ಸದಸ್ಯ:MerlinLawrence1940465/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಂಪೆಗೌಡ

ನನ್ನ ಹೆಸರು ಮರ್ಲಿನ್ ಲಾರೆನ್ಸ್ .ನನ್ನ ಜನ್ಮದಿನಾಂಕ ೨೦/೦೨/೨೦೦೧ .ನಾನು ಹುಟ್ಟಿ ಬೆಳೆದಿರುವುದೆಲ್ಲ ಕರ್ನಾಟಕದಲ್ಲಿಯೇ .ಕನ್ನಡ ಎಂದರೆ ನನಗೆ ತುಂಬ ಅಭಿಮಾನ . ನಾನು ಮೂಲತಃ ಕೇರಳದವರು ಆದರೆ ಇರುವುದೆಲ್ಲ ಕರ್ನಾಟಕದಲ್ಲಿಯೇ .ನಾನು ಒಂದು ಪುಟ್ಟ ಕ್ರೈಸ್ತ ಕುಟುಂಬದವಳು. . ನನ್ನ ತಂದೆ ತಾಯಿಯೇ ನನಗೆ ಆದರ್ಶ. ಸದಾಕಾಲ ನನ್ನನ್ನು ಪ್ರೋತ್ಸಾಹಿಸುತ್ತಾರೆ. ನನ್ನ ತಂದೆಯ ಹೆಸರು ಟಿ.ಸಿ .ಲಾರೆನ್ಸ್ ಮತ್ತು ನನ್ನ ತಾಯಿಯ ಹೆಸರು ಜೂಲಿ ಲಾರೆನ್ಸ್ .ನನಗೆ ಒಬ್ಬ ತಂಗಿ ಇದ್ದಾಳೆ .

ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ.ಬೆಂಗಳೂರು ನಗರವು ಕ್ರಿ.ಶ.1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.ಎಲ್ಲವೂ ಅಂದುಕೊಂಡಂತೆ ನಡೆದುದರ ಪರಿಣಾಮ ಕೆಂಪೇಗೌಡರ ಕನಸಿನ ಬೆಂಗಳೂರು ನಗರದ ನಿರ್ಮಾಣ ಕಾರ್ಯ 1537ರಲ್ಲಿ ನಾಡಿನ ಪ್ರಮುಖರ ಸಮ್ಮುಖದಲ್ಲಿ ಗುದ್ದಲಿ ಪೂಜೆಯೊಂದಿಗೆ ಶುರುವಾಗುತ್ತದೆ.

