ಸದಸ್ಯ:GiridharReddy1610559/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಘಮಂದಾರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಈ  ಚಿತ್ರದ ನಿರ್ದೆಶಕರು ಕೆ.ವಿ ಜಯರಾಮನವರು ಮತ್ತು ನಿರ್ಮಾಪಕರು ಮಿನಾಕ್ಷಿಜಯರಾಮನವರು.ಈ ಚಿತ್ರವು ಡಾ.ಎಚ್ ಗಿರಿಜಮ್ಮನವರ ಅದೆ ಹೆಸರಿನ ಕವಿತೆಯ ಆದಾರಿತವಾಗಿದೆ. ಅಂಬರಿಶ್, ಮಲಾಶ್ರಿ ಮತ್ತು ಅಂಜನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಂಗೀತವನ್ನು  ಎಸ್.ಪಿ ವೆಂಕೆಟೆಶ್ ನವರು ಸಂಯೋಜಿಸಿದಾರೆ. thumb|ಮೇಘ ಮಂದಾರ

ತಾರಾಗಣ

ಅಂಬರೀಷ್-ಮೇಘರಾಜ್ ಪಾತ್ರದಲ್ಲಿ(ನಾಯಕ)

ಮಾಲಾಶ್ರೀ-ಮಂದಾರ ಪಾತ್ರದಲ್ಲಿ(ನಾಯಕಿ)

ಅಂಜನಾ-ಸ್ನೇಹ ಪಾತ್ರದಲ್ಲಿ(೨ನೇ ನಾಯಕಿ)

ಲೋಕನಾಥ್-ನಾಯಕನ ತಂದೆ ಪಾತ್ರದಲ್ಲಿ

ಅಶ್ವತ್- ಬೆಳ್ಳಿಯಪ್ಪ ಪಾತ್ರದಲ್ಲಿ(ನಾಯಕಿಯ ತಂದೆ)

ಜಗ್ಗೇಶ್-ಶಿವರಂಜನ್ ಪಾತ್ರದಲ್ಲಿ(ಖಳನಾಯಕ)

ಕತೆ

[೧]

ನಾಯಕ ಮೇಘ ರಾಜ್ ಲೇಖಕನಾಗಿರುತ್ತಾನೆ.ನಾಯಕಿ ಮಾದಕ ವಸ್ತುಗಳಿಗೆ ಬಲಿಯಗಿರುತ್ತಾಳೆ.ನಾಯಕ ಮಾದಕ ವಸ್ತುಗಳ ಬಗ್ಗೆ ಲೇಖನ ಬರೆದು ಪೇಪ್ಪರಿನಲ್ಲಿ ಬರೆಯುತ್ತಾನೆ, ಈ ಲೇಖನವನು ನಾಯಕಿ ವಿರೊಧಿಸುತ್ತಾಳೆ.ಮಾದಕವ್ಯಸಿನಿಯಂದು ಕಾಲೇಜಿನಿಂದ ಬಹಿಷ್ಕರಿಸಲ್ಪಡುತ್ತಾಳೆ.ನಾಯಕ ಈ ವರ್ತನೆಯ ಬಗ್ಗೆ ನಾಯಕಿಯನ್ನು ಕೇಳಿದಾಗ ಅವಳು ತನ್ನ ಚಿಕ್ಕ ವಯಸಿನಲ್ಲಿ ಒಲಗಾದ ಕಷ್ಟಗಳನ್ನು ವಿವರಿಸುತ್ತಾಳೆ,ನಾಯಕ ಇದನ್ನು ಅರ್ಥಮಾಡಿಕೊಳ್ಳುತ್ತಾನೆ.ತಾಯಿಯನ್ನು ಕಳೆದುಕೋಂಡು ತಂದೆಯ ಪ್ರೀತಿಯಿಂದ ವಂಚಿತಳಾದ ನಾಯಕಿಯು ನಾಯಕನನ್ನು ಪ್ರೀತಿಸುತ್ತಾಳೆ ಮತ್ತು ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡುತ್ತಾಳೆ.ಇನೊಂದು ಕಡ್ಡೆ ನಾಯಕನ ಅತ್ತೆಯ ಮಗಳಾದ ಅಂಜನ ಸಹಾ ನಾಯಕನನ್ನು ಪ್ರೀತಿಸುತಿರುತ್ತಾಳೆ.ನಾಯಕನ ತಂದೆಗೆ ಅಂಜನ ಜೊತ್ತೆ ಮದುವೆ ಮಾಡುವ ಆಸೆ ಇರುತ್ತದೆ.ಮಂದಾರಳ ಚಿಕ್ಕಮ್ಮನಿಗೆ ತನ್ನ ತಮ್ಮನಿಗ್ಗೆ ಕೊಟ್ಟು ಮದುವೆ ಮಾಡಬೇಕೆಂದಿರುತ್ತಾಳೆ.ನಾಯಕಿಯ ಚಿಕ್ಕಮ್ಮ ಮತ್ತು ಖಳನಾಯಕ ಅವಳನ್ನು ಕೊಡಿಹಾಕಿ ಹಿಂಸೆಯನ್ನು ಕೊಡುತ್ತಾರೆ.ಖಳನಾಯಕನ ಜೊತ್ತೆ ನಾಯಕಿಯ ಮದುವೆಯ ಸಿದ್ದತ್ತೆಯಲ್ಲಿರುವ ಸಮಯದಲ್ಲಿ ನಾಯಕ ಧಾವಿಸುತ್ತಾನೆ ಮತ್ತು ಮದುವೆಯನ್ನು ತಡೆದ್ದು ತಾನು ಮದುವೆಯಗುತ್ತಾನೆ.ನಂತರ ಮಂದಾರ ಗರ್ಭಿಣಿಯಾಗುತ್ತಾಳೆ,ಹೆರಿಗೆ ನೊವು ಎಂದು ದಾಖಲಾದ ಪತ್ನಿಯನ್ನು ನೊಡಲು ಆಸ್ಪತ್ರೆಗೆ ಬರುತ್ತಾನೆ ನಾಯಕ.ಆಸ್ಪತ್ರೆಗೆ ಬಂದ ಮೇಲೆ ವೈದ್ಯರು ನಾಯಕನಿಗೆ ತನ್ನ ಪತ್ನಿಯು ಮುಂಚೆ ಮಾದಕವ್ಯಸನಿಯಗಿದ್ದರಿಂದ ಗರ್ಭಕೋಶದ ಮೇಲೆ ಪ್ರಭಾವ ಬೀರಿ ಮುಂದೆ ಸಂತಾನ ಭಾಗ್ಯವಿರುವುದಿಲ್ಲ ಎಂದು ಹೇಳುತ್ತಾರೆ.[೨]

