ಸದಸ್ಯ:Kishorkg261/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]

[೨]

ಹಳೆಯ ದೂರದರ್ಶನ

[[

ಆಧುನಿಕ ದೂರದರ್ಶನ

]]

==ಪರಿಚಯ==
                ಭಾರತದ ಸರ್ಕಾರಿ ಸ್ವಾಮ್ಯತೆಯ ಕಿರುತೆರೆ ವಾಹಿನಿ ಜಾಲದ ಬಗ್ಗೆ ಲೇಖನ ದೂರದರ್ಶನ (ಕಿರುತೆರೆ ವಾಹಿನಿ ಜಾಲ) ಎಂಬಲ್ಲಿ ಇದೆ.

ದೂರದರ್ಶನವು ಚಲಿಸುವ ಚಿತ್ರಗಳನ್ನು ಶಬ್ದದೊಂದಿಗೆ ಪ್ರಸಾರಣೆ ಮಾಡುವ ಮತ್ತು ಪ್ರಸಾರಣೆಯನ್ನು ಪ್ರದರ್ಶಿಸುವ ಒಂದು ತಂತ್ರಜ್ಞಾನ. ಪ್ರದರ್ಶನ ಮಾಡುವ ಉಪಕರಣವನ್ನು ದೂರದರ್ಶನ ಪೆಟ್ಟಿಗೆ ಎಂದು ಕರೆಯಲಾಗುತ್ತದೆ.

ಇತಿಹಾಸ[ಬದಲಾಯಿಸಿ]

