ಸದಸ್ಯ:Karthik960/ಆಯಾತೊಲ್ಲಾ ಕೊಮೆನಿ

ವಿಕಿಪೀಡಿಯ ಇಂದ
Jump to navigation Jump to search

೬೦೦*೮೦೦px|thumb|right|ಆಯಾತೊಲ್ಲಾ ಕೊಮೆನಿ

ಪರಿಚಯ[ಬದಲಾಯಿಸಿ]

ಆಯಾತೊಲ್ಲಾ ಸಯ್ಯದ್ ರುಹೊಲ್ಲಾ ಮೂಸಾವಿ ಕೊಮೆನಿಯು ಸೆಪ್ಟೆಂಬರ್ ೨೪, ೧೯೦೨ರಲ್ಲಿ ಕೊಮ್ಯಾನ್ ಎಂಬ ಪರ್ಷಿಯನ್ ರಾಜ್ಯದಲ್ಲಿ ಜನಿಸಿದನು. ಈತನನ್ನು ಪಾಶ್ಚಾತ್ಯರು ಆಯಾತೊಲ್ಲಾ ಕೊಮೆನಿ ಎಂದು ಕರೆಯುತ್ತಾರೆ. ಈತನು ಇರಾನಿನ ಷಿಯಾ ಫಂಥದ ಧರ್ಮಗುರು,ಕ್ರಾಂತಿಕಾರಿ, ಮತ್ತು ರಾಜಕಾರಿಣಿ. "ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್" ಪಕ್ಷದ ಸಂಸ್ಥಾಪಕ.೧೯೭೯ರಲ್ಲಿ ಇರಾನಿನ ಕ್ರಾಂತಿಯ ಮೂಲಕ ಪಹ್ಲವಿ ಆಡಳಿತ ಹಾಗೂ ಮೊಹಮ್ಮದ್ ರೇಜಾ ಪಹ್ಲವಿಯ ಆಡಳಿತವನ್ನು ಕೊನೆಗೊಳಿಸಿ,ಆ ಮೂಲಕ ಕೊಮೆನಿಯು ಇರಾನಿನ "ಸರ್ವೋಚ್ಚನಾಯಕ" ನಾದನು.ಈ ಸ್ಥಾನವನ್ನು ಇಸ್ಲಾಮಿಕ್ ರಿಪಬ್ಲಿಕ್ ಪಕ್ಷದ ಅಳವಡಿಸಿದಂತಹ ಸಂವಿಧಾನದ ಮುಖಾಂತರ ಆ ಸ್ಥಾನವನ್ನು ಅಳವಡಿಸಲಾಯಿತು. ರುಹೊಲ್ಲಾ ಕೊಮೆನಿ ಎಂಬುದು ಪರ್ಷಿಯನ್ ಹೆಸರಾಗಿದ್ದು ಕನ್ನಡದಲ್ಲಿ ಇದರ ಅರ್ಥ "ಭಕ್ತಿಯೋಗ" ಎಂಬುದಾಗಿದೆ.ಈತನು ೫ ತಿಂಗಳ ಮಗುವಾಗಿದ್ದಾಗಲೇ ಆತನ ಕೊಲೆಯಾಯಿತು.ತದನಂತರ ತನ್ನ ತಾಯಿಯಾದ ಹಜೀಹ್ ಆಘಾಖಾನಮ್ ಅತ್ಯಂತ ಪ್ರೀತಿಯಿಂದ ಸಲುಹಿದಳು.ತನ್ನ ಚಿಕ್ಕಮ್ಮಳಾದ ಸಹಬೇತ್ ರ ಅಡಿಯಲ್ಲಿ ಈತ ಬೆಳೆದನು,

ಶಿಕ್ಷಣ[ಬದಲಾಯಿಸಿ]

