ಸದಸ್ಯ:Neelamma374/ನನ್ನ ಪ್ರಯೋಗಪುಟ
ನಿಸರ್ಗ
[ಬದಲಾಯಿಸಿ]ಬ್ರಹ್ಮಾಂಡದ ಎಲ್ಲಾ ಮಾನವ ನಿರ್ಮಿತವಲ್ಲದ ಭೌತಿಕ ವಸ್ತುಗಳು ಮತ್ತು ಮಾನವ ಕಾರಣೀಭೂತನಾಗಿರದ ಆಗುಹೋಗುಗಳನ್ನು ನಿಸರ್ಗ ಅಥವಾ ಪ್ರಕೃತಿ ಎನ್ನಬಹುದು. ನಿಸರ್ಗದ ವೈಶಾಲ್ಯ ಅಣುವಿನ ವಿಂಗಡಣೆಗಳಿಂದ ಬೃಹತ್ ನಕ್ಷತ್ರಕೂಟಗಳ ವರೆಗೆ ಹಬ್ಬುತ್ತದೆ.
ನಿಸರ್ಗ ವಿಜ್ಞಾನದ ಒಂದು ಬಹು ಮುಖ್ಯವಾದ ಅಂಶ.ಪ್ರಾಣಿ-ಪಕ್ಷಿ,ಗಿಡ-ಮರ,ಹೂವು-ಹಣ್ಣು,ಬೆಟ್ಟ-ಗುಡ್ಡ,ಜಲಪಾತ ಮುಂತಾದವುಗಳನ್ನು ಈ ಸುಂದರವಾದ ನಿಸರ್ಗ ಒಳಗೊಂಡಿದೆ. ನಿಸರ್ಗ ನಮ್ಮ ಕಲ್ಪನೆಗಿಂತ ಮಿಗಿಲಾದುದು.ಮರಗಳಿಂದ,ಹೂಗಳಿಂದ ಮನ ತಣಿಸುವ ಸುವಾಸನೆ ಇತ್ಯಾದಿಗಳು ನಿಸರ್ಗ ಮಾನವನಿಗೆ ಕೊಟ್ಟ ಉಡುಗರೆ ಎಂದೇ ಹೇಳಬಹುದು. ಇದು ದೇವರು ಮಾನವನಿಗೆ ಕೊಟ್ಟ ವರ. ಮಾನವನು ನಿಸರ್ಗದ ಒಂದು ಭಾಗವಾಗಿದ್ದರು ಅವನ ಚಟುವಟಿಕೆಗಳು ಅದರಿಂದ ಭಿನ್ನವಾಗಿರುತ್ತದೆ.ನಿಸರ್ಗ ಭೌತಿಕ ಮತ್ತು ಸಾಮಾಜಿಕ ವಸ್ತುಗಳನ್ನು ಹೊಂದಿರುತ್ತವೆ. ಕಲ್ಲು,ಮರ,ನೀರು,ಪ್ರಾಣಿ ಇವು ಯಾವುದು ಕೂಡ ಮಾನವ ನಿರ್ಮಿತವಲ್ಲ.ಭೂಮಿಯೂ ನಿಸರ್ಗ ನೀರು,ಗಾಳಿ,ಮರ-ಗಿಡ ಇತ್ಯದಿಗಳನ್ನು ಒಳಗೊಂಡಿರುತ್ತದೆ.
ಭೂಮಿ
[ಬದಲಾಯಿಸಿ]ಭೂಮಿ ತುಂಬ ವಿಶಾಲವದುದು,ಅನೇಕ ಜೀವಿಗಳಿಂದ ಕೂಡಿದ್ದು ಪ್ರಕೃತಿಯ ವಿಸ್ಮಯವನ್ನು ನಾವು ಎಲ್ಲಿ ಕಾಣಬಹುದು.ಭೂಮಿಯಲ್ಲಿ ಮಾತ್ರ ಜೀವರಾಶಿಗಳು ಉಳಿಯಲು ಸಾಧ್ಯಾ.ಸೂರ್ಯನಿಗೆ ಹತ್ತಿರವಿರುವ ಗ್ರಹಗಳಲ್ಲಿ ಭೂಮಿಯು ಮೂರನೆ ಸ್ಥಾನದಲ್ಲಿದೆ.ಇದು ಅನೇಕ ಪದರಗಳಿಂದ ಕೂಡಿದೆ.ಶೇಕಡ ೭೧% ರಷ್ಟು ಭೂಮಿಯು ಸಮುದ್ರಗಳಿಂದ ಕೂಡಿದೆ.ಇದರ ಬಹುತೇಕ ಹವಾಮಾನ ವೈಶಿಷ್ಟ್ಯಗಳನ್ನು ತನ್ನ ಎರಡು ದೊಡ್ಡ ಧ್ರುವ ಪ್ರದೇಶಗಳಲ್ಲಿ, ಎರಡು ತುಲನಾತ್ಮಕವಾಗಿ ಕಿರಿದಾದ ಸಮಶೀತೋಷ್ಣ ವಲಯಗಳು, ಮತ್ತು ಉಪೋಷ್ಣವಲಯದ ಪ್ರದೇಶಕ್ಕೆ ವಿಶಾಲ ಸಮಭಾಜಕ ಉಷ್ಣವಲಯದ.ವಾತಾವರಣ ವ್ಯಾಪಕವಾಗಿ ಬದಲಾಗುತ್ತದೆ, ಒಂದು ಮಿಲಿಮೀಟರ್ ಗಿಂತ ಕಡಿಮೆ ವರ್ಷಕ್ಕೆ ನೀರಿನ ಹಲವಾರು ಮೀಟರ್ ಬದಲಾಗುತ್ತದೆ.ಈ ಭೂಮಿಯಲ್ಲಿ ಸುಂದರವಾದ ನಿಸರ್ಗ ತಲೆಯೆತ್ತಿ ನಿಂತಿದೆ.
