ವಿಷಯಕ್ಕೆ ಹೋಗು

ಸದಸ್ಯ:Gagana166

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಗಗನ,ನಾನು ೧೨-೦೪-೧೯೯೯ರಂದು ಜನಿಸಿದೆ.ನನ್ನ ತಂದೆಯ ಹೆಸರು ಅಶೋಕ ಹಾಗೂ ತಾಯಿ ಪ್ರತಿಮ.ನಾನು ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕು ಸರ್ಜಾಪುರ ಹೋಬಳಿಯಲ್ಲಿ ಜನಿಸಿದೆ.ನಾವು ಸರ್ಜಾಪುರದಲ್ಲೆ ವಾಸವಿದ್ದಿವಿ.ನನ್ನ ತಂದೆ-ತಾಯಿಗೆ ನಾನು ಒಬ್ಬಳೆ ಮಗಳು,ಹಾಗಾಗಿ ನಮ್ಮದು ಒಂದು ಚಿಕ್ಕದಾದ ಚೊಕ್ಕ ಕುಟುಂಬ

ವಿದ್ಯಾಭ್ಯಾಸ

[ಬದಲಾಯಿಸಿ]

thumb ನನ್ನ ವಿದ್ಯಾಭ್ಯಾಸವನ್ನು ಇಲ್ಲೆ ಇರುವ ಸಂತ ಪಿಲೋಮಿನ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಿಕೇಜಿಯಿಂದ ೧೦ನೇ ತರಗತಿಯವರೆಗು ಮುಗಿಸಿದೆ,ನನ್ನ ಪಿ.ಯು ಶಿಕ್ಷಣವನ್ನು ಸಂತ ಪ್ರಾನ್ಸಿಸ್ ಕಾಂಪೋಜಿಟ್ ಪಿ.ಯು ಕಾಲೇಜಿನಲ್ಲಿ ಮುಗಿಸಿದೆ,ನಾನು ನನ್ನ ಪಿ.ಯುಸಿಯಲ್ಲಿ ಶೇ.೯೫% ಅಂಕಗಳು ಪಡೆದುಕೊಂಡು ಕಾಲೇಜಿಗೆ ತೃತೀಯ ಸ್ಥಾನವನ್ನು ಅಲಂಕರಿಸಿದೆ,ಈಗ ನನ್ನ ಬಿ.ಕಾಂ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮುಂದುವರೆಸಿದ್ದೇನೆ.

ಸ್ವಭಾವ

[ಬದಲಾಯಿಸಿ]

ನಾನು ಚಿಕ್ಕಂದಿನಿಂದಲೂ ತುಂಬಾ ಧೈರ್ಯವಂತೆ ಮತ್ತು ತುಂಬಾ ಹಟಮಾರಿ ಸ್ವಭಾವದವಳು,ನಾನು ತುಂಬಾ ಶುಚಿಯಾಗಿರುತ್ತೇನೆ,ನನ್ನ ಉಡುಪು ಶುಚಿಯಾಗಿಟ್ಟುಕೊಳ್ಳುತ್ತಿದ್ದೆ ಮತ್ತು ನಾನು ಊಟ ತಿಂಡಿಯಲ್ಲಿ ತುಂಬಾ ಇತಿ ಮಿತಿ ಸ್ವಭಾವದವಳು.ನನಗೆ ಖಾರವಾದ ಪದಾರ್ಧಗಳು ತುಂಬಾ ಇಷ್ಟ,ಸಿಹಿ ಪದಾರ್ಥಗಳು ತುಂಬಾ ಇಷ್ಟ ಪಡುತ್ತಿರಲಿಲ್ಲ,ಶಾಲೆಯಲ್ಲಿ ಒಬ್ಬ ಉತ್ತಮ ಮತ್ತು ಆದರ್ಶ ವಿದ್ಯಾರ್ಥಿ ಎಂಬ ಮೆಚ್ಚುಗೆ ಎಲ್ಲ ಶಿಕ್ಷಕರಿಂದ ದೊರೆತಿತ್ತು,ನನಗೆ ಓದಿನ ಬಗ್ಗೆ ತುಂಬಾ ಆಸಕ್ತಿಯಿತ್ತು ಆದರೆ ನಾನು ತುಂಬ ಸಮಯ ಓದುತ್ತಿರಲಿಲ್ಲ ಶಾಲೆಯಲ್ಲಿ ಶಿಕ್ಷಕರು ಭೌದನೆ ಮಾಡುವಾಗ ಅದನ್ನು ಗಮನವಿಟ್ಟು ಕೇಳುತ್ತೇನೆ ಮತ್ತು ನನಗೆ ತುಂಬ ನೆನಪಿನ ಶಕ್ತಿ ಇರುವುದರಿಂದ ನಾನು ತುಂಬಾ ಸಮಯ ಓದಬೇಕಾದ ಅಗತ್ಯವಿರಲಿಲ್ಲ.

ಹವ್ಯಾಸಗಳು

[ಬದಲಾಯಿಸಿ]

ನಾನು ಚಿಕ್ಕವಳಿದ್ದಾಗ ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಿದ್ದೆ,ನಾನು ಶಾಲೆಯಲ್ಲಿ ನಡೆಯುತ್ತಿದ್ದಂತಹ ಎಲ್ಲಾ ಕಾರ್ಯಕ್ರಮದಲ್ಲಿ ನ್ರುತ್ಯ ಮಾಡುತ್ತಿದ್ದೆ ಮತ್ತು ನನಗೆ ಜನಪದ ಗೀತೆಗಳನ್ನು ತುಂಬಾ ಚೆನ್ನಾಗಿ ಹಾಡುತ್ತಿದ್ದೆ,ಭಾಗ್ಯಾದ ಬಳೆಗಾರ ಹಾಡಿಗೆ ಪ್ರಥಮ ಬಹುಮಾನ ಪಡೆದಿದ್ದೆ,ನಾನು ಚಿತ್ರಗಳನ್ನು ಬಿಡಿಸುತ್ತಿದ್ದೆ ಮತ್ತು ಸ್ವಲ್ಪದಿನ ಸಂಗೀತ ಅಭ್ಯಾಸವನ್ನು ಮಾಡಿದ್ದೆ,ಕಾರಣಾಂತರದಿಂದ ಅದನ್ನು ಕೈ ಬಿಡಬೇಕಾಯಿತು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ,ಹಲವು ಬಾರಿ ೧೦೦ಮೀಟರ್ ಮತ್ತು ೨೦೦ಮೀಟರ್ ಓಟದಲ್ಲಿ ಬಹುಮಾನ ನನ್ನದಾಗಿಸಿಕೊಂಡೆ,ಯೋಗ ಮತ್ತು ಧ್ಯಾನವನ್ನು ಎಸ್.ಎಸ್.ವೈ ಕೇಂದ್ರದಲ್ಲಿ ತರಬೇತಿ ಪಡೆದಿದ್ದೇನೆ,ನಾನು ಟಿವಿ ತುಂಬಾ ನೋಡುತ್ತೇನೆ,ನನಗೆ ರೀಯಾಲಿಟಿ ಶೋಗಳು ತುಂಬಾ ಇಷ್ಟ.