ಮೂಲತಃ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು ಹೊನ್ನಾರು ಕಟ್ಟುವ ಆಚರಣೆಯಿಂದ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಿಸುತ್ತಾರೆ.ಅರ್ಚಕರು ನಿರ್ಧರಿಸಿದಂಥ ಶುಭಕಾಲದಲ್ಲಿ ಈಗಿನ ದೊಡ್ಡಪೇಟೆ ಮತ್ತು ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಪ್ರದೇಶದಲ್ಲಿ ನಾಲ್ಕು ನೇಗಿಲಿಗೆ ಆರು ಕಟ್ಟಿ ತಯಾರಾಗಿ ನಿಂತಿದ್ದ ನಾಲ್ವರು ರೈತರನ್ನೂ ನಾಲ್ಕು ದಿಕ್ಕಿಗೆ ಸಾಗುವಂತೆ ತಿಳಿಸಿದರು. ಎತ್ತುಗಳು ನಿಂತ ಜಾಗವೇ ಎಲ್ಲೆಯೆಂದು ತಿಳಿದುಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು. ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರದಲ್ಲಿ ಯಲಹಂಕ ಮತ್ತು ದಕ್ಷಿಣದಲ್ಲಿ ಆನೆಕಲ್ (ಸಿಟಿ ಮಾರುಕಟ್ಟೆ) ಬಾಗಿಲವರೆಗೆ ಈ ಎತ್ತುಗಳು ಸಾಗಿ ನಿಂತವು ಅಲ್ಲೆಲ್ಲ ಗುರುತಿಗಾಗಿ ಕಲ್ಲುಗಳನ್ನು ನೆಡಲಾಯಿತು. ಈ *ಜಾಗಗಳಲ್ಲಿ ಪ್ರಮುಖ ಪ್ರವೇಶದ್ವಾರಗಳನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಕೋಟೆಯ ಹೆಬ್ಬಾಗಿಲು ಈಗಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿಯ ಕೋಟೆಯಲ್ಲಿತ್ತು. ರಾಜಧಾನಿಗೆ ನವದ್ವಾರಗಳಿರಬೇಕು, ದೇವಾಲಯಗಳಲ್ಲಿ ಪ್ರತಿದಿನವೂ ಪೂಜೆಗಳು ನಡೆಯುತ್ತಿರಬೇಕು ಮತ್ತು ಒಂಬತ್ತು ಕೆರೆಗಳು ಸದಾ ಕಾಲ ನೀರಿನಿಂದ ತುಂಬಿರಬೇಕೆಂಬುದು ಗೌಡರ ಆಶಯವಾಗಿತ್ತು, ಗೌಡರ ಇಚ್ಛೆಯಂತೆ ಕೋಟೆಗೆ ನಾಲ್ಕು ಮಹಾದ್ವಾರಗಳನ್ನೂ, ಐದು ಕಿರಿ ದ್ವಾರಗಳನ್ನು ನಿರ್ಮಿಸಲಾಯಿತು. ಮತ್ತು ರಕ್ಷಣೆಗಾಗಿ ಕೆಲ ರಹಸ್ಯ ದ್ವಾರಗಳನ್ನು ಇಡಲಾಯಿತು.


ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕ್ರೈಸ್ಟ್ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದೆ.ನನ್ನ ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ.ಈಗ ನನ್ನ ಬಿಎಸ್ಸಿಯನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ ಕ್ರೈಸ್ಟ್ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು,೨೦೦೮ ರಲ್ಲಿ ಈ ಕಾಲೇಜಿಗೆ "ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ'"(ಡೀಮ್ಡ್ ಟು ಬಿ ಯೂನಿರ್ವಸಿಟಿ) [೪]ಎಂಬ ಮಾನ್ಯತೆ ದೊರಕಿದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ. ೨೦೧೪ರಲ್ಲಿ ನಡೆದ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಈ ಸಂಸ್ಥೆಯು ವಿಜ್ಞಾನ, ಕಲಾ, ವಾಣೀಜ್ಯ ಹಾಗೂ ಕಾನೂನು ವಿಭಾಗಗಳಲ್ಲಿ ಹತ್ತು ಸ್ಥಾನಗಳಲ್ಲಿ ಒಂದಾಗಿದೆ. ೨೦೧೪ರ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ಬಿ.ಬಿ.ಎ. ೧ನೇ ಸ್ಥಾನ, ಕಲಾ ವಿಭಾಗ ೬ನೇ ಸ್ಥಾನ, ವಿಜ್ಞಾನ ವಿಭಾಗ ೪ನೇ ಸ್ಥಾನ ಮತ್ತು ೪ನೇ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಾನೂನು ೧೦ನೇ ಸ್ಥಾನಗಳನ್ನು ಪಡೆದಿದೆ




ಬೆಂಗಳೂರು[ಬದಲಾಯಿಸಿ]

