ಸದಸ್ಯ:Nandini.k yadav/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ[ಬದಲಾಯಿಸಿ]

ಸ್ಮಾರ್ಟ್ ಮೀಡಿಯ
   ನಮ್ಮ ದೈನಂದಿನ ಜೀವನದಲ್ಲಿ ಸ್ಮಾರ್ಟ್ ಕಾರ್ಡ್ಗಳ ಬಳಕೆ ಜನಪ್ರಿಯವಾಗುತ್ತಿದೆ. ವಾಹನ ಪರವಾನಗಿ ದಾಖಲೆ, ಮೊಬೈಲ್ ಫೋನ್ಗಳಲ್ಲಿ ಬಳಸಲಾಗುವ ಸಿಮ್ ಕಾರ್ಡ, ಕ್ರೆಡಿಟ್ ಕಾರ್ಡ, ಆರೋಗ್ಯ ಮಾಹಿತಿ ದಾಖಲೆ, ಗುರುತಿನ ಚೀಟಿ ಮತ್ತು ಪ್ರವೇಶ ಪದವಾನಗಿ ದಾಖಲೆ, ಮೆಟ್ರೋ ಪ್ರಯಾಣ, ಡಿಜಿಟಲ್ ಟಿವಿ ಸೇವೆ, ಆರೋಗ್ಯ ರಕ್ಷಣೆಗಾಗಿ ಬಳಸುವ ಡಯಾಲಿಸಿಸ್ ಉಪಕರಣ ಮೊದಲಾದ ಉಪಕರಣಗಳು, ಹೀಗೆ ಹಲವಾರು ರೀತಿಯಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆಯಾಗುತ್ತಿದೆ. ಭಾರತ ಸರ್ಕಾರವು ಕೂಡಾ ಹಲವಾರು ಜನಪರ ಯೋಜನೆಗಳಲ್ಲಿ ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ ಬಳಸುತ್ತಿದೆ. ಉದಾಹರಣೆಗೆ, ಮಾರ್ಚ್ 31, 2016 ರಂತೆ, ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಯ 4,13,31,073 ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ.
   ಸ್ಮಾರ್ಟ್ ಕಾರ್ಡ್ಗಳಿಗೆ ಮಾಹಿತಿಯನ್ನು ಬರೆಯಲು ಮತ್ತು ಸ್ಮಾರ್ಟ್ ಕಾರ್ಡ್ ಮಾಹಿತಿಯನ್ನು ಓದಲು ಯಾವ ವಿಧಾನವನ್ನು ಬಳಸಲಾಗುತ್ತದೆ ಎನ್ನುವುದರ ಆಧಾರದ ಮೇಲೆ ಮತ್ತು ಸ್ಮಾರ್ಟ್ ಕಾರ್ಡ್ ಅಳವಡಿಸಲಾಗಿರುವ ಚಿಪ್ ಮತ್ತು ಅದರಿಂದ ದೊರೆಯುವ ಸೌಲಭ್ಯಗಳ ಆಧಾರದ ಮೇಲೆ, ಹೀಗೆ ಎರಡು ವಿಧವಾಗಿ ಸ್ಮಾರ್ಟ್ ಕಾರ್ಡ್ಗಳನ್ನು ವಿಂಗಡಿಸಬಹುದಾಗಿದೆ.
   ನೋಡಲು ಒಂದು ಕಾರ್ಡ್ ಆಗಿ ಕಾಣಿಸುವ ಸ್ಮಾರ್ಟ ಕಾರ್ಡನ್ನು ತಯಾರಿಸಲು, ಕಾರ್ಡಿನ ಪ್ರಿಂಟಿಂಗ್, ಲ್ಯಾಮಿನೇಷನ್, ಚಿಪ್ ಅಳವಡಿಕೆ, ಚಿಪ್ಗೆ ಅಗತ್ಯ ಮಾಹಿತಿ ಬರೆಯುವುದು ಹೀಗೆ ಸುಮಾರು 30 ಹಂತದ ವಿಧಾನವನ್ನು ಬಳಸಲಾಗುತ್ತದೆ. ಒಂದು ಸ್ಮಾರ್ಟ್ ಕಾರ್ಡಿನಲ್ಲಿ ತಂತ್ರಾಂಶ, ಚಿಪ್, ಹೀಗೆ ಸುಮಾರು 12 ವಿವಿಧ ವಸ್ತುಗಳನ್ನು ಅಳವಡಿಸಲಾಗುತ್ತದೆ.
