ಸದಸ್ಯ:Nandithag569s/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]ಶ್ರೀರಂಗಪಟ್ಟಣ ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪಟ್ಟಣವಾಗಿದೆ ಹಾಗೂ ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧವಾಗಿದೆ. ಶ್ರೀರಂಗಪಟ್ಟಣವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ ೯ನೇ ಶತಮಾನದಲ್ಲಿ ಗಂಗರು ಕಟ್ಟಿಸಿದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ತಪ್ಪದೆ ನೋಡಬೇಕು.

ಶ್ರೀರಂಗಪಟ್ಟಣದ ಮುಖ್ಯದ್ವಾರ


ಸ್ಥಳ[ಬದಲಾಯಿಸಿ]

ಮೈಸೂರು ನಗರದಿಂದ ೧೩ ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆಯ ಗಡಿಯಲ್ಲಿದೆ. ಈ ಊರು ೯ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ. ಅದರ ಫಲವಾಗಿ ಈಗ ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ಸಂಯುಕ್ತ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿದೆ.ಭಾರತದ ಜನಗಣತಿಯ ಪ್ರಕಾರ ೨೦೦೧ರಲ್ಲಿ ಜನಸಂಖ್ಯೆಯು ೧೮೦೩.೬೯/ಚದರ ಕಿ.ಮೀ ಹಾಗೂ ಶ್ರೀರಂಗಪಟ್ಟಣದ ಪಿನ್ ಕೋಡ್ - ೫೭೧೪೩೮, ವಾಹನ - ಕೆ ಎ - ೧೧ , ಎಸ್.ಟಿ. ಡಿ - ++೦೮೨೩೬ .ಶ್ರೀರಂಗಪಟ್ಟಣದ ರೈಲು ನಿಲ್ದಾಣವನ್ನು ೫ ನವೆಂಬರ್ ೧೯೫೧ ರಲ್ಲಿ ಶುರುಮಾಡಲಾಯಿತು.ಇದರ ಪ್ರಧಾನ ಕಛೇರಿಯು ಮೈಸೂರಿನಲ್ಲಿದೆ. ಭಾರತೀಯ ರೈಲ್ವೆಯು ಮಾಲೀಕತ್ವ ಹೊಂದಿದೆ. ದಕ್ಷಿಣ-ಪಶ್ಚಿಮ ರೈಲ್ವೆಯು ಕಾರ್ಯನಿರ್ವಹಿಸುತ್ತಿದೆ. ರೈಲೈ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಇದು ಬೆಂಗಳೂರು ರೈಲೈ ವಿಭಾಗಕ್ಕೆ ಸೇರಿದೆ. ಶ್ರೀರಂಗಪಟ್ಟಣದಿಂದ ಮೈಸೂರು, ಹಾಸನ, ನಾಗನಹಳ್ಳಿ, ಪಾಂಡವಪುರ, ಮಂಡ್ಯ, ಚನ್ನಪಟ್ಟಣ, ಕೆಂಗೇರಿ, ಬೆಂಗಳೂರು, ಶೆಟ್ಟಿಹಳ್ಳಿ, ರಾಮನಗರ, ಬಿಡದಿ, ಬ್ಯಾಡರಹಳ್ಳಿ, ಹನ್ನಕೆರೆಗೆ ರೈಲ್ಲಿನ ವ್ಯವಸ್ಥೆಯಿದೆ. [೨]

ಧಾರ್ಮಿಕ ಮಹತ್ವ[ಬದಲಾಯಿಸಿ]

