ನನ್ನ ಹೆಸರು ಪ್ರೀತ ಆರ್.ಟೀ.ನಾನು ಹುಟ್ಟಿ ಬೆಳೆದ್ದದು ಬೆಂಗಳೂರಿನಲ್ಲಿಯೇ.ನಾನು ಹುಟ್ಟಿದ ದಿನಾಂಕ ೧೨/೧೨/೧೯೯೮.ನಾನು ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಯ ವರೆಗೂ ಓದ್ದಿದ್ದೆ.ನ್ನನ ಪಿ.ಯು.ಸಿ.ಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿ,ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನ್ನನ ಬಿಎಸ್ಸಿಯನ್ನು ಜೈವಿಕ ತಂತ್ರಜ್ಞಾನ,ರಸಾಯನಶಾಸ್ತ್ರ ಹಾಗು ಸಸ್ಯಶ್ತ್ರದ ಕ್ಷೇತ್ರದಲ್ಲಿ ಮಾಡುತ್ತಿರುವೆನು.ನಾನು ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ನ್ನನ ವಿದ್ಯಾಬ್ಯಾಸವನ್ನುಮುಂದುವರೆಯಲು ಆಶಿಸುತ್ತಿದ್ದೆನೆ.
ನಾನು ಪಿ.ಯು.ಸಿ.ನಲ್ಲಿ ಓದುತ್ತಿರುವಾಗ ನ್ನನ ಮನೆಯವರ ಜೊತೆ ಹಂಪಿ,ಬೆಲ್ಲೂರು, ಹಲ್ಲೆಬೀಡು ಹಾಗು ಇತರ ಉತ್ತರ ಕನ್ನಡ ಜಿಲ್ಲೆಗಳನ್ನು ಭೆಟಿ ಮಾಡಿದೆ.ನಾನು ಜನಿಸಿದ್ದು ಮತ್ತು ಬೆಳೆದ್ದದ್ದು ನಗರದಲ್ಲಿ ಆದ್ದರಿಂದ ಹಳ್ಳಿಗಳ ಬಗ್ಗೆ ತಿಳಿದಿರಲಿಲ್ಲ.ನಾನು ಅಲ್ಲಿಗೆ ಹೋದಾಗ ನಾನು ಕುತೂಹಲದಿಂದ ಅವರ ಸಂಸ್ಕೃತಿ, ಸಂಪ್ರದಾಯ, ಭಾಷೆಯನ್ನುಕಂಡು
ಆಶ್ಚರ್ಯಪಟ್ಟೆ.ಅಲ್ಲಿರುವ ಜನರು ತುಂಬಾ ಒಳ್ಳೆಯವರಾಗಿದ್ದರು, ಪ್ರೀತಿಯಿಂದ ಕಾಳಜಿಯನ್ನು ತೋರಿಸಿದರು.ನಾವು ವಿಭಿನ್ನ ಆಹಾರವನ್ನು ತಿನ್ನುತ್ತಿದರಿಂದ ಆಹಾರ ತುಂಬಾ ಟೇಸ್ಟಿ ಆಗಿತ್ತು.ನನ್ನ ಪೋಷಕರೊಂದಿಗೆ ನಾನು ಅಲ್ಲಿಗೆ ಹೋಗಿದ್ದೆ.
ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ನಾಯಕರು ಮತ್ತು ನಾಯಕಿಯರೇ.ನನಗೂ ಹಾಗೆಯೇ. ಅವರ ಪಾತ್ರಗಳು ಮತ್ತು ಆಲೋಚನೆಗಳು ನನ್ನನ್ನು ಪ್ರೇರೇಪಿಸುತ್ತಿರುತ್ತದೆ.ಭಾರತದ ಹೆಚ್ಚಿನ ಮಹಿಳೆಯರು ಸರಿಯಾದ ಶಿಕ್ಷಣವನ್ನು ಪಡೆಯುತ್ತಿಲ್ಲ.ಆದರೆ ಸರಿಯಾದ ಶಿಕ್ಷಣ ಪಡೆಯಲು ನಾನು ಸಾಕಷ್ಟು ಅದೃಷ್ಟಶಾಲಿ.ನನ್ನ ಹೆತ್ತವರ ಬೆಂಬಲದಿಂದ ನಾನು ಒಳ್ಳೆಯ ಸಂಸ್ಥೆಯಲ್ಲಿ ಓದುತ್ತಿದ್ದೇನೆ.ಇಬ್ಬರೂ ನನ್ನ ಗುರಿ ಸಾಧಿಸಲು ಎಲ್ಲಾ ರೀತಿಗಳಲ್ಲಿ ನ್ನನ್ನನು ಪ್ರೋತ್ಸಾಹಿಸುತ್ತಿದ್ದಾರೆ. ಅವರು ನನ್ನ ಸಾಮರ್ಥ್ಯಕ್ಕೆ ಬೆನ್ನೆಲುಬಾಗಿದ್ದಾರೆ.
