ಸದಸ್ಯ:Nandhinisrvn/ನನ್ನ ಪ್ರಯೋಗಪುಟ
ನಮಸ್ಕಾರ,
ನನ್ನ ಹೆಸರು ನಂದಿನಿ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುತ್ತೇನೆ. ನಮ್ಮ ತಂದೆಯ ಹೆಸರು ಶಿವಕುಮಾರ್, ಅವರು ಆಟೋ ಡ್ರೈವರ್ ಕೆಲಸವನ್ನು ಮಾಡುತ್ತಿದ್ದಾರೆ . ತಾಯಿಯ ಹೆಸರು ರೂಪ, ಅವರು ಅಗರಬತ್ತಿ ಕೆಲಸವನ್ನೂ ಮಾಡುತ್ತಿದ್ದಾರೆ. ನನಗೆ ಒಬ್ಬ ಅಣ್ಣ ಇದ್ದಾನೆ. ಅವನ ಹೆಸರು ವೆಂಕಟೇಶ್ ಅವನು ಈಗ ಬಿಐಟಿ ಎಂಬ ಕಾಲೇಜಿನಲ್ಲಿ ಇಂಜಿನಿಯರಿಂಗ್ ಎರಡನೆಯ ವರ್ಷ ಓದುತ್ತಿದ್ದಾನೆ .ಸುರೇಖಾ ಇಂಟರ್ನ್ಯಾಷನಲ್ ಸ್ಕೂಲ್ ಎಂಬ ಶಾಲೆಯಲ್ಲಿ ನಾನು ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ. ಎಲ್ಕೆಜಿಯಿಂದ ಹತ್ತನೇ ತರಗತಿಯ ತನಕ ಅಲ್ಲಿ ಅಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿರುತ್ತೇನೆ ನಾನು ಹತ್ತನೆಯ ತರಗತಿಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿ ಹೊರಗೆ ಬಂದೆ . ಮು೦ದೆ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ನಾನು ಹನುಮಂತನಗರದಲ್ಲಿ ಇರುವಂತಹ ಎಸ್ಎನ್ ಬಟ್ ಪಿಯು ಕಾಲೇಜಿಗೆ ಸೇರಿದೆ, ನಾನು ಹನ್ನೊಂದನೆಯ ಮತ್ತು ಹನ್ನೆರಡನೆಯ ತರಗತಿಯನ್ನು ಅಲ್ಲಿಯೇ ಮುಗಿಸಿ ಹೊರಗೆ ಬಂದೆ .ನನ್ನ ಜೀವನದಲ್ಲಿ ತುಂಬಾ ಆಶ್ಚರ್ಯವಾಗುವಂತಹದ್ದು ಐಎಸ್ಎನ್ ಬೆಡ್ ಪಿಯು ಕಾಲೇಜು ಏಕೆಂದರೆ ಅಲ್ಲಿ ಬರುತ್ತಿದ್ದ ಎಲ್ಲಾ ಗುರುಗಳು ತುಂಬಾ ತುಂಬಾ ಬುದ್ಧಿವಂತರಾಗಿದ್ದರು. ಅವರು ಹೇಳಿ ಕೊಟ್ಟಿರುವ ಪಾಠವನ್ನುಕಲಿತರೆ ಸಾಕು .