ನೀರು
[ಬದಲಾಯಿಸಿ]ನಿಸರ್ಗದಲ್ಲಿ ನೀರು ಒಂದು ಪ್ರಮುಕವಾದ ಪಾತ್ರ ನಿರ್ವಹಿಸುತ್ತದೆ.ನೀರು ನಿಸರ್ಗದ ಕಳೆಯನ್ನು ಹೆಚ್ಚಿಸುತ್ತದೆ.ನೀರು ಭೂಮಿಯ ಮೇಲ್ಮೈನ 71% ಒಳಗೊಳ್ಳುತ್ತದೆ.ಇದು ಜೀವನದ ಎಲ್ಲಾ ಚಿರಪರಿಚಿತ ರೂಪಗಳಿಗೆ ಅತ್ಯಗತ್ಯ. ಭೂಮಿಯ ಮೇಲೆ, ನೀರಿನ 96.5% ಸಮುದ್ರದ ಅಂತರ್ಜಲವು 1.7% ಹಿಮನದಿಗಳು ಮತ್ತು ಅಂಟಾರ್ಟಿಕಾ ಮತ್ತು ಗ್ರೀನ್ಲ್ಯಾಂಡ್, ಇತರ ದೊಡ್ಡ ನೀರಿನ ಒಂದು ಭಾಗದಲ್ಲಿ ಐಸ್ ಕ್ಯಾಪ್ಸ್ 1.7% ಕಂಡುಬರುತ್ತದೆ, ಮತ್ತು ಗಾಳಿಯಲ್ಲಿ 0.001% ಆವಿ, ಮೋಡಗಳು, ಮತ್ತು ಮಳೆ (ಐಸ್ ಮತ್ತು ಗಾಳಿಯಲ್ಲಿ ತೇಲಾಡುವ ದ್ರವದ ನೀರು ರೂಪಿಸಲ್ಪಟ್ಟವು).ಈ ನೀರಿನಲ್ಲಿ 2.5% ಮಾತ್ರ ಸಿಹಿನೀರು, ಮತ್ತು ನೀರಿನ 98.8% ಐಸ್ (ಮೋಡಗಳು ಐಸ್ ಹೊರತುಪಡಿಸಿ) ಮತ್ತು ಅಂತರ್ಜಲ ಆಗಿದೆ. ಎಲ್ಲಾ ಸಿಹಿನೀರಿನ 0.3% ಗಿಂತ ಕಡಿಮೆ ಭಾಗ ನದಿಗಳಲ್ಲಿ, ಸರೋವರಗಳಲ್ಲಿ ಸೇರಿಕೊಂಡಿದೆ.
ಮರ-ಗಿಡಗಳು
[ಬದಲಾಯಿಸಿ]ಮರಗಳು ಅನೇಕ ಸಾವಿರ ವರ್ಷಗಳ ಬದಕುತ್ತದೆ. ಎತ್ತರದ ಮರ-ಹೈಪರಿಯನ್ ಕರಾವಳಿ ಪ್ರದೇಶದಲ್ಲಿ ಕಾಣಬಹುದು,ಅದು 115,6 ಮೀ (379 ಅಡಿ) ಎತ್ತರವಿದೆ. ಮರಗಳು 370 ದಶಲಕ್ಷ ವರ್ಷಗಳ ಅಸ್ತಿತ್ವದಲ್ಲಿರುತ್ತದೆ.ವಿಶ್ವದಲ್ಲಿ ಸುಮಾರು 3 ಟ್ರಿಲಿಯನ್ ಪ್ರೌಢ ಮರಗಳಿವೆ.ನಿಸರ್ಗವು ಮರ-ಗಿಡಗಳಿಂದ ಕೂಡಿದ್ದು,ಪರಿಸರದ ಸೌಂದರ್ಯವನ್ನು ಹೆಚ್ಚಿಸುತ್ತದೆ.ಆರೋಗ್ಯವಾದ ಗಾಳಿಯನ್ನು ನೀಡುತ್ತದೆ.
ನಿಸರ್ಗದಾಮಗಳು
[ಬದಲಾಯಿಸಿ]ಕೊಡಗಿನ ಕುಶಾಲನಗರದಲ್ಲಿ ಒಂದು ನಿಸರ್ಗದಾಮ,ಮಂಗಳೂರಿನ ಪಿಳಿಕುಳ ಎಂಬ ನಿಸರ್ಗದಾಮ ದ.ಕರ್ನಾಟಕದಲ್ಲಿ ಪ್ರಸಿದ್ಗವಾದುದು.ಇವು ಅನೇಕ ನಿಸರ್ಗ ಪ್ರೇಮಿಗಳನ್ನು ಆಕರ್ಶಿಸುತ್ತದೆ.ಅನೇಕ ಮರ-ಗಿಡಗಳಿಂದ ಕೂಡಿದ ಈ ನಿಸರ್ಗದಾಮ ನೋಡಲು ಬಹಳ ಸುಂದರವಾಗಿವೆ.ಇವುಗಳು ಕೆಲವು ಪ್ರಾಣಿಗಳಿಂದ ಸಹ ಕೂಡಿವೆ.ಪಕ್ಷಿಗಳ ಕಲರವ ಎಂದಿಗು ಇರುತ್ತದೆ.ನಿಸರ್ಗ ಜನಮನ ತಣಿಸುತ್ತದೆ.