   ಸ್ಮಾರ್ಟ್ ಕಾರ್ಡ್ಗಳಲ್ಲಿ ಪ್ರಮುಖವಾಗಿ ಮೂರು ವಿಧವಾದ ಮೆಮೋರಿ ಕಾರ್ಡ್ಗಳನ್ನು ಬಳಸಲಾಗುತ್ತದೆ.
   1. ಸ್ಟ್ರೇಟ್ ಮೊಮೋರಿ ಕಾರ್ಡ್ಗಳು – ಕಡಿಮೆ ಬೆಲೆ ಮತ್ತು ನಿರ್ವಹಣೆ ವೆಚ್ಚದ ಸ್ಮಾರ್ಟ್ ಕಾರ್ಡ್ಗಳಿಗೆ ಸೂಕ್ತವೆಂದು ಮೊದಲು ಹೇಳಲಾಗಿದ್ದರೂ, ಈ ಕಾರ್ಡಿನಲ್ಲಿರುವ ಹಲವಾರು ಕೊರತೆಗಳಿಂದಾಗಿ ಇಂತಹ ಸ್ಮಾರ್ಟ್ ಕಾರ್ಡ್ಗಳ ಬಳಕೆ ಕಡಿಮೆಯಾಗುತ್ತಿದೆ. ಉದಾಹರಣೆಗೆ, ಇಂತಹ ಕಾರ್ಡ್ಗಳಲ್ಲಿ ಮಾಹಿತಿಯನ್ನು ಬರೆಯಬಹುದು ಮತ್ತು ಕಾರ್ಡಿನಲ್ಲಿರುವ ಮಾಹಿತಿಯನ್ನು ಸ್ಮಾರ್ಟ್ ಕಾರ್ಡ್ ರೀಡರ್ ಬಳಸಿ ಓದಬಹುದು. ಆದರೆ ಮಾಹಿತಿ ಸಂಸ್ಕರಣೆ ಮಾಡುವ ಸಾಮರ್ಥ್ಯ ಈ ಕಾರ್ಡುಗಳಲ್ಲಿ ಇರುವುದಿಲ್ಲ. ಇಂತಹ ಕಾರ್ಡ್ಗಳಲ್ಲಿ ಮಾಹಿತಿ ಸುರಕ್ಷತೆ ಹೆಚ್ಚಾಗಿ ಇಲ್ಲದಿರುವುದರಿಂದ, ಮಾಹಿತಿಯನ್ನು ಕಳವು ಮಾಡುವುದು ಸಾಧ್ಯವಾಗುತ್ತದೆ.
   2. ಸಂರಕ್ಷಿತ ಮೆಮೋರಿ ಕಾರ್ಡ್ಗಳು – ಇಂಟೆಲಿಜೆಂಟ್ ಸ್ಮಾರ್ಟ್ ಕಾರ್ಡ್ಗಳೆಂದೂ ಕರೆಯಲಾಗುವ ಈ ಕಾರ್ಡುಗಳಲ್ಲಿ ಮಾಹಿತಿಯನ್ನು ಬರೆಯಲು ಮತ್ತು ಓದಲು ಸುರಕ್ಷತಾ ವಿಧಾನಗಳನ್ನು ಅಳವಡಿಸಲಾಗಿರುತ್ತದೆ. ಇಂತಹ ಕಾರ್ಡುಗಳ ಸುರಕ್ಷತೆಯ ಪಾಸವರ್ಡ್ ಮತ್ತು ಅಧಿಕೃತ ಪರವಾನಗಿ ಇದ್ದವರು ಮಾತ್ರ ಈ ಕಾರ್ಡ್ಗಳಿಗೆ ಮಾಹಿತಿ ಬರೆಯಬಹುದಾಗಿದೆ. ಇಂತಹ ಸ್ಮಾರ್ಟ್ ಕಾರ್ಡ್ಗಳನ್ನು ಸುಲಭವಾಗಿ ನಕಲು ಮಾಡಲು ಸಾಧ್ಯವಿಲ್ಲವಾದರೂ, ಪರಿಣಿತ ಸೈಬರ್ ಅಪರಾಧಿಗಳು ಇಂತಹ ಸ್ಮಾರ್ಟ್ ಕಾರ್ಡ್ಗಳನ್ನು ದುರಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ.