ಶ್ರೀರಂಗನಾಥಸ್ವಾಮಿ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ದೇವಾಲಯವು ಗಂಗ ಅರಸರ ಕಾಲದ್ದೆಂದು ಪ್ರತೀತಿಯಿದೆ. ಈ ದೇವಾಲಯವನ್ನು ೧೨ ನೇ ಶತಮಾನದಲ್ಲಿ ಜೀರ್ಣೋದಾರ ಮಾಡಲಾಯಿತ್ತು. ಗಂಗರ ನಂತರ ವಿಜಯನಗರ ಅರಸರು ಮತ್ತು ಹೊಯ್ಸಳರ ದೊರೆಗಳು ಈ ದೇವಾಲಯವನ್ನು ಅಭಿವೃದ್ಧೀ ಪಡಿಸಿದರು. ಇದು ವಿಷ್ಣುವಿನ ರೂಪವಾದ ರಂಗನಾಥಸ್ವಾಮಿಯ ದೇವಾಲಯವಾಗಿದ್ದು ಪಂಚರಂಗ ಕ್ಷೇತ್ರಗಳಲ್ಲಿ ಒಂದೆಂದು ಹೆಸರಾಗಿದೆ.ಈ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪುಕಲ್ಲಿನಿಂದ ಕೋರೆಯಲಾಗಿರುವ ಸ್ವಾಮಿಯ ಮೂರ್ತಿಯಿದ್ದು ನಗುಮೊಗವನ್ನು ಹೊಂದಿದೆ. ಈ ವಿಗ್ರಹವು ಆದಿಶೇಷನ ಮೇಲೆ ಮಲಗಿರುವ ಅನಂತನಾಗಥನನ್ನು ತೋರಿಸುತ್ತದೆ. ದೇವಾಲಯದಲ್ಲಿ ೨೪ ಸುಂದರ ಕಂಬಗಳಿದ್ದು ಅವು ವಿಷ್ಣುವಿನ ೨೪ ರೂಪಗಳನ್ನು ತೋರಿಸುತ್ತದೆ. ಇವುಗಳು ಈ ಸ್ಮಾರಕದ ಸೌಂದರ್ಯವನ್ನು ದ್ವಿಗುಣಗೊಳಿಸಿದೆ. ಈ ದೇವಾಲಯದ ಒಳಗೋಡೆಗಳು ಶ್ರೀನಿವಾಸ ಸ್ವಾಮಿಯ ವಿವಿಧ ಚಿತ್ರಗಳಿಂದ ಹಾಗೂ ಪಂಚಮುಖಿ ಆಂಜನೇಯನ ಚಿತ್ರಗಳಿಂದ ಆಲಂಕೃತವಾಗಿವೆ. ಕರ್ನಾಟಕದ ದೊಡ್ಡ ದೇವಾಲಯಗಳಲ್ಲಿ ಒಂದೆಂದು ಹೆಸರಾಗಿರುವ ಈ ದೇವಾಲಯವು ಒಂದು ಮಹಾದ್ವಾರವನ್ನು, ಸದೃಡವಾದ ಗೋಪುರವನ್ನು ಹಾಗೂ ಕಂಬಗಳಿರುವ ಮೊಗಸಾಲೆಯನ್ನು ಹೊಂದಿದೆ. ಇವುಗಳನ್ನು ಮೂರು ಅಥವಾ ನಾಲ್ಕು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರು ಇಲ್ಲಿಗೆ ಸಂಕ್ರಾಂತಿಯ ಶುಭದಿನದಂದು ನಡೆಯುವ ಲಕ್ಷದೀಪೋತ್ಸವಕ್ಕೆ ಆಗಮಿಸುತ್ತಾರೆ. ಈ ದೇವಾಲಯವು ವರ್ಷಪೂರ್ತಿ ಬೆಳಗ್ಗೆ ೮ ರಿಂದ ೯:೩೦ ರವರೆಗೆ ಮತ್ತು ಸಂಜೆ ೭ ರಿಂದ ೮ ರವರೆಗೆ ತೆರೆದಿರುತ್ತದೆ. ಶ್ರೀರಂಗಪಟ್ಟಣದ ಸಂಗಮ - ಇಲ್ಲಿ ಕಾವೇರಿ, ಕಬಿನಿ ಮತ್ತು ಹೇಮಾವತಿ ನದಿಗಳು ಕೂಡುವ ಸಂಗಮವಿದ್ದು ನೋಡಲು ಯೋಗ್ಯವಾಗಿದೆ. ಶ್ರೀರಂಗಪಟ್ಟಣದ ಸುತ್ತಮುತ್ತಲೂ ಕಾವೇರಿ ನದಿಯಿಂದ ಆವೃತವಾಗಿದೆ. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯು ಪೂರ್ವವಾಹಿನಿ ಹಾಗೂ ಪಶ್ಚಿಮವಾಹಿನಿಗಳಾಗಿ ಕವಲೊಡೆದು ಹರಿಯುತ್ತದೆ. ಇದರಿಂದಾಗಿ ಶ್ರೀರಂಗಪಟ್ಟಣನವು ಒಂದು ದ್ವೀಪದಂತೆ ಕಾಣುತ್ತದೆ.ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಶ್ರೀರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಊರಾಗಿದೆ. ಟಿಪ್ಪು ಸುಲ್ತಾನ ಹಾಗೂ ಹೈದರಾಲಿಯವರ ಕಾಲದಲ್ಲಿ ಶ್ರೀರಂಗಪಟ್ಟಣವು ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಊರು ಟಿಪ್ಪು ಸುಲ್ತಾನ ಕಾಲದಲ್ಲಿ ಮೈಸೂರಿನ ರಾಜಧಾನಿಯಾದಾಗ ತನ್ನ ಪ್ರಾಮುಖ್ಯತೆಯನ್ನು ಗಳಿಸಿತು. ಈ ಊರಿನ ವಾಸ್ತು ಶಿಲ್ಪವು ಇಂಡೋ-ಮುಸ್ಲಿಂ ಪರಂಪರೆಗೆ ಸೇರಿದೆ. ಇದರ ಪ್ರಭಾವವನ್ನು ಇಲ್ಲಿನ ಸ್ಮಾರಕಗಳಾದ ದರಿಯಾ ಗಲತ್ ಬಾಗ್ ಮತ್ತು ಜಾಮ ಮಸೀದಿಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.ಶ್ರೀರಂಗಪಟ್ಟಣಕ್ಕೆ ಹತ್ತಿರದ ಎಲ್ಲಾ ನಗರಗಳಿಂದ ಮತ್ತು ರಾಜ್ಯದ ಪ್ರಮುಖ ನಗರಗಳಿಂದ ಬಸ್ಸುಗಳ ಸೌಲಭ್ಯವಿದೆ. ಪ್ರವಾಸಿಗರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಠೆಯ (ಕೆ ಎಸ್ ಆರ್ ಟಿ ಸಿ) ಬಸ್ಸುಗಳಲ್ಲಿ ಶ್ರೀರಂಗಪಟ್ಟಣಕ್ಕೆ ತಲುಪಬಹುದು. ಬೆಂಗಳೂರಿನಿಂದ ಸುವಿಹರಿ ಬಸ್ಸುಗಳು ಲಭ್ಯವಿದೆ. ಇಲ್ಲಿನ ಸಮೀಪದ ಯಾತ್ರಾ ಜಾಗಗಳಿಗೆ ಪ್ರವಾಸಿಗಳು ಇಲ್ಲಿಂದ ಬಾಡಿಗೆ ಟ್ಯಾಕ್ಸಿ ಮತ್ತು ಮಿನಿ ಬಸ್ಸುಗಳನ್ನು ಪಡೆಯಬಹುದು. ಶ್ರೀರಂಗಪಟ್ಟಣವು ೧೩ ಚ ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದೆ.

