ವಿಷಯಕ್ಕೆ ಹೋಗು

ಸದಸ್ಯ:Dhanalakshmin170/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಬ್ಬಗಳು

[ಬದಲಾಯಿಸಿ]

ಹಬ್ಬವು ಸಾಮಾನ್ಯವಾಗಿ ಒಂದು ಸ್ಥಳೀಯ ಸಮುದಾಯದಿಂದ ಏರ್ಪಡಿಸಲಾಗುವ, ಆ ಸಮುದಾಯದ ಯಾವುದೋ ಒಂದು ಅದ್ವಿತೀಯ ಅಂಶದ ಮೇಲೆ ಕೇಂದ್ರೀಕರಿಸುವ ಮತ್ತು ಅದನ್ನು ಆಚರಿಸುವ ಒಂದು ಸಂದರ್ಭ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ. ಹಬ್ಬಗಳು ಜನರ ಮನಸ್ಸಿನಲ್ಲಿ ಸಂತಸವನ್ನು ಉಂಟು ಮಾಡುತ್ತದೆ.ಭಾರತದಲ್ಲಿ ಸುಮಾರು ೩೦೦೦ ಜಾತಿಗಳು ಇದ್ದು, ಒಂದೊಂದು ಧರ್ಮವು ಒಂದೊಂದು ಬಗೆಯ ಹಬ್ಬಗಳಿಗೆ ಪ್ರಸಿದ್ಧಿಯಾಗಿವೆ. ಒಟ್ಟಾರೆ ಹೇಳಬೇಕಾದರೆ ಭಾರತ ಒಂದು ಹಬ್ಬಗಳಿಂದ ಕೂಡಿದ ದೇಶ. ಭಾರತವನ್ನು ಹಿಂದೂಸ್ತಾನವೆಂದು ಕರೆಯುತ್ತಾರೆ. ಪುರಾತನ ಕಾಲದಿಂದಲೂ ಜನರು ತಮ್ಮ ತಮ್ಮ ಸಂಪ್ರದಾಯದಂತೆ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಹಬ್ಬಗಳನ್ನು ವಿವಿಧ ಧರ್ಮಗಳು ಅವರವರ ಧಾರ್ಮಿಕ ನಂಬಿಕೆಯ ಅನುಗುಣವಾಗಿ ವಿವಿಧ ರೀತಿಗಳಲ್ಲಿ ಆಚರಿಸುತ್ತಾರೆ.

ಹಿಂದೂ ಧರ್ಮದ ಹಬ್ಬಗಳು

[ಬದಲಾಯಿಸಿ]

ಯುಗಾದಿ

[ಬದಲಾಯಿಸಿ]

ಯುಗಾದಿಯನ್ನು ಹಿಂದೂ ಧರ್ಮದಲ್ಲಿ ಹೊಸ ವರ್ಷವಾಗಿ ಆಚರಿಸುತ್ತಾರೆ, ಈ ಹಬ್ಬವು ಜನರಿಗೆ ಅತ್ಯಂತ ಮಂಗಳಕರವಾದ ಹಬ್ಬವಾಗಿದೆ.ಭಾರತದ ಕೆಲವೆಡೆ ಯುಗಾದಿಯನ್ನು ವಿಕ್ರಮ ಸಮ್ವತ್ ಎಂಬ ಹೆಸರಿನಲ್ಲಿ ಸಂಭ್ರಮಿಸುತ್ತಾರೆ.ಈ ಹಬ್ಬದಂದು ಮನೆಯಲ್ಲಿ ಎಲ್ಲಾರೂ ಎಣ್ಣೆಯ ಸ್ನಾನ ಮುಗಿಸಿ, ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಿ ಅನಂತರ ಬೇವು-ಬೆಲ್ಲ ತಿನ್ನುತ್ತಾರೆ.ತಮ್ಮ ಜೀವನದಲ್ಲಿ ಬರುವ ಎಲ್ಲಾ ಸುಖವು ಬೆಲ್ಲದಷ್ಟೆ ಸಿಹಿಯಾಗಿರಲ್ಲಿ ಮತ್ತು ದುಃಖವು ಬೇವಿನಷ್ಟೆ ಕಹಿಯಾಗಿದ್ದರು ಸಹ ಅದನ್ನು ಎದರಿಸುವ ಸಾಮರ್ತ್ಯವಿರಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಗಣೇಶ ಚತುರ್ದಶಿ