   3. ಸ್ವೋರ್ಡ ವ್ಯಾಲ್ಯು ಮೆಮೋರಿ ಕಾರ್ಡ್ಗಳು – ಇಂತಹ ಸ್ಮಾರ್ಟ್ ಕಾರ್ಡುಗಳನ್ನು ತಯಾರಿಸುವಾಗಲೇ, ಅಧುನಿಕ ಸುರಕ್ಷತೆ ತಂತ್ರಜ್ಞಾನಗಳನ್ನು ಅಳವಡಿಸಲಾಗಿರುತ್ತದೆ. ಆದ್ದರಿಂದ ಸ್ಮಾರ್ಟ ಕಾರ್ಡ್ಗಳಲ್ಲಿರುವ ಮಾಹಿತಿಯ ಹೆಚ್ಚಿನ ಸುರಕ್ಷತೆ ಅಗತ್ಯವಿರುವ ಕ್ಷೇತ್ರಗಳಲ್ಲಿ ಮತ್ತು ನಿರ್ದಿಷ್ಟ ಕೆಲಸಗಳಿಗಾಗಿ ಮತ್ತು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಚಾಲ್ತಿಯಲ್ಲಿರಬೇಕಾದ ಸ್ಮಾರ್ಟ್ ಕಾರ್ಡ್ (ಉದಾಹರಣೆಗೆ ಮೊಬೈಲ್ ಫೋನ್ನ್ನಲ್ಲಿ ಬಳಸಲಾಗುವ ಸಿಮ್ ಕಾರ್ಡಗಳು) ಗಳಿಗಾಗಿ ಇಂತಹ ಸ್ಮಾರ್ಟ್ ಕಾರ್ಡ್ಗಳನ್ನು ಬಳಸಲಾಗುತ್ತದೆ. ಇಂತಹ ಸ್ಮಾರ್ಟ ಕಾರ್ಡಗಳನ್ನು ನಿರ್ದಿಷ್ಟ ಅವಧಿ ಅಥವಾ ಉದ್ದೇಶಕ್ಕಾಗಿ ಬಳಸಿ, ಅದು ನಿರುಪಯುಕ್ತವಾದಾಗ ಇ-ತ್ಯಾಜ್ಯವೆಂದು ಪರಿಗಣಿಸಬಹುದು. ಅದೇ ರೀತಿ, ಪುರ್ನಬಳಕೆ ಮಾಡಬಹುದಾದ ಇಂತಹ ಸ್ಮಾರ್ಟ್ ಕಾರ್ಡ್ ಕೂಡಾ ಲಭ್ಯವಿದೆ.