ಮದ್ದಿನಮನೆ[ಬದಲಾಯಿಸಿ]

ಮದ್ದಿನಮನೆಯನ್ನು, ೨೮ ಮಾರ್ಚ್, ೨೦೧೭, ಶ್ರೀರಂಗಪಟ್ಟಣದ ರೈಲು ನಿಲ್ದಾಣದ ಎದುರು ಇದ್ದ ಶಸ್ತ್ರಾಗಾರ (ಮದ್ದಿನ ಮನೆ) ವನ್ನು ರಾಜ್ಯ ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆಯ ಸಮ್ಮತಿ ಪಡೆದು ರೈಲ್ವೆ ಇಲಾಖೆ, ಬೆಂಗಳೂರು–ಮೈಸೂರು ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿತ್ತು ಎಂಬ ಕಾರಣಕ್ಕೆ ಸ್ಥಳಾಂತರಿಸಿದೆ.200 ವರ್ಷಗಳ ಹಿಂದಿನ, ಟಿಪ್ಪು ಸುಲ್ತಾನ್‌ ಕಾಲದ ಶಸ್ತ್ರಾಗಾರ ಸ್ಮಾರಕವನ್ನು ಮೂಲ ಸ್ಥಳದಿಂದ 130 ಮೀಟರ್ ದೂರದ ಮತ್ತೊಂದು ಸ್ಥಳಕ್ಕೆ ಲವಲೇಶವೂ ಮುಕ್ಕಾಗದಂತೆ ಅಮೆರಿಕದ ವುಲ್ಫೆ ಮತ್ತು ನಮ್ಮದೇ ದೇಶದ ಪಿಎಸ್‌ಎಲ್‌ ಕಂಪೆನಿಗಳು, ಸ್ಥಳಾಂತರಿಸಿವೆ. ನೆಲಮಟ್ಟದಿಂದ 20 ಅಡಿ ಆಳದಲ್ಲಿ ಕಾಲುವೆ ತೋಡಿ. ಅದರ ಮೇಲೆ ಬಲಶಾಲಿಯಾದ ಉಕ್ಕಿನ ತೊಲೆಗಳನ್ನು ಅಳವಡಿಸಿ, ವಿವಿಧ ಗಾತ್ರದ ಮತ್ತು ಉದ್ದದ ಬೀಮ್‌ಗಳ ಮೇಲೆ ಸ್ಮಾರಕವನ್ನು ಕೂರಿಸಿ ವಿದೇಶದ ‘ಯುನಿಫೈಡ್‌ ಜಾಕಿಂಗ್‌ ಸಿಸ್ಟಂ’ ಎಂಬ ವಿಶೇಷ ತಂತ್ರಜ್ಞಾನದ ಸಹಾಯದಿಂದ ಈ ಸ್ಮಾರಕವನ್ನು ನಿಗದಿತ ಸ್ಥಳಕ್ಕೆ ಮುನ್ನೂಕಲು ಯಶಸ್ವಿಯಾಗಿರುವ ರೈಲ್ವೆ ಇಲಾಖೆ ಗೆಲುವಿನ ನಗೆ ಬೀರಿದೆ.

