ಸದಸ್ಯ:Muthamma473/WEP 2018-19 dec
ಫ್ರಾನ್ಸೆಸ್ ಅರ್ನಾಲ್ಡ್ ಅವರು ಅಮೆರಿಕಾದ ಪ್ರಖ್ಯಾತ ರಾಸಾಯನಿಕ ಎಂಜಿನಿಯರ್ ಆಗಿರುವರು.
ಜೀವನ
[ಬದಲಾಯಿಸಿ]ಅರ್ನಾಲ್ಡ್ ಅವರು ೧೯೫೬, ಜೂಲೈ ೨೫ ರಂದು ಜನಿಸಿದರು.ಇವರು ಜೋಸೆಫೈನ್ ಇನ್ಮನ್ ಮತ್ತು ಪರಮಾಣು ಭೌತಶಾಸ್ತ್ರಜ್ಞ ವಿಲಿಯಂ ಹೋವಾರ್ಡ್ ಆರ್ನಾಲ್ಡ್ ರ ಮಗಳು ಮತ್ತು ಲೆಫ್ಟಿನೆಂಟ್ ಜನರಲ್ ವಿಲಿಯಂ ಹೊವಾರ್ಡ್ ಅರ್ನಾಲ್ಡ್ ಅವರ ಮುದ್ದಿನ ಮೊಮ್ಮಗಳು.ಅವರ ಹವ್ಯಾಸಗಳಲ್ಲಿ ಪ್ರಯಾಣ, ಸ್ಕೂಬಾ ಡೈವಿಂಗ್, ಸ್ಕೀಯಿಂಗ್ ಮತ್ತು ಹೈಕಿಂಗ್ ಸೇರಿವೆ.ಅರ್ನಾಲ್ಡ್ ಕ್ಯಾಲಿಫೋರ್ನಿಯಾದ ಲಾ ಕ್ಯಾನಾಡಾ ಫ್ಲಿಂಟ್ರಿಡ್ಜ್ ಅಲ್ಲಿ ವಾಸಿಸುತ್ತಿದ್ದರು. ಅವರು ಜೇಮ್ಸ್ ಇ. ಬೈಲೆಯನ್ನು ಮದುವೆಯಾದರು. ಬೈಲೆ ಕ್ಯಾನ್ಸರ್‌ನಿಂದ ನಿಧನರಾದ ನಂತರ ಕ್ಯಾಲ್ಟೆಕ್‌ನ ಖಗೋಳವಿಜ್ಞಾನಿ ಆಂಡ್ರ್ಯೂ ಇ ಲ್ಯಾಂಗ್ ಅವರನ್ನು ವಿವಾಹವಾದರು.
ಶಿಕ್ಷಣ ಹಾಗು ವೃತ್ತಿಜೀವನ
[ಬದಲಾಯಿಸಿ]ಮಾನ್ಯ ಅರ್ನಾಲ್ಡ್ ಅವರು ರಾಸಾಯನಿಕ ಎಂಜಿನಿಯರಿಂಗ್, ಬಯೋ ಎಂಜಿನಿಯರಿಂಗ್ ಮತ್ತು ಬಯೋಕೆಮಿಸ್ಟ್ರಿಗಳ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಸಿದ್ಧ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿರುವರು. ಅರ್ನಾಲ್ಡ್ ಅವರು ಕಿಣ್ವಗಳ ನಿರ್ದೇಶನದ ವಿಕಸನಕ್ಕಾಗಿ ಹೆಸರುವಾಸಿ ಆಗಿದ್ದಾರೆ. ಇವರು ಪಿಟ್ಸ್‌ಬರ್ಗ್‌ನ ಉಪನಗರ ಎಡ್ಜ್‌ವುಡ್‌ನಲ್ಲಿ ಬೆಳೆದು, ೧೯೭೪ ರಲ್ಲಿ ನಗರದ ಟೇಲರ್ ಹೈಸ್ಕೂಲಿನಲ್ಲಿ ಪಧವಿದಾರರಾದರು. ಅರ್ನಾಲ್ಡ್ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಯಾಂತ್ರಿಕ ಮತ್ತು ವೈಮಾನಿಕ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಬಿ ಸ್ ಪದವಿಯನ್ನು ೧೯೭೯ ರಲ್ಲಿ ಪಡೆದರು.೧೯೭೯ ರಲ್ಲಿ ಪ್ರಿನ್ಸ್‌ಟನ್ ಪದವಿ ಪಡೆದು ನಂತರ ದಕ್ಷಿಣ ಕೊರಿಯಾ ,ಬ್ರೆಜಿಲ್ ಮತ್ತು ಕೊಲೊರಾಡೋದ ಸೌರ ಶಕ್ತಿ ಸಂಶೋಧನಾ ಇನ್ಸ್ಟಿಟ್ಯೂಟ್ ಅಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು.ತನ್ನ ಪಿ ಎಚ್ ಡಿ ಗಳಿಸಿದ ನಂತರ, ಅರ್ನಾಲ್ಡ್ ಬರ್ಕಲಿಯಲ್ಲಿ ಬಯೋಫಿಸಿಕಲ್ ರಸಾಯನಶಾಸ್ತ್ರದಲ್ಲಿ ಪೋಸ್ಟ್ ಡಾಕ್ಟೊರಲ್ ಸಂಶೋಧನೆಗಳನ್ನು ಪೂರ್ಣಗೊಳಿಸಿದರು.