ನನ್ನ ಹೆತ್ತವರಲ್ಲದೆ ನನ್ನ ಜೀವನದಲ್ಲಿ ಆದರ್ಶ ಮಾದರಿ ಎಂದರೆ ಅದು ಡಾ.ಅಬ್ದುಲ್ ಕಲಾಂ.ಅವರ ಆಲೋಚನೆಗಳು, ವಿದ್ಯಾರ್ಥಿಗಳಿಗೆ ಪ್ರೀತಿ, ದೇಶಭಕ್ತಿ ಮುಂತಾದವು ನ್ನನ ಮೇಲೆ ಪ್ರಭಾವ ಬೇರಿದೆ.ಅವರು ನಾನು ನೋಡಿದ ಅತ್ಯುತ್ತಮ ವಿಜ್ಞಾನಿ.ಅವರ 'ವಿಂಗ್ಸ್ ಆಫ಼್ ಫ಼ೈಯರ್' ನಾನು ಓದಿರುವ ಅತ್ಯುತ್ತಮ ಪುಸ್ತಕ. ಕಲಾಂರವರಿಗೆ ಭಾರತ ರತ್ನ, ಪದ್ಮಭೂಷಣ, ಪದ್ಮ ವಿಭೂಷಣ ಮುಂತಾದ ಪ್ರಶಸ್ತಿಗಳನ್ನು ಭಾರತ ಸರ್ಕಾರ ನೀಡಿದೆ. ನಾನು ಅವರ ಆಸೆಯಂತೆ ನನ್ನ ಜ್ಞಾನವನ್ನು ಉಚಿತವಾಗಿ ಬಡ ಮಕ್ಕಳಿಗೆ ಹಂಚಿಕ್ಕೂಳ್ಳಲು ಇಷ್ಟಪಡುವೆನು.
ಕನ್ನಡದಲ್ಲಿ ನನ್ನ ನೆಚ್ಚಿನ ಕವಿಗಳಲ್ಲಿ ಒಬ್ಬರು ಕುವೆಂಪು. ನಾನು ಅವರ ಎಲ್ಲಾ ಕವಿತೆಗಳನ್ನು ಇಷ್ಟಪಡುವೆನು.ಅವರ ಕವಿತೆಗಳು ಬಹಳಷ್ಟು ಒಳ್ಳ ಅರ್ಥಗೊಂಡಿರುತ್ತದೆ. ಅವರ 'ಅಖಂಡ ಕರ್ನಾಟಕ' ಪದ್ಯದ ಒಳ್ಳ ಅರ್ಥವನ್ನು ತಿಳಿದುಕೊಂಡು ಬೆರಗಾದೆನು.ಅವರು ಬರೆದಿರುವ ನಮ್ಮ ನಾಡ ಗೀತೆಯು ನಮ್ಮ ನಾಡಿನ ಹಿರಿಮೆಯನ್ನು ಸ್ಪಷ್ಟವಾಗಿ ವಿವರಿಸುತ್ತದೆ.೨೦೧೭ ರಲ್ಲಿ ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಅವರು ಹೂವಿನಿಂದ ಮಾಡಿದ ಕುವೆಂಪುರವರ ಮನೆಯನ್ನು ಪ್ರದರ್ಶಿಸಿದರು.ನಾನು ಅಲ್ಲಿಗೆ ಹೋದೆನು ಮತ್ತು ಅವರ ಬಗ್ಗೆ ಬಹಳಷ್ಟು ಮಾಹಿತಿ ಪಡೆದುಕೊಂಡೆನು.ನಾನು ಇಂತಹ ಆದರ್ಶ ವ್ಯಕ್ತಿಗಳಂತೆ ಅವರ ತತ್ವಗಳನ್ನು ಅನುಸರಿಸಿ ನ್ನನ ಗುರಿಗಳನ್ನು ತಲುಪಲು ಪ್ರಯತ್ನಿಸುತ್ತೇನೆ.