[ಬದಲಾಯಿಸಿ]
ಗಣೇಶ ಚತುರ್ಥಿ

ಗಣೇಶ ಚತುರ್ಥಿಯನ್ನು ಹಲವಾರು ಹೆಸರಿನಲ್ಲಿ ಕರೆಯಾಲಗುತ್ತಾದೆ ವಿನಾಯಕ ಚತುರ್ಥಿ ,ಗಣೇಶ ಚತುರ್ಥಿ ಇನ್ನೂ ಮುಂತಾದವು.ಹಿಂದೂಧರ್ಮದ ಹಬ್ಬಗಳಲ್ಲಿ ಈ ಹಬ್ಬವು ತುಂಬಾ ಸಂತಸವನ್ನು ಮೂಡಿಸುವ ಹಬ್ಬ.ಗಣೇಶನು ಜ್ಞಾನದ ದೇವರೆಂಬ ನಂಬಿಕೆಯು ಸಹ ಇದೆ. ಈ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿಯೊಂದು ಗಲ್ಲಿ-ಗಲ್ಲಿಯಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ,ವಿನಾಯಕನಿಗೆ ಪ್ರಿಯವಾದ ಲಡ್ಡು-ಮೊದಕಗಳನ್ನು ಅರ್ಪಿಸುತ್ತಾರೆ.ತಾವು ಮಾಡುವ ಕಾರ್ಯಗಳಲ್ಲಿ ಯಾವುದೇ ವಿಘ್ನಗಳು ಇಲ್ಲದೆ ನಿರಾಳಾವಾಗಿ ನಡೆಯಲಿ ಎಂದು ವಿನಾಯಕನಲ್ಲಿ ಪ್ರಾರ್ಥಿಸುತ್ತಾರೆ.


ಏಕಾದಶಿ

[ಬದಲಾಯಿಸಿ]

ಹಿಂದೂ ಧರ್ಮದ ಪ್ರಕಾರ ಹಬ್ಬಗಳಲ್ಲಿ ಮೊದಲ ಹಬ್ಬ ಏಕಾದಶಿಯಾಗಿದ್ದು, ಈ ಹಬ್ಬದಂದು ಸಾಮಾನ್ಯವಾಗಿ ಉಪವಾಸ ವ್ರತ ಮಾಡಿ, ರಾತ್ರಿಯೆಲ್ಲಾ ಜಾಗರಣೆ ಇರುತ್ತಾರೆ.ಏಕಾದಶಿಯ ವ್ರತ ಮಾಡಿದರೆ ವೈಕುಂಠಕ್ಕೆ ನೇರ ದಾರಿ ಎಂಬ ನಂಬಿಕೆ ಇದೆ.ಹಿಂದೂ ಮತ್ತು ಜೈನ ಧರ್ಮದವರಿಗೆ ಈ ಹಬ್ಬವು ಆಧ್ಯಾತ್ಮಿಕವಾದ ದಿನವೆಂದು ಪರಿಗಣಿಸಲಾಗುತ್ತದೆ.

ನವರಾತ್ರಿ

[ಬದಲಾಯಿಸಿ]
ನವರಾತ್ರಿ

ಈ ಹಬ್ಬವು ದಸರ ಎಂದು ಪ್ರಸಿದ್ದವಾಗಿದೆ.ಹೆಸರೇ ಸೂಚಿಸುವಂತೆ ಇದು ಒಬ್ಬತ್ತು (೯) ದಿನಗಳಕಾಲ ನಡೆಯುವ ಹಬ್ಬ.ಈ ಹಬ್ಬದಲ್ಲಿ ದುರ್ಗಾ ದೇವಿಗೆ ೯ ದಿನ, ೯ ವಿವಿಧ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ.ಈ ಹಬ್ಬದ ಸಂದರ್ಭದಲ್ಲಿ ನಾವು ದುರ್ಗಾ ದೇವಿಯ ೯ ರೂಪಗಳನ್ನು ಕಾಣಬಹುದು.೧೦ನೇ ದಿನ ವಿಜಯದಶಮಿ ಎಂದು ಜನರು ಎಲ್ಲಾ ತಮ್ಮ ಆಯುಧಗಳನ್ನು ಇಟ್ಟು ಪೂಜೆ ಮಾಡುತ್ತಾರೆ.ಮುಖ್ಯವಾಗಿ ಕರ್ನಾಟಕದಲ್ಲಿ ನಾಡ ಹಬ್ಬವೆಂದು ವಿಜೃಂಬಣೆಯಿಂದ ಆಚರಿಸುತ್ತಾರೆ.ಮೈಸೂರಿನ ದಸರ ವಿಶ್ವ ಪ್ರಸಿದ್ದವಾಗಿದೆ.