ಅರ್ನಾಲ್ಡ್ ಜಾಯಿಂಟ್ ಬಯೋ ಎನರ್ಜಿ ಇನ್ಸ್ಟಿಟ್ಯೂಟಿನ ಸಲಹಾ ಮಂಡಳಿಯ ಹಾಗು ಪ್ಯಾಕಾರ್ಡ್ ಫೆಲೋಶಿಪ್ಸ್ ಇನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಸದಸ್ಯರಾಗಿದ್ದಾರೆ.ಅವರು ಪ್ರಸ್ತುತ ಕ್ವೀನ್ ಎಲಿಜಬೆತ್ ಪ್ರಶಸ್ತಿಗೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅರ್ನಾಲ್ಡ್ ತನ್ನ ವಿಧಾನಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ್ದು, ವಿಭಿನ್ನ ಕ್ರಿಯೆಗಳಿಗೆ ಕಿಣ್ವಗಳನ್ನು ಉತ್ತಮಗೊಳಿಸುವ ಸಲುವಾಗಿ ವಿಭಿನ್ನ ಆಯ್ಕೆಯ ಮಾನದಂಡಗಳ ಅಡಿಯಲ್ಲಿ ಅದನ್ನು ಅನ್ವಯಿಸಿದ್ದಾರೆ.ಅರ್ನೋಲ್ಡ್ ಈ ವಿಧಾನಗಳನ್ನು ಜೈವಿಕ ಇಂಧನ ಉತ್ಪಾದನೆಗೆ ಅನ್ವಯಿಸಿದ್ದಾರೆ. ಉದಾಹರಣೆಗೆ, ಅವರು ಜೈವಿಕ ಇಂಧನ ಐಸೊಬುಟನಾಲ್ ಅನ್ನು ಉತ್ಪಾದಿಸಲು ಬ್ಯಾಕ್ಟೀರಿಯಾವನ್ನು ವಿಕಸನ ಮಾಡಿದರು.ಆರ್ನಾಲ್ಡ್ ಒಂದು ಪ್ರಯೋಗಾಲಯವನ್ನು ನಡೆಸುತ್ತಿದ್ದಾರೆ. ಅದು ಪರಿಸರದ ಸ್ನೇಹಿ ರಾಸಾಯನಿಕ ಸಂಶ್ಲೇಷಣೆಯಲ್ಲಿ ನಿರ್ದೇಶಿಸಿದ ವಿಕಾಸ ಮತ್ತು ಅದರ ಅನ್ವಯಿಕೆಗಳನ್ನು ಅಧ್ಯಯನ ಮಾಡುವುದನ್ನು ಮುಂದುವರೆಸಿದೆ.ಇದಲ್ಲದೆ ಹಸಿರು ಪರ್ಯಾಯ ಶಕ್ತಿ, ಹೆಚ್ಚು ಕ್ರಿಯಾತ್ಮಕ ಕಿಣ್ವಗಳ (ಸೆಲ್ಯುಲೋಲಿಟಿಕ್ ಮತ್ತು ಜೈವಿಕ ಸಂಶ್ಲೇಷಕ ಕಿಣ್ವಗಳು) ಸೂಕ್ಷ್ಮಜೀವಿಗಳ ಇಂಧನಗಳು ಮತ್ತು ರಾಸಾಯನಿಕಗಳಿಗೆ ನವೀಕರಿಸಬಹುದಾದ ಜೀವರಾಶಿಗಳನ್ನು ಪರಿವರ್ತಿಸಲ್ಪಡುತಿದೆ.
ಪ್ರಶಸ್ತಿಗಳು
[ಬದಲಾಯಿಸಿ]ಅರ್ನಾಲ್ಡ್ ಅವರು ೨೦೧೧ ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಗೆ ಆಯ್ಕೆಯಾದರು.ಇವರು ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿನ ಎಲ್ಲಾ ಮೂರು ರಾಷ್ಟ್ರೀಯ ಅಕಾಡೆಮಿಗಳಿಗೆ ಚುನಾಯಿತರಾದ ಮೊದಲ ಮಹಿಳೆ.೨೦೧೬ ರಲ್ಲಿ ಅವರು ಮಿಲೇನಿಯಮ್ ಟೆಕ್ನಾಲಜಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆಯಾಗಿದ್ದಾರೆ. ಈ ಪ್ರಶಸ್ತಿಯು ಅವರು ಪ್ರವರ್ತಕ ನಿರ್ದೇಶನದ ವಿಕಸನಕ್ಕಾಗಿ ಗೆದ್ದಿದ್ದಾರೆ. ೨೦೧೮ ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.ತನ್ನ ೧೧೭ ವರ್ಷಗಳ ಅಸ್ತಿತ್ವದಲ್ಲಿ ಈ ಪ್ರಶಸ್ತಿಯನ್ನು ಪಡೆದ ವಿಶ್ವದ ಐದನೇ ಮಹಿಳೆ ಹಾಗು ಮೊದಲ ಅಮೆರಿಕನ್ ಮಹಿಳೆ ಎಂದು ಅರ್ನಾಲ್ಡ್ ಅವರು ಪ್ರಸಿದ್ದರಾದರು.