಲೇಟು:Padma Shri Award Recipients in Art [[ವರ್ಗ:೨೦೧೮ ನಿಧನ]] [[ವರ್ಗ:೧೯೩೨ ಜನನ]] [[ವರ್ಗ:ಹಿಂದುಸ್ತಾನಿ ಸಂಗೀತ ವಾದ್ಯಗಳು]] [[ವರ್ಗ:ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದವರು]] [[ವರ್ಗ:Pages with unreviewed translations]]