ಮಕರ ಸಂಕ್ರಾಂತಿ

[ಬದಲಾಯಿಸಿ]

ಸಂಕ್ರಾಂತಿ ಹಬ್ಬವು ಅನೇಕ ಸಾಂಸ್ಕೃತಿಕ ರೂಪವನ್ನು ಪಡೆದುಕೊಂಡಿದೆ.ಸಂಕ್ರಾಂತಿಯು ಸುಗ್ಗಿಯ ಕಾಲ ಮುಗಿದು ಸಂಕ್ರಮಣ ಕಾಲದಲ್ಲಿ ಬರುತ್ತದೆ.ಈ ಹಬ್ಬವು ರೈತಾಪಿ ವರ್ಗಕ್ಕೆ ಬಹಳ ಸಂತಸವನ್ನು ಉಂಟು ಮಾಡುತ್ತದೆ,ಕಾರಣ ಸುಗ್ಗಿ ಕಾಲದಲ್ಲಿ ಮಾತ್ರ ರೈತರು ತಮ್ಮ ಕೈಯಲ್ಲಿ ಹಣವನ್ನು ನೋಡಲು ಸಾಧ್ಯ .ಈ ಹಬ್ಬದ ಪ್ರಾಮುಖ್ಯತೆವೆನೆಂದರೆ ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ,ಮನೆಯಲ್ಲಿ ಇರುವ ದನ-ಕರುಗಳನ್ನು ಕಿಚ್ಚಾಯಿಸಿ,ದವಸ-ಧಾನ್ಯಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ.ಸಂಕ್ರಾಂತಿ ಹಬ್ಬವನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂಬ ಹೆಸರಿನಿಂದ ಆಚರಿಸುತ್ತಾರೆ.


ದೀಪಾವಳಿ

[ಬದಲಾಯಿಸಿ]
ದೀಪವಳಿ

ದೀಪಾವಳಿ ಬೆಳಕಿನ ಹಬ್ಬ,ಈ ಹಬ್ಬವನ್ನು ಎಲ್ಲಾ ಕಡೆ ಚಿಕ್ಕವರಿಂದ ದೊಡ್ಡವರವರೆಗು ದೀಪವನ್ನು ಅಮಾವಾಸೆಯ ಕತ್ತಲೆಯಲ್ಲಿ ಬೆಳಗಿಸುತ್ತಾ ಕತ್ತಲನ್ನು ದೂರ ಮಾಡುತ್ತಾರೆ.ಭಾರತದಲ್ಲಿ ಕೆಲವೆಡೆ ದೀಪಾವಳಿ ಹಬ್ಬವನ್ನು ಐದು ದಿನಗಳ ಕಾಲ ಆಚರಿಸುತ್ತಾರೆ.ಈ ಹಬ್ಬವು ಹಿಂದೂಧರ್ಮದ ದಿನ-ಪತ್ರಿಕೆಯ ಪ್ರಕಾರ ಅಶ್ವಿನಿ ಮಾಸ ಕಳೆದ ನಂತರ ಕಾರ್ತಿಕ ಮಾಸದಲ್ಲಿ ಮೂಡುವ ಹಬ್ಬ.ದೀಪಾವಳಿಯು ಪಟಾಕಿ,ರಂಗೋಲಿ ಮತ್ತು ದೀಪಗಳಿಗೆ ಸಾಕ್ಷಿಯಾಗಿದೆ.ಬಗೆ ಬಗೆಯ ತಿನಿಸುಗಳನ್ನು ಮಾಡಿ ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಈ ಹಬ್ಬದ ಸಾರಾಂಶವೆನೆಂದರೆ ಜನರ ಜೀವನವು ಸದಾ ದೀಪದಂತೆ ಪ್ರಜ್ವಲಾವಾಗಿ ಬೆಳಗುತ್ತಾ ಇರಲೆಂದು ದೇವರಲ್ಲಿ ಬೇಡುತ್ತಾರೆ. []


ಶಿವರಾತ್ರಿ

[ಬದಲಾಯಿಸಿ]

