ಸದಸ್ಯ:Indushree11/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:IAF Passout.jpg
ಏರ್ ಫ಼ೋರ್ಸ್ ಶಾಲೆ

https://commons.wikimedia.org/wiki/Special:UploadStash/file/14b3x0m8tj8c.pcwti3.5020043.jpg


[೧]

[೨]

[೩]

ಭಾರತದ ಮೊದಲ ಮಹಿಳಾ ತ್ರಿಮೂರ್ತಿ ಫ಼ೈಟರ್ ಪೈಲಟ್ಗಳು(೨೦೧೬)[ಬದಲಾಯಿಸಿ]

ಅವನಿ ಚತುರ್ವೇದಿ, ಭಾವನಾ ಕಾಂತ್, ಹಾಗು ಮೋಹನಾ ಸಿಂಗ್ ರವರು ಭಾರತ ದೇಶದ ವಾಯುಪಡೆಯಲ್ಲಿ ಮೊಟ್ಟಮೊದಲ ಮಹಿಳಾ ಫ಼ೈಟರ್ ಪೈಲಟ್ಗಳಾಗಿ ಇತಿಹಾಸ ಸ್ರುಷ್ಟಿಸಿದ್ದಾರೆ. ಒಂದು ಹಂತದ ತರಬೇತಿಯನ್ನು ಈ ಮೂವರು ಯಶಸ್ವಿಪೂರಕವಾಗಿ ಮುಗಿಸಿದ್ದಾರೆ ಹಾಗು ಜೂನ್ ೧೮, ೨೦೧೬ ಶನಿವಾರದಂದು ರಕ್ಷಣಾ ಸಚಿವ ಮನೊಹರ್ ಪರಿಕ್ಕರ್ ರಿಂದ ಈ ಮೂವರು ಔಪಚಾರಿಕವಾಗಿ ಕಾರ್ಯಾರಂಭಗೊಳ್ಳುವಂತಾದರು. ಪ್ರಸ್ತುತ ಹೈದರಬಾದ್ ಏರ್ ಫ಼ೊರ್ಸ್ ನಲ್ಲಿ ಒಂದು ವರುಷದ ತರಬೇತಿ ಪಡೆದಿದ್ದಾರೆ, ಮತ್ತು ಮುಂದಿನ ಹಂತದ ತರಬೇತಿಯನ್ನು ಇವರು ಬೀದರ್ ಅಥವಾ ಕಲೈಕುಂದಾ ವಾಯುನೆಲೆಯ ಪರಿವರ್ತನೆಯಲ್ಲಿ ಪಡೆಯುತ್ತಾರೆ. ತರಬೇತಿಯು ಪೂರ್ಣಗೊಂಡ ನಂತರ ಇವರಿಗೆ ಸುಖೋಯ್ ಹಾಗು ತೇಜಸ್ ರಂತಹ ಜೆಟ್ ವಿಮಾನಗಳನ್ನು ಹಾರಿಸುವ ಅವಕಾಶವಿರುತ್ತದೆ. ಅವನಿ, ಭಾವನ ಮತ್ತು ಮೋಹನ ಅವರು ಈಗಾಗಲೆ ೧೫೦ ಗಂಟೆಗಳಕಾಲ ಹಾರುವ ಅನುಭವ ಹಾಗು ಕಠಿಣ ಅಭ್ಯಾಸವನ್ನುಖಚಿತಪಡಿಸಿದ್ದಾರೆ.

