ಸದಸ್ಯ:REENU INFANCIA
ವೈಯಕ್ತಿಕ ಜೀವನ
[ಬದಲಾಯಿಸಿ]Bangalore Fort N-KA-B1.jpg
ನನ್ನ ಹೆಸರು ರೀನು ಇನ್ ಫಾನ್ಸಿಯಾ ಜೆ. ನಾನು ಮೇ ೭ನೇ ತಾರೀಕು ೧೯೯೯ ರಲ್ಲಿ ಬೆಂಗಳೂರಿನಲ್ಲಿ ಜನಿಸಿದೆನು. ನಾನು ಹುಟ್ಟಿ ಬೆಳೆದದ್ದು ಎಲ್ಲಾ ಬೆಂಗಳೂರಿನಲ್ಲೆ. ನನ್ನ ತಂದೆಯ ಹೆಸರು ಜೇಮ್ಸ್ ಆಂಟೋನಿ. ಇವರು ಪ್ರಸ್ತುತವಾಗಿ ಮೂಡೀಸ್ ಎಂಬ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ತಂದೆಗೆ ಸಂಗೀತದಲ್ಲಿ ಬಹು ಆಸಕ್ತಿ. ಈ ಕಾರಣದಿಂದಲೋ ಏನೋ ನನಗೂ ಸಂಗೀತದಲ್ಲಿ ಅಷ್ಟೇ ಆಸಕ್ತಿ.
ನನ್ನ ತಾಯಿಯ ಹೆಸರು ಸಗಾಯಮೇರಿ. ಇವರ ಬಗ್ಗೆ ಹೇಳಲು ಹೊರಟರೆ, ಸಾಲುವುದಿಲ್ಲವೇನೋ. ಏಕೆಂದರೆ ತಾಯಿ ಅಂದರೇನೆ ಹಾಗೆಯೇ. ಎಲ್ಲರ ಜೀವನದಲ್ಲೂ ತಾಯಿ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತಾಳೆ.ನನ್ನ ಜೀವನದಲ್ಲೂ ಹಾಗೆಯೇ. ನನಗೆ ಇಬ್ಬರು ಅಕ್ಕಂದಿರು. ಇಬ್ಬರೂ ನನಗೆ ಅಚ್ಚುಮೆಚ್ಚು. ನನ್ನನ್ನು ಎಲ್ಲಾ ಸಮಯದಲ್ಲೂ ಪ್ರೋತ್ಸಾಹಿಸುತ್ತಾರೆ. ನನ್ನ ಬೆನ್ನೆಲುಬಾಗಿ ನಿಂತಿರುತ್ತಾರೆ. ಹೀಗೆ ಹೇಳುತ್ತಲೇ ಹೋಗಬಹುದು.
ಶಿಕ್ಷಣ
[ಬದಲಾಯಿಸಿ]ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವನ್ನು ಸೈಂಟ್ ಮೈಕಲ್ಸ್ ಆಂಗ್ಲ ಶಾಲೆಯಲ್ಲಿ ಮಾಡಿದೆನು. ಶಾಲೆಯಲ್ಲಿ ಓದುತ್ತಿರುವಾಗ ಎಲ್ಲಾ ಕಾರ್ಯಕ್ರಮಗಳ್ಳಲೂ ಮುಂದೂಡುತ್ತಿದ್ದೆ. ಅದರಲ್ಲೂ ಕ್ರೀಡೆಗಳ್ಳಲ್ಲಿ ನನಗೆ ಹೆಚ್ಚು ಆಸಕ್ತಿ ಇತ್ತು. ತುಂಬಾ ಆಸಕ್ತಿಯಿಂದ ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡೆಗಳ್ಳಲ್ಲಿ ಪಾಲ್ಗೊಳ್ಳುತ್ತಿದ್ದೆ.
ನನ್ನ ಪಿ.ಯು.ಶಿಕ್ಷಣವನ್ನು ಎನ್.ಎಮ್.ಕೆ.ಆರ್.ವಿ ಮಹಿಳಾ ಕಾಲೇಜಿನಲ್ಲಿ ಮಾಡಿದೆನು. Christ University.jpg thumb ನಂತರ ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರಥಮ ಬಿಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.