೧೩೦ ಮೀಟರ್ ದೂರಕ್ಕೆ ಸ್ಥಳಾಂತರದ ವಿವರ[ಬದಲಾಯಿಸಿ]

ಈ ಸ್ಮಾರಕ ಮೊದಲಿದ್ದ ಸ್ಥಳದಿಂದ ೧೩೦ ಮೀಟರ್‌ ದೂರಕ್ಕೆ ಸ್ಥಳಾಂತರಗೊಂಡಿದೆ. ೯೦ ಡಿಗ್ರಿ ಕೋನದಲ್ಲಿ ೧೦೦ ಮೀಟರ್‌ ಸಾಗಿಸಿ ಅಲ್ಲಿಂದ ಮತ್ತೆ ಬಲಕ್ಕೆ ೩೦ ಮೀಟರ್‌ ದೂರ (ಇಂಗ್ಲಿಷ್‌ನ ‘ಎಲ್‌’ ಆಕಾರದಲ್ಲಿ) ತಳ್ಳಲಾಗಿದೆ. ಮೊದಲ ದಿನ (ಮಾರ್ಚ್‌ ೬) ೪೦ ಮೀಟರ್‌, ಎರಡನೇ ದಿನ ೪೨ ಮೀಟರ್‌, ೩ನೇ ದಿನ ೧೮ ಮೀಟರ್‌ ಮತ್ತು ೪ನೇ ಪ್ರಯತ್ನದಲ್ಲಿ ೩೦ ಮೀಟರ್‌ ದೂರಕ್ಕೆ ಈ ಶಸ್ತ್ರಾಗಾರ ಕ್ರಮಿಸಿದೆ. ಸ್ಮಾರಕದ ತಳಭಾಗದ ಕೆಲವು ಬೀಮ್‌ಗಳನ್ನು ಬೇರ್ಪಡಿಸುವ ಮತ್ತು ಅದರ ಸುತ್ತ ಕಾಂಪೌಂಡ್‌ ನಿರ್ಮಿಸುವ ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಸ್ಮಾರಕ ಸ್ಥಳಾಂತರಕ್ಕೆ ಒಟ್ಟು ೧೩.೬ ಕೋಟಿ ವೆಚ್ಚವಾಗಿದ್ದು, ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಿದೆ. ಈ ಸ್ಮಾರಕ ಸ್ಥಳಾಂತರಿಸುವ ಸಂಬಂಧ ೨೦೧೩, ಮಾರ್ಚ್‌ ೧೪ರಂದು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಅನುಮತಿ ನೀಡಿತ್ತು. ೨೦೧೫ರ ಅಕ್ಟೋಬರ್‌ ತಿಂಗಳಲ್ಲಿ ಮದ್ದಿನ ಮನೆ ಸ್ಥಳಾಂತರಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿತ್ತು. ಭಾರತದ ಪಿಎಸ್‌ಎಲ್‌ ಎಂಜಿನಿಯರಿಂಗ್‌ ಮತ್ತು ಅಮೆರಿಕದ ವುಲ್ಫೆ ಕಂಪೆನಿಗಳು ಜಂಟಿ ಹೊಣೆಗಾರಿಕೆಯಲ್ಲಿ ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದವು.ಸ್ಮಾರಕವನ್ನು ೩ ವಲಯವಾಗಿ ವಿಭಾಗಿಸಿ ಅದರ ಕೆಳಭಾಗವನ್ನು ಭೂಮಿಯಿಂದ ಬೇರ್ಪಡಿಸಿ ‘ಕ್ಯಾರಿ ಲೈನ್‌’ (ನೆಲದಿಂದ ಎರಡು ಅಡಿ ಎತ್ತರದ ರೇಖೆಗೆ)ಗೆ ತರಲಾಯಿತು. ಸ್ಮಾರಕದ ಕೆಳಗೆ ೫ ಮುಖ್ಯ ಕಬ್ಬಿಣ ತೊಲೆಗಳು, ೧೧ ಕ್ರಾಸ್‌ ಬೀಮ್‌ಗಳು ಮತ್ತು ೩೧ ನೀಡಲ್‌ ಬೀಮ್‌ಗಳನ್ನು ಅಳವಡಿಸಲಾಗಿತ್ತು.