ಹೆಸರೆ ಸೂಚಿಸುವಂತೆ ಈ ಹಬ್ಬ ಶಿವನಿಗೆ ತುಂಬ ಪ್ರಿಯಕರವಾದದ್ದು.ಈ ಹಬ್ಬದಂದು ದೇಶಾದ್ಯಂತ ಎಲ್ಲಾ ಶಿವನ ದೇವಾಸ್ಥನಗಳಲ್ಲಿ ಶಿವನಿಗೆ ಅಲಂಕಾರ ಮಾಡಿ ಏಕೊಭಾವದಿಂದ ಪೂಜೆ ಸಲ್ಲಿಸುತ್ತಾರೆ, ನಂತರ ಉಪವಾಸವಿದ್ದು ರಾತ್ರಿಯಿಡಿ ಶಿವನ ನಾಮವನ್ನು ಭಜಿಸುತ್ತಾ ಜಾಗರಣೆ ಮಾಡುತ್ತಾರೆ.ಮಾರನೆ ದಿನ ಮುಸ್ಸಂಜೆಯಲ್ಲಿ ಮೂಡುವ ನಕ್ಷತ್ರವನ್ನು ನೋಡಿ ಮಲಗುವ ಪ್ರತೀತಿ.ಈ ಹಬ್ಬದ ದಿನದಂದು ಶಿವ ಇಳೆಗೆ ಬಂದು ಜನರಿಗೆ ಆಶೀರ್ವಾದ ಮಾಡುತ್ತಾನೆ ಎಂಬ ನಂಬಿಕೆ ಇದೆ.

ರಕ್ಷಾ ಬಂಧನ್

[ಬದಲಾಯಿಸಿ]

ಈ ಹಬ್ಬವನ್ನು ರಾಖಿ ಪೂರ್ಣಿಮಾ,ರಾಖಿ ಹಬ್ಬವೆಂದು ಕರೆಯುತ್ತಾರೆ.ರಕ್ಷಾ ಬಂಧನ ಎಂದರೆ ಬಂಧಗಳ ರಕ್ಷೆ ಎಂದರ್ಥ,ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಸಹೋದರಿಯು ಸಹೋದರರಿಗೆ ರಾಖಿಯನ್ನು ಕಟ್ಟಿ, ಆರತಿ ಮಾಡಿ, ಸಿಹಿಯನ್ನು ತಿನ್ನಿಸಿ ಸಹೋದರರಿಂದ ಆಶೀರ್ವಾದ ಪಡೆದು ಅವರಿಗೂ ಸಹ ಒಳ್ಳೆಯದಾಗಲಿ ಎಂದು ಮನದುಂಬಿ ಆಶಿಸುತ್ತಾರೆ.

ಹೋಳಿ ಹಬ್ಬವನ್ನು ಭಾರತ ಮತ್ತು ನೇಪಳದಲ್ಲಿ ವಸಂತ ಉತ್ಸವ,ಬಣ್ಣಗಳ ಉತ್ಸವ ಹಾಗು ಪ್ರೀತಿ ಹಂಚಿಕೊಳ್ಳುವ ಹಬ್ಬ ಎಂದು ಕರೆಯುತ್ತಾರೆ.ಈ ಹಬ್ಬದ ಸಂದರ್ಭದಲ್ಲಿ ಜನರು ಬಿಳ್ಳಿಯ ವಸ್ತ್ರಗನ್ನು ಧರಿಸಿ ಬಣ್ಣದ ಒಕೂಳಿಯನ್ನು ಚಲುತ್ತಾ ಮತ್ತು ಬಣ್ಣವನ್ನು ಹಚ್ಚುವ ಮೂಲಕ ಆಚರಿಸುತ್ತಾರೆ.ಹೋಳಿ ಹಬ್ಬವು ಕಮನ ಹಬ್ಬವೆಂದೆ ಜನಪ್ರಿಯವಾಗಿದೆ.