ಬೆಂಗಳೂರು ತೋಟಗಳ ನಗರವಾಗಿತ್ತು ಸಸ್ಯಗಳು ಮತ್ತು ಪ್ರಕೃತಿಯ ಇತರ ರೂಪಗಳ ಪ್ರದರ್ಶನ, ಕೃಷಿ ಮತ್ತು ಅವುಗಳನ್ನು ಆನಂದಿಸುವುದಕ್ಕೆ ಮೀಸಲಿಡಲಾದ, ಸಾಮಾನ್ಯವಾಗಿ ಹೊರಾಂಗಣದಲ್ಲಿರುವ ಒಂದು ಯೋಜಿತ ಸ್ಥಳ. ತೋಟವು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಸ್ತುಗಳು ಎರಡನ್ನೂ ಒಳಗೊಂಡಿರಬಹುದು. ಇಂದು, ಅತ್ಯಂತ ಸಾಮಾನ್ಯ ರೂಪವನ್ನು ನಿವಾಸದ ತೋಟವೆಂದು ಕರೆಯಲಾಗುತ್ತದೆ, ಆದರೆ ಸಾಂಪ್ರದಾಯಿಕವಾಗಿ ತೋಟ ಪದವು ಹೆಚ್ಚು ವಿಸ್ತೃತವಾಗಿದೆ. ಪಾಶ್ಚಾತ್ಯ ತೋಟಗಳು ಬಹುತೇಕ ಸಾರ್ವತ್ರಿಕವಾಗಿ ಸಸ್ಯಗಳ ಮೇಲೆ ಆಧಾರಿತವಾಗಿವೆ, ಮತ್ತು ಹಲವುವೇಳೆ ತೋಟ ಪದವು ಸಸ್ಯೋದ್ಯಾನ ಪದದ ಸಂಕ್ಷಿಪ್ತ ರೂಪವನ್ನು ಸೂಚಿಸುತ್ತದೆ.

ಬೆಂಗಳೂರು

ಜ಼ೆರಸ್ಕೇಪ್ ತೋಟಗಳು ನೀರಾವರಿ ಅಥವಾ ಇತರ ಸಂಪನ್ಮೂಲಗಳ ವ್ಯಾಪಕ ಅಗತ್ಯವಿಲ್ಲದ ಸ್ಥಳೀಯ ಸಸ್ಯಗಳನ್ನು ಬಳಸುತ್ತವೆ, ಆದರೂ ಒಂದು ತೋಟದ ಪರಿಸರದ ಪ್ರಯೋಜನಗಳನ್ನು ಒದಗಿಸುತ್ತವೆ. ತೋಟಗಳು ಕೆಲವೊಮ್ಮೆ ಹುಚ್ಚುಮಹಲುಗಳು ಎಂದು ಕರೆಯಲ್ಪಡುವ, ರಚನಾತ್ಮಕ ವರ್ಧನೆಗಳನ್ನು ಪ್ರದರ್ಶಿಸಬಹುದು. ಇವುಗಳಲ್ಲಿ ಕಾರಂಜಿಗಳು, ಕೊಳಗಳು, ಜಲಪಾತಗಳು ಅಥವಾ ತೊರೆಗಳು, ಒಣ ತೊರೆ ತಳ, ಪ್ರತಿಮೆ, ಲತಾಮಂತಪಗಳು, ಹಂದರಗಳಂತಹ ಜಲ ವೈಶಿಷ್ಟ್ಯಗಳು ಸೇರಿರುತ್ತವೆ.

ಬೆಂಗಳೂರು ಕಸಗಳ ನಗರವಾಗಿದೆ ಎಂದರೆ ಮಾನವರು ಎಸೆಯುವ ತ್ಯಾಜ್ಯ ವಸ್ತು, ಸಾಮಾನ್ಯವಾಗಿ ಉಪಯುಕ್ತವಾಗಿಲ್ಲ ಎಂದು ಗ್ರಹಿಸಿ ಎಸೆಯಲಾಗುತ್ತದೆ. ಈ ಪದವು ಸಾಮಾನ್ಯವಾಗಿ ಶಾರೀರಿಕ ತ್ಯಾಜ್ಯ ಉತ್ಪನ್ನಗಳು, ಸಂಪೂರ್ಣವಾಗಿ ದ್ರವ ಅಥವಾ ಅನಿಲ ತ್ಯಾಜ್ಯಗಳು, ಮತ್ತು ವಿಷಕಾರಿ ತ್ಯಾಜ್ಯ ಉತ್ಪನ್ನಗಳನ್ನು ಒಳಗೊಳ್ಳುವುದಿಲ್ಲ. ಕಸವನ್ನು ಸಾಮಾನ್ಯವಾಗಿ ವಿಂಗಡಿಸಿ ನಿರ್ದಿಷ್ಟ ಬಗೆಗಳ ವಿಲೇವಾರಿಗೆ ಸೂಕ್ತವಾದ ವಸ್ತುಗಳ ಪ್ರಕಾರಗಳಾಗಿ ವರ್ಗೀಕರಿಸಲಾಗುತ್ತದೆ.[೧]


