ಸದಸ್ಯ:Rakshitha b kulal/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ. ಎಲ್. ಶರ್ಮ ಬಂಟಕಲ್ಲು

ಪರಿಚಯ[ಬದಲಾಯಿಸಿ]

ಕೆ. ಎಲ್. ಶರ್ಮರವರು ೧೯೧೯ ರಲ್ಲಿ ಜನಿಸಿದ ಇವರು ಬಂಟಕಲ್ಲಿನಲ್ಲಿ ನೆಲೆಸಿದ್ದರು. ಇವರು ಉಡುಪಿಯಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿರುವಾಗ ಎಸ್. ಯು. ಪಾಣಿಯಾಡಿ ಮತ್ತು ಸಾಂತ್ಯಾರು ಅನಂತ ಪದ್ಮನಾಭ ಭಟ್ಟರ ಸರಳ ಜೀವನ, ಭಾಷಣ, ರಾಷ್ಟ್ರ ಪ್ರೇಮ ಇವೆಲ್ಲಾವನ್ನು ಕಂಡು ಆಕರ್ಷಿತರಾದರು. ಪಾಣಿಯಾಡಿಯವರ ಹಿಂದ್ ಸ್ವರಾಜ್ ಎಂಬ ಕೃತಿಯ ಓದು ಅವರ ಸ್ವಾತಂತ್ರ್ಯ ಪ್ರೇಮವನ್ನು ಧೃಡಗೊಳಿಸಿತು. ಸತ್ಯಾರ್ಥ ಪ್ರಕಾಶ ಎಂಬ ಆರ್ಯ ಸಮಾಜದ ಕೃತಿಗಳು, ಗಳಗನಾಥರ ಸಾಹಿತ್ಯ ಕೃತಿಗಳು, ಅವರ ಸಂಸ್ಕೃತ ಅಧ್ಯಯನಗಳು, ಅವರಲ್ಲಿ ದೇಶ, ಧರ್ಮ, ಸಂಸ್ಕೃತಿಗಳ ಬಗ್ಗೆ ಗೌರವವನ್ನು ಮೂಡಿಸಿತು. ನೆಹರು ಮತ್ತು ಗಾಂಧೀಜಿಯವರು ಕಟಪಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಭಾಷಣದಿಂದ ಆಕರ್ಷಿತರಾದರು.

ಇವರು ರಾಷ್ಟ್ರೀಯ ಚಳುವಳಿಯ ಸಂದರ್ಭದಲ್ಲಿ ನಡೆಯುತ್ತಿದ್ದ ಸಭೆ, ಮೆರವಣಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ಮನೆಯವರಿಗೆ ತಿಳಿಸದೇ ಪಾಲ್ಗೊಳ್ಳುತ್ತಿದ್ದರು. ಇವರು ೧೯೩೦ - ೩೧ ರಲ್ಲಿ ಕಟಪಾಡಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಉಪ್ಪನ್ನು ತಯಾರಿಸಿ ಹಂಚಿದ ಉಪ್ಪನ್ನು ಕಾಪಾಡಿಕೊಂಡು ಬಂದಿದ್ದರು. ಪಾನ ವಿರೋಧ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು.

ಅವರು ಸಂಸ್ಕೃತ ಶಾಲೆಯ ಶಿಕ್ಷಕರ ವಿರೋಧದಿಂದ ಅವರ ಹುಟ್ಟೂರನ್ನು ತ್ಯಜಿಸಬೇಕಾಯಿತು. ಬಳ್ಳಾರಿ, ಹುಬ್ಬಳ್ಳಿ, ಅನಂತಪುರವನ್ನು ಸಂಚರಿಸಿ ಬೆಂಗಳೂರಿಗೆ ಬಂದರು. ಸಂಸ್ಕೃತ ಎಂಟ್ರನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರೂ ಹಿಂದಿ ಅಧ್ಯಯನವನ್ನು ಆರಂಭಿಸಿದರು. ಇವರಿಗೆ ಹಿಂದಿ ಪ್ರಚಾರಕರಾಗಿದ್ದ ಕೆ. ಆರ್. ಶ್ರೀಧರಮೂರ್ತಿ, ಕೆ. ಶ್ರೀನಿವಾಸ ರಾವ್ ಪರಿಚಯವಾದರು. ಎಮ್. ವಿ. ಶ್ರೀನಿವಾಸ ಮೂರ್ತಿಯವರ ಸ್ನೇಹವಾಯಿತು. ೧೯೪೦ ರಲ್ಲಿ ಕಾಂಗ್ರೆಸ್ ಸ್ವಯಂ ಸೇವಕರಾಗಿ ಪ್ರಜಾಪ್ರತಿನಧಿ ಚುನಾವಣೆಯ ಸಂದರ್ಭದಲ್ಲಿ ೨ ಮಾಸಗಳ ಕಾಲ ಕಾಂಗ್ರೆಸ್ ಆಫೀಸಿನಲ್ಲಿದ್ದರು.

ಹಲವು ತಿಂಗಳವರೆಗೆ ಕೋಟೆ ಖಾದಿ ಬಂಡಾರದಲ್ಲಿ ಉದ್ಯೋಗ ಮಾಡುತ್ತಿದ್ದಾಗ ಸರ್ದಾರ್ ಕೆ. ಎ. ವೆಂಕಟ ರಾಮಯ್ಯರವರ ಮಾರ್ಗದರ್ಶನ ದೊರೆಯಿತು. ೧೯೪೧ ರ ಹರಿಪುರ ಕಾಂಗ್ರೆಸ್ ಕಾಲದಲ್ಲಿ ಒಂದುವರೆ ತಿಂಗಳು ಸ್ವಯಂ ಸೇವಕರಾಗಿ ದುಡಿದರು. ಡಾ. ರಾಜೇಂದ್ರ ಬಾಬುರವರ ಭಾಷಣವನ್ನು ಆಲಿಸಿದ್ದರು. ಕೆ. ಜಿ. ಸತ್ಯ ನಾರಾಯಣ ಶೆಟ್ಟಿ ಅವರ ಜೊತೆಗಾರರಾಗಿದ್ದರು.

ಆಗಸ್ಟ್ ೧೦ ರಂದು ಅಪರಿಚಿತರು ಕಾಂಗ್ರೆಸ್ ಆಫೀಸಿಗೆ ಬಂದು ಬೆರಳಚ್ಚಿನ ಕಾರ್ಯಕ್ರಮ ಪಟ್ಟಿಯನ್ನು ತಂದು ಕೊಟ್ಟರು. ೧೪ ಅಂಶಗಳ ಯೋಜನೆಯನ್ನು ಹೊಂದಿದ್ದು ಅದನ್ನು ಕೂಡಲೇ ಮುದ್ರಿಸಿ ಹತ್ತಾರು ಪ್ರತಿ ಮಾಡಿ ಅದನ್ನು ಕಾಲೇಜಿನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿ ಸಭೆಯಲ್ಲಿ ನಾಯಕರಿಗೆ ನೀಡಿದರು.

ಉಲ್ಲೇಖಗಳು[ಬದಲಾಯಿಸಿ]