ಕೊಮೆನಿ ತನಗೆ ೫ ವರ್ಷಗಳಿದ್ದಾಗ ಕುರಾನ್ ಅಧ್ಯಯನವನ್ನು ಆರಂಭಿಸಿದ.ಹಾಗೂ ೬ ವರ್ಷಗಳಿದ್ದಾಗ ಪರ್ಷಿಯನ್ ಭಾಷೆಯ ಅಧ್ಯಯನವನ್ನು ಆರಂಭಿಸಿದನು.ಒಂದನೇ ಮಹಾಯುದ್ಧದ ನಂತರ ಈತನನ್ನು ಈಸ್ಪಾನ್ ನ ಇಸ್ಲಾಮಿಕ್ ಸೆಮಿನರಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಯಿತು. ಆದರೆ ಅರಾಕ್ ನಲ್ಲಿ ನಡೆಯುತ್ತಿದ್ದ ಸೆಮಿನರಿಗೆ ಈತ ಆಕರ್ಷಿತನಾಗಿದ್ದ. ಈತನನ್ನು ಆಯಾತೊಲ್ಲಾ ಅಬ್ದುಲ್ ಕರೀಮ್ ಯಜ್ದಿ ಯ ನಾಯಕತ್ವದಲ್ಲಿ ಹಾಕಲಾಯಿತು. ೧೯೨೦ರಲ್ಲಿ ಅರಾಕ್ ಗೆ ತೆರಳಿ ತನ್ನ ಶಿಕ್ಷಣವನ್ನು ಮುಂದುವರಿಸಿದ. ಇಸ್ಲಾಮಿಕ್ ಕಾನೂನು [ಷರಿಯ] ದಲ್ಲಿ ಉನ್ನತ ಪಾಂಡಿತ್ಯ ಹೊಂದಿದ್ದನು.

ರಾಜಕೀಯ ಜೀವನ[ಬದಲಾಯಿಸಿ]