ನಗರ ಪ್ರದೇಶಗಳಲ್ಲಿ, ಎಲ್ಲ ಬಗೆಯ ಕಸವನ್ನು ಸಂಗ್ರಹಿಸಿ ಪೌರ ಘನತ್ಯಾಜ್ಯವಾಗಿ ಸಂಸ್ಕರಿಸಲಾಗುತ್ತದೆ; ಕಸವನ್ನು ಸ್ವೀಕರಿಸಲು ವಿನ್ಯಾಸಗೊಳಿಸಲಾದ ಸೌಕರ್ಯಗಳಲ್ಲಿ ಕಸವನ್ನು ಸಂಸ್ಕರಿಸಲಾಗುತ್ತದೆ, ಆದರೆ ಸ್ವಲ್ಪ ಕಸವು ವಿಲೇವಾರಿಯಾಗದೆ ಪರಿಸರದಲ್ಲಿ ಸೇರಿಬಿಡುತ್ತದೆ. ತಪ್ಪಾಗಿ ವಿಲೇವಾರಿಯಾಗುವ ಪೌರ ಘನತ್ಯಾಜ್ಯವು ಪರಿಸರವನ್ನು ಪ್ರವೇಶಿಸುತ್ತದೆ. ಆದರೆ, ಗಮನಾರ್ಹವಾಗಿ, ಉತ್ಪತ್ತಿಯಾದ ಕಸದಲ್ಲಿ ಕೇವಲ ಸಣ್ಣ ಪ್ರಮಾಣವು ಪರಿಸರವನ್ನು ಸೇರುತ್ತದೆ. ಬಹುಪಾಲು ಕಸವನ್ನು ಪರಿಸರವನ್ನು ಪ್ರವೇಶಮಾಡದಂತೆ ಬಂದೋಬಸ್ತು ಮಾಡಲು ಉದ್ದೇಶಿಸಿರುವ ರೀತಿಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ.

ಕೇರಳದ ತ್ರಿಶೂರ್[ಬದಲಾಯಿಸಿ]

ತ್ರಿಶೂರ್ ಪೂರಂ


ನಾನು ಮೂಲತಃ ಕೇರಳದವರು ,ತ್ರಿಶೂರ್ ನಗರವು ಉಷ್ಣಾ ವಲಯದ ಮುಂಗಾರು ಹವಾಗುಣವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ತಾಪಮಾನ ಕನಿಷ್ಠ ಸರಾಸರಿ ೨೨.೫ ಸೆಲ್ಶಿಯಸ್ ಮತ್ತು ಗರಿಷ್ಠ ಸರಾಸರಿ ತಾಪಮಾನ ೩೩ ಸೆಲ್ಶಿಯಸ್ ಆಗಿರುತ್ತದೆ. ಚಳಿಗಾಲದಲ್ಲಿ ಗರಿಷ್ಠ ಸರಾಸರಿ ತಾಪಮಾನ ೨೯ ಸೆಲ್ಶಿಯಸ್ ಮತ್ತು ಕನಿಷ್ಠ ಸರಾಸರಿ ತಾಪಮಾನ ೨೦ ಸೆಲ್ಶಿಯಸ್ ಆಗಿರುತ್ತದೆ.ತ್ರಿಶೂರ್ ಪೂರಂ : ತ್ರಿಶೂರಿನ ಅತಿದೊಡ್ಡ ಉತ್ಸವ. ಇದೊಂದು ಕೇರಳದ ಹಿಂದೂಗಳ ಪ್ರಮುಖ ಉತ್ಸವವಾಗಿದೆ. ಈ ಉತ್ಸವವನ್ನು ಮೊದಲಿಗೆ ವಡಕ್ಕುನ್ನಾಥನ್ ದೇವಾಲಯದಲ್ಲಿ ಪ್ರಾರಂಭಿಸಿದ್ದರು. ಹಾಗೆಯೇ ಈ ಉತ್ಸವವನ್ನು ಪ್ರತೀ ವರ್ಷವು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು

ತಿರ್‌ಸುರ್‌ ಪೂರಂವೆಂದು ಕರೆಯುತ್ತಾರೆ.[೧] ಇದು ಪ್ರತಿವರ್ಷ ಚೈತ್ರ ಮಾಸ ಪೂರ್ವ ನಕ್ಷತ್ರದಲ್ಲಿ ಬರುತ್ತದೆ. ಈ ಉತ್ಸವವನ್ನು ನೋಡಲು ಕೇವಲ ಕೇರಳದಿಂದ ಮಾತ್ರವಲ್ಲ ದೇಶ-ವಿದೇಶಗಳಿಂದಲೂ ಭಕ್ತಾದಿಗಳು ಮತ್ತು ಯಾತ್ರಾರ್ಥಿಗಳು ಹೆಚ್ಚಿನ ಜನಸಂಖೈಯಲ್ಲಿ ಬರುತ್ತಾರೆ. ಈ ಹಬ್ಬವನ್ನು ತ್ರಿಶೂರಿನ ವಡಕ್ಕುನ್ನಾಥನ್‌ ದೇವಾಲಯದ ಸುತ್ತಲಿನ ಮೈದಾನದಲ್ಲಿ ಬಹಳ ವಿಜೃಂಬಣೆಯಿಂದ ಆಚರಿಸುತ್ತಾರೆ. ಇದು ಅಲ್ಲಿನ ೧೦ ದೇವಸ್ಥಾನಗಳು ಭಾಗವಹಿಸುವ ಉತ್ಸವವಾಗಿದ್ದರೂ ಮುಖ್ಯವಾಗಿ ಎರಡು ದೇವಸ್ಥಾನಗಳಾದ ತಿರುವಂಬಾಡಿ ಮತ್ತು ಪರಮೆಕಾವು ಬಾಗವತ ಪ್ರಮೂಖ ಪಾತ್ರ ವಹಿಸುತ್ತದೆ.












ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕ್ರೈಸ್ಟ್ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದೆ.ನನ್ನ ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ.ಈಗ ನನ್ನ ಬಿಎಸ್ಸಿಯನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ.ನನ್ನ ಜೀವನದ ಸಂತೋಷದ ಗಳಿಗೆ ಎಂದರೆ ಅದು ನನ್ನ ಹತ್ತನೇ ಹಾಗೂ ದ್ವಿತೀಯ ಪಿಯುಸಿಯ ಫಲಿತಾಂಶ ಹೊರ ಬಂದ ದಿನ .ನನ್ನ ನೆಚ್ಚಿನ ವಿಷಯ ಗಣಿತ .

ನನಗೆ ಭಾಷಣಗಳನ್ನು ನೀಡಲು ಬಹಳ ಇಷ್ಟ ."ಈಸಬೇಕು ಇದ್ದು ಜಯಿಸಬೇಕು "ಎಂಬ ಗಾದೆಯ ಮಾತಿನಂತೆ ನನ್ನ ಜೀವನದಲ್ಲಿ ಏನೇ ಕಷ್ಟ ಬಂದರೂ ಅದನ್ನು ಎದುರಿಸಿ ನಿಲ್ಲುವ ಶಕ್ತಿ ಸಾಮರ್ಥ್ಯ ನನಗಿದೆ .ನಮ್ಮದು ಮಧ್ಯಮ ವರ್ಗದ ಪುಟ್ಟ ಕುಟುಂಬ ಇರುವುದರಲ್ಲೇ ಸಂತೋಷ ಪಡುವುದು ನನಗೆ ರೂಢಿಯಿಂದ ಬಂದ ಗುಣ .


