ವಿಷಯಕ್ಕೆ ಹೋಗು

ಸದಸ್ಯ:Nikithagowdakalmanja/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಕೆ. ಚಂದ್ರನಾಥ ಆಚಾರ್ಯ

[ಬದಲಾಯಿಸಿ]

ಚಂದ್ರನಾಥ ಆಚಾರ್ಯ ಹುಟ್ಟಿದ್ದು 28ನೇ ಫೆಬ್ರವರಿ 1949ರಲ್ಲಿ ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ. ತಂದೆ ಮಹಾಲಿಂಗಾಚಾರ್ಯ, ತಾಯಿ ಸುಶೀಲಮ್ಮ.[]

ಬಾಲ್ಯ

[ಬದಲಾಯಿಸಿ]

ಪರಿಸರದ ಜತೆ ಜತೆಗೆ ಚಂದ್ರನಾಥರನ್ನು ಕಲಾವಿದರನ್ನಾಗಿ ಕರೆಯುವುದರಲ್ಲಿ ವ್ಯಕ್ತಿಗಳಿಬ್ಬರೂ ವಹಿಸಿದ ಪಾತ್ರ ಬಹಳ ಮುಖ್ಯವಾದದು. ಅವರಲ್ಲಿ ಕಲಾವಿದನ ಬಾಲ್ಯ ನೋಟಕ್ಕೆ ದಕ್ಕಿದ ಅಜ್ಜ (ತಾಯಿಯ ತಂದೆ) ಮಧೂರ ಮಹಾಲಿಂಗಾಚಾರ್ಯ, ಮತ್ತೊಬ್ಬರು ಡಾ. ಶಿವರಾಮ ಕಾರಂತರು

ಶಿಕ್ಷಣ ಮತ್ತು ವೃತ್ತಿ ಜೀವನ

[ಬದಲಾಯಿಸಿ]