ಈ ಎಲ್ಲ ಬೀಮ್‌ಗಳನ್ನು ಜಬಲ್‌ಪುರದಿಂದ ತರಿಸಲಾಗಿತ್ತು. ಅವುಗಳಿಗೆ ಒಟ್ಟು ೩೭ ಜಾಕ್‌ಗಳನ್ನು ಸೇರಿಸಿ ಮುನ್ನೂಕುವ ಪ್ರಕ್ರಿಯೆ ಆರಂಭಿಸಲಾಯಿತು. ಇಡೀ ಕಟ್ಟಡ ಒಮ್ಮೆಗೇ ಮುನ್ನಡೆಯುವಂತೆ ಮಾಡಲು ‘ಯೂನಿಫೈಡ್‌ ಜಾಕಿಂಗ್‌ ಸಿಸ್ಟಂ (ಯುಜೆಎಸ್‌)’ ಎಂಬ ವಿನೂತನ ತಂತ್ರಜ್ಞಾನವನ್ನು ಬಳಕೆ ಮಾಡಲಾಯಿತು.ಕಬ್ಬಿಣದ ತೊಲೆಗಳ ಮಧ್ಯೆ ಮರದ ತುಂಡುಗಳನ್ನು ಹೈಡ್ರಾಲಿಕ್‌ ಬಾಡಿ ಪುಷ್‌ ರ‍್ಯಾಮ್‌ಗಳನ್ನಾಗಿ ಬಳಸಲಾಯಿತು. ಸಾಮಾನ್ಯ ಯಂತ್ರದಂತೆ ಕಾಣುವ ಯುಜೆಎಸ್‌ ಯಂತ್ರ ಇಲ್ಲಿ ಮುಖ್ಯ ಚಾಲಕಶಕ್ತಿಯಾಗಿ ಕೆಲಸ ಮಾಡಿದ್ದು ಗಮನಾರ್ಹ ಸಂಗತಿ.ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆಗೆ ಅಮೆರಿಕದ ವುಲ್ಫೆ ಕಂಪೆನಿಯ ನಿರ್ವಾಹಕ ಜೇಮಿನ್‌ ಬಕಿಂಗ್‌ಹ್ಯಾಂ ಸೇರಿ ೬ ಮಂದಿ, ಪಿಎಸ್‌ಎಲ್‌ ಕಂಪೆನಿಯ ೨೦ ಜನ ತಜ್ಞರು ಹಾಗೂ ನೈರುತ್ಯ ರೈಲ್ವೆಯ ೨೦ ಮಂದಿ ಮತ್ತು ಪುರಾತತ್ವ ಇಲಾಖೆ ಸೇರಿ ೫೦ಕ್ಕೂ ಹೆಚ್ಚು ಮಂದಿ ಒಂದೂವರೆ ತಿಂಗಳು ಸತತ ಕೆಲಸ ಮಾಡಿದ್ದಾರೆ.೧೦/೩೦ ಮೀಟರ್‌ ಅಳತೆಯ, ೯೦೦ ಮೆಟ್ರಿಕ್‌ ಟನ್‌ ತೂಕದ ಈ ಸ್ಮಾರಕವನ್ನು ಅದರ ಮೂಲನೆಲೆಯಿಂದ ರೈಲು ಹಳಿಗಳಿಂದ ಸಾಕಷ್ಟು ದೂರದಲ್ಲಿ ಗೊತ್ತುಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸ್ಮಾರಕದ ಸ್ಥಳಾಂತರ ಪ್ರಕ್ರಿಯೆಗೂ ಮುನ್ನ ಅದು ಸಾಗುವ ಮಾರ್ಗದ ಉದ್ದಕ್ಕೂ ೨೦ ಅಡಿ ಆಳದ ಕಾಲುವೆ ತೋಡಲಾಗಿತ್ತು. ಹೀಗೆ ಹಳ್ಳ ತೋಡುವುದರಿಂದ ಈಗಾಗಲೇ ಇರುವ ಬ್ರಾಡ್‌ಗೇಜ್‌ ರೈಲು ಹಳಿಗಳು ಕುಸಿಯಬಹುದು ಎಂಬ ಕಾರಣಕ್ಕೆ ರೈಲು ಹಳಿಗಳಿಗೆ ಸಮಾನಾಂತರವಾಗಿ ಸಿಮೆಂಟ್‌ ಪಿಲ್ಲರ್‌ಗಳನ್ನು ನಿರ್ಮಿಸಿ ಎಚ್ಚರವಹಿಸಲಾಗಿತ್ತು.