   ಒಂದೇ ಸ್ಮಾರ್ಟ್ ಕಾರ್ಡ್ನ್ನು ವಿಮೆ, ಆರೋಗ್ಯ ಮಾಹಿತಿ, ಗುರುತಿನ ಚೀಟಿ, ಆಧಾರ್ ಮಾಹಿತಿ, ಹೀಗೆ ವಿವಿಧೋದ್ದೇಶಕ್ಕಾಗಿ ಬಳಸುವಾಗ ಮಲ್ಟಿ ಫಂಕ್ಷಣ್ ಸ್ಮಾರ್ಟ್ ಕಾರ್ಡ್ಗಳನ್ನು ಬಳಸಲಾಗುತ್ತದೆ. ಇಂತಹ ಸ್ಮಾರ್ಟ್ ಕಾರ್ಡ್ಗಳಲ್ಲಿ ವಿವಿಧೋದ್ದೇಶಗಳ ಬಳಕೆ ಅನುವು ಮಾಡಿಕೊಡಲು, ಮೊಮೋರಿ ಜೊತೆಯಲ್ಲಿ ಮೈಕ್ರೋಚಿಪ್ ನ್ನು ಕೂಡಾ ಸ್ಮಾರ್ಟ್ ಕಾರ್ಡಿನಲ್ಲಿ ಅಳವಡಿಸಲಾಗಿರುತ್ತದೆ. ಪುಟ್ಟ, ಸಮರ್ಥಶಾಲಿ ಗಣಕದಂತೆ ಕೆಲಸ ಮಾಡುವ ಇಂತಹ ಸ್ಮಾರ್ಟ್ ಕಾರ್ಡ್ಗಳಲ್ಲಿ ಮಾಹಿತಿ ಸುರಕ್ಷತೆಗಾಗಿ ಹಲವಾರು ಪಿ.ಕೆ.ಐ ಮೊದಲಾದ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.
   ಸ್ಮಾರ್ಟ್ ಕಾರ್ಡ್ನಲ್ಲಿರುವ ಮಾಹಿತಿಯನ್ನು ಓದಲು ಮತ್ತು ಸಂಸ್ಕರಿಸಲು, ಸ್ಮಾರ್ಟ್ ಕಾರ್ಡ್ ರೀಡರ್ ಮತ್ತು ಟರ್ಮಿನಲ್ಗಳನ್ನು ಬಳಸಲಾಗುತ್ತದೆ. ಕಾಂಟ್ಯಾಕ್ಟ್ ಸ್ಮಾರ್ಟ್ ಕಾರ್ಡ್ ರೀಡರ್ನ್ನು ಬಳಸುವಾಗ, ಸ್ಮಾರ್ಟ್ ಕಾರ್ಡ್ನ್ನು ಈ ರೀಡರ್ ಉಪಕರಣದಲ್ಲಿ ಇಡಬೇಕಾಗುತ್ತದೆ. ರೇಡಿಯೋ ಫ್ರಿಕ್ವೆನ್ಸಿ (ಆರ್. ಎಫ್.) ತಂತ್ರಜ್ಞಾನ ಬಳಸುವ ಕಾಂಟ್ಯಾಕ್ಟ್ ರಹಿತ ಸ್ಮಾರ್ಟ್ ಕಾರ್ಡ್ ರೀಡರ್ಗಳ ಹತ್ತಿರ ಸ್ಮಾರ್ಟ್ ಕಾರ್ಡ್ ತಂದರೆ ಸಾಕು, ಸ್ಮಾರ್ಟ್ ಕಾರ್ಡ್ ಮತ್ತು ರೀಡರ್ ನಡುವೆ ಸಂವಹನ ಸಾಧ್ಯವಾಗುತ್ತದೆ.