ನನ್ನ ಬಾಲ್ಯದ ಒಂದು ನೆನಪು ಎಂದರೆ ನಾನು ಚಿಕ್ಕವಳಿದ್ದಾಗ ನನಗೆ ವ್ಯಾಸ್ ಕೊಲೆ ಟಿಕ್ ಅಲರ್ಜಿಯಿಂದ ಬಳಲುತ್ತಿದ್ದೆ ಇದರಿಂದಾಗಿ ನನ್ನ ನೃತ್ಯಗಾರ್ತಿ ಯಾಗುವ ಕನಸು ಕೊನೆಯಾಯಿತು .ನನಗೆ ಕಪ್ಪು ಬಣ್ಣ ಎಂದರೆ ಬಹಳ ಇಷ್ಟ .ನನ್ನ ನೆಚ್ಚಿನ ಊಟ ಬಿರಿಯಾನಿ .ಬೇರೆಯವರು ನನ್ನ ಜೊತೆ ಹೇಗೆ ವರ್ತಿಸುತ್ತಾರೋ ನಾನು ಅವರ ಜೊತೆ ಅದೇ ರೀತಿ ವರ್ತಿಸುತ್ತೇನೆ .ನನಗೆ ಪ್ರಕೃತಿ ಎಂದರೆ ಬಹಳ ಇಷ್ಟ .ನನ್ನ ಹವ್ಯಾಸಗಳು ಹಾಡನ್ನು ಕೇಳುವುದು ಪುಸ್ತಕಗಳನ್ನು ಓದುವುದು ಮುಂತಾದವು .

ನನ್ನ ಜೀವನದಲ್ಲಿ ನನ್ನ ಗೆಳತಿಯರ ಪಾತ್ರ ಬಹಳ ಇದೆ .ಅವರುಗಳ ಸಹಾಯವಿಲ್ಲದಿದ್ದರೆ ನಾನು ಇಲ್ಲಿಯ ತನಕ ಬರಲು ಸಾಧ್ಯವೇ ಇರುತ್ತಿರಲಿಲ್ಲ .ನನ್ನ ಚೇಷ್ಟೆಗಳನ್ನು ಸಹಿಸಿಕೊಂಡು ನನ್ನ ತಪ್ಪುಗಳನ್ನು ತಿದ್ದುತ್ತಾ ನನ್ನ ಬೆಂಬಲವಾಗಿ ನಿಂತಿದ್ದಾರೆ .ನಾನು ಎಷ್ಟೋ ಬಾರಿ ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಕೈಕಟ್ಟಿ ಕುಳಿತಾಗ ಅವರುಗಳು ನನಗೆ ಹುರುಪು ತುಂಬಿದ್ದಾರೆ .ನನ್ನ ಜೀವನದ ಅವಿಭಾಜ್ಯ ಅಂಗವಾಗಿರುವ ನನ್ನ ಸ್ನೇಹಿತರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ .

ಬರುವಾಗ ಏನನ್ನೂ ತೆಗೆದುಕೊಂಡು ಬರುವುದಿಲ್ಲ ಹಾಗೂ ಹೋಗುವಾಗ ಏನನ್ನು ಹೊತ್ತುಕೊಂಡು ಹೋಗುವುದಿಲ್ಲ ಬಾಳುವ ಈ ಮೂರು ದಿನದ ಬದುಕಿನಲ್ಲಿ ಇರುವಷ್ಟು ದಿನ ಸಂತೋಷದಿಂದ ಬದುಕಿ ಇತರರಿಗೆ ಸಹಾಯವನ್ನು ಮಾಡಿ ಹೋಗಬೇಕೆಂಬುದೇ ನನ್ನ ಜೀವನದ ಮಹತ್ತರ ಆಸೆ.

ನನ್ನ ಮೇಲೆ ನನಗೆ ಬಹಳ ನಂಬಿಕೆ ಇದೆ ಏಕೆಂದರೆ ನಮ್ಮ ಮೇಲೆ ನಮಗೆ ನಂಬಿಕೆ ಇದ್ದಾಗ ಮಾತ್ರ ನಾವು  ಏನನ್ನು ಬೇಕಾದರೂ ಸಾಧಿಸಬಹುದು .ನಾನು ಎಲ್ಲರಿಗೂ ಹೇಳುವುದೇನೆಂದರೆ ಮೊದಲು ನಿಮ್ಮ ಮೇಲೆ ನೀವು ನಂಬಿಕೆ ಇಡಿ ಬೇರೆಯವರ ಮಾತುಗಳಿಗೆ ಕಿವಿ ಕೊಡದಿರಿ .

