ಸದಸ್ಯ:Preetha738/WEP 2018-19

ವಿಕಿಪೀಡಿಯ ಇಂದ
Jump to navigation Jump to search

ಜನನ[ಬದಲಾಯಿಸಿ]

ವಿಜಯ್ ಲಕ್ಷ್ಮಣ್ ಮಂಜ್ರೇಕರ್ ಅವರನ್ನು ವಿಜಯ್ ಮಂಜ್ರೇಕರ್ ಎಂದು ಸಾಮಾನ್ಯವಾಗಿ ಕರೆಯುತ್ತಾರೆ .ಅವರು ೨೬ ನೇ ಸೆಪ್ಟೆಂಬರ್ ೧೯೩೧ ರಂದು ಬಾಂಬೈ/ಮುಂಬೈ, ಮಹಾರಾಷ್ಟ್ರ, ಭಾರತದಲ್ಲಿ ಜನಿಸಿದರು.[೧]

ವೃತ್ತಿಜೀವನ[ಬದಲಾಯಿಸಿ]

ವಿಜಯ್ ಮಂಜ್ರೇಕರವರು ೫೫ ಟೆಸ್ಟ್ ಪಂದ್ಯಗಳನ್ನು ಆಡಿದ ಮಾಜಿ ಭಾರತೀಯ ಕ್ರಿಕೆಟಿಗರಾಗಿದ್ದರು. ಅವರು ಬಲಗೈ ಬ್ಯಾಟ್ಸ್ಮನ್. ಅವರ ಪೀಳಿಗೆಯ ಬೌಲರ್ಗಳ ವೇಗವನ್ನು ಎದುರಿಸುವಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ.ಕೆಲವೊಮ್ಮೆ ಅವರು ಆಫ್ ಸ್ಪಿನ್ ಬೌಲರ್ ಆಗಿದ್ದರು. ಅವರು ೬ ಸ್ಟಂಪಿಂಗ್ಗಳೊಂದಿಗೆ ಸಾಂದರ್ಭಿಕ ವಿಕೆಟ್ ಕೀಪರ್ ಆಗಿದ್ದರು. ಅವರ ಚೊಚ್ಚಲ ಪಂದ್ಯವು ೧೯೫೧ ರಲ್ಲಿ ಕಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವಾಗಿತ್ತು. ಅವರು ಇನ್ನಿಂಗ್ಸ್ನಲ್ಲಿ ೨೨೨ ರನ್ಗಳನ್ನು ಹಜ಼ಾರ್ ರವರೊಂದಿಗೆ ಗಳಿಸಿ ತಾನು ಒಬ್ಬ ಉತ್ತಮ ಆಟಗಾರರು ಎಂದು ತೋರಿಸಿದರು. ರಾಂಜಿ ಟ್ರೋಫಿಯಲ್ಲಿ ಅವರು ೬ ತಂಡಗಳಿಗೆ ಆಡಿದರು. ಆರು ವಿವಿಧ ತಂಡಗಳು ಬಾಂಬೈ, ಬೆಂಗಾಲ್, ಆಂಧ್ರ, ಉತ್ತರ್ ಪ್ರದೇಶ್, ರಾಜಸ್ಥಾನ್ ಮತ್ತು ಮಹಾರಾಷ್ಟ್ರಗಳಾಗಿವೆ

ಸಾಧನೆಗಳು[ಬದಲಾಯಿಸಿ]