   ಸ್ಮಾರ್ಟ್ ಕಾರ್ಡ್ ಟರ್ಮಿನಲ್ಗಳು ಗಣಕದಂತೆ, ತಮ್ಮದೇ ಆದ ಮೆಮೋರಿ, ಪ್ರೋಸೆಸರ್ ಮತ್ತು ಆಪರೇಟಿಂಗ್ ಸಿಸ್ಟಮ್ ಹೊಂದಿರುವುದರಿಂದ, ಸ್ಮಾರ್ಟ್ ಕಾರ್ಡ್ ರೀಡರ್ಗಳಿಗಿಂತ ಹೆಚ್ಚು ಸಾಮರ್ಥ್ಯ ಮತ್ತು ಉಪಯೋಗ ಹೊಂದಿವೆ. ಕಾಂಟ್ಯಾಕ್ಟ ರಹಿತ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯಲ್ಲಿ ಇಂತಹ ಟರ್ಮಿನಲ್ಗಳು ಹೆಚ್ಚು ಸೂಕ್ತವಾಗುತ್ತವೆ. ಉದಾಹರಣೆಗೆ ಹೆದ್ದಾರಿಯಲ್ಲಿರುವ ಟೋಲ್ ಬೂತ್ಗಳಲ್ಲಿ, ಟೋಲ್ ಪಾವತಿ ಮಾಡಲು ನಿಂತು, ಸಮಯ ವ್ಯಯಿಸಬೇಕಾದ ವಾಹನ ಚಾಲಕರಿಗೆ ಇಂತಹ ಸ್ಮಾರ್ಟ್ ಕಾರ್ಡ್ ಟರ್ಮಿನಲ್ಗಳ ಸೌಲಭ್ಯವನ್ನು ನೀಡಬಹುದಾಗಿದೆ. ಆಗ ಚಾಲಕನ ಬಳಿಯಿರುವ ಸ್ಮಾರ್ಟ್ ಕಾರ್ಡ್ನಿಂದ ಟೋಲ್ ಗೇಟ್ನಲ್ಲಿರುವ ಸ್ಮಾರ್ಟ್ ಕಾರ್ಡ್ ಟರ್ಮಿನಲ್ಗೆ ಟೋಲ್ ಮೊತ್ತವನ್ನು ಕೆಲವೇ ಕ್ಷಣಗಳಲ್ಲಿ ಪಾವತಿಸಿ, ಚಾಲಕ ತನ್ನ ಪ್ರಯಾಣ ಮುಂದುವರಿಸಬಹುದಾಗಿದೆ.
   ಐ.ಎಸ್.ಒ/ಐ.ಇ.ಸಿ 7816, ಐ.ಎಸ್.ಒ/ಐ.ಇ.ಸಿ 1443, ಐ.ಎಸ್.ಒ/ಐ.ಇ.ಸಿ 15693 ಮತ್ತು ಐ.ಎಸ್.ಒ/ಐ.ಇ.ಸಿ 7501 ಇವು ಸ್ಮಾರ್ಟ್ ಕಾರ್ಡ್ ಅನ್ವಯವಾಗುವ ಪ್ರಮುಖ ಅಂತರಾಷ್ಟೀಯ ಗುಣಮಟ್ಟದ ಶಿಷ್ಟಸಂಹಿತೆಗಳಾಗಿವೆ. ಇವುಗಳಲ್ಲದೆ, ಸ್ಮಾರ್ಟ್ ಕಾರ್ಡ್ಗಳಲ್ಲಿ ಬಳಸಲಾಗುವ ಬಯೋಮೆಟ್ರಿಕ್ಸ್, ಆರೋಗ್ಯ ಮಾಹಿತಿ ಸಂಗ್ರಹಣೆ, ಪಾಸ್ ಪೋರ್ಟ್ ಮೊದಲಾದ ದಾಖಲೆಗಳಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ಗಳಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆ, ಹೀಗೆ ವಿವಿಧ ಉದ್ದೇಶಗಳಿಗೆ ಅನ್ವಯವಾಗುವಂತೆ ವಿವಿಧ ಅಂತರಾಷ್ಟ್ರೀಯ ಮಾನದಂಡಗಳು ಮತ್ತು ಶಿಷ್ಟಸಂಹಿತೆಗಳನ್ನು ಬಳಸಲಾಗುತ್ತದೆ.
