ಸದಸ್ಯ:Nisarga1910267

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಬಾಲ್ಯ[ಬದಲಾಯಿಸಿ]

ಚಿತ್ರದುರ್ಗದ ಹಿಡಿಂಬೇಶ್ವರ ದೇವಸ್ಥಾನ

ನಮಸ್ಕಾರ ನನ್ನ ಹೆಸರು ನಿಸರ್ಗ. ಈ .ಎಸ್. ನಾನು ಹುಟ್ಟಿದ್ದು ಭದ್ರಾವತಿ ಯಲ್ಲಿ. ನನ್ನ ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದಾರೆ, ನನ್ನ ತಂದೆಯ ಹೆಸರು ಈಶ್ವರಪ್ಪ .ಎನ್, ನನ್ನ ತಾಯಿಯ ಹೆಸರು ಸರಸ್ವತಿ, ನನ್ನ ತಮ್ಮನ ಹೆಸರು ವೈಭವ್. ನನ್ನ ತಂದೆಯ ಕೆಲಸ ಶಿಕ್ಷಕರು, ನನ್ನ ತಾಯಿಯ ಕೆಲಸ ಶಿಕ್ಷಕರು ಈಗ ಒಂದು ಪರೀಕ್ಷೆಯನ್ನು ಬರೆದು ಈಗ ಸಿ. ಆರ್. ಪಿ.ಯಾಗಿದ್ದಾರೆ ಈಗ ಪ್ರತಿ ಶಾಲೆಯನ್ನು ಇನ್ಸ್ಪೆಕ್ಷನ್ ಮಾಡುತ್ತಾರೆ. ನನ್ನ ತಂದೆಯೂ ದಯಾನಂದ ಸಾಗರ್ ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ನನ್ನ ತಮ್ಮ ಈಗ ಮೊದಲನೇ ಪಿ .ಯು. ಸಿ ನಲ್ಲಿ ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ಓದುತ್ತಿದ್ದಾನೆ ನಾನು ಹಾಗೂ ನನ್ನ ತಮ್ಮ ಹುಟ್ಟಿದ್ದು ಭದ್ರಾವತಿಯಲ್ಲಿ. ನನ್ನ ತಾಯಿ ಓದಿದ್ದು ಚಿತ್ರದುರ್ಗ ದಲ್ಲಿ ಮತ್ತೆ ಕೆಲಸವನ್ನು ಭದ್ರಾವತಿಯಲ್ಲಿ ಹಲವು ವರ್ಷಗಳು ಮಾಡಿದ್ದರು ನನ್ನ ತಂದೆ ಹುಟ್ಟಿ ಬೆಳೆದು ಕೆಲಸವನ್ನು ಇಲ್ಲೇ ಮಾಡುತ್ತಾರೆ ಮತ್ತು ನನ್ನ ತಾಯಿ ಮದುವೆಯ ನಂತರ ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ನನ್ನ ಶಾಲಾ ದಿನಗಳು[ಬದಲಾಯಿಸಿ]

ನಾನು ಹಾಗೂ ನನ್ನ ತಮ್ಮ ಓದಿದ್ದು ಸಂತ ಫ್ರಾನ್ಸಿಸ್ ಐ. ಸಿ.ಎಸ್. ಶಾಲೆಯಲ್ಲಿ ನಂತರ ಪಿ.ಯು.ಸಿ.ಯನ್ನು ಕ್ರೈಸ್ಟ್ ಅಕಾಡೆಮಿ ನಲ್ಲಿ ಮಾಡಿದ್ದೆನು ನನ್ನ ಎಸ್. ಎಸ್. ಎಲ್. ಸಿ. ಯಲ್ಲಿ ನನಗೆ ೮೨% ಅಂಕಗಳು ಪಡೆದುಕೊಂಡಿದ್ದೇನೆ ನನ್ನ ದ್ವಿತೀಯ ಪಿ.ಯು.ಸಿ.ನಲ್ಲಿ ನನಗೆ ೯೦.೫೦% ಅಂಕಗಳು ಪಡೆದುಕೊಂಡಿದ್ದೇನೆ ನಾನು ತುಂಬಾ ಖುಷಿ ಪಟ್ಟಿದ್ದೆ ನಂತರ ನಾನು ಇನ್ನೂ ಸ್ವಲ್ಪ ಕಷ್ಟ ಪಟ್ಟಿದ್ದರೆ ಇನ್ನೂ ಸ್ವಲ್ಪ ಅಂಕಗಳು ಪಡೆದುಕೊಳ್ಳಬಹುದಿತ್ತು, ನನಗೆ ಪಿ.ಯು.ಸಿ. ನಲ್ಲಿ ಮೊದಮೊದಲು ಕನ್ನಡ ಕಷ್ಟವೆನ್ನಿಸತೊಡಗಿತು ನಂತರ ಓದಿದ ಮೇಲೆ ಸ್ವಲ್ಪ ಸುಲಭವಾದ ತೊಡಗಿತು ಹಾಗಾಗಿ ನನ್ನ ದ್ವಿತೀಯ ಪಿ.ಯು.ಸಿ. ನಲ್ಲಿ ೮೫ ಅಂಕಗಳನ್ನು ಪಡೆದುಕೊಂಡಿದ್ದೇನೆ ನನಗೆ ಅದರಿಂದ ಸ್ವಲ್ಪ ಖುಷಿಯಾಯಿತು ನಾನು ಇನ್ನೂ ಸ್ವಲ್ಪ ಚೆನ್ನಾಗಿ ಓದಬಹುದಿತ್ತು ಎಂದೆನಿಸಿತ್ತು ನಾನು ಇದರಿಂದ ಪಾಠ ಕಲಿತಿದ್ದೇನೆ ಇನ್ನು ಮುಂದೆ ಸ್ವಲ್ಪ ಚೆನ್ನಾಗಿ ಓದುತ್ತೇನೆ ನಾನು ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಓದುವುದು ಗುರಿಯಾಗಿ ಇಟ್ಟುಕೊಂಡಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳು ನೃತ್ಯ ಮಾಡುವುದು ನನಗೆ ನೃತ್ಯವೆಂದರೆ ತುಂಬಾ ಇಷ್ಟ ಆದುದರಿಂದ ಚಿಕ್ಕ ವಯಸ್ಸಿನಿಂದ ನೃತ್ಯ ಮಾಡುತ್ತಿದ್ದೇನೆ ನನ್ನ ಶಾಲೆಯಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಆದುದರಿಂದ ತುಂಬಾ ಬಹುಮಾನಗಳು ಲಭಿಸಿದೆ ಈಗಲೂ ನನಗೆ ನೃತ್ಯ ಮಾಡಲು ಇನ್ನೂ ಆಸಕ್ತಿ ಹೊಂದಿದ್ದೇನೆ.