                ದೂರದರ್ಶನವು ಒಂದು ದೂರಸಂಪರ್ಕ ಮಾಧ್ಯಮವಾಗಿದೆ.ಆಂಗ್ಲ ಭಾಷೆಯಲ್ಲಿ ದೂರದರ್ಶನವನ್ನು 'ಟೆಲಿವಿಷನ್' ಎಂದು ಕರೆಯುತ್ತಾರೆ.ಈ ಪದವು ಪ್ರಾಚೀನ ಗ್ರೀಕ್ ಭಾಷೆಯ 'ಟೆಲಿ' ಎಂದರೆ ದೂರ ಮತ್ತು ಲ್ಯಾಟೀನ್ ಭಾಷೆಯ 'ವಿಸಿಯೋ' ಎಂದರೆ ದೃಷ್ಠಿ ಎಂಬ ಪದಗಳ ಮೂಲಕ ಬಂದಿದೆ. ಈ ಪದದ ಡಾಕ್ಯುಮೆಂಟ್/ದಾಖಲೆ ಬಳಕೆಯು ೧೯೦೦ ರಲ್ಲಿ ಶುರುವಾಯಿತು. ಇದನ್ನು ೧೯೦೦ ರ ಆಗಸ್ಟ್ ನಲ್ಲಿ ಫ್ರೆಂಚ್ ನಲ್ಲಿ ನಡೆಯುತಿದ್ದ ೧ನೇ ವಿದ್ಯುತ್ ಅಂತರಾಷ್ಟ್ರೀಯ ಕಾಂಗ್ರೇಸ್ ನಲ್ಲಿ ರಷ್ಯಾದ ವಿಜ್ಞಾನಿ ಕಾನ್ಸ್ಟ್ಂಟೈನ್ ಪರ್ಸ್ಕಿಯವರು ಹಾಜರು ಪಡಿಸುತ್ತಾರೆ.ದೂರದರ್ಶನದ ಆವಿಷ್ಕಾರವು ೧೯ ಮತ್ತು ೨೦ ನೇ ಶತಮಾನದಲ್ಲಿ ಆರಂಭವಾಯಿತು.ಜಗತ್ತಿನ ಹಲವಾರು ವ್ಯಕ್ತಿಗಳು,ಸಂಸ್ಥೆಗಳು ಈ ಹಿಂದಿನ ತಂತ್ರಜ್ಞಾನದ ದೂರದರ್ಶನಗಳನ್ನು ಅಭಿವೃದ್ಧಿಗೊಳಿಸಲು ಸ್ಪರ್ಧಿಸಿದ್ದರು.ಕೆಲವರು ದೃಶ್ಯ ಮತ್ತು ಧ್ವನಿ ಸಂಹವನ ತಂತ್ರಜ್ಞಾನಗಳ ಮೂಲಕ ಜಗತ್ತನ್ನು ಬದಲಿಸಲು ಸ್ಪರ್ಧಿಸಿದರೆ, ಇನ್ನೂ ಕೆಲವರು ಲಾಭ ಗಳಿಸುವುದಕ್ಕೋಸ್ಕರ ಸ್ಪರ್ಧಿಸಿದರು.ದೂರದರ್ಶನವು ಎರಡನೇ ಮಹಾಯುದ್ಧಕ್ಕಿಂತ ಮುನ್ನ ಪ್ರಾಯೋಗಿಕ ವಸ್ತುವಾಗಿ ಮಾತ್ರ ಕಾಣಸಿಗುತಿತ್ತು.ಮಹಾಯುದ್ಧದ ತರುವಾಯದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ದೇಶಗಳು ಕಪ್ಪು -ಬಿಳುಪು ಸುಧಾರಿತ ದೂರದರ್ಶನಗಳನ್ನು ಅಭಿವೃದ್ಧಿಪಡಿಸಿದರು. ಅದರ ಫಲವಾಗಿ ದೂರದರ್ಶನವು ಮನೆ, ವ್ಯವಹಾರ, ಮತ್ತು ಸಂಸ್ಥೆಗಳಲ್ಲಿ ಸರ್ವೇಸಾಮಾನ್ಯವಾಯಿತು.ಸ್ವಾತಂತ್ರ್ಯದ ತರುವಾಯದಲ್ಲಿ ದೂರದರ್ಶನವು ಸಾರ್ವಜನಿಕರ ಪ್ರಾಥಮಿಕವಾದ ಮಾಧ್ಯಮವಾಯಿತು.ದೂರದರ್ಶನದಲ್ಲಿ ಏಕವರ್ಣದ(ಕಪ್ಪು ಬಿಳಿ) ಅಥವಾ ಬಣ್ಣದ ದೂರದರ್ಶನಗಳು ಇರುತ್ತವೆ.ದೂರದರ್ಶನವು ಧ್ವನಿ ಮತ್ತು ಚಲಿಸುವ ಚಿತ್ರಗಳನ್ನು ಎರಡು ಅಥವಾ ಮೂರು ಆಯಾಮಗಳಲ್ಲಿ ರವಾನಿಸುತ್ತದೆ.ಇದನ್ನು ಒಂದು ಸೆಟ್,ದೂರದರ್ಶನ ಕಾರ್ಯಕ್ರಮ,ದೂರದರ್ಶನ ಪ್ರಸರಣ ಮಾಧ್ಯಮವಾಗಿ ಉಲ್ಲೇಖಿಸಬಹುದಾಗಿದೆ.ದೂರದರ್ಶನವನ್ನು ಮನರಂಜನೆ, ಶಿಕ್ಷಣ, ಸುದ್ದಿ ಮತ್ತು ಜಾಹೀರಾತುಗಳಲ್ಲಿ ಬಳಸಬಹುದಾಗಿದೆ.ಬೀಟಾಮ್ಯಾಕ್ಸ್,ವಿ ಹೆಚ್ ಎಸ್ ಟೇಪ್, ಡಿ ವಿ ಡಿ,ಹೈ ಡೆಫನಿಷನ್ ಬ್ಲೂ ರೇ ಡಿಸ್ಕ್ ಗಳ ಮೂಲಕ ವೀಕ್ಷಕರು ಚಲನಚಿತ್ರಗಳನ್ನು ನೋಡುವಂತಾಯಿತು.