   ಉದಾಹರಣೆಗೆ, ವಿದ್ಯುನ್ಮಾನ ಪಾಸ್ಪೋರ್ಟ್ಗಳಲ್ಲಿ ಬಳಸಲಾಗುವ ಕಾಂಟ್ಯಾಕ್ಟ್ ರಹಿತ ಸ್ಮಾರ್ಟ್ ಚಿಪ್ಗಳಲ್ಲಿ ಪಾಸ್ ಪೋರ್ಟ್ ಮಾಹಿತಿ ಗೌಪ್ಯವಾಗಿಡಲು, ಅಗತ್ಯವಾದ ಶಿಷ್ಟಸಂಹಿತೆಯನ್ನು ಅಂತರಾಷ್ಟ್ರೀಯ ಸಿವಿಲ್ ಏವಿಯೇಷನ್ ಸಂಸ್ಥೆ (ಐಎಸಿಒ) ಪ್ರಕಟಿಸಿದೆ. ಅದರಂತೆ, ಕಂಪ್ಯೂಟರ್ ಸೆಕ್ಯೂರಿಟಿ ಡಿವಿಷನ್ ಅಭಿವೃದ್ಧಿಪಡಿಸಿರುವ ಫೆಡೆರಲ್ ಮಾಹಿತಿ ಸಂಸ್ಕರಣೆ ಶಿಷ್ಟಸಂಹಿತೆ (ಎಫ್.ಐ.ಪಿ.ಎಸ್) ಯಲ್ಲಿ ಎಫ್.ಐ.ಪಿ.ಎಸ್ 140 (1-3)ರಲ್ಲಿ ಸ್ಮಾರ್ಟ್ ಕಾರ್ಡ್ನಲ್ಲಿ ಬಳಸಬೇಕಾದ ಮಾಹಿತಿ ಸುರಕ್ಷತೆ ವ್ಯವಸ್ಥೆಯ ವಿನ್ಯಾಸ, ಕ್ರಿಫ್ಟೋಗ್ರಾಫಿಕ್ ಮಾಡ್ಯೂಲ್ ವಿವರಣೆ, ವಿದ್ಯುತ್ ಅಯಸ್ಕಾಂತೀಯ ವ್ಯವಸ್ಥೆಯಲ್ಲಿ ಮಾಹಿತಿ ಸುರಕ್ಷತೆ (ಇ.ಎಮ್.ಸಿ) ಮತ್ತು ಮಾಹಿತಿ ಕಳವು ಮಾಡುವ ಪ್ರಯತ್ನಗಳಿಂದ ಮಾಹಿತಿಯನ್ನು ಸುರಕ್ಷಿತವಾಗಿಡುವ ಮಾರ್ಗೋಪಾಯಗಳನ್ನು ವಿವರಿಸಲಾಗಿದೆ. ಎಫ್.ಐ.ಪಿ.ಎಸ್ 201 ಶಿಷ್ಟಸಂಹಿತೆಯಲ್ಲಿ ಅಮೇರಿಕಾ ಸರ್ಕಾರದಲ್ಲಿ ಬಳಕೆಯಾಗುವ ವಿವಿಧೋದ್ದೇಶ ಸ್ಮಾರ್ಟ್ ಕಾರ್ಡ್ಗಳಲ್ಲಿ ಮಾಹಿತಿ ಗೌಪ್ಯತೆ ಕುರಿತು ವಿವರಿಸಲಾಗಿದೆ.
   ಸ್ಮಾರ್ಟ್ ಕಾರ್ಡ್ಗಳನ್ನು ಬಳಸಿ ಹಣ೦ ಪಾವತಿ  ಮಾಡುವ ವ್ಯವಸ್ಥೆಯಲ್ಲಿ ಹೇಗೆ ಕಾರ್ಡ್ದಾರನ ಮಾಹಿತಿಯನ್ನು ಸುರಕ್ಷಿತವಾಗಿಡಬೇಕು ಎಂದು ಬ್ಯಾಂಕುಗಳಿಗೆ ತಿಳಿಸುವ ಇ.ಎಮ್.ವಿ ಶಿಷ್ಟಸಂಹಿತೆಯನ್ನು ಯ್ಯುರೋಪೇ, ವಿಐಎಸ್ಎ ಮತ್ತು ಮಾಸ್ಟರ್ ಕಾರ್ಡ್ ಸಂಸ್ಥೆಗಳು ಪ್ರಕಟಿಸಿವೆ.
