ಕಟಪಾಡಿ

ವಿಕಿಪೀಡಿಯ ಇಂದ
Jump to navigation Jump to search

ಕಟಪಾಡಿ ಉಡುಪಿಯ ಹತ್ತಿರದಲ್ಲಿ ಇರುವ ಒಂದು ಊರು. ಹಸಿರು ಗದ್ದೆಗಳು, ನದಿಗಳು ಮತ್ತು ಸುಂದರವಾದ ಸಮುದ್ರ ತೀರ ಇವೆಲ್ಲ ಸುತ್ತುವರಿದಿರುವ ಕಟಪಾಡಿ, ಶಂಕರಪುರದ ಮಲ್ಲಿಗೆ ಹೂವು ಮತ್ತು ಮಟ್ಟಿ ಗುಳ್ಳದಿದಂದ ವಿಖ್ಯಾತವಾಗಿದೆ. ಕಟಪಾಡಿಯಲ್ಲಿ ವಿವಿಧ ಧಾರ್ಮಿಕ ಪೂಜಾಸ್ಥಳಗಳಿವೆ. ಇವುಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ೧೨ ಶತಮಾನಗಳ ಇತಿಹಾಸವಿದೆ. ಶ್ರೀ ವೆಂಕಟರಮಣ ದೇವಸ್ಥಾನವು ಸುಮಾರು ೩ ಶತಮಾನಗಳ ಹಿಂದೆ ಪ್ರತಿಷ್ಟಿಸಲಾಯಿತು. ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವಿಶ್ವನಾಥ ಕ್ಷೇತ್ರ ಇತರ ದೇವಸ್ಥಾನಗಳು. ಈ ಎಲ್ಲ ದೇವಸ್ಥಾನಗಳಲ್ಲಿ ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಕಟಪಾಡಿಯಲ್ಲಿರುವ ಸೈಂಟ್ ವಿನ್ಸೆಂಟ್ ಡಿ ಪೌಲ ಚರ್ಚ್ ಸುಮಾರು ೬೦ ವರ್ಷಗಳಷ್ಟು ಹಳೆಯದು. ಇತ್ತೀಚಿಗೆ ೬೦ನೆ ವರ್ಷದ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಕಟಪಾಡಿಯಲ್ಲಿ ಸಿ.ಎಸ್.ಐ. ಯ ಕ್ರೈಸ್ತ ದೇವಾಲಯವು ಇದೆ.[೧]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕಟಪಾಡಿ&oldid=908330" ಇಂದ ಪಡೆಯಲ್ಪಟ್ಟಿದೆ