೧. ಅವನಿ ಚತುರ್ವೇದಿ: ಇವರ ತಂದೆ ದಿನಕರ್ ಚತುರ್ವೇದಿ ಹಾಗು ತಾಯಿ ಸವಿತಾ ಚತುರ್ವೇದಿ. ಅವನಿ ಚತುರ್ವೇದಿಯವರು ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಕೊತಿಕಾಂಚನ್ ಹಳ್ಳಿಯವರು. ಆದರೆ ಈಗ ಇವರ ಕುಟುಂಬ ರೇವ ಎಂಬ ಊರಿನಲ್ಲಿ ವಾಸಿಸುತ್ತಿದೆ. ಅವನಿ ಚತುರ್ವೇದಿಯವರ ತಂದೆ ಎಂ.ಪಿ ಸರ್ಕಾರದ ಎಂಜಿನಿಯರ್ ಹಾಗು ತಾಯಿ ಗ್ರುಹಿಣಿ. ಅವನಿ ಚತುರ್ವೇದಿಯವರು ಅವರ ಶಾಲಾ ಶಿಕ್ಷಣವನ್ನು ಆದರ್ಶ್ ಹೈಯರ್ ಸೆಕೆಂಡರಿ ಸ್ಕೂಲ್, ಡಿಯೋಲ್ಯಾಂಡ್ ನಲ್ಲಿ ಪೂರೈಸಿದರು. ನಂತರ ಇವರು ಬಿ.ಟೆಕ್(ಕಂಪ್ಯೂಟರ್ ಸೈನ್ಸ್)ಪದವಿಯನ್ನು ಬನಸ್ತಾಲಿ ವಿಶ್ವವಿದ್ಯಾಲಯ ಜೈಪುರ್ ನಲ್ಲಿ ಮಾಡಿರುವವರು. ಅವನಿ ಚತುರ್ವೇದಿಯವರಿಗೆ ಬಾಲ್ಯಕಾಲದಿಂದಲೂ ವಿಮಾನಗಳ ಕುರಿತಂತೆ ಆಸಕ್ತಿಯೊಂದಿದ್ದರು.. ಮತ್ತು ತಾವು ಸಹ ಗಗನಯಾತ್ರಿ ಕಲ್ಪನಾ ಚಾವ್ಲ ಆಗಬೇಕೆಂಬ ಅಪೇಕ್ಷೆ ಹೊಂದಿದ್ದರೆಂದು ಅವರ ತಾಯಿ ಹೇಳುತ್ತಾರೆ. ಅವನಿ ಚತುರ್ವೇದಿಯವರ ಮಾತ್ರುಸಂಬಂಧಿಯಾದ ಪ್ರೇಮ್ ಪ್ರಕಾಶ್ ಶರ್ಮಾ ಎಂಬುವವರು ಭಾರತೀಯ ಸೇನೆಯ ನಿವ್ರುತ್ತ ಕರ್ನಲ್. ಮತ್ತು ಇನ್ನೊಬ್ಬ ಸಂಬಂಧಿಕರಾದ ನಿರಭ್ ರವರು ಭಾರತೀಯ ಸೇನೆಯಲ್ಲಿ ನಾಯಕರಾಗಿದ್ದಾರೆ. ಇವರಿಗೆ ತಮ್ಮ ಕಾಲೇಜಿನ ಫ಼್ಲೈಯಿಂಗ್ ಕ್ಲಬ್ ಮುಖಾಂತರ ಕೆಲವೊಮ್ಮೆ ಕೆಲ ಗಂಟೆಗಳ ಕಾಲ ವಿಮಾನದಲ್ಲಿ ಹಾರುವ ಅನುಭವವು ದೊರಕಿತ್ತು. ಈ ಎಲ್ಲಾ ಘಟನೆಗಳಿಂದ ಅವನಿ ಚತುರ್ವೇದಿಯವರು ಭಾರತೀಯ ವಾಯುಪಡೆಗೆ ಸೇರಿ, ಸೇವೆ ಮಾಡಲು ಪ್ರೇರಿತಗೊಂಡರು ಎಂದು ಹೇಳುತ್ತಾರೆ. ಇವರ ಬೇರೆ ಆಸಕ್ತಿಗಳೆಂದರೆ: ಪಿಟೀಲು ನುಡಿಸುವುದು, ಚಿತ್ರಕಲೆ ಮಾಡುವುದು, ಟೇಬಲ್ ಟೆನ್ನಿಸ್ ಆಟ ಆಡುವುದು.