ಅಲ್ಲಿನ ಗುರುಗಳು ಬರೀ ಪುಸ್ತಕಗಳಲ್ಲಿರುವ ವಿಷಯಗಳನ್ನಷ್ಟೇ ಹೇಳದೆ, ಇನ್ನಿತರ ಮಾಹಿತಿಗಳನ್ನು ಸಹ ನಮಗೆ ಹೇಳಿ ತಿಳಿಸಿಕೊಡುತ್ತಾ ಇದ್ದರು . ಅಲ್ಲಿ ತುಂಬಾ ಜನಕ್ಕೆ ಇಂಗ್ಲಿಷಲ್ಲಿ ಟೀಚರ್ ಮಾಡುತ್ತಿದ್ದ ಪಾಠವು ಅರ್ಥ ಆಗುತ್ತಿರಲಿಲ್ಲ, ಆದ್ದರಿಂದ ಟೀಚರುಗಳು ಆ ಕಾಲೇಜಿನಲ್ಲಿ ಇಂಗ್ಲಿಷ್ ಮಾತ್ರ ಮಾತನಾಡುತ್ತಿರಲಿಲ್ಲ ನಮ್ಮ ತಾಯಿ ಭಾಷೆ ಕನ್ನಡದಲ್ಲಿ ನಮಗೆ ವಿದ್ಯೆಯನ್ನು ಕಲಿಸಿ ಕೊಡುತ್ತಿದ್ದರು .ಆಗ ನನಗೆ ಚೆನ್ನಾಗಿ ಅರ್ಥ ಆಗುತ್ತಿತ್ತು ಬರೀ ಇಂಗ್ಲಿಷಲ್ಲೇ ಆ ಟೀಚರ್ ಪಾಠ ಮಾಡಿದ್ದರೆ ನನಗೆ ಅಷ್ಟೊಂದು ಅರ್ಥ ಆಗುತ್ತಿರಲಿಲ್ಲ. ನನಗೆ ಪಾಠ ಮಾಡುವ ಎಲ್ಲ ಗುರುಗಳು ನನಗೆ ತುಂಬಾ ಇಷ್ಟ. ನಮ್ಮ ಗುರುಗಳನ್ನು ನಾನು ಇಂದಿಗೂ ಸ್ಮರಿಸುತ್ತೇನೆ. ನಮ್ ಫಿಸಿಕ್ಸ್ ಎಸ್ಸೆನ್ ಬಿಗಿಯಾಗಲಿ ಆಮೇಲೆ ಫಿಸಿಕ್ಸ್ ಎಲ್ ಆಫ್ ಕೆಮಿಸ್ಟ್ರಿ ಮ್ಯಾಕ್ಸ್ ಬಾಯಲಾಜಿ ಕನ್ನಡ ಇಂಗ್ಲಿಷ್ ಎಲ್ಲ ಗುರುಗಳನ್ನು ತುಂಬಾ ನೆನಪಿಸಿಕೊಳ್ಳುತ್ತೇನೆ . ನಾನೇನು ಅಷ್ಟು ದೊಡ್ಡ ಶ್ರೀಮಂತರ ಮನೆಯ ಹುಡುಗಿಯಲ್ಲ .ನಮಗೆ ತುಂಬಾ ಬಡತನ ಇದೆ ನಮ್ಮ ತಂದೆಯೂ ತಾಯಿ ತುಂಬಾ ಕಷ್ಟಪಟ್ಟು ನನ್ನ ಮತ್ತು ನನ್ನ ಅಣ್ಣನನ್ನು ಓದಿಸುತ್ತಿದ್ದಾರೆ. ನಾವು ಈಗ ಇರುವುದು ಸಣ್ಣ ಪುಟ್ಟ ಮನೆಯಲ್ಲಿ ಆ ಚಿಕ್ಕ ಮನೆಯಲ್ಲಿ ನಾವು ವಾಸಿಸುತ್ತಿವೆ .ಅಂತ ಕಷ್ಟದಲ್ಲಿ ಕೂಡ ನಮ್ಮ ಅಪ್ಪ ಅಮ್ಮ ನನ್ನನ್ನು ರಕ್ಷಿಸಿ ಪೋಷಿಸಿ ಮತ್ತು ಓದಿಸುತ್ತಿದ್ದಾರೆ. ನನ್ನ ಜೀವನದಲ್ಲಿ ನಾನು ಶ್ರೀಮಂತರ ರೀತಿ ಬದುಕಬೇಕೆಂಬ ಆಸೆ ಇದೆ ಆದರೂ ಬಡವರ ಮನೆಯಲ್ಲಿ ಹುಟ್ಟಿ ಆ ತರಹ ಇರೋಕೆ ಸಾಧ್ಯವಿಲ್ಲ .ನಮ್ಮ ಅಪ್ಪನಿಂದ ಕಷ್ಟಗಳನ್ನು ತುಂಬಾ ತಿಳಿದುಕೊಂಡಿದ್ದೇನೆ, ಆದ್ದರಿಂದ ನನಗೆ ನಾನು ಯಾವುದೂ ಕೀಳಲ್ಲ.