ನನಗೆ ಪ್ರವಾಸ ಮಾಡುವುದೆಂದರೆ ಬಹಳ ಇಷ್ಟ .ನನಗೆ ಎಲ್ಲವನ್ನೂ ಮಾಡಲು ಸಾಧ್ಯ ಎಂದು ನಾನು ತಿಳಿದಾಗ ನಾನು ಏನನ್ನೂ ಮಾಡದೆ ನಿಲ್ಲುತ್ತೇನೆ .ಆದರೆ ನನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿದಾಗ ನಾನು ಎಲ್ಲವನ್ನೂ ಮಾಡಿ ಮುಗಿಸುತ್ತೇನೆ.ನಾವು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕಾದರೆ ಅದಕ್ಕೆ ಆದರ್ಶ ವ್ಯಕ್ತಿಗಳು ಇರಬೇಕೆಂಬ ನಿಯಮವೇನೂ ಇಲ್ಲ ನಮ್ಮ ಸುತ್ತಮುತ್ತಲು ಇರುವ ಜನರಿಂದಲೇ ನಾವು ಆದರ್ಶವನ್ನು ತೆಗೆದುಕೊಳ್ಳಬಹುದು .

ನಾನು ಯಾರ ನಡುವೆಯೂ ಮೇಲು ಕೀಳು ಎಂಬ ಭೇದ ಭಾವವನ್ನು ಮಾಡುವುದಿಲ್ಲ ,ಎಲ್ಲರೂ ನನ್ನಂತೆಯೇ ಮನುಷ್ಯರು ಎಂದು ತಿಳಿದು ಅವರನ್ನು ನನ್ನಂತೆಯೇ ಪ್ರೀತಿಯಿಂದ ಕಾಣುತ್ತೇನೆ . ನಾನು ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದಾಗ ,ನನ್ನ ಸುತ್ತಮುತ್ತಲಿನ ಜನರೆಲ್ಲರೂ ನನ್ನ ಗುರಿ ಏನೆಂದು ಕೇಳುತ್ತಿದ್ದರು. ನಾನು ಸ್ವಲ್ಪ ಕಾಲ ಯೋಚನೆ ಮಾಡಿ ನಾನು ಗಣಿತದ ಪ್ರೊಫೆಸರ್ ಆಗಬೇಕೆಂದು ನಿರ್ಧರಿಸಿದೆ.ಏಕೆಂದರೆ ನನಗೆ ಗಣಿತದ ಕಡೆ ಒಲವು. ನನ್ನ ಗುರಿ ಗಣಿತದಲ್ಲಿ ಪಿಎಚ್ ಡಿ ಯನ್ನು ಪಡೆಯುವುದು ಹಾಗೂ ನನ್ನ ಕುಟುಂಬವನ್ನು ಸಂತೋಷವಾಗಿ ನೋಡಿಕೊಳ್ಳುವುದು.ನನಗೆ ನನ್ನ ಮೇಲೆ ಬಹಳ ನಂಬಿಕೆ ಇದೆ ಬೇರೆಯವರು ನನ್ನ ಬಗ್ಗೆ ಏನು ಹೇಳಿದರೂ ನಾನು ಅದನ್ನು ತಲೆಗೆ ಹಚ್ಚಿಕೊಳ್ಳುವುದಿಲ್ಲ .ನಾನು ಇಂದು ಏನೇ ಆಗಿದ್ದರೂ ಅದು ದೇವರ ದಯೆಯಿಂದ .ಮನುಷ್ಯರಾದ ನಾವು ಬರುವಾಗ ಏನನ್ನೂ ತೆಗೆದುಕೊಂಡು ಬರುವುದಿಲ್ಲ ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದು ಇರುವಷ್ಟು ದಿನ ಸಂತೋಷದಿಂದ ಬದುಕಿ ಬಾಳಬೇಕು ಎಂಬುದೇ ನನ್ನ ಆಸೆ .

ವಂದನೆಗಳು .