ಶಸ್ತ್ರಾಗಾರದ ರಚನೆ[ಬದಲಾಯಿಸಿ]

ಶ್ರೀರಂಗಪ್ಟಣದ ಶಸ್ತ್ರಾಗಾರದ ರಚನೆಯು ಬಹಳ ಅದ್ಬುತವಾದದ್ದು. ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ೮ ಶಸ್ತ್ರಾಗಾರಗಳ ಪೈಕಿ ಜೋಡಿ ರೈಲು ಮಾರ್ಗ ನಿರ್ಮಾಣ ಉದ್ದೇಶಕ್ಕೆ ಸ್ಥಳಾಂತರಗೊಂಡಿರುವ ಶಸ್ತ್ರಾಗಾರ ಷಡ್ಕೋನಾಕೃತಿಯ ಸ್ಮಾರಕ. ಈ ದ್ವೀಪ ಪಟ್ಟಣದ ೩ ಸುತ್ತಿನ ಕೋಟೆಯ ಸುತ್ತ ಕಾವಲು ಕಾಯುವ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಲು ಇವುಗಳನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದ. ಚುರಕಿ ಗಾರೆಯಿಂದ(ಸುಣ್ಣ, ಸುಟ್ಟ, ಇಟ್ಟಿಗೆ,ಮರವಜ್ರ ಮಿಶ್ರಣ) ಬಳಸಿ ಇದನ್ನು ನಿರ್ಮಿಸಲಾಗಿದೆ.ಸ್ಮಾರಕ ಗೋಡೆ ಒಂದು ಮೀಟರ್ ದಪ್ಪ ಇದೆ. ಮೇಲ್ಭಾಗದಲ್ಲಿ ಬೆಳಕಿಂಡಿ ಇಡಲಾಗಿದೆ. ನೆಲಮಟ್ಟದಿಂದ ಕೆಳಗೆ ಸುಮಾರು ೧೦ ಅಡಿ ಆಳದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಲು ವ್ಯವಸ್ಥೆ ರೂಪಿಸಲಾಗಿದೆ. ೨೦೦ ವರ್ಷಗಳ ಹಿಂದೆಯೇ ಜ್ಯಾಮಿತಿಯ ತತ್ವದ ಆಧಾರದ ಮೇಲೆ ಇಳಿಜಾರು ಚಾವಣಿ ಮಾದರಿಯಲ್ಲಿ ಈ ಶಸ್ತ್ರಾಗಾರ ನಿರ್ಮಿಸಿರುವುದು ವಿಶೇಷ.

ಶ್ರೀರಂಗಪಟ್ಟಣದಲ್ಲಿ ನೋಡುವ ಸ್ಥಳಗಳು[ಬದಲಾಯಿಸಿ]