ರಾಜಕೀಯವಾಗಿ ಕೊಮೆನಿಯು ೧೯ನೇ ಶತಮಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ. ಇರಾನಿಯರಿಗೆ ಉಲಾಮರ ಮೇಲೆ ಅಪಾರ ನಂಬಿಕೆ ಹಾಗೂ ಹೊಂದಿದ್ದರು. ಮತ್ತು ಅವರು ಧಾರ್ಮಿಕರಾಗಿದ್ದರು. ಷಾನು ಪಾಶ್ಚಾತ್ಯೀಕರಣಕ್ಕೆ ದೂರ ಉಳಿದಿದ್ದ. ೧೯೨೦ ರದಶಕದಲ್ಲಿ ರೇಜಾ ಷಾ ಪಹ್ಲವಿ ಅಧಿಕಾರ ವಹಿಸಿಕೊಂಡ. ಆತನ ಮಗನಾದ ಮೊಹಮ್ಮದ್ ರೇಜಾ ಷಾ "ವೈಟ್ ರೆವಲ್ಯೂಷನ್" ಅನ್ನು ಜಾರಿಗೆ ತಂದ. ಇದು ಉಲಾಮರಿಗೆ ದೊಡ್ಡ ಸಮಸ್ಯೆಯಾಗಿತ್ತು.೧೯೬೩ ರಲ್ಲಿ ಷಾ ವೈಟ್ ರೆವಲುಷನ್ ಅನ್ನು ಆರಂಭಿಸಿದ. ಇದು ಆರು ಅಂಶಗಳ ಕಾರ್ಯಕ್ರಮವಾಗಿತ್ತು.ಭೂಸುಧಾರಣೆ,ಅರಣ್ಯಗಳರಾಷ್ಟ್ರೀಕರಣ, ರಾಜ್ಯ ಹೊಂದಿದ್ದ ಸ್ವತ್ತನ್ನು ಖಾಸಗಿ ಒಡೆತನಕ್ಕೆ ನೀಡುವುದು,ಚುನಾವಣಾ ಸುಧಾರಣೆಗಳು,ಕೈಗಾರಿಕೆಗಳ ಲಾಭದ ಹಂಚಿಕೆ ಮತ್ತು ಸಾಕ್ಷರತೆಯನ್ನು ಹೆಚ್ಚಿಸಲು ಶಾಲೆಗಳಲ್ಲಿ ಪ್ರಚಾರ ಕೈಗೊಳ್ಳುವುದು,ಮೊದಲಾದವುಗಳು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಆದರೆ ಇದು ಷಿಯಾ ಪಂಥದ ಉಲಾಮರಿಗೆ ಇದರಲ್ಲಿದ್ದ ಕೆಲವೊಂದು ಅಂಶಗಳು ಅವರಿಗೆ ಹಿಡಿಸಲಿಲ್ಲ.ಹಾಗೂ ಅದು ಅವರಿಗೆ ಆಗುವ ದೊಡ್ಡ ಪೆಟ್ಟೆಂದು ಅರಿತರು.ಆದ್ದರಿಂದ ಉಲಾಮರು ಈ ಕಾರ್ಯಕ್ರಮವನ್ನು ವಿರೋಧಿಸಿದರು.ಕೊಮೆನಿಯು ೨೨ರ ಜನವರಿ ೧೯೬೩ ರಲ್ಲಿ ಷಾನ ವಿರುದ್ದ ಪ್ರಬಲವಾಗಿ ವಿರೋಧಿಸಿದ.ಕೊಮೆನಿಯು ಷಾನನ್ನು ವಿರೋಧಿಸುವುದನ್ನು ಮುಂದುವರಿಸುತ್ತಾ ಬಂದನು.ಇತರ ಎಂಟು ಷಿಯಾ ವಿಧ್ವಾಂಸರೊಂದಿಗೆ ಸೇರಿ ಮ್ಯಾನಿಫೆಸ್ಟೋ ಸಿದ್ಧಪಡಿಸುತ್ತಿದ್ದ.ಅದರಲ್ಲಿ ಷಾನು ಹೇಗೆ ಸಂವಿಧಾನವನ್ನು ವಿರೋಧಿಸುತ್ತಾ ಬಂದಿದ್ದಾನೆಂದು ವಿವರಿಸುತ್ತಿದ್ದ.ಮತ್ತು ಷಾನು ನವ್ರಜ್ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಿಲ್ಲ.ಅದು ಇರಾನಿಯರ ೧೩೪೨ನೇ ವರ್ಷವಾಗಿತ್ತು ಅಂದರೆ (೨೧ ಮಾರ್ಚ್ ೧೯೬೩) ಇದರ ವಿರುದ್ದ ಕೊಮೆನಿ ಪ್ರತಿಭಟನೆಗಿಳಿದ.