   ಜಿ.ಎಸ್.ಎಮ್. ಮೊಬೈಲ್ ಪೋನ್ಗಳಲ್ಲಿ ಬಳಸಲಾಗುವ ಸಿಮ್ ಕಾರ್ಡ್ಗಳಲ್ಲಿರುವ ಮಾಹಿತಿಯ ಗೌಪ್ಯತೆಗಾಗಿ ಟೆಲಿಕಾಂ ಉದ್ಯಮ ಪಾಲಿಸಬೇಕಾದ ಶಿಷ್ಟಸಂಹಿತೆಯನ್ನು ಸಿ.ಇ.ಎನ್ ಮತ್ತು ಇ.ಟಿ.ಎಸ್.ಐ ಸಂಸ್ಥೆಗಳು ಪ್ರಕಟಿಸಿವೆ. ಅದೇ ರೀತಿ, ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಗಳು, ಆರೋಗ್ಯ ಕುರಿತು ಮಾಹಿತಿ, ವಿಮೆಯ ವಿವರಗಳು, ಬ್ಯಾಂಕಿಂಗ್ ವಿವರಗಳನ್ನು ಸ್ಮಾರ್ಟ್ ಕಾರ್ಡಿನಲ್ಲಿ ನೀಡುವಾಗ ಬಳಸಬೇಕಾದ ಶಿಷ್ಟಸಂಹಿತೆಯನ್ನು ಎಚ್.ಐ.ಪಿ.ಎ.ಎ ಮಾನದಂಡಗಳು ನೀಡುತ್ತವೆ.
   ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿಯನ್ನು ಸ್ಮಾರ್ಟ್ಕಾರ್ಡಿನಲ್ಲಿ ನೀಡು ವಾಗ, ಮಾಹಿತಿಯ ಗೌಪ್ಯತೆಯನ್ನು ಕಾಪಾಡಲು ಐ.ಎಸ್.ಒ/ಐ.ಇ.ಸಿ 19794 ಶಿಷ್ಟಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಸ್ಮಾರ್ಟ್ ಕಾರ್ಡ್ಗಳನ್ನು ಬಳಸಲು ಅಗತ್ಯವಾದ ಸ್ಮಾರ್ಟ್ ಕಾರ್ಡ್ ರೀಡರ್/ ಟರ್ಮಿನಲ್ ವ್ಯವಸ್ಥೆ, ಮಾಹಿತಿ ಸಂಗ್ರಹಿಸಲು ಡೇಟಾ ಬೇಸ್ ವ್ಯವಸ್ಥೆ, ಮಾಹಿತಿ ಸಂಸ್ಕರಿಸುವ ಗಣಕಗಳ ವ್ಯವಸ್ಥೆ, ಮಾಹಿತಿ ಸುರಕ್ಷತೆ ವ್ಯವಸ್ಥೆ, ಹೀಗೆ ಸಮಗ್ರ ವ್ಯವಸ್ಥೆಯನ್ನು ಹೇಗೆ ವಿನ್ಯಾಸಗೊಳಿಸಬೇಕು ಮತ್ತು ಅನುಷ್ಠಾನಗೊಳಿಸಬೇಕು ಎಂದು ತಿಳಿಸುವ ಅಂತರಾಷ್ಟ್ರೀಯ ಶಿಷ್ಟಸಂಹಿತೆಗಳು ಮತ್ತು ವಿಧಾನಗಳಿವೆ. ಅದೇ ರೀತಿ ಬಳಕೆಯಲ್ಲಿರುವ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಹೇಗೆ ನಿರ್ವಹಿಸಬೇಕು, ಒಮ್ಮೆ ಮಾಹಿತಿ ಕಳುವಿನ ಪ್ರಯತ್ನಗಳು ನೆಡೆದರೆ ಹೇಗೆ ತುರ್ತುಕ್ರಮಗಳನ್ನು ಕೈಗೊಳ್ಳಬೇಕು ಎಂದು ಬ್ಯಾಂಕುಗಳು, ಸರ್ಕಾರಗಳು, ಹೀಗೆ ವಿವಿಧ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ತಿಳಿಸುವ ಅಂತರಾಷ್ಟ್ರೀಯ ಮಾನದಂಡಗಳು ಮತ್ತು ವಿಧಾನಗಳಿವೆ. ಸ್ಮಾರ್ಟ್ ಕಾರ್ಡ್ ಮತ್ತು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಆಗಾಗ ಆಡಿಟ್ ಮಾಡಿ, ಏನಾದರೂ ಕುಂದುಕೊರತೆಗಳು ಕಂಡು ಬಂದರೆ ಅದನ್ನು ತಂತ್ರಜ್ಞರ ನೆರವಿನಿಂದ ಪರಿಹರಿಸುವ ಹೊಣೆ ಬ್ಯಾಂಕುಗಳು, ಸರ್ಕಾರ ಮೊದಲಾದ ಸ್ಮಾರ್ಟ್ ಕಾರ್ಡ್ ಬಳಕೆದಾರರದ್ದಾಗಿರುತ್ತದೆ.
   ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯಲ್ಲಿನ ಮಾಹಿತಿ ಸುರಕ್ಷತೆಯನ್ನು ವಿನ್ಯಾಸಗೊಳಿಸುವಾಗ ಈ ವ್ಯವಸ್ಥೆಯಲ್ಲಿ ಬಳಸಲಾಗಿರುವ ಹಾರ್ಡ್ವೇರ್, ತಂತ್ರಾಂಶಗಳು, ಡೇಟಾ ಮತ್ತು ಈ ವ್ಯವಸ್ಥೆಯನ್ನು ಬಳಸುವ ವ್ಯಕ್ತಿಗಳನ್ನು ಪರಿಗಣಿಸಿ ಸಮಗ್ರ ಮಾಹಿತಿ ಸುರಕ್ಷತೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ಒ.ಟಿ.ಪಿ ( ಒನ್ ಟೈಂ ಪಾಸವರ್ಡ), ಬಯೋಮೆಟ್ರಿಕ್ಸ ಪಾಸ್ವರ್ಡ್, ಸೆಕ್ಯೂರಿಟಿ ಟೋಕನ್ಗಳು, ಡಿಜಿಟಲ್ ಸಹಿ, ಹೀಗೆ ಅನೇಕ ರೀತಿಯ ಮಾಹಿತಿಯ ಸುರಕ್ಷತೆ ವಿಧಾನಗಳು ಮತ್ರು ತಂತ್ರಜ್ಞಾನಗಳನ್ನು ಬಳಸಿ ಸ್ಮಾರ್ಟ್ ಕಾರ್ಡ್ ಮತ್ತು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯಲ್ಲಿರುವ ಮಾಹಿತಿಯ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಲಾಗುತ್ತದೆ. ಆಧುನಿಕ ತಂತ್ರಜ್ಞಾನ ಅಭಿವೃದ್ಧಿಯಿಂದ, ಸ್ಮಾರ್ಟ್ ಕಾರ್ಡ್ ಮತ್ತು ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಬಳಸಿ ಹೆಚ್ಚು ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿದೆ. ಅದೇ ರೀತಿ, ಸ್ಮಾರ್ಟ್ ಕಾರ್ಡ್ ಬಳಸುವ ಜನ ಕೂಡಾ ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ಪಾಲಿಸಿದರೆ, ಸ್ಮಾರ್ಟ್ ಕಾರ್ಡ್ ಮಾಹಿತಿ ಕಳವು ಮತ್ತು ದುರ್ಬಳಕೆಪ್ರಕರಣಗಳ ಸಂಖ್ಯೆವಿರಳವಾಗುತ್ತದೆ.

[೧]

  1. https://en.wikipedia.org/wiki/Smart_card