ನನಗೆ ಚಿಕ್ಕ ವಯಸ್ಸಿನಿಂದ ಡಾಕ್ಟರ್ ಆಗ್ಬೇಕು ಅಂತ ತುಂಬಾ ಆಸೆ ಇತ್ತು .ಹತ್ತನೆಯ ತರಗತಿಯ ತನಕ ನಾನು ಒಂದು ಒಳ್ಳೆಯ ಡಾಕ್ಟರ್ ಆಗಿ ಬಡವರಿಗೆ ಉಚಿತವಾಗಿ ಸೇವೆ ಮಾಡಬೇಕು ಅಂತ ಒಂದು ಆಸೆ ಇತ್ತು ನನಗೆ .ಆದರೆ ದ್ವಿತೀಯ ಪಿ.ಯು. ನಲ್ಲಿ ನೀಟ್ ಎಂಬ ಪರೀಕ್ಷೆ ಬರೆದು ಅದರಲ್ಲಿ ಒಳ್ಳೆಯ ಅಂಕಗಳು ಬಂದರೆ ಮಾತ್ರ ಸರ್ಕಾರಿ ಸೀಟ್ ಸಿಗುತ್ತದೆ,ಇಲ್ಲವಾದರೆ ಖಾಸಗಿ ಸೀಟ್ ಗೆ ಲಂಚ ಕೊಡಬೇಕು ಎಂಬ ಮಾಹಿತಿ ತಿಳಿಯಿತು. ಅದು ನಮ್ಮ ಅಪ್ಪ ಅಮ್ಮ ಕೈಯಲ್ಲಿ ಆಗೋದಿಲ್ಲ ಎಂದು ತಿಳಿದ ನಾನು ಸಿಇಟಿ ಬರೆದು ಇಂಜಿನಿಯರಿಂಗ್ ಆಗಬೇಕು ಅಂದುಕೊಂಡೆ. ಸಿ.ಎ.ಟಿ.ಯಲ್ಲಿ ಸರಿಯಾದ ಅಂಕ ಬರಲಿಲ್ಲ,ಆದ್ದರಿಂದ ಸರ್ಕಾರಿ ಸೀಟು ಸಿಗಲಿಲ್ಲ ,ಖಾಸಗಿ ಸೀಟು ಸಿಕ್ಕಿತು.ಖಾಸಗಿ ಕಾಲೇಜಿನಲ್ಲಿ ಒಂದು ಎರಡು ಲಕ್ಷ ಬೇಡಿಕೆ ಇಟ್ಟರು. ನಮ್ಮಪ್ಪನ ಕೈಯಲ್ಲಿ ಅಷ್ಟು ದುಡ್ಡನ್ನು ಕಟ್ಟಲಾಗಲಿಲ್ಲ, ಆದ್ದರಿಂದ ಇಂಜಿನಿಯರಿಂಗ್ ಬೇಡ ಅಂತ ತೀರ್ಮಾನಿಸಿ ಕೊನೆಗೆ ಕಾಮರ್ಸ್ ತೆಗೆದುಕೊಳ್ಳುವುದರ ಬಗ್ಗೆ ಯೋಚಿಸಿದೆ .ಕೊನೆಗೆ ನಮ್ಮಪ್ಪನ ಸಲಹೆಯಂತೆ ಬಿಎಸ್ಸಿ ಮಾಡಲು ನಿರ್ಧರಿಸಿದೆ ಮತ್ತು ಸದ್ಯ ಕ್ರೈಸ್ಟ್ ಕಾಲೇಜಿನಲ್ಲಿ ಬಿಎಸ್ಸಿಗೆ ಓದುತ್ತಿದ್ದೇನೆ .ನಮ್ಮಪ್ಪನಿಗೆ ಎಷ್ಟು ಕಷ್ಟ ಬಂದರೂ ನಮ್ಮ ಮುಂದೆ ಆ ಕಷ್ಟವನ್ನು ಬಚ್ಚಿಟ್ಟು ನನ್ನನ್ನು ಓದಿಸುತ್ತಿದ್ದಾರೆ.ಆ ಕಷ್ಟವನ್ನು ನಾನು ಅರ್ಥ ಮಾಡಿಕೊಂಡೇ ನಮ್ಮಪ್ಪನ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂಬ ನಂಬಿಕೆ ನನಗಿದೆ .ನಮಗೆ ಸಹಾಯ ಮಾಡುವುದಕ್ಕೆ ಯಾವ ಬಂಧು ಬಳಗವೂ ಇಲ್ಲ ಯಾರ ಸಲಹೆಯನ್ನು ಎದುರು ನೋಡದೆ ನಮ್ಮಪ್ಪ ಅವರು ಸ್ವಂತ ಬಲದಿಂದ ಕಷ್ಟಪಟ್ಟು ದುಡಿದು ಒಳ್ಳೆಯ ರೀತಿಯಲ್ಲಿ ನಮ್ಮನ್ನು ರಕ್ಷಿಸಿ ಪೋಷಿಸುತ್ತಾರೆ . ನಾನು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಒಂದು ಒಳ್ಳೆಯ ಕೆಲಸಕ್ಕೆ ಸೇರಬೇಕೆಂಬುದು ನನ್ನ ಆಸೆ. ನನ್ನ ಜೀವನದಲ್ಲಿ ಈ ಕ್ರೈಸ್ಟ್ ಕಾಲೇಜು ನನಗೆ ಸಿಕ್ಕಿದ್ದೇ ತುಂಬಾ ಖುಷಿ ಕೊಟ್ಟಿತು, ಏಕೆಂದರೆ ಇಲ್ಲಿ ತುಂಬಾ ಹೈಫೈ ಮಕ್ಕಳೇ ಬರೋದು ನಾನು ಓದಿರುವ ಶಾಲೆ ,ಕಾಲೇಜುಗಳಿಗಿಂತ ಇದು ಭಿನ್ನವಾಗಿದೆ .ಕ್ರೆಸ್ಟ್ ಅಂತಹ ಕಾಲೇಜಿನಲ್ಲಿ ನಾನು ಓದುತ್ತೀನಿ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ.ಈಗ ನಾನು ಜೀವನದಲ್ಲಿ ಓದಿ ಒಳ್ಳೆಯ ಕೆಲಸವನ್ನು ಪಡೆದುಕೊಂಡು ನಾನು ನಮ್ಮಪ್ಪ ಅಮ್ಮನನ್ನು ಸಾಕಬೇಕು, ದೊಡ್ಡ ಮನೆಗೆ ಹೋಗಬೇಕು ಮತ್ತು ಒಳ್ಳೆಯ ಊಟವನ್ನು ಮಾಡಬೇಕೆಂಬ ಎಂಬ ಆಸೆಗಳು ನನಗಿದೆ .ನನ್ನ ಬಗ್ಗೆ ತಿಳಿಸುವುದಕ್ಕೆ ಒಂದು ಅವಕಾಶ ಕೊಟ್ಟ ರಾಜೇಶ್ ಸರ್ ಗೆ ತುಂಬಾ ಧನ್ಯವಾದಗಳು .
ಚಿತ್ತೂರು
[ಬದಲಾಯಿಸಿ]ನನ್ನ ತಂದೆಯ ಊರು ಚಿತ್ತೂರು .ತಿರುಪತಿ ಇರುವುದು ಚಿತ್ತೂರಿನಲ್ಲಿ .ತಿರುಪತಿ ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರವನ್ನು ಭೂವೈಕುಂಠ ಎಂದು ಕರೆಯಲಾಗುತ್ತದೆ. ತಿರುಪತಿಯು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ. ಇಲ್ಲಿರುವ ವೆಂಕಟೇಶ್ವರ ದೇವಾಲಯವು ಜಗತ್ತಿನಲ್ಲಿಯೇ ಅತಿ ಹೆಚ್ಚು ಆದಾಯವಿರುವ ದೇವಾಲಯವೆಂದು ಪರಿಗಣಿಸಲಾಗಿದೆ. ಇದು ೧೦೮ ವೈಷ್ಣವ ದಿವ್ಯದೇಶಗಳಲ್ಲಿ ಒಂದು. ಬೆಂಗಳೂರಿನಿಂದ ತಿರುಪತಿಗೆ ಸುಮಾರು ೨೫೦ ಕಿ,ಮೀ, ದೂರವಿದೆ. ಬಸ್ಸು , ರೈಲು ಮತ್ತು ವಿಮಾನ ಮಾರ್ಗದಿಂದ ಹೋಗ ಬಹುದು.ಚಿತ್ತೂರಿನ ಬಳಿ ಬಿಳಿ ಮತ್ತು ಕೆಂಪು ಚಂದನದ ಮರಗಳುಂಟು. ಅವುಗಳಿಂದ ಸುಂದರವಾದ ಗೊಂಬೆಗಳು ಮುಂತಾದ ಸರಕುಗಳನ್ನು ತಯಾರಿಸಲಾಗುತ್ತದೆ. ಇಲ್ಲಿ ಷರಾಬು ತಯಾರಿಸುವ ಹಾಗೂ ಚರ್ಮ ಹದ ಮಾಡುವ ಕಾರ್ಖಾನೆಗಳುಂಟು. ಗ್ರಾನೈಟ್ ಶಿಲೆಯ ವ್ಯಾಪಾರವೂ ನಡೆಯುತ್ತದೆ.
ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜು. ಶಿಕ್ಷಕರ ಕಾಲೇಜು ಮತ್ತು ಶಾಲೆಗಳಿವೆ. ಕಾಕಂಬಿ, ಮಾವಿನಹಣ್ಣು, ನೆಲಗಡಲೆಗಳಿಗೆ ಚಿತ್ತೂರು ಪ್ರಮುಖ ಮಾರುಕಟ್ಟೆ. ಬಿಸ್ಕತ್, ಮುರಬ್ಬ, ಮಿಠಾಯಿ, ಉಪ್ಪಿನ ಕಾಯಿಗಳ ತಯಾರಿಕೆಗೆ ಪ್ರಸಿದ್ಧಿ ಪಡೆದಿದೆ. ಭಾರತದ ಪ್ರಮುಖ ದೈನಿಕಗಳಲ್ಲೊಂದಾದ ಇಂಡಿಯನ್ ಎಕ್ಸ್‍ಪ್ರೆಸ್ ಚಿತ್ತೂರಿನಿಂದಲೂ ಪ್ರಕಟವಾಗುತ್ತದೆ.ಜಿಲ್ಲೆಯ ಮುಖ್ಯ ಬೆಳೆಗಳು ಬತ್ತ. ರಾಗಿ ಮತ್ತು ಎಣ್ಣೆಕಾಳುಗಳು, ಈ ಜಿಲ್ಲೆಯ ಚಂದ್ರಗಿರಿ ತಾಲ್ಲೂಕಿನ ತಿರುಮಲೈ ಬೆಟ್ಟದ ಮೇಲೆ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ದೇಶದ ಎಲ್ಲೆಡೆಗಳಿಂದ ಲಕ್ಷಾಂತರ ಯಾತ್ರಿಕರು ಬರುತ್ತಾರೆ. ಕಾಳಹಸ್ತಿಯಲ್ಲಿರುವ ಶಿವದೇವಾಲಯ ಪ್ರಸಿದ್ಧವಾದ್ದು.
ಸಿಲಿಕಾನ್ ಸಿಟಿ ಬೆಂಗಳೂರು
[ಬದಲಾಯಿಸಿ]ಪ್ರಸ್ತುತವಾಗಿ ಈಗ ನಾವು ಇರುವುದು ಬೆಂಗಳೂರಿನಲ್ಲಿ .ಬೆಂಗಳೂರನ್ನು" ಸಿಲಿಕಾನ್ ಸಿಟಿ" ಎಂದು ಕರೆಯುತ್ತಾರೆ.ಇಲ್ಲಿ ಐ.ಟಿ ,ಬಿ .ಟಿ ಕಂಪನಿಗಳು ಬಹಳಷ್ಟಿವೆ .ಎಲ್ಲಿ ನೋಡಿದರು ಗಗನಚುಂಬಿ ಕಟ್ಟಡಗಳು .ಬೆಂಗಳೂರಿನ ಪ್ರಮುಖ ಸ್ಥಳಗಳೆಂದರೆ ವಿಧಾನಸೌಧ , ಲಾಲಬಾಗ್ ಸಸ್ಯ ಉದ್ಯಾನವನ , ಕಬ್ಬನ್ ಪಾರ್ಕ್ , ಹೈ ಕೋರ್ಟ್ ,ಟಿಪ್ಪುವಿನ ಬೇಸಿಗೆ ಅರಮನೆ,ಗವಿಗಂಗಾಧರೇಶ್ವರ ದೇಗುಲ ಮುಂತಾದವು .
ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ [೧].ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.[೨]. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ.[೩] ಕರ್ನಾಟಕದ ಗೆಜೆಟ್ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ[೧] ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣವನ್ನು ಕನ್ನಡನಾಡಿನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಮೇ ೨೦೧೫ ರಲ್ಲಿ ಮರುನಾಮಕರಣ[೨] ಮಾಡಲಾಗಿ, ೩ ಫೆಬ್ರವರಿ ೨೦೧೬ ರಿಂದ ಅಧಿಕೃತಗೊಳಿಸಲಾಗಿದೆ.[೩] ಈ ನಿಲ್ದಾಣವು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಾಗಿಕೊಂಡಿದೆ. ಈ ನಿಲ್ದಾಣವು ನೈಋತ್ಯ ರೈಲ್ವೆ ಹಾಗು ಭಾರತೀಯ ರೈಲ್ವೆಯ ಬಹುಮುಖ್ಯ ಕೇಂದ್ರವಾಗಿದೆ. ಈ ನಿಲ್ದಾಣವು ೧೦ ಅಂಕಣಗಳು ಹಾಗು ೨ ಪ್ರವೇಶ ದ್ವಾರಗಳನ್ನು ಹೊಂದಿದೆ. ಇದು ಭಾರತದ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ.
ನಮ್ಮ ಊರಿನ ಪ್ರಸಿದ್ಧ ಆಹಾರ ಪದಾರ್ಥಗಳೆಂದರೆ ಮಸಾಲಾ ದೋಸೆ ,ಪೂರಿ ,ಇಡ್ಲಿ ವಡೆ ,ಬಾತ್ ,ಅಕ್ಕಿರೊಟ್ಟಿ ,ರಾಗಿರೊಟ್ಟಿ ಮುಂತಾದವುಗಳು .ಹಾಗು ತಿಂಡಿ ತಿನಿಸುಗಳಲ್ಲಿ ಪ್ರಮುಕವಾದವು ಪಾನಿ ಪೂರಿ ,ಮಸಾಲೆ ಪೂರಿ ,
ನಾನು ಚಿಕ್ಕ ವಯಸ್ಸಿನಿಂದಲೂ ಬೆಂಗಳೂರಿನಲ್ಲೇ ಬೆಳೆದವಳು .ನನ್ನ ಬೆನ್ನ ಹಿಂದೆ ಮಾತನಾಡುವವರ ಬಗ್ಗೆ ನಾನು ಎಂದೂ ತಲೆಯನ್ನೂ ಕೆಡಿಸಿಕೊಳ್ಳುವುದಿಲ್ಲ ,ಏಕೆಂದರೆ ನಮ್ಮ ಕಾಲನ್ನು ಎಳೆಯುವವರು ಎಂದು ನಮ್ಮ ಕಾಲ ಕೆಳಗೆ ಇರುತ್ತಾರೆ ನಾವು ಅವರಿಗಿಂತ ಉನ್ನತ ಮಟ್ಟದಲ್ಲಿ ಇರುತ್ತೇವೆ ಎಂಬುದು ನನ್ನ ಭಾವನೆ ."ಆಳಾಗಿ ದುಡಿ ಅರಸನಾಗಿ ಉಣ್ಣು"ಎಂಬ ಗಾದೆಯ ಮಾತಿನಂತೆ ನಾವು ಏನಾದರೂ ಜೀವನದಲ್ಲಿ ಸಾಧಿಸಬೇಕು ಎಂದರೆ ಮೊದಲು ನಾವು ಕಷ್ಟಪಟ್ಟು ದುಡಿಯುವುದೊoದೆ ದಾರಿ. ನನಗೆ ಒಂದೇ ಒಂದು ಆಸೆಯಿದೆ ಅದೇನೆಂದರೆ ಜೀವನದಲ್ಲಿ ಒಮ್ಮೆಯಾದರೂ ನಟಿಯಾಗಿ ಅಭಿನಯವನ್ನು ಮಾಡಬೇಕೆಂಬುದು. ಕೊನೆಯದಾಗಿ ಹೇಳುವುದಾದರೆ ನನಗೆ ನನ್ನ ಮೇಲೆ ಹೆಮ್ಮೆ ಇದೆ.ನನಗೆ ನನ್ನ ಜೀವನದಲ್ಲಿ ಸಹಾಯವನ್ನು ಮಾಡಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ನನ್ನ ತಪ್ಪುಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ಅವರಿಗೆ ನನ್ನ ಕ್ಷಮೆಯನ್ನು ಬೇಡುತ್ತೇನೆ.
ವಂದನೆಗಳು.