೧೯೭೦ ರ ದಶಕದಲ್ಲಿ ಈತನು ಷಾನು ಜಾರಿಗೆ ತಂದಿದ್ದ ಸಂವಿಧಾನವನ್ನು ರದ್ದುಗೊಳಿಸುವುದಾಗಿ ಹೇಳಿದ. ತದನಂತರ ಈತ "ಇಸ್ಲಾಮಿಕ್ ಗವರ್ನಮೆಂಟ್; ಗವರ್ನೆನ್ಸ್ ಅಪ್ ಧಿ ಜ್ಯೂರಿಸ್ಟ್" ಎಂಬ ಗ್ರಂಥ ರಚಿಸಿದ.ಇದು ಈತ ರಚಿಸಿದ ಕೃತಿಗಳಲ್ಲಿಯೇ ಅತ್ಯಂತ ಪ್ರಮುಖವಾದುದು ಮತ್ತು ಈ ಮೂಲಕ ತನ್ನ ಚಿಂತನೆಗಳನ್ನು ಸರ್ಕಾರದಲ್ಲಿ ಅಳವಡಿಸುವ ಪ್ರಯತ್ನ ಮಾಡಿದ.ಈ ಕೃತಿಯಲ್ಲಿ ಸಮಾಜದ ನಿರ್ವಹಣೆಗೆ ಮಾಡುವ ಕಾನೂನುಗಳು ಷರಿಯ ಬದ್ಧವಾಗಿರಬೇಕು.ಸರ್ಕಾರಿ ಹುದ್ದೆ ಹೊಂದುವವರು ಷರಿಯಾದ ಪಾಂಡಿತ್ಯ ಹೊಂದಿರಬೇಕು ಹೀಗೆ ಹಲವು ಅಂಶಗಳ ಕುರಿತು ವಿವರಿಸಿದ್ದಾನೆ.ಷಾನ ಅಧಿಕಾರವಧಿಯಲ್ಲಿ ವಿದೇಶಿಗರಿಗೆ ಇರಾನ್ ಪ್ರವೇಶವನ್ನು ಕೊಮೆನಿಯು ನಿರಾಕರಿಸಿದ್ದ. ಆದರೆ ೧೭ನೇ ಜನವರಿ ೧೯೭೯ರಲ್ಲಿ ಷಾನು ಇರಾನ್ ನಿಂದ ಪಲಾಯನಗೊಂಡ ಹಾಗೂ ಫೆಬ್ರರಿ ೧ ೧೯೭೯ರಲ್ಲಿ ಕೊಮೆನಿ ಟ್ರಿಂಪ್ ನಿಂದ ಇರಾನಿಗೆ ಬಂದಿಳಿದ.ಆಗ ಭಾರಿ ಜನಸ್ತೋಮ ಆತನನ್ನು ಇರಾನಿಗೆ ಆಹ್ವಾನಿಸಿತು.

ಇರಾನ್- ಇರಾಕ್ ಯುದ್ಧ[ಬದಲಾಯಿಸಿ]

ಕೊಮೆನಿಯು ಇತರ ಅರಬ್ ರಾಷ್ಟ್ರಗಳಲ್ಲಿ ಕ್ರಾಂತಿಗಳ ಆರಂಭಕ್ಕೆ ಕಾರಣನಾಗಿದ್ದ,ಹಾಗೂ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ.ಆ ಸಮಯದಲ್ಲಿ ಇರಾಕ್ ನ ಸರ್ವಾಧಿಕಾರಿಯಾಗಿ ಭಾತ್ ಪಕ್ಷದ ಮುಖ್ಯಸ್ಥ ಸದ್ಧಾಂ ಹುಸೇನ್ ಆಡಳಿತ ನಿರ್ವಹಿಸುತ್ತಿದ್ದ. ಸದ್ದಾಂ ಹುಸೇನನು ಇರಾನಿನಲ್ಲಿ ಪ್ರಸ್ತುತ ಹಲವು ಕ್ರಾಂತಿಗಳ ಕಾರಣ ಅಲ್ಲಿನ ಸೇನೆಯು ದುರ್ಬಲವಾಗಿದೆ ಎಂದು ತಿಳಿದನು.ತೈಲ ಸಂಪತ್ತಿನಿಂದ ಶ್ರೀಮಂತವಾಗಿದ್ದ ಕುಜೇಸ್ತಾನ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶ ಹೊಂದಿದ್ದ.೧೯೮೦ ರಲ್ಲಿ ಇರಾಕ್ ಇರಾನಿನ ಮೇಲೆ ಪೂರ್ಣ ಪ್ರಮಾಣದ ದಾಳಿಯನ್ನು ಆರಂಭಿಸಿದ.ಅಂದರೆ ೮ ವರ್ಷಗಳ ಕಾಲ ಯುದ್ದ ನಡೆಯಿತು.೧೯೮೨ ರಲ್ಲಿ ಇರಾಕ್ ತನ್ನ ಪ್ರಾಬಲ್ಯದೊದಿಗೆ ಹಲವು ಪ್ರದೇಶಗಳನ್ನು ಗೆದ್ದಿಕೊಡಿತು ಇರಾನ್-ಇರಾಕ್ ಯುದ್ಧದಲ್ಲಿ ೩೨೦,೦೦೦ ರಿಂದ ೭೨೦,೦೦೦ನಷ್ಟು ಸೈನಿಕರು ಮರಣಹೊಂದಿದರು.ಇರಾನಿನ ಆರ್ಥಿಕತೆ ಹಾಗೂ ಜನಸಂಖ್ಯೆ ಇರಾಕಿನ ಮೂರು ಪಟ್ಟು ದೊಡ್ಡದಾಗಿತ್ತು.ರಷ್ಯಾ ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನ ಗಳು ಇರಾಕ್ ಬೆಂಬಲಕ್ಕೆ ನಿಂತವು.ಆದರೆ ಷಾ ಅವದಿಯಲ್ಲಿ ಅಮೇರಿಕಾ ದೊಡ್ಡಪ್ರಮಾಣದ ಸಹಾಯ ಮಾಡಿತ್ತು. ೧೯೮೮ರಲ್ಲಿ ಇರಾಕಿನ ಮಿಸೈಲ್ ಗಳು ತೆಹ್ರಾನ್ ಮೇಲೆ ದಾಳಿಯಿಟ್ಟವು. ಆರ್ಥಿಕ ಸಮಸ್ಯೆ ಉಂಟಾಯಿತು. ಅಮೇರಿಕನ್ನರು ಇರಾನ್ನ ವಾಣಿಜ್ಯ ವಿಮಾನಗಳನ್ನು ಹಾಗೂ ಫಾ ಪೆನಿಜುಲಾವನ್ನು ಇರಾಕ್ ವಶಪಡಿಸಿಕೊಂಡವು.