ನನ್ನ ಮೊದಲ ಪ್ರೀತಿ ಎಂದಿಗೂ ಆ ದೇವನೇ. ನನಗೆ ಹೇಗೆ ಪ್ರಾರ್ಥಿಸುವುದು, ಏನು ಪ್ರಾರ್ಥಿಸುವುದು ಎಂದು ಗೊತ್ತಿಲ್ಲ. ಆದರೆ ಏನು ಮಾಡಿದರೂ ಪೂರ್ತಿ ಮನಸ್ಸಿನಿಂದ ಮಾಡಬೇಕೆಂದು ಮಾತ್ರ ತಿಳಿದಿದೆ. ಹಾಗೆಯೇ ನಾನು ಮಾಡುವ ಪ್ರಾರ್ಥನೆ ಕೂಡ. ಹೌದು !!! ನನಗೆ ದೇವನೆಂದರೆ ಬಹಳ ಇಷ್ಟ. ಅದರಲ್ಲೂ ನನ್ನ ತಂದೆಯನ್ನು (ದೇವರು) ಆರಾಧಿಸುವುದು, ಅದರಲ್ಲೂ ಸಂಗೀತದ ಮೂಲಕ ಅವನನ್ನು ಆರಾಧಿಸುವುದೆಂದರೆ ಎಲ್ಲಿಲ್ಲದ ಪ್ರೀತಿ. ಈ ಪ್ರೀತಿಯ ಕಾರಣದಿಂದಲೇ ನಾನು ನನ್ನನ್ನು ಅವನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಹೇಗೆಂದರೆ, "ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ಡೀ ಪೌಲ್". ಇದು ಕ್ರೈಸ್ತ ಧರ್ಮದಲ್ಲಿ ಬಡವರಿಗೆ ಸಹಾಯ ಮಾಡಲು ಇರುವ ಒಂದು ಗುಂಪು. ಆದರೆ ಈ ಗುಂಪಿನ ಮೂಲಕ ನಾವು ಕ್ರೈಸ್ತ ಬಡವ ಭಾಂಧವ್ಯದವರಿಗೆ ಮಾತ್ರವಲ್ಲದೆ ಇತರ ಧರ್ಮದವರಿಗೂ ಸಹಾಯ ಮಾಡುತ್ತೇವೆ. ಇಲ್ಲಿ ನನ್ನ ಕೆಲಸವೇನೆಂದರೆ, ಯುವ ಜನಾಂಗದವರನ್ನು ಈ ಕಾರ್ಯದಲ್ಲಿ ತೊಡಗಿಸಲು ಪ್ರೇರೇಪಿಸುವುದು ಮತ್ತು ಅವರ ಸಲಹೆಗಳನ್ನು ಮುಂದೆ ತಂದು ಅದನ್ನು ಅಂಗೀಕರಿಸುವುದು.
ಹವ್ಯಾಸ
[ಬದಲಾಯಿಸಿ]GClef.svg thumb ನನಗೆ ಮತ್ತೊಂದು ಪ್ರೀತಿ ಇದೆ. ಅದೇ ಸಂಗೀತ. ನಾನು ಮೊದಲೇ ಹೇಳಿದ ಹಾಗೆ ನನಗೆ ಸಂಗೀತವೆಂದರೆ ತುಂಬಾ ಪ್ರೀತಿ. ಅದೇನೋ ಗೊತ್ತಿಲ್ಲ; ಇಂತಹ ಸುಂದರವಾದ ಭಾಂಧವ್ಯವನ್ನು ನನಗೂ ಸಂಗೀತಕ್ಕೂ ಆ ದೇವನು ಕಲ್ಪಿಸಿದ್ದಾನೆ. ಈ ಕೊಡುಗೆಯನ್ನು ನೀಡಿದ ದೇವನಿಗೆ ನಾನು ಎಂದಿಗೂ ಅವನಿಗೆ ಋಣಿಯಾಗಿರುತ್ತೇನೆ. ಅದೇನು ಸಂಬಂಧವೋ ಏನೋ ನಾ ಅರಿಯೇ. ಏಕೆಂದರೆ ನನ್ನ ಪ್ರಕಾರ ಸಂಗೀತಕ್ಕೆ ನಮ್ಮ ಗುಣವನ್ನು ತೋರಿಸುವ ಮತ್ತು ಗುಣವನ್ನು ಬದಲಾಯಿಸುವ ಶಕ್ತಿ ಇದೆ. ಅದರಲ್ಲೂ ನನ್ನ ಸಂತಸವನ್ನು ಕೊಂಡಾಡಲು, ದುಃಖವನ್ನು ಮರೆಯಲು ನನ್ನ ಜೊತೆ ಎಂದಿಗೂ ಇರುವುದು ಎರಡು ವಿಷಯಗಳು. ಒಂದು ಆ ದೇವನು,ಮತ್ತೊಂದು ಸಂಗೀತ.