ರಂಗನತಿಟ್ಟುವಿನ ಪಕ್ಷಿಗಳು
ಶಿವನಸಮುದ್ರದ ಜಲಪಾತ

ಐತಿಹಾಸಿಕ ತಾಣ ಶ್ರೀರಂಗಪಟ್ಟಣ ರಾಜ್ಯದ ಪ್ರಮುಖ ಪ್ರವಾಸಿ ಕ್ಷೇತ್ರ ಎನಿಸಿಕೊಂಡಿದೆ. ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆಯ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ ಪ್ರಸಿದ್ಧ ವಿಹಾರ ತಾಣಗಳು ಇಲ್ಲಿವೆ. ಶ್ರೀರಂಗಪಟ್ಟಣವು ಬೆಂಗಳೂರಿನಿಂದ ೧೨೭ ಕಿ.ಮೀ ಮತ್ತು ಮೈಸೂರಿನಿಂದ ೧೩ ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಊರು ತನ್ನದೆ ಆದ ರೈಲುನಿಲ್ದಾಣವನ್ನು ಹೊಂದಿದೆ. ಮೈಸೂರು ಇಲ್ಲಿಗೆ ಸಮೀಪದ ವಿಮಾನ ನಿಲ್ಲಾಣವಾಗಿದೆ.ರಸ್ತೆಯ ಮೂಲಕವು ಶ್ರೀರಂಗಪಟ್ಟಕ್ಕೆ ಸುಲಭವಾಗಿ ತಲುಪಬಹುದು. ಈ ದ್ವೀಪವು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೆಲೆಸಿದೆ.ಶ್ರೀರಂಗಪಟ್ಟಣದ ಸುತ್ತಾಮೂತ್ತಲೂ ನೋಡುವ ತಾಣಗಳು ಹೆಚ್ಚಿವೆ. ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಜುಮ್ಮ ಮಸೀದಿ, ದರಿಯಾ ದೌಲತ್, ರಂಗನತಿಟ್ಟು, ಬೆಳಗೊಳದ ಲಕ್ಷ್ಮಿ ನರಸಿಂಹ ದೇಗುಲ, ಕರಿಘಟ್ಟದ ವೆಂಕಟೇಶ್ವರ, ನಿಮಿಷಾಂಬ ದೇಗುಲ, ಚಂದ್ರವನ ಆಶ್ರಮ, ಟಿಪ್ಪು ಕಾಲದ ಮದ್ದಿನ ಮನೆ, ಬಲಮುರಿ, ಎಡಮುರಿ, ಶಿವನ ಸಮುದ್ರ, ಪಶ್ಚಿಮ ವಾಹಿನಿ, ಗೋಸಾಯ್ ಘಾಟ್ ಹೀಗೆ ಪ್ರವಾಸಿ, ಧಾರ್ಮಿಕ, ಐತಿಹಾಸಿಕ ತಾಣಗಳ ಪಟ್ಟಿ ಬೆಳೆಯುತ್ತದೆ. ಪ್ರವಾಸಿಗರಿಗೆ ಸೂಕ್ತ ಮಾಹಿತಿ ಇದ್ದರು, ಪ್ರವಾಸಿಗರು ಹೆಚ್ಚಾಗಿದ್ದ ಸಂದರ್ಭದಲ್ಲಿ ಇಲ್ಲಿನ ಕಾರ್ಯನಿರ್ವಹಣೆ ಸೂಕ್ತವಾಗಿಲ್ಲ. ಕಾವೇರಿ, ಕಬಿನಿ ಮತ್ತು ಹೇಮಾವತಿ ಸಂಗಮ ಸ್ಥಳ ಹಾಗೂ ಅಪರ ಕರ್ಮಗಳಿಗೆ ಬಳಸಲಾಗುವ ಕಾವೇರಿ ಪಶ್ಚಿಮ ವಾಹಿನಿ ಸ್ಥಳಗಳಲ್ಲಿ ಇತ್ತೀಚೆಗೆ ಸ್ವಚ್ಛತೆ ಅಭಿಯಾನದಿಂದ ತಕ್ಕಮಟ್ಟಿನ ನದಿ ಸ್ವಚ್ಛತಾ ಕಾರ್ಯ ನಡೆದಿದೆ. ಆದರೆ, ಶಾಶ್ವತ ಪರಿಹಾರ ಸಿಕ್ಕಿಲ್ಲ.ಕಾವೇರಿ ನದಿ ಕವಲೊಡೆಯುವ ಸ್ಥಳಗಳಲ್ಲೆಲ್ಲ ಶ್ರೀರಂಗನಾಥ ಸ್ವಾಮಿಯ ದೇವಾಲಯಗಳಿರುವುದು ಒಂದು ವಿಶೇಷ:ಆದಿ ರಂಗ - ಶ್ರೀರಂಗಪಟ್ಟಣ, ಮಧ್ಯ ರಂಗ - ಶಿವನಸಮುದ್ರ, ಅಂತ್ಯ ರಂಗ - ತಮಿಳುನಾಡಿನ ಶ್ರೀರಂಗಂ. ಪಶ್ಚಿಮ ವಾಹಿನಿಯು ಹಿಂದುಗಳಿಗೆ ಅಂತಿಮ ಕರ್ಮಗಳನ್ನು ಮಾಡಲು ಒಂದು ಪುಣ್ಯ ಕ್ಷೇತ್ರ. ಇಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೃತರ ಅಸ್ಥಿಗಳನ್ನು ವಿಸರ್ಜಿಸಿದರೆ ಮೋಕ್ಷ ಲಭಿಸುವುದೆಂದು ನಂಬಿಕೆಯಿದೆ. ಐತಿಹಾಸಿಕ ನಗರ ಶ್ರೀರಂಗಪಟ್ಟಣದಲ್ಲಿ ೧೨ ವರ್ಷಗೊಮ್ಮೆ ನಡೆಯುವ ಮಹಾ ಪುಷ್ಕರಣೆಯು ಈ ಬಾರಿಯು ಸೆಪ್ಟೆಂಬರ್ ೧೨, ೨೦೧೭ ರಂದು ನಡೆಯಿತು. ಪವಿತ್ರ ನದಿ ಕಾವೇರಿ ಸಾಕ್ಷಿಯಾಗಲಿದ್ದಾಳೆ. ತಾಯಿ ಕಾವೇರಿಯ ಸನ್ನಿಧಿಯಲ್ಲಿ ಭಕ್ತರು ಮಿಂದೆದ್ದು, ವ್ರತ, ತಪ, ಜಪ, ಯೋಗ, ತರ್ಪಣಾದಿಗಳನ್ನು ನೀಡಲಿದ್ದಾರೆ. ಬೆಳಗ್ಗೆ ೬:೪೫ ರಿಂದ ೭:೨೦ರ ವೇಳೆಗೆ ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದು, ಕಾವೇರಿ ನದಿ ಪುಷ್ಕರದ ಸಂದರ್ಭದಲ್ಲಿ ನದಿಯಲ್ಲಿ ಮಿಂದರೆ ಪುಣ್ಯಪ್ರಾಪ್ತಿ ಆಗಲಿದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ.ಕಾವೇರಿ ನದಿದಡದ ಸುಮಾರು ೧೦ ಕಡೆಗಳಲ್ಲಿ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರು ಸ್ನಾನ ಮಾಡಿ ಬಟ್ಟೆಬದಲಾಯಿಸುಕೊಳ್ಳಲು ತಾತ್ಕಾಲಿಕ ಡೇರೆಗಳು, ಸಂಚಾರಿಬೂತ್ ಗಳನ್ನು ನಿರ್ಮಿಸಲಾಗಿದೆ. ಶುಚಿತ್ವಕ್ಕೆ ಮಹತ್ವ ನೀಡಲಾಗಿದ್ದು, ಪಟ್ಟಣಪಂಚಾಯಿತಿ ಈ ಬಗ್ಗೆ ನಿಗಾವಹಿಸಿದೆ.