೨. ಭಾವನಾ ಕಾಂತ್: ಇವರ ತಂದೆ ತೇಜ್ ನಾರಾಯಣ್ ಕಾಂತ್ ಹಾಗು ತಾಯಿ ರಾಧಾ ಕಾಂತ್. ಭಾವನಾ ಕಾಂತ್ ಅವರು ಬಿಹಾರದ ದರ್ಭಾಂಗ ಜಿಲ್ಲೆಯವರು. ಆದರೆ ಇವರು ಹುಟ್ಟಿದ್ದು, ಬೆಳೆದ್ದದ್ದೆಲ್ಲಾ ಭಾರತೀಯ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಬರೌನಿ ರಿಫ಼ೈನರಿ ಟೌನ್ ಶಿಪ್, ಬೆಗುಸಾರೈನಲ್ಲಿ. ಇವರ ತಾಯಿ ಗ್ರುಹಿಣಿ ಹಾಗು ತಂದೆ ಐಒಸಿಲ್ ನಲ್ಲಿ ಎಂಜಿನಿಯರ್ ಆಗಿದ್ದಾರೆ. ಇವರು ತಮ್ಮ ಶಾಲ ಶಿಕ್ಷಣವನ್ನು ಬರೌನಿ ರಿಫ಼ೈನರಿ ಡಿಎವಿ ಪಬ್ಲಿಕ್ ಸ್ಕೂಲ್ ಬರೌನಿ ರಿಫ಼ೈನರಿ ಡಿಎವಿ ಪಬ್ಲಿಕ್ ಸ್ಕೂಲ್ ನಲ್ಲಿ ಪೂರೈಸಿದರು. ಮತ್ತು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಬಿ.ಈ(ಮೆಡಿಕಲ್ ಎಲೆಕ್ಟ್ರಾನಿಕ್ಸ್) ಪದವಿಯನ್ನು ಮಾಡಿರುವವರು. ಭಾವನಾ ಕಾಂತ್ ರಿಗೆ ಚಿಕ್ಕವರಿಂದಲೂ ವಿಮಾನ ಹಾರಿಸುವ ಕನಸಂತೆ. ಹಾಗು ಇವರು ಸಾಹಸ ಕಾರ್ಯಗಳಲ್ಲಿಯೂ ಇವರಿಗೆ ಬಹಳ ಆಸಕ್ತಿಯೊಂದಿದ್ದರಿಂದ ಭಾರತೀಯ ವಾಯುಪಡೆಗೆ ಸೇರಲು ಪ್ರೇರಿತಗೊಂದಡೆನು ಎಂದು ಹೇಳುತ್ತಾರೆ. ಇವರ ಇತರೆ ಆಸಕ್ತಿಗಳೆಂದರೆ: ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ಉಳಿದಂತೆ ಅಡುಗೆ ಮಾಡುವುದು, ಪ್ರಯಾಣ ಮಾಡುವುದು, ಈಜುವುದು, ಮತ್ತು ಛಾಯಾಗ್ರಹಣ.