ನನಗೆ ಹಲವು ಊಟವೆಂದರೆ ತುಂಬಾ ಇಷ್ಟ ಅದರಲ್ಲೂ ನನಗೆ ಬಿರಿಯಾನಿ ಎಂದರೆ ತುಂಬಾ ಇಷ್ಟ, ಅದು ಶಿವಾಜಿ ಮಿಲಿಟರಿ ಹೋಟೆಲ್ ಬಿರಿಯಾನಿ ಎಂದರೆ ತುಂಬಾ ಇಷ್ಟ. ನಾನು ತುಂಬಾ ಹಾಡುಗಳನ್ನು ಕೇಳುತ್ತೇನೆ ಅದರಲ್ಲೂ ಕನ್ನಡ ಹಾಡುಗಳೆಂದರೆ ನನಗೆ ತುಂಬಾ ಇಷ್ಟ ಕೇಳುತ್ತಾ ಇರುತ್ತೇನೆ, ನನಗೆ ಪುಸ್ತಕ ಓದುವ ಹವ್ಯಾಸ ಅಷ್ಟೂ ಇಲ್ಲ ಆದರೆ ನನಗೆ ಕಾದಂಬರಿಗಳ ಪರಿಚಯ ಇದೆ ಅದು ಸಿನಿಮಾಗಳ ಮೂಲಕ ಮೈಸೂರು ಮಲ್ಲಿಗೆ, ಬಂಧನ, ಮುಸುಕು, ಜುಗಾರಿ ಕ್ರಾಸ್, ಮುಂತಾದವು .ನನಗೆ ಇಷ್ಟವಾದ ನಾಯಕ ದರ್ಶನ್ ಮತ್ತು ಡಾ॥ ವಿಷ್ಣುವರ್ಧನ್.ನಾನು ಕನ್ನಡವನ್ನು ತುಂಬಾ ಪ್ರೀತಿಸುತ್ತೇನೆ ಕನ್ನಡವನ್ನು ಕಲಿಯುತ್ತಿದ್ದೇನೆ, ಕನ್ನಡವೆಂದರೆ ಮೊದಲು ನೆನಪಾಗುವುದು ಕುವೆಂಪು ನನಗೆ ಅವರು ಕನ್ನಡವನ್ನು ಇಷ್ಟಪಡಲು ಪ್ರೇರಣೆಯಾಗಿದ್ದಾರೆ. ನಮಗೆ ಕನ್ನಡವೆಂದರೆ ಇನ್ನೂ ಹಲವು ವಿಷಯಗಳು ನೆನಪಾಗುತ್ತವೆ ಮೊದಲಿಗೆ ನನಗೆ ಇಷ್ಟವಾಗುವುದೆಂದರೆ ಮೈಸೂರು ಮಸಾಲೆ ದೋಸೆ ದಾವಣಗೆರೆ ಬೆಣ್ಣೆ ದೋಸೆ ಹಾಗೂ ನನಗೆ ಕರ್ನಾಟಕದಲ್ಲಿ ಇಷ್ಟವಾಗುವ ಕೆಲವು ಸ್ಥಳಗಳೆಂದರೆ ಹಂಪಿ, ಮೈಸೂರು ಅರಮನೆ, ನನಗೆ ಚನ್ನಪಟ್ಟಣದ ಗೊಂಬೆಗಳೆಂದರೆ ತುಂಬಾ ಇಷ್ಟ, ನನಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ ಮತ್ತು ಸಮುದ್ರವಿರುವ ಜಾಗಗಳೆಂದರೆ ತುಂಬಾ ಇಷ್ಟ.

          ಧನ್ಯವಾದಗಳು.