ಸದಸ್ಯ:Nandini369

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ,

 ನನ್ನ ಹೆಸರು ನಂದಿನಿ.ಕೆ. ನಾನು ೧೪ ಜನವರಿ ೧೯೯೯ ರಲ್ಲಿ ಆಂದ್ರ ಪ್ರದೇಶದ ಗಂಗಾವರ ಮಂಡಲದ ಚಿತ್ತೂರು ಜಿಲ್ಲೆಯ ಪಲಮನೇರಿನಲ್ಲಿ ಜನಿಸಿದೆ.ನನ್ನ ತಂದೆಯ ಹೆಸರು ಕೊದಂಡರಾಮ,ತಾಯಿ ನಾಗರತ್ನ.ನನಗೆ ಒಬ್ಬ ತಮ್ಮನಿದ್ದಾನೆ.ಅವನ ಹೆಸರು ಸಾಗರ್.ನಾನು ಒಂದು ಸಣ್ಣ ಹಳ್ಳಿಯಲ್ಲಿ  ಹುಟ್ಟಿದ್ದರೂ ಬೇಳೆದದ್ದು ಎಲ್ಲಾ ಬೆಂಗಳೂರುನಲ್ಲೇ. ನನಗೆ ಹಳಿಯ ವಾತಾವರಣ ಎಂದರೆ ತುಂಬಾ ಇಷ್ಟ.ನಮ್ಮ ಹಳ್ಳಿ ಸುತ್ತಲೂ ಹಸಿರಿನ ಗಿಡಮರಗಳಿಂದ ಕೂಡಿರುವ ಸ್ಥಳ ಅಲ್ಲಿನ ಜನರು ತುಂಬಾ ವಿನಯ ಸ್ವಭಾವದವರು.ನಮ್ಮ ಹಳ್ಳಿಯಲ್ಲಿ ಬಹಳಷ್ಟ ಪ್ರವಾಸಿಗರ ಸ್ಥಳವೂ ಇವೆ.ಆನೇಕ ದೇವಾಲಯಗಳು, ಉದ್ಯಾನವನಗಳು ಮತ್ತು ಮನರಂಜಿಸುವ ಸ್ಥಳವೂ ಇವೆ. ಪ್ರಸಿದ್ಧ ತಿರುಪತಿ ನಮ್ಮ ಊರಿನ ಕಡೆಯೇ ಇರುವುದು ಮತ್ತು ಕಾನಿಪಕಾ ಗಣೇಶನ ದೇವಸ್ಥಾನವೂ ಕೂಡ ಇದೆ.

ವಿಧ್ಯಾಭ್ಯಾಸ[ಬದಲಾಯಿಸಿ]

ನನ್ನ ಪ್ರಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ಟೆ.ಫ್ರಾನ್ಸಿಸ್ ಪ್ರೌಡ ಶಾಲೆಯಲ್ಲಿ ಮುಗಿಸಿದೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿ ಈಗ ನಾನು ನನ್ ಬಿ .ಕಾಂ ಪದವಿಯನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ.

ಕುಟುಂಬ[ಬದಲಾಯಿಸಿ]

ನನ್ನ ಕುಟುಂಬದ ಬಗ್ಗೆ ಹೇಳಬೇಕಾದರೆ ನನ್ನದು ತುಂಬು ಕುಟುಂಬ ಹಬ್ಬದ ವಾತಾವರಣದಂತೆ ಇರುತ್ತದೆ.ಎಲ್ಲರೂ ಜೊತೆಗೂಡೆ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ ಎಲ್ಲಾ ಸುಖದಃಖಗಳನ್ನು ನಾವು ಎಲ್ಲರ ಬಳಿ ಹೇಳಿಕೊಂಡು ತುಂಬಾ ಸಂತೋಷದಿಂದಿರುತ್ತೇವೆ."ನನ್ನ ತಂದೆ ನನಗೆ ಆದರ್ಶ", ಬೆಂಬಲಿಗ.ಅವರ ಮಾರ್ಗದರ್ಶನವಿಲ್ಲದೆ ನಾನು ಯಾವ ಕೆಲಸವು ಮಾಡುವುದಿಲ್ಲ.

ಸಾಮರ್ಥ್ಯ[ಬದಲಾಯಿಸಿ]