೨೦೦೫ ರ ಹೊತ್ತಿಗೆ ದೂರದರ್ಶನ ಪ್ರಸರಣ ಬಹಳ ಜನಪ್ರಿಯತೆಯನ್ನು ಗಳಿಸಿತು.೨೦೧೦ ರಲ್ಲಿ ಸ್ಮಾರ್ಟ್ ದೂರದರ್ಶನದ ಮೂಲಕ ಅಂತರ್ಜಾಲ ದೂರದರ್ಶನವು ಬಳಕೆಗೆ ಬಂದಿತು.ಇದರಿಂದ ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು ಲಭಿಸಲು ಸಹಾಯಕವಾಯಿತು.ದೂರದರ್ಶನವನ್ನು 'ಟೆಲ್ಲಿ' ಎಂದೂ ಕರೆಯುತ್ತಾರೆ.ಈ ಸಾಧನವು ಟ್ಯೂನರ್,ಧ್ವನಿವರ್ಧಕ,ಪ್ರದರ್ಶಕ,ವರ್ಧಕಗಳನ್ನು ಒಟ್ಟುಗೂಡಿಸಿ ದೂರದರ್ಶನವನ್ನು ನೋಡಲು ಮತ್ತು ಅದರ ಧ್ವನಿಗಳನ್ನು ಕೇಳಲು ಸಹಾಯ ಮಾಡುತ್ತದೆ.ದೂರದರ್ಶನವು ಜನಪ್ರಿಯಗೊಂಡ ಬಳಿಕ ಅದನ್ನು ವಿದ್ಯುನ್ಮಾನ ರೂಪದಲ್ಲಿ ಕ್ಯಾಥೋಡ್- ಕಿರಣ ನಳಿಕೆ ಗಳನ್ನು ಬಳಸಿ ತಯಾರಿಸಲಾಯಿತು.ಕ್ಯಾಥೋಡ್- ಕಿರಣ ನಳಿಕೆಗಳು ೧೪ ಇಂಚಿನ ನಳಿಕೆಯಾಗಿದೆ.ಇದೊಂದು ನಿರ್ವಾಯು ಕೊಳವೆಯಾಗಿದೆ.ಇದು ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್ ಗಳನ್ನು ಹೊರಸೂಸುವ ಮೂಲವನ್ನು ಮತ್ತು ಪ್ರತಿದೀಪಕ ಪರದೆಯನ್ನು ಹೊಂದಿದೆ.ಇದರ ಮೂಲಕ ನಾವು ಚಿತ್ರಗಳನ್ನು ವೀಕ್ಷಿಸಲು ಸಹಾಯಕವಾಗಿದೆ.ಇದು ಎಲೆಕ್ಟ್ರಾನ್ ಕಿರಣಗಳನ್ನು ಪರದೆಯ ಮೇಲೆ ಬಿಟ್ಟಾಗ ಪರದೆಯಲ್ಲಿ ಚಿತ್ರವು ಮೂಡುತ್ತದೆ.ಈ ವೇಳೆಯಲ್ಲಿ ಹೆಚ್ಚಿನ ಕ್ಷ-ಕಿರಣಗಳು ಹೊರಸೂಸುವುದರಿಂದ ಅದನ್ನು ತಡೆಯಲು ನಿರೋಧಕವಾಗಿ ಸೀಸದ ಗಾಜನ್ನು ಬಳಸುತ್ತಾರೆ.
==ದೂರದರ್ಶನದ ಪ್ರಸಾರ ವ್ಯವಸ್ಥೆಗಳು ==
        ೧. ಟೆರೆಸ್ಟ್ರಿಯಲ್ ದೂರದರ್ಶನ: ಟೆರಸ್ಟ್ರಿಯಲ್ ದೂರದರ್ಶನವು ಮುಖ್ಯವಾಗಿ ಆಂಟೆನಾಗಳ ಮೂಲಕ ವಾಹಿನಿಗಳಾಗಿ ದೂರದರ್ಶನವನ್ನು ತಲುಪಿದ ತರಂಗಗಳಿಂದ ಕಾರ್ಯ ನಿರ್ವಹಿಸುತ್ತದೆ.ಆಗ ದೂರದರ್ಶನವನ್ನು ವೀಕ್ಷಿಸಬಹುದು.
        ೨. ಕೇಬಲ್ ದೂರದರ್ಶನ      : ಕೇಬಲ್ ದೂರದರ್ಶನವು ಮುಖ್ಯವಾಗಿ ಕೇಬಲ್ ತಂತಿಯ ಮೂಲಕ ವಾಹಿನಿಗಳು ಬಂದು ದೂರದರ್ಶನವನ್ನು ತಲುಪುವುದರಿಂದ ಚಂದದಾರರ ದೂರದರ್ಶನ ಕಾರ್ಯ ನಿರ್ವಹಿಸುತ್ತದೆ.
        ೩. ಅಂತರ್ಜಾಲ ದೂರದರ್ಶನ : ಇದು ಆಧುನಿಕ ಕಾಲದ ದೂರದರ್ಶನವಾಗಿದೆ. ಅಂತರ್ಜಾಲದ ಸಹಾಯದಿಂದ ದೂರದರ್ಶನವು ಕಾರ್ಯ ನಿರ್ವಹಿಸುತ್ತದೆ.ಇದು ಈಗಿನ ಎಲ್ಲಾ ಕ್ಷೇತ್ರಗಳಲ್ಲೂ ಸರ್ವೇಸಾಮಾನ್ಯವಾಗಿದೆ.ಅಂತರ್ಜಾಲದ ಮೂಲಕ ಯಾವಾಗ ಬೇಕಾದರೂ, ಎಲ್ಲಾದರೂ,ಯಾವ  ಕಾರ್ಯಕ್ರಮಗಳನ್ನು ಬೇಕಾದರೂ ವೀಕ್ಷಿಸಬಹುದಾಗಿದೆ.