ಕೃಷ್ಣ ಜನ್ಮಾಷ್ಟಮಿ

[ಬದಲಾಯಿಸಿ]
ಕೃಷ್ಣಜನ್ಮಾಷ್ಟಮಿ

ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನ್ಮ ದಿನವನ್ನು ಕೃಷ್ಣಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಾದೆ.ಈ ಹಬ್ಬವನ್ನು ಹಲವರು ಹೆಸರಿನಿಂದ ಪ್ರಸಿಧಿಯಾಗಿದೆ ಕೃಷ್ಣಾಷ್ಟಮಿ, ಗೋಕುಲಾಷ್ಟಮಿ,ಅಷ್ಟಮಿ ರೋಣಿ,ಶ್ರಿಕೃಷ್ಣ ಜಯಂತಿ ಇನ್ನೂ ಮುಂತಾದವು.ಜನ್ಮಾಷ್ಟಮಿಯ ದಿನದಂದು ಕೃಷ್ಣನ ಹೆಜ್ಜೆಯ ಗುರುತುಗಳನ್ನು ಮನೆ ತುಂಬ ಬೀಡಿಸಿ,ಕೃಷ್ಣನಿಗೆ ಪ್ರಿಯವಾದ ತಿನ್ನಿಸುಗಳನು ಮಾಡಿ,ಹೃದಯಪೂರ್ವಕವಾಗಿ ಪೂಜೆ ಸಾಲಿಸುತ್ತಾರೆ.ಹಾಗೂ ಹಬ್ಬದ ದಿನದಂದು ಕೃಷ್ಣನ ಬಾಲ್ಯಾ ದಿನಗಳನ್ನು ಮರುಸೃಷ್ಟಿಸಿ ನೋಡಿ ಅನಂದಿಸುತ್ತಾರೆ.ಕೃಷ್ಣ ಜನ್ಮಾಷ್ಟಮಿಯಂದು ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಕೃಷ್ಣನಂತೆ ಶೃಂಗರ ಮಾಡುತ್ತಾರೆ.ಈ ದಿನದಂದು ಕೃಷ್ಣನ ನಾಮವನ್ನು ಜಪಿಸಿದ್ದರೆ ತಮ್ಮ ಸಂಕಷ್ಟಗಳು ದೂರವಾಗುತ್ತಾದೆ ಎಂಬ ನಂಬಿಕೆ ಇದೆ. []



ಕ್ರೈಸ್ತ ಧರ್ಮದ ಹಬ್ಬಗಳು

[ಬದಲಾಯಿಸಿ]

ಕ್ರೈಸ್ತರು ಮುಖ್ಯವಾಗಿ ಈಸ್ಟರ್ ಮತ್ತು ಕ್ರಿಸ್ಮಸ್ ಹಬ್ಬವನ್ನು ಅದ್ದುರಿಯಾಗಿ ಅಚರಿಸುತ್ತಾರೆ.

ಈಸ್ಟರ್

[ಬದಲಾಯಿಸಿ]

ಈಸ್ಟರ್ ಪುನರುತ್ಥಾನ ಭಾನುವಾರ ಎಂದು ಸಹ ಕರೆಯಾಲಗುತ್ತಾದೆ.ಈ ಹಬ್ಬವನ್ನು ಏಳು ದಿನಗಳ ಕಾಲ ಅಚ್ಚರಿಸಲಾಗುತ್ತದೆ,ಈಸ್ಟರನ ಮೊದಲ ವಾರ ಪವಿತ್ರವಾದ ವಾರವೆಂದು ಪರಿಗಣಿಸಲಾಗಿದೆ.ಈಸ್ಟರ್ ಯೇಸುವಿನ ಶಿಲುಬೆಗೇರಿಸಿದ ಮತ್ತು ಯೇಸುವಿನ ಕಟ್ಟಿಣವಾದ,ಕೊನೆಯ ಕ್ಷಣಗಳನ್ನು ನೆನಪಿಸುತ್ತದೆ.ಮೊದಲ ಕೌನ್ಸಿಲ್ ಈಸ್ಟರಿನ ಎರಡು ನಿಯಮವನ್ನು ದೃಡಪಡಿಸಿತ್ತು,ಸ್ವಾತಂತ್ರ್ಯ ಯಹೂದಿ ಕ್ಯಾಲೆಂಡರ್ ಮತ್ತು ವಿಶ್ವಾದ್ಯಂತ ಏಕರೂಪತೆ.ಈ ಹಬ್ಬವು ಮರುಹುಟ್ಟು ಮತ್ತು ಈಸ್ಟರ್ ಮೊಟೆಗಳ ಸಂಕೇತವಾಗಿದೆ.

ಕ್ರಿಸ್ಮಸ್

[ಬದಲಾಯಿಸಿ]
ಕ್ರಿಸ್ಮಸ್

ಕ್ರಿಸ್ಮಸ್ ಹಬ್ಬವು ಯೇಸು ಕ್ರಿಸ್ತನ ಜನ್ಮದಿನವನ್ನು ನೆನಪಿಸುತ್ತದೆ. ಈ ಹಬ್ಬವನ್ನು ೨೫ ಡಿಸೆಂಬರ್ ಅಂದು ಆಚರಿಸಲಾಗುತ್ತದೆ, ಈ ಹಬ್ಬವು ಕ್ರಿಶ್ಚಿಯನ್ ವರ್ಗದ ಜನರಿಗೆ ಧಾರ್ಮಿಕ ಹಾಗು ಬಹಳ ಸಂತೋಶವನ್ನು ಉಂಟು ಮಾಡುವ ಹಬ್ಬವಾಗಿದೆ. ಈ ಹಬ್ಬದ ವಿಶೇಶವೇನೆಂದರೆ ಮನೆಯಲ್ಲಿ ಕೇಕನ್ನು ಮಾಡಿ ಕ್ರಿಸ್ಮಸ್ ಮರವನ್ನು ಅಲಂಕಾರಿಸಿ ಆಪ್ತರಿಗೆ ಉಡುಗೊರೆಯನ್ನು ನೀಡಿ ಚರ್ಚ್ ಗೆ ಹೋಗಿ ಯೇಸು ಕ್ರಿಸ್ತನನ್ನು ಪ್ರಾರ್ಥಿಸುತ್ತರೆ.



ಮುಸಲ್ಮಾನ ಧರ್ಮದ ಹಬ್ಬಗಳು

[ಬದಲಾಯಿಸಿ]

ಮುಸಲ್ಮಾನರು ರಂಜಾನ್ ಮತ್ತು ಮೊರಮ್ ಹಬ್ಬಗಳನ್ನು ಪ್ರಮುಖವಾಗಿ ಆಚರಿಸುತ್ತಾರೆ.

ರಂಜಾನ್

[ಬದಲಾಯಿಸಿ]
ರಂಜಾನ್

ಈ ಹಬ್ಬ ಎಲ್ಲಾ ಮುಸಲ್ಮಾನರಿಗೆ ಅತ್ಯಂತ ಸಡಗರ ಮತ್ತು ಸಂಭ್ರಮ ನೀಡುತ್ತದೆ. ಮುಸಲ್ಮಾನರು ಈ ಹಬ್ಬ ಬರುವ ಒಂದು ತಿಂಗಳ ಮುಂಚೆಯಿಂದಲ್ಲೆ ಉಪಾವಾಸ ಮಾಡುತ್ತಾರೆ,ಬೆಳಗಿನ ಜಾವ ಸೂರ್ಯ ಉಟ್ಟುವ ಮುಂಚೆ ಮತ್ತು ಸಂಜೆ ಸೂರ್ಯ ಮುಳುಗಿದ ನಂತರವೇ ಆಹಾರವನ್ನು ಸೇವಿಸುತ್ತಾರೆ.ಹಬ್ಬದ ದಿನದಂದು ನಮಜ್ ಮಾಡಿ ಆ ದಿನವಿಡಿ ದೇವರ ಧ್ಯಾನದಲ್ಲಿರುತ್ತಾರ.

ಮೊಹರಂ

[ಬದಲಾಯಿಸಿ]

ಈ ಹಬ್ಬವು ಇಸ್ಲಾಮಿಕ್ ಕ್ಯಾಲೆಂಡರನ ಪ್ರಕರ ಮೊದಲ ತಿಂಗಳ ಹತ್ತನೆ ದಿನದಂದು ಆಚರಿಸಲಾಗುತ್ತಾದೆ.ಇತಿಹಾಸದಲ್ಲಿ ದಾಖಲಿಸಿರುವ ಪ್ರಕರ ಮೊಹರಂ ಇಸ್ಲಾಂ ಧರ್ಮ-ಪ್ರವಾದಿಯವರ ಮೊಮ್ಮಗ ಹುಸೇನ್ ಹುತಾತ್ಮರಾದ ಮಹಾನ್ ದುರಂತವನ್ನು ನೆನಪಿಸುತ್ತದೆ.ಮೊಹರಂ ಶೋಕಾಚರಣೆಯ ಒಂದು ದಿನ,ಈ ಹಬ್ಬವು ಸಂತೋಷದ ನೋಟವನ್ನು ನೀಡಿದರು ಸಹ ವಾಸ್ತವದಲ್ಲಿ ದುಃಖವನ್ನು ಅಭಿವ್ಯಕ್ತವಾಗಿದೆ. []

ಉಲ್ಲೇಖನಗಳು

[ಬದಲಾಯಿಸಿ]
  1. https://www.timeanddate.com/holidays/india/diwali
  2. http://www.rudraksha-ratna.com/articles/janmashtami
  3. http://festivals.awesomeji.com/muslim-festivals.html