alt=ಅರ್ಜುನ ಪ್ರಶಸ್ತಿ|thumb|ಅರ್ಜುನ ಪ್ರಶಸ್ತಿ ವಿಜಯ್ ಮಂಜ್ರೇಕರವರು ಅತ್ಯುತ್ತಮ ಸರಣಿಯು ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ ಬಂದಿತು ೧೯೬೧-೬೨ ರಲ್ಲಿ ಅವರು ೫೮೬ ರನ್ಗಳನ್ನು ಮಾಡಿದರು. ೧೯೬೪-೬೫ರಲ್ಲಿ ಇನ್ನೊಬ್ಬ ಗಮನಾರ್ಹ ಪ್ರದರ್ಶನವೆಂದರೆ ೫೯ ಮತ್ತು ೩೯ ರನ್ಗಳ ಇನ್ನಿಂಗ್ಸ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಗೆಲುವು ಸಾಧಿಸಲು ಭಾರತಕ್ಕೆ ನೆರವಾಯಿತು.ಟೆಸ್ಟ್ ಪಂದ್ಯಗಳಲ್ಲಿ ಯಾವುದೇ ಏಕೈಕ ಸಿಕ್ಸರ್ ಅನ್ನು ಹೊಡೆಯದೆಯೇ ಹೆಚ್ಚು ರನ್ ಗಳಿಸಿದ (೩೨೦೬) ದಾಖಲೆಯನ್ನು ಅವರು ಹೊಂದಿದ್ದರು. ಉತ್ತಮ ಆಫ್ ಸ್ಪಿನ್ನರ್ ಇಎಎಸ್ ಪ್ರಸನ್ನ ಒಮ್ಮೆ ಹೇಳಿದರು," ನಾನು ಗಾವಸ್ಕರ್ ಮತ್ತು ವಿಶ್ವನಾಥ್ ಒಟ್ಟಾಗಿ ವಿಜೆಯ್ ಮಂಜ್ರೇಕರ್ ಎಂದು ಹೇಳಳು ಯಾವುದೇ ಹಿಂಜರಿಯುತ್ತಿರಲಿಲ್ಲ".ತನ್ನ ಅಸಾಧಾರಣ ಬ್ಯಾಟಿಂಗ್ ಕೌಶಲ್ಯಕ್ಕಾಗಿ ಅವರು ೧೯೬೫ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದರು.

ವಿಜಯ್ ಮಂಜ್ರೇಕರ್ ಅವರ ಗಮನಾರ್ಹ ಕುಟುಂಬದವರು[ಬದಲಾಯಿಸಿ]

ವಿಜಯ್ ಮಂಜ್ರೇಕರವರು ತಮ್ಮಂತೆಯೇ ಒಂದೇ ವೃತ್ತಿಜೀವನವನ್ನು ಹೊಂದಿದ್ದ ಸಂಜಯ್ ಮಂಜ್ರೇಕರ್ ಅವರ ತಂದೆ.[೨] ಅವರ ಮಾವ ದತ್ತಾರಾಮ್ ಧರ್ಮಾಜಿ ಹಿಂಡಲೆಕರ್ ಸಹ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿ ೧೯೩೬-೪೬ರ ನಡುವೆ ಭಾರತಕ್ಕೆ ೪ ಟೆಸ್ಟ್ ಪಂದ್ಯಗಳನ್ನು ಆಡಿದರು.

ಮರಣ[ಬದಲಾಯಿಸಿ]

ವಿಜಯ್ ಮಂಜ್ರೇಕರವರ ವೃತ್ತಿಜೀವನದ ಕೊನೆಯಲ್ಲಿ ಫಿಟ್ನೆಸ್ ಸಮಸ್ಯೆಗಳನ್ನು ಹೊಂದಿದ್ದರು. ಇದು ಅವರ ತಂತ್ರ ಮತ್ತು ಪಾದದ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.[೩] ದುರದೃಷ್ಟವಶವಾಗಿ ವಿಜಯ್ ಮಂಜ್ರೇಕರ್ ಮದ್ರಾಸ್ (ಚೆನೈ) ಯಲ್ಲಿ ೧೯೮೩ ರ ಅಕ್ಟೋಬರ್ ೧೮ ರಂದು ಕೇವಲ ೫೨ರ ವಯಸ್ಸಿನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. http://www.espncricinfo.com/india/content/player/30936.html. Retrieved 6 ಸೆಪ್ಟೆಂಬರ್ 2018.  Check date values in: |access-date= (help); Missing or empty |title= (help)
  2. https://www.cricbuzz.com/profiles/5558/vijay-manjrekar. Retrieved 6 ಸೆಪ್ಟೆಂಬರ್ 2018.  Check date values in: |access-date= (help); Missing or empty |title= (help)
  3. https://www.cricketcountry.com/articles/vijay-manjrekar-20-facts-about-the-former-india-batting-great-508672. Retrieved 6 ಸೆಪ್ಟೆಂಬರ್ 2018.  Check date values in: |access-date= (help); Missing or empty |title= (help)