ತಮ್ಮ ಕಾಲೇಜು ಶಿಕ್ಷಣದ ವೇಳೆಯಲ್ಲಿಯೇ ಕಲಾವಿದನಾಗುವ ಹಂಬಲ. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ “ಮಲ್ಲಿಗೆ” ಮಾಸಪತ್ರಿಕೆಯಲ್ಲಿ ಕಲಾವಿದನಾಗಿ ಸೇರಿದರು ಹಾಗೂ ಬದುಕಿಗಾಗಿ ಅನೇಕ ಪುಸ್ತಕಗಳ ಮುಖಚಿತ್ರಗಳನ್ನು ರಚಿಸುತ್ತಿದ್ದರು. ಇದೇ ಸಮಯದಲ್ಲಿ ಹೆಸರಾಂತ ಕಲಾವಿದ ಆರ್.ಎಂ. ಹಡಪದರ “ಕೆನ್ ಸ್ಕೂಲ್ ಆಫ್ ಆರ್ಟ್” ಸೇರಿ, ತಮ್ಮ ಬದುಕಿನ ಬಹಳ ಮುಖ್ಯ ಅಧ್ಯಾಯ ಆರಂಭಿಸಿದರು. ಕಲಾ ನಿರ್ಮಾಣದಲ್ಲಿ ಸೃಜನಶೀಲರಾಗಿ ಬೆಳೆಯಲು ಕಾರಣವಾಯಿತು. 1973ರಲ್ಲಿ ಇಲ್ಲಿಂದ ಕಲಾ ಡಿಪ್ಲೊಮಾ ಪಡೆದರು. “ಪ್ರಜಾವಾಣಿ”ಯ ಬಳಗದ ಕಲಾವಿದರಾಗಿ ಸೇರಿ, ‘ಸುಧಾ’ ಮತ್ತು ‘ಮಯೂರ’ಗಳಲ್ಲಿ ನವ್ಯದ ಜತೆಗೆ ಜನಪ್ರಿಯ ಕಥೆ ಕಾದಂಬರಿಗಳಿಗೆ ಮುಖ ಚಿತ್ರ ರಚಿಸಿದರು. ಈ ಅವಧಿಯಲ್ಲಿ ರಚಿಸಿದ ಸಾಂದರ್ಭಿಕ ಚಿತ್ರಗಳು ಜನರ ಮೆಚ್ಚುಗೆ ಪಡೆದು ಪತ್ರಿಕಾರಂಗದಲ್ಲಿ ಹೊಸ ಹಾದಿಗೆ ಕಾರಣಕರ್ತರಾದರು. ಶಾಂತಿನಿಕೇತನದಲ್ಲಿ ಪಡೆದ ಕಲಾಶಿಕ್ಷಣದಿಂದ ಅವರ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಯಿತು. ಅಲ್ಲಿ ಗ್ರಾಫಿಕ್ಸ್ನಲ್ಲಿ ಸ್ನಾತಕೋತ್ತರ ಪದವಿಯನ್ನು 1981ರಲ್ಲಿ ಪಡೆದರು. ಅಲ್ಲಿ ಗ್ರಾಫಿಕ್ ಮಾಧ್ಯಮದ ತಂತ್ರಗಾರಿಕೆಯ ಸೂಕ್ಷ್ಮಗಳನ್ನು ಕಲಿತು, ಹೊಸ ಆಲೋಚನೆಗಳು, ಕಲ್ಪನೆಗಳು ಎಚ್ಚಿಂಗ್ ಕೃತಿಗಳಲ್ಲಿ ಸೇರಿಕೊಂಡರು. ಶಾಂತಿನಿಕೇತನದಿಂದ ಬಂದ ನಂತರ ಮತ್ತೆ ಕೆಲಸಕ್ಕೆ ಪತ್ರಿಕಾಲಯ ಸೇರಿದರು. ಆದರೆ ಕಲಾವಿದರಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು 2003ರಲ್ಲಿ ಪತ್ರಿಕಾ ಜಗತ್ತಿಗೆ ವಿದಾಯ ಹೇಳಿದರು.[] ಕಲಾವಿದರಾಗಿ ಮಾತ್ರವಲ್ಲದೆ, ಲಂಕೇಶರ ‘ಪಲ್ಲವಿ’, ‘ಎಲ್ಲಿಂದಲೋ ಬಂದವರು’, ‘ಅನುರೂಪ’ ಮತ್ತು ಗಿರೀಶ್ ಕಾಸರವಳ್ಳಿ ಅವರ ‘ಘಟಶ್ರಾದ್ಧ’ ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. 1979ರಲ್ಲಿ ಚಂದ್ರನಾಥ ಆಚಾರ್ಯ ಅವರ ಬದುಕಿನಲ್ಲಿ ಅತ್ಯಂತ ಮಹತ್ವದ ವರ್ಷ, ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ವಿದ್ವಾಂಸ ವೇತನ ಪಡೆದು ಎರಡು ವರ್ಷ ಗ್ರಾಫಿಕ್ಸ್ನಲ್ಲಿ ಕಲಾ ಅಧ್ಯಯನಕ್ಕಾಗಿ ಶಾಂತಿನಿಕೇತನಕ್ಕೆ ಹೋದರು. ಕರ್ನಾಟಕದಲ್ಲಿ ತಮ್ಮದೇ ವಿಶಿಷ್ಟ ಶೈಲಿಯ ವರ್ಣಚಿತ್ರ, ಸಾಂಧರ್ಭಿಕ ಚಿತ್ರಗಳ ಮೂಲಕ ಕಲಾತ್ಮಕ ಮೆರಗನ್ನು ತುಂಬಿಕೊಟ್ಟವರು ಕಲಾವಿದ ಶ್ರೀ ಕೆ. ಚಂದ್ರನಾಥ ಆಚಾರ್ಯ. ಈ ಕುಂಚ ಕಲಾಭಿಜ್ಞ ಸ್ವಂತ ಕಲ್ಪನೆ, ಪರಿಶ್ರಮ ಹಾಗೂ ರೇಖಾಚಿತ್ರಗಳ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಹೆಸರು ತಂದುಕೊಟ್ಟಿರುವ ಅವರ ಬಣ್ಣದ ಕಣ್ಣಿನ ಕಾಣ್ಕೆಗಳ ಹಿಂದಿನ ಪ್ರೇರಣೆ ಕನಸು ಮತ್ತು ಸಿದ್ದಿ ಸಾಧನೆಗಳನ್ನು ಕಾಣಬಹುದು. ಪತ್ರಿಕಾರಂಗ ತೊರೆದರೂ ಕರ್ನಾಟಕದ ಕಲಾ ಲೋಕದಲ್ಲಿ ಚಂದ್ರನಾಥ ಆಚಾರ್ಯ ತಮ್ಮತನದ ಛಾಪು ಮೂಡಿಸುವ ಮೂಲಕ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಪೌರಾಣಿಕ, ತಾಮತ್ರಿಕ ಹಾಗೂ ಸಾಮಾಜಿಕಕ್ಕೆ ಮೂಡಿಸುವ ಮೂಲಕ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಪೌರಾಣಿಕ, ತಾಂತ್ರಿಕ ಹಾಗೂ ಸಾಮಾಜಿಕಕ್ಕೆ ಸಂಬಂಧಿಸಿದಂತೆ, ಜನ ಸಾಮಾನ್ಯರಿಂದ ಅರ್ಥವಾಗುವ ಸರಳ ರೇಖೆಗಳ, ಆಕರ್ಷಕ ಬಣ್ಣಗಳ ಭಾರತೀಯ ಶೈಲಿಯ ಚಿತ್ರಗಳು ಮತ್ತು ವಿಶಿಷ್ಟ ವರ್ಣ ಸಂಯೋಜನೆ ಕಾಣಬಹುದು, ರಾಷ್ಟ್ರದ ಪ್ರಮುಖ ಕಲಾಶಿಬಿರಗಳಲ್ಲಿ ಭಾಗವಹಿಸಿರುವ ಚಂದ್ರನಾಥ ಆಚಾರ್ಯ, ಇದುವರೆಗೂ ಏಳು ಏಕವ್ಯಕ್ತಿ ಕಲಾಪ್ರದರ್ಶನ ಮತ್ತು ಮೂವತ್ತಕ್ಕೂ ಹೆಚ್ಚು ಸಮೂಹ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

1998ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, 2008ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸೊವ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರವು ನೀಡುವ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗಳು ದೊರೆತಿವೆ.[]

ಕೃತಿಗಳು

[ಬದಲಾಯಿಸಿ]

ಕಾಲ್ಪನಿಕ ಜಗತ್ತಿನ ಅವಾಸ್ತವ ವಿರೋಧಾಭಾಸದ ವಸ್ತು, ಸನ್ನಿವೇಶ ಬೆಸೆದು, ಪಾಶ್ಚಾತ್ಯ ನವ್ಯಕಲೆಯ ಸಮಿಶ್ರಣದ ಕಲಾಕೃತಿಗಳು,ತೈಲವರ್ಣ, ಜಲವರ್ಣ,ಅಕ್ರಾಲಿಕ್, ಪೆನ್ಸಿಲ್ ಮಾಧ್ಯಮಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಉಲ್ಲೇಖ

[ಬದಲಾಯಿಸಿ]
  1. http://www.karnatakaholidays.com/puttur.php
  2. http://www.murdoch.edu.au/School-of-Arts/
  3. http://mb.ntdin.tv/en/article/english/brief-history-kannada-rajyotsava-significance-people-karnataka