ಶ್ರೀರಂಗಪಟ್ಟಣದ ರಾಜಕೀಯ[ಬದಲಾಯಿಸಿ]

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ನ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ಕಾಂಗ್ರೆಸ್ ನ ರವೀಂದ್ರ ಶ್ರೀಕಂಠಯ್ಯ ಅವರ ವಿರುದ್ಧ ೧೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಈ ಬಾರಿಯೂ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಅಲೆ ಎದ್ದಿದೆ. ರಮೇಶ್ ಬಂಡಿಸಿದ್ದೇಗೌಡ ಅವರು ಪಕ್ಷ ಬದಲಾಯಿಸಿ ಮತ್ತೊಮ್ಮೆ ಜಯ ಸಾಧಿಸುವರೇ ಕಾದು ನೋಡಬೇಕಿದೆ. ರಮೇಶ್ ಬಂಡಿಸಿದ್ದೇಗೌಡಗೆ ಗೆಲುವಿನ ನಿರೀಕ್ಷೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರಮೇಶ್ ಬಂಡಿಸಿದ್ದೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‌ನ ಬಂಡಾಯ ಶಾಸಕರ ಗುಂಪಿನಲ್ಲಿ ಅವರು ಗುರುತಿಸಿಕೊಂಡಿದ್ದರು. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕೆಪಿಸಿಸಿ ಸದಸ್ಯ ಇಂಡವಾಳು ಸಚ್ಚಿದಾನಂದ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿಯಿಂದ ನಂಜುಂಡೇಗೌಡ ಕಣದಲ್ಲಿದ್ದಾರೆ. ಮತ್ತೊಮ್ಮೆ ರಮೇಶ್ ಬಂಡಿಸಿದ್ದೇಗೌಡ ಹಾಗೂ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಪೈಪೋಟಿ ಕಾಣಬಹುದು. ರವೀಂದ್ರ ಅವರು ಜೆಡಿಎಸ್ ನಿಂದ ಕಣಕ್ಕಿಳಿದಿದ್ದಾರೆ.ಶ್ರೀರಂಗಪಟ್ಟಣದ ಮತದಾರರು ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ೧೪,೬೧,೦೩೧ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ೨,೦೪,೦೫೯ (೧,೦೧,೫೦೩ ಪುರುಷ, ೧,೦೨,೫೫೬ ಮಹಿಳೆ) ಮತದಾರರಿದ್ದಾರೆ. ೨೦೧೩ರ ಫಲಿತಾಂಶ ಶ್ರೀರಂಗಪಟ್ಟಣದಲ್ಲಿ ೨೦೧೩ರಲ್ಲಿ ೧೮ ಮಂದಿ ನಾಮಪತ್ರ ಸಲ್ಲಿಸಿದ್ದರು. ೭ ಮಂದಿ ನಾಮಪತ್ರ ಹಿಂಪಡೆದರು. ೧೧ ಜನ ಅಂತಿಮವಾಗಿ ಸ್ಪರ್ಧಿಸಿದ್ದರು. ಈ ಪೈಕಿ ೮ ಮಂದಿ ಠೇವಣಿ ಕಳೆದುಕೊಂಡರು.ಒಟ್ಟು ಶೇ ೮೦.೮೫ರಷ್ಟು ಮತದಾನವಾಗಿದ್ದು, ೧೫೭೮೦೭ ಮತಗಳ ಪೈಕಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎ.ಬಿ ರಮೇಶ ಬಂಡಿಸಿದ್ದೇಗೌಡ ಅವರು ೫೫೨೦೪ ಮತಗಳನ್ನು ಗಳಿಸಿ ಜಯಗಳಿಸಿದರು. ಸ್ವತಂತ್ರವಾಗಿ ಸ್ಪರ್ಧಿಸಿದ್ದ ರವೀಂದ್ರ ಶ್ರೀಕಂಠಯ್ಯ ಅವರು ೪೧೫೮೦ ಮತಗಳನ್ನು ಗಳಿಸಿ ೧೩೬೨೪ ಮತಗಳ(ಶೇ ೮.೬೩ ) ಅಂತರದಿಂದ ಸೋಲು ಕಂಡಿದ್ದರು.ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಸ್ ಎಲ್ ಲಿಂಗರಾಜು ಅವರು ೨೭೧೪೪ ಮತಗಳು ಹಾಗೂ ಕೆಎಸ್ ನಂಜುಡೇಗೌಡ ಅವರು ೨೪೦೧೨ ಗಳಿಸಿದ್ದರು.

  1. https://kn.wikipedia.org/wiki/%E0%B2%B6%E0%B3%8D%E0%B2%B0%E0%B3%80%E0%B2%B0%E0%B2%82%E0%B2%97%E0%B2%AA%E0%B2%9F%E0%B3%8D%E0%B2%9F%E0%B2%A3. Retrieved 1 ಸೆಪ್ಟೆಂಬರ್ 2018. {{cite web}}: Missing or empty |title= (help)
  2. . Web link. Retrieved 1 ಸೆಪ್ಟೆಂಬರ್ 2018.