ಒಂದು ದಿನ ದೂರವಾಣಿ ಕರೆ ಮಾಡಿ ನಾಯಕನ ತಂದೆಗೆ ಅಪಘಾತವಾಗಿದೆಯಂದು ಸುಳ್ಳು ಸುದ್ದಿಯನ್ನು ತಿಳಿಸುತ್ತಾನೆ ಖಳನಾಯಕ.ನಾಯಕನಿಗೆ ತೊಂದರೆಕೊಡಳು ಪ್ರಯತ್ನಿಸುತ್ತಾನೆ,ಅದೆ ಹೊತ್ತಿಗೆ ಪೊಲೀಸರು ಬಂದು ರಕ್ಷಿಸುತ್ತಾರೆ.ಈ ಕಡೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆಯಾದ ನಂತರ ಸತ್ತು ಹೋಗೆದೆ ಎಂದೂ ತಿಳಿಯುತ್ತದ್ದೆ.ನಂತರ ಖಳನಾಯಕನ್ನು ಆಸ್ಪತ್ರೆಗೆ ಬಂದು ಮಂದಾರಗೆ ನಿನ್ನ ಗಂಡ ಅಪಘಾತದಲ್ಲಿ ಮೃತಪಟ್ಟಿದಾನೆಂದು ತಿಳಿಸುತ್ತಾನೆ.ಈ ವಿಷಯ ಕೇಳಿದ ತಕ್ಷಣ ಆ ಶಾಕ್ ನಿಂದ ಅವಳಿಗೆ ಬುದ್ದಿ ಭ್ರಮಣೆಯಾಗುತ್ತದೆ.ಬುದ್ಧಿ ಭ್ರಮಣೆಯಾದ ಹೆಂಡತಿಯನ್ನು ಮಗುವಿನಂತೆ ನೋಡಿಕೊಂಡು ಸೇವೆಯನ್ನು ಮಾಡುತ್ತಾನೆ.ಮಂದಾರಳ ಸ್ಥಿತಿಯನ್ನು ಕಂಡು ಅವಳ ತಂದೆ ಚಿಂತೆಗೆ ಒಳಗಾಗುತ್ತಾನೆ ಮತ್ತು ಅದೆ ಸಂಧರ್ಭದಲ್ಲಿ ಒಂದು ಸಲಹೆಯನ್ನು ಕೊಡುತ್ತಾರೆ,ಅನಾಥಾಶ್ರಮದಿಂದ ಮಗುವನ್ನು ದತ್ತು ತೆಗೆದುಕೊಂಡು ಸಾಕಿದರೆ ಅದರಿಂದ ಮಂದಾರ ಸಂತಸದಿಂದಿರುತ್ತಾಳೆ ಎಂದು ಹೇಳುತ್ತಾರೆ.ಮಾವನ ಸಲಹೆಯಂತೆ ಅನಾಥಾಶ್ರಮದ ಕಡೆ ಹೊಗುವ ದಾರಿಯಲ್ಲಿ ಒಂದು ಮಗು ಸಿಗುತ್ತದೆ. ಆ ಮಗುವನ್ನುಮನೆಗೆ ಕರೆತರುತ್ತಾರೆ.ಅದೆ ಸಂಧರ್ಭದಲ್ಲಿ ಒಬ್ಬರು ಕಂಪ್ಲೆಟ್ ದಾಖಲು ಮಾಡಿರುತ್ತಾರೆ, ಮಗು ಕಾಣೆಯಾಗಿದೆಯಂದು ನಂತರ ನಾಯಕ ಆ ವಿಳಾಸವನ್ನು ಹುಡುಕಿಕೊಂಡು ಬಂದಾಗ ತಕ್ಷಣ ಗಾಬರಿಯಾಗುತ್ತಾನೆ, ಅದು ಅವನ ಅತ್ತೆ ಮಗಳಾದ ಸ್ನೇಹಳ ಮಗು ಎಂದು ತಿಳಿಯುತ್ತದೆ.ಗಂಡನನ್ನು ಕಳೆದುಕೊಂಡ ಸ್ನೇಹ ತನ್ನ ಮಗಳು ಮೇಘಳನ್ನು ನಿಮ್ಮ ಮಗಳೆಂದು ಅವರಿಗೆ ಬಿಟ್ಟುಕೊಡುತ್ತಳೆ. thumb|ಚಿತ್ರದ ದೃಶ್ಯ