ಈ ಯುದ್ಧದಲ್ಲಿ ಸುಮಾರು ೪೫೦,೦೦೦ರಿಂದ ೯೫೦,೦೦೦ನಷ್ಟು ಜನ ಗಾಯಾಳುಗಳಾದರು. ಯುದ್ಧನ ನಷ್ಟ ೩೦೦ ಬಿಲಿಯನ್ ಯುಸ್ ಡಾಲರ್ ನಷ್ಟಾಗಿತ್ತು.ಕೊಮೆನಿ ಮಾತ್ರ ಇರಾಕಿಗೆ ಶರಣಾಗುವುದುಲ್ಲವೆಂದು ವಾದಿಸಿದ.

ಮರಣ[ಬದಲಾಯಿಸಿ]

ಸರ್ವೋಚ್ಚನಾಯಕನಾದ ಕೆಲ ದಿನಗಳ ನಂತರ ಕೊಮೆನಿಯ ಆರೋಗ್ಯದಲ್ಲಿ ಏರುಪೇರಾಯಿತು. ೧೧ದಿನಗಳ ಕಾಲ ಜಮ್ರಾನ್ ಆಸ್ಪತ್ರೆಯಲ್ಲಿ ಕಳೆದನು.೧೦ದಿನಗಳಲ್ಲಿ ೫ ಬಾರಿ ಹೃದಯಾಘಾತವಾಗಿತ್ತು.೩ನೇ ಜೂನ್ ೧೯೮೯ರಲ್ಲಿ ಮರಣ ಹೊಂದಿದ.ಈತನ ನಂತರ ಸರ್ವೋಚ್ಚನಾಯಕನಾಗಿ ಅಲಿ ಕಮೇನಿ ಆಡಳಿತ ವಹಿಸಿಕೊಂಡ.ಕೊಮೆನಿಯ ನಂತರ ಬಂದ ನಾಯಕರು ವಿಲ್ಯಾತ್-ಅಲ್-ಪಾಕಿಯಾ ವಿಧಾನವನ್ನು ಅಳವಡಿಸಿಕೊಂಡರು.