೩. ಮೋಹನಾ ಸಿಂಗ್: ಇವರ ತಂದೆ ಪ್ರತಾಪ್ ಸಿಂಗ್. ಮೋಹನಾ ಸಿಂಗ್ ರವರು ರಾಜಸ್ಥಾನದ ಝುಂಝುಂನು ಊರಿನವರು.ಮೋಹನಾ ಸಿಂಗ್ ರವರ ತಂದೆ ಭಾರತೀಯ ವಾಯುಪಡೆಯಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗು ತಾಯಿ ಶಿಕ್ಷಕಿ ವ್ರುತ್ತಿಯಲ್ಲಿದ್ದಾರೆ.ಇವರ ತಾತ ಏವಿಯೇಷನ್ ರಿಸರ್ಚ್ ಸೆಂಟರ್ ನಲ್ಲಿ ಫ಼್ಲೈಟ್ ಗನ್ನರ್ ಆಗಿ ಸೇವೆ ಸಲ್ಲಿಸಿದ್ದರು ಇವರು ತಮ್ಮ ಶಾಲಾ ಶಿಕ್ಷಣವನ್ನು ಏರ್ ಫ಼ೊರ್ಸ್ ಸ್ಕೂಲ್, ನವ ದೆಹಲಿಯಲ್ಲಿ ಪೂರೈಸಿದರು. ಮತ್ತು ಅಮ್ರುತಸರದ ಜಿಐಎಂಈಟಿಯಲ್ಲಿ ಬಿಟೆ.ಕ್(ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್) ಪದವಿಯನ್ನುಬ ಮಾಡಿರುವರು. ಇವರು ಭಾರತೀಯ ವಾಯುಪಡೆಗೆ ಸೇರಲು ಮುಖ್ಯವಾಗಿ ಅವರ ತಾತ ಹಾಗು ತಂದೆಯರ ಸೇವೆಯೆ ಪ್ರೇರಣೆ ಎಂದು ಹೇಳುತ್ತಾರೆ. ಮತ್ತು ಭಾರತೀಯ ವಾಯುಪಡೆಗೆ ಸೇರವುದು ಬಾಲ್ಯದ ಕಾಲದಿಂದ ಕಂಡ ಕನಸು ಎಂದು ಹೇಳುತ್ತಾರೆ. 'ನಾನು ನನ್ನ ಕುಟುಂಬ ಪರಂಪರೆಯಾಗಿ ಮಾಡುತ್ತಿರುವ ದೇಶದ ರಕ್ಷಣೆ ಹಾಗು ದೇಶಸೇವೆಯನ್ನು ಮುಂದುವರಿಸುವ ಕಾರ್ಯಮಾಡುತ್ತಿದ್ದೇನೆ' ಎಂದು ಇವರು ಹೇಳುತ್ತಾರೆ. ಇವರ ಇತರೆ ಆಸಕ್ತಿಗಳೆಂದರೆ: ಹಾಡುವುದು, ಓದುವುದು, ಪ್ರಯಾಣಿಸುವುದು, ಅಡುಗೆ ಮಾಡುವುದು, ಛಾಯಾಗ್ರಹಣ ಎಂದು ಹೇಳುತ್ತಾರೆ.

Jump up ↑ http://www.ndtv.com/india-news/indian-air-force-to-get-first-women-fighter-pilots-today-1420495. Retrieved 6 ಸೆಪ್ಟೆಂಬರ್ 2016. Check date values in: |access-date= (help); Missing or empty |title= (help) Jump up ↑ http://www.thehindu.com/news/national/first-batch-of-three-female-fighter-pilots-commissioned/article8744547.ece. Retrieved 6 ಸೆಪ್ಟೆಂಬರ್ 2016. Check date values in: |access-date= (help); Missing or empty |title= (help) <ref>Jump up ↑ http://www.livemint.com/Politics/OACpx37JeUJjEtWkwO31yH/Indian-Air-Force-gets-its-first-women-fighter-pilots.html.

  1. Jump up ↑ http://www.livemint.com/Politics/OACpx37JeUJjEtWkwO31yH/Indian-Air-Force-gets-its-first-women-fighter-pilots.html. Retrieved 6 ಸೆಪ್ಟೆಂಬರ್ 2016. Check date values in: |access-date= (help); Missing or empty |title= (help)
  2. Jump up ↑ http://www.thehindu.com/news/national/first-batch-of-three-female-fighter-pilots-commissioned/article8744547.ece. Retrieved 6 ಸೆಪ್ಟೆಂಬರ್ 2016. Check date values in: |access-date= (help); Missing or empty |title= (help)
  3. Jump up ↑ http://www.livemint.com/Politics/OACpx37JeUJjEtWkwO31yH/Indian-Air-Force-gets-its-first-women-fighter-pilots.html. Retrieved 6 ಸೆಪ್ಟೆಂಬರ್ 2016. Check date values in: |access-date= (help); Missing or empty |title= (help)