ನನ್ನನ್ನು ನಾನು ಸಂಗೀತದಲ್ಲಿ ತೊಡಗಿಸಿಕೊಳ್ಳಲ್ಲು ಚಿಕ್ಕಂದಿನಿಂದಲೇ ಬಹಳ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ. ಆದರೆ ಕ್ರೈಸ್ಟ್ ಯೂನಿವರ್ಸಿಟಿಯ ಓಪನ್ ಇಲೆಕ್ಟೀವ್ ಕೋರ್ಸಿನ ಮೂಲಕ ನನ್ನ ಈ ಕನಸು ನನಸಾಯಿತು. ಇಲ್ಲಿಂದಲೇ ನನ್ನ ಸಂಗೀತದ ಪಯಣ ತೊಡಗಿದೆ. ಇದರಲ್ಲಿ ಇನ್ನು ಹೆಚ್ಚು ಗಮನಹರಿಸಿ, ನನಗೆ ಸಂಗೀತದ ಮೇಲಿರುವ ಪ್ರೀತಿಯನ್ನು ಇನ್ನು ಹೆಚ್ಚಿಸಿಕೊಳ್ಳುತ್ತೇನೆ.
ನಮ್ಮ ಮನೆಯಲ್ಲಿ ಒಂದು ಮುದ್ದಾದ ನಾಯಿ ಇತ್ತು. ಹೆಸರು ಸೋನು ಅಂತ. ಆದರೆ ಅದು ಈಗ ನಮಲ್ಲಿ ಇಲ್ಲ. ಏಕೆಂದರೆ ಕಳೆದ ವರ್ಷ ದಿಢೀರ್ ಖಾಯಿಲೆಯಿಂದ ಬಳಲುತ್ತಿತ್ತು. ಆದ್ದರಿಂದ ಏಗ ಅದು ನಮ್ಮಲ್ಲಿ ಇಲ್ಲ. ಕಳೆದ ಹನ್ನೆರಡು ವರ್ಷಗಳಿಂದ ನಮ್ಮಲ್ಲಿ ಒಬ್ಬಳಾಗಿ ಇತ್ತು. ಅದು ಬಿಟ್ಟು ಹೋದ ಕ್ಷಣದಿಂದ ಇಂದಿಗೂ ನಮ್ಮ ಮನೆಯಲ್ಲಿ ಅದನ್ನು ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿಯೇ ನಮ್ಮ ಮನೆಯಲ್ಲಿ ಇನ್ನೊಂದು ನಾಯಿಯನ್ನು ತರಲು ಇಂದಿಗೂ ಯಾರೂ ಒಪ್ಪುತ್ತಿಲ್ಲ.
ಜೀವನದ ಗುರಿ
[ಬದಲಾಯಿಸಿ]ನನಗೆ ಮತ್ತೊಂದು ಆಸೆ ಇದೆ.Sanjukta-ips-305-x-182 061015035229.jpg thumb
ಅದು ಐ.ಪಿ.ಎಸ್. ಆಫೀಸರ್ ಆಗಲು. ಹೌದು, ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಬಲು ಕಾತುರದಿಂದ ಕಾಯುತಿದ್ದೇನೆ. ನಮ್ಮ ಈ ದೇಶದ ಪರಿಸ್ಥಿತಿಯನ್ನು ಕಂಡು ನನಗೆ ಈ ಹುದ್ದೆಯನ್ನು ಹೇಗಾದರೂ ಮಾಡಿ ಗಳಿಸಬೇಕೆಂಬ ಹುಚ್ಚು ಎಂದರೂ ತಪ್ಪಿಲ್ಲ. ನನಗೆ ಈ ಹುದ್ದೆಯಲ್ಲಿ ಪ್ರೇರಣೆ ಮೂಡಿಸಿದವರು ಮೈಸೂರಿನ ಸಬ್ ಇನ್ಸ್ ಪೆಕ್ಟ ರ್ ರವಿ ಕುಮಾರ್ ರವರು. ಈ ಕನಸನ್ನು ನನಸಾಗಿಸಲು ನನ್ನನ್ನು, ಶಾಲೆಯಲ್ಲಿ ಓದುತ್ತಿರುವಾಗನಿಂದಲೇ ನನ್ನ ಶಿಕ್ಷಕರು, ಸ್ನೇಹಿತರು, ಮನೆಯವರೆಲ್ಲರೂ ಪ್ರೋತ್ಸಾಹಿಸಲು ಶುರು ಮಾಡಿದರು, ಇಂದಿಗೂ ಅದನ್ನು ಮುಂದುವರಿಸುತ್ತಿದ್ದಾರೆ. ನನ್ನ ಈ ಕನಸನ್ನು ನನಸಾಗಿಸಲು ನಾನೂ ಶ್ರಮ ಪಡುವೆನು.
ಧನ್ಯವಾದಗಳು