ನನ್ನ ಸಾಮರ್ಥ್ಯ ಹಾಡು ಹಾಡುವುದು,ನೃತ್ಯ,ಚಿತ್ರ ಬಿಡಿಸುವುದು,ತೋಟಗಾರಿಕೆ ಹಾಗೂ ಬಿಡುವಿನ ಸಮಯದಲ್ಲಿ ಅಡುಗೆ ಕಲಿಯುವುದು.ನನಗೆ ಪುಸ್ತಕಗಳನ್ನು ಓದುವುದೆಂದರೆ ಬಹಳ ಆಸಕ್ತಿ. ನನ್ನ ಪೋಷಕರಿಗೆ ನಾನು ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎನ್ನುವುದು ಬಹಳ ಆಸೆ.ಅದಕ್ಕಾಗಿ ನಾನು ಕೆಎಎಸ್ ಅಥವಾ ಐಎಎಸ್ ಕ್ಷೇತ್ರದಲ್ಲಿ ಏನಾದರೂ ಸಾಧಿಸಿ ನನ್ನ ದೇಶವನ್ನು ಅಭಿವೃದ್ಧಿಗೊಳಿಸಬೇಕೆನ್ನುವುದು ನನ್ನ ಹಾಗೂ ನನ್ನ ಪೋಷಕರ ಕನಸು.ನಾನ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ವ್ಯಕ್ತಿತ್ವ.ನನಗೆ ಯಾವ ಶತ್ರುಗಳು ಇಲ್ಲ.ಎಲ್ಲರನ್ನು ನಾನು ಸ್ನೇಹ ಭಾವದಿಂದಲೇ ನೋಡುತ್ತೇನೆ. ನನ್ನ ದೌರ್ಬಲ್ಯ ಏನೆಂದರೆ ಜನರನ್ನು ಬೇಗ ನಂಬುವುದು.ನಾನು ಕಾಲೇಜಿನ ಕಾರ್ಯಕ್ರಮವೂಂದರಲ್ಲಿ'ಭಾಷಾ ಉತ್ಸವ್'ನಲ್ಲಿ ನೃತ್ಯ ಪ್ರದರ್ಶನವನ್ನು ಮಾಡಿರುವೆ.ಮಡಿಕೆ ವರ್ಣಚಿತ್ರ ಸ್ಪರ್ಧೆ ಭಾಗವಹಿಸಿ ಮೊದಲನೆಯ ಸ್ಥಾನವನ್ನು ಪಡೆದಿರುವ.

ಪ್ರವಾಸ[ಬದಲಾಯಿಸಿ]

ನನ್ನ ನೆಚ್ಚಿನ ಜಾಗಗಳೆಂದರೆ ರಾಮೋಜಿ ಫೀಲ್ಮ್ ಸಟಿ, ವಂಡರ್ ಲಾ, ಸಿಂಗಾಪುರ್, ಪ್ಯಾರಿಸ್ ಇತ್ಯಾದಿ.ನನ್ನ ನೆಚ್ಚಿನ ಆಹಾರ ಆಂದ್ರ ಶೈಲಿಯ ಉಪಹಾರಗಳು, ದಮ್ ಬಿರಿಯಾನಿ,ಮೇತಿ ರೋಟಿ ಹಾಗೂ ಎಲ್ಲಾ ಖಾರಾ ತಿನಿಸುಗಳು.ನನಗೆ ಮಾಂಸಹಾರವೆಂದರೆ ಬಹಳ ಇಷ್ಟ. ಇವೇ ನನ್ನ ಇಷ್ಟಗಳು. 

ಸಮಜ ಸೇವೆ[ಬದಲಾಯಿಸಿ]

ನನ್ನ ಜೇವನದಲ್ಲಿ ಇನ್ನೊಂದು ಮುಖ್ಯವಾದ ನೆನಪು ಏನಂದರೆ ಈ ರಜೆಯಲ್ಲಿ ನಾನು ಸರ್ಕಾರೇತರ ಸಂಸ್ಥೆ (ಎನ್ ಜಿ ಯೋ)ದಲ್ಲಿ 'ಮಕ್ಕಳ ಜಾಗೃತಿ' ಎಂಬ ಕರ್ಯಕ್ರಮಕ್ಕೆ ಹೋಗಿದೆ. ಅಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಹೇಳಿಕೊಡುವ ಕಾರ್ಯವನ್ನು ನಾನು ಮಾಡಿದೆ. ಒಂದರಿಂದ ಏಳನೇ ತರಗತಿಯವರೆಗೂ ಎಲ್ಲಾ ಮಕ್ಕಳಿಗೆ ಹೇಳಿಕೊಡುತ್ತಿದ್ದೆ. ಅಲ್ಲಿ ಆ ಮಕ್ಕಳಿಗೆ ವೃತ್ತಿ ಮಾರ್ಗದರ್ಶನ,ಅರಿವು ಮೂಡಿಸುವುದರ ಬಗ್ಗೆ ಹೇಳಿಕೊಡುತ್ತಿದ್ದರು. ನನಗೆ ಆ ಮಕ್ಕಳನ್ನು ನೋಡುತ್ತಿದ್ದರೆ ,ಅವರ ಜೊತೆ ಕಾಲ ಕಳೆಯುತ್ತಿದ್ದರೆ ಹೊತ್ತು ಹೋಗುವುದೆ ಗೊತ್ತಾಗುತ್ತಿರಲಿಲ್ಲ. ಪ್ರತಿ ಭಾನುವಾರದಂದು 'ಯುವಕರ ಪರಿವರ್ತನೆ' ಕಾರ್ಯಕ್ರಮಕ್ಕೊ ಹೋಗಿದ್ದೆ. ಅಲ್ಲಿ ಚಿತ್ರ ಬಿಡಿಸುವುದು , ಚಿತ್ರಕಲೆ ಎಲ್ಲವನ್ನು ನಾನು ಅಲ್ಲಿನ ಮಕ್ಕಳಿಗೆ ಹೇಳಿಕೊಡುತ್ತಿದ್ದೆ. ಅವರ ಜೊತೆ ಇದ್ದಿದ್ದು ನನಗೆ ಹೊಸ ಅನುಭವವನ್ನು ತಂದುಕೊಟ್ಟಿದೆ. ಕಲಿಸಿಕೊಡುವುದರ ಜೊತೆ ಜೊತೆಗೆ ನಾನು ತುಂಬಾ ಕಲಿತೆನು.

                                                                                    ವಂದನೆಗಳು