ಇಂದು ದೂರದರ್ಶನವು ಒಂದು ವಾಣಿಜ್ಯ ಸಾಧನವಾಗಿದೆ. ವ್ಯವಹಾರ ಕ್ಷೇತ್ರದಲ್ಲಿ ಜಾಹೀರಾತುಗಳನ್ನು ಕೊಟ್ಟಾಗ ದೂರದರ್ಶನವು ಜನರಿಗೆ ತಲುಪಿಸುತ್ತದೆ. ಆಗ ಜನರಿಗೆ ವಸ್ತುಗಳನ್ನು ಕೊಳ್ಳಲು ಸಹಾಯಕಾರಿಯಾಗುತ್ತದೆ. ದೂರದರ್ಶನವು ೨೦ ಮತ್ತು ೨೧ನೇ ಶತಮಾನದಲ್ಲಿ ಸಾಮಾಜಿಕವಾಗಿ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ.ಇದು ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಉಪಯೋಗಕಾರಿಯಾಗಿದೆ.'ದ ಗುಡ್ ಥಿಂಗ್ಸ್ ಅಬೌಟ್ ಟೆಲಿವಿಷನ್' ಎಂಬ ಲೇಖನವು, "ದೂರದರ್ಶನ ಒಂದು ಶಕ್ತಿಯುತ ಮತ್ತು ಪರಿಣಾಮಕಾರಿಯಾದ ಕಲಿಕಾ ಸಾಧನವಾಗಿದೆ" ಎಂದು ವಾದಿಸುತ್ತಾರೆ.ಅಂತೆಯೇ ದೂರದರ್ಶನವು ಋಣಾತ್ಮಕ ಅಂಶಗಳನ್ನು ಹೊಂದಿದೆ.ಇದು ಸಮಾಜದ ಮೇಲೆ ಮಾಧ್ಯಮ ಹಿಂಸಾಚಾರವನ್ನು ಎಸಗುತ್ತಿದೆ.ಇತ್ತೀಚಿನ ಪ್ರಸಕ್ತ ಸಂಶೋಧನೆಗಳ ಪ್ರಕಾರ ದೂರದರ್ಶನದಿಂದ ಜನರು ಸಾಮಾಜಿಕ ಪ್ರತ್ಯೇಕತೆಗೆ ಒಳಗಾಗುತಿದ್ದಾರೆ.ಇದರಿಂದ ಒಂಟಿತನ ಮತ್ತು ಸಾಮಾಜಿಕ ನಷ್ಟಗಳು ಉಂಟಾಗುತ್ತಿವೆ.ಅಲ್ಲದೆ ಈಗಿನ ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ಬರುವ ಪಾತ್ರಗಳಲ್ಲಿ ಜನರು ಲೀನವಾಗಿ ಸಾಮಾಜಿಕ ಖಿನ್ನತೆಗೆ ಒಳಗಾಗುತಿದ್ದಾರೆ.ಅಷ್ಟೇ ಅಲ್ಲದೆ ಕ್ಯಾಥೋಡ್-ಕಿರಣ ನಳಿಕೆಗಳಲ್ಲಿ ಬಳಸಿರುವ ಸೀಸವು ತೀವ್ರವಾಗಿ ವಿಸರಣಗೊಳ್ಳುತ್ತದೆ.ಅಲ್ಲದೆ ಚಪ್ಪಟೆ ದರ್ಶಕಗಳಲ್ಲಿ ಪಾದರಸವನ್ನು ಹೊಂದಿರುವ ದೀಪಗಳನ್ನು ಬಳಸಿರುತ್ತಾರೆ.ಇದು ವಿದ್ಯುತ್-ತ್ಯಾಜ್ಯವಾಗಿ ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.ಇಂದಿನ ಚಿಕ್ಕ ಮಕ್ಕಳು ದೂರದರ್ಶನದ ಮುಂದೆಯೇ ಅಂದರೆ ತೀರಾ ಹತ್ತಿರದಿಂದ ನೋಡುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ.ಇದರಿಂದ ಅವರ ಕಣ್ಣಿನ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ.ಆದ್ದರಿಂದ ಪೋಷಕರು ಮಕ್ಕಳಿಗೆ ೮ ಅಡಿ ದೂರ ಕುಳಿತು ದೂರದರ್ಶನವನ್ನು ವೀಕ್ಷಿಸಬೇಕೆಂದು ಬುದ್ಧಿ ಹೇಳಬೇಕು.ಇದರಿಂದ ಕೆಟ್ಟ ಪರಿಣಾಮಗಳನ್ನು ತಡೆಯಬಹುದಾಗಿದೆ. ಇಂದು ದೂರದರ್ಶನವು ಪ್ರಪಂಚದಾದ್ಯಂತ ತನ್ನ ಕೀರ್ತಿಯನ್ನು ಹರಡಿಕೊಂಡಿದೆ.ಇಂದು ದೂರದರ್ಶನವಿಲ್ಲದಂತಹ ಮನೆಗಳೇ ಇಲ್ಲದಂತಾಗಿದೆ.

  1. https://en.wikipedia.org/wiki/Television
  2. https://en.wikipedia.org/wiki/History_of_television