ಮೇಘನ ಇವರನೆ ತನ್ನ ತಂದೆ ತಾಯಿಯೆಂದು ತಿಳಿದು ಖುಷಿಯಿಂದ ಬೆಳೆಯುತ್ತಾಳೆ.ಒಮ್ಮೆ ಮೇಘನ ತನ್ನ ತಾತನ ಊರಿಗೆ ಬರುವ ದಾರಿಯಲ್ಲಿ ಖಳನಾಯಕ ಅವಳನ್ನು ಅಪಹರಿಸಿ ಬೆಳ್ಳಿಯಪ್ಪನಿಗೆ ೧೦ಲಲಕ್ಷ ಹಣ ಬೇಡಿಕೆಯನ್ನು ಇಡುತ್ತಾನೆ. ಈ ವಿಷಯವನ್ನು ಮಾವ ಅಳಿಯನ್ನಿಗೆ ತಿಳಿಸುತ್ತಾನೆ.ಹೇಳಿದ ವಿಳಾಸಕ್ಕೆ ನಾಯಕನು ಬಂದು ಮಗಳನ್ನು ರಕ್ಷಿಸುತ್ತಾನೆ.ಅದೆ ವೇಳೆಗೆ ಪೋಲಿಸರು ಬಂದು ಖಳನಾಯಕನನ್ನು ಭಂದಿಸುತ್ತಾರೆ.ಮೇಘನ ಮತ್ತು ಹೆಂಡತಿ ಮಂದಾರ ತಪ್ಪಾಗಿ ತಿಳಿದುಕೊಂಡಿರುವ ವಿಷಯವನ್ನು ಸರಿಮಾಡಲು ಸತ್ಯಾಂಶವನ್ನು ತಿಳಿಸುತ್ತಾನೆ.ತನ್ನ ಕುಟುಂಬದ ನೆಮ್ಮದಿಗಾಗಿ ಸ್ನೇಹಳ ತ್ಯಾಗದ ವಿಷಯವನ್ನು ಎಲ್ಲರಿಗು ತಿಳಿಸುತ್ತಾನೆ,ಇದರಿಂದ ಸಮಸ್ಯೆ ಬಗ್ಗೆ ಹರಿಯುತ್ತದೆ.ಬೆಳ್ಳಿಯಪ್ಪ ನವರ ಕನಿಸಿನ ಕೂಸಾದ ಕಾವೇರಿಯ ಹೆಸರು ಅಂದರೆ ಅವರ ಪತ್ನಿಯ ಹೆಸರಿನಲ್ಲಿ ಕಟ್ಟಿಸಿದ ಆಸ್ಪತ್ರೆಯ ಉದ್ಗಾಟನೆಯು ಆಗುತ್ತದೆ.ಮೇಘಳನು ತಾಯಿ ಮತ್ತು ತಾತನ ಜವಾಬ್ದಾರಿಗೆ ವಹಿಸಿ ಓದ್ದಿ ದೊಡ್ಡ ವೈದ್ಯರಾಗ ಬೇಕೆಂದು ಆಶರ್ವಾದಿಸಿ ನಂತರ ಅವರ ತಂದೆ ಮನೆಗೆ ತೆರುಳುತ್ತಾರೆ.

<ಉಲ್ಲೇಖನಗಳು>

  1. https://chiloka.com/movie/megha-mandara-1992#movie_details_list
  2. http://www.in.com/tv/movies/etv-kannada-124/megha-mandara-32896.