ವಿಷಯಕ್ಕೆ ಹೋಗು

ಸದಸ್ಯ:Deepthi A Rai/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂತ್ರಪಿಂಡ

ಮೂತ್ರಪಿಂಡ

[ಬದಲಾಯಿಸಿ]

ಮಾನವ ಮೂತ್ರಪಿಂಡಗಳು, ಬೆನ್ನೆಲುಬನ್ನು ತೆಗೆದಾಗ, ಹಿಂದಿನಿಂದ ಕಂಡಂತೆ ಮೂತ್ರಪಿಂಡಗಳು ಮೂತ್ರದ ಉತ್ಪಾದನೆಯನ್ನು ತಮ್ಮ ಪ್ರಮುಖ ಕಾರ್ಯವಾಗಿ ಹೊಂದಿರುವ ಜೋಡಿಯಾಗಿರುವ ಅಂಗಗಳು. ಮೂತ್ರಪಿಂಡಗಳು[]ಕಶೇರುಕಗಳು ಮತ್ತು ಕೆಲವು ಅಕಶೇರುಕಗಳನ್ನು ಒಳಗೊಂಡಂತೆ, ಹಲವು ಪ್ರಕಾರಗಳ ಪ್ರಾಣಿಗಳಲ್ಲಿ ಕಾಣುತ್ತವೆ. ಅವು ಮೂತ್ರ ವ್ಯವಸ್ಥೆಯ ಮುಖ್ಯವಾದ ಭಾಗವಾಗಿವೆ, ಜೊತೆಗೆ ಹೋಮಿಯೋಸ್ಟೇಸಿಸ್‌ಗೆ (ಆಂತರಿಕ ಸಮತೋಲನ) ಸಂಬಂಧಿಸಿದಂತೆ ಹಲವು ಆನುಷಂಗಿಕ ಕ್ರಿಯೆಗಳನ್ನು ಹೊಂದಿವೆ.

ಮಾನವನ ವಿಸರ್ಜನಾಂಗವ್ಯೂಹವು ಒಂದು ಜೊತೆ ಮೂತ್ರ ಜನಕಾಂಗಗಳನ್ನು ಒಳಗೊಂಡಿರುತ್ತದೆ. ಮೂತ್ರ ಜನಕಾಂಗಗಳಿಂದ ಹೊರಟ ಎರಡು ಮೂತ್ರನಾಳಗಳೂ ಮೂತ್ರವನ್ನು ಶೇಖರಿಸುವ  ಚೀಲದಂತಹ ಮೂತ್ರಕೋಶಕ್ಕೆ ತೆರೆಯುತ್ತವೆ. ಮೂತ್ರಕೋಶವು ಯುರಿತ್ರಾ ಎಂಬ ದ್ವಾರದ ಮೂಲಕ ದೇಹದ  ಹೊರಭಾಗದೊಡನೆ ಸಂಪರ್ಕವನ್ನು ಹೊಂದಿರುತ್ತದೆ. ಮೂತ್ರಜನಕಾಂಗಗಳು ಕಡುಕಂದು ಬಣ್ಣದ ಹುರುಳಿ ಬೀಜದ ಆಕಾರದ ಅಂಗಗಳು.[] ಇವು ಉದರಾವಕಾಶದ ಹಿಂಬದಿಯಲ್ಲಿ, ಬೆನ್ನು ಮೂಳೆಯ ಅಕ್ಕಪಕ್ಕದಲ್ಲಿವೆ. ಪ್ರತಿಯೊಂದು ಮೂತ್ರಜನಕಾಂಗದಲ್ಲಿ ಹೈಲಮ್ ಎಂಬ ತಗ್ಗಾದ ಭಾಗವಿದ್ದು ಅದರ ಮೂಲಕ ರೀನಲ್ ಅಪಧಮನಿಯು ಮೂತ್ರಜನಕಾಂಗವನ್ನು ಪ್ರವೇಶಿಸಿ ಕವಲುಗಳಾಗಿ ರಕ್ತವನ್ನು ಒದಗಿಸುತ್ತದೆ. ಇದೇ ಭಾಗದಿಂದ ರೀನಲ್ ಅಭಿಧಮನಿಯು ಹೊರಬರುತ್ತದೆ. ಈ ಭಾಗದಿಂದ ಮೂತ್ರ ನಾಳವೂ ಹೊರಬಂದು ಮೂತ್ರ ಕೋಶವನ್ನು ಸೇರುತ್ತದೆ. ಪ್ರತಿ ಮೂತ್ರಜನಕಾಂಗವು ಸಂಯೋಜಕ ಅಂಗಾಂಶದಿಂದ ಆದ ರೀನಲ್ ಕ್ಯಾಪ್ಸ್ಯೂಲ್ ಎಂಬ ಹೊದಿಕೆಯಿಂದ  ಆವರಿಸಲ್ಪಟ್ಟಿದೆ

ಮೂತ್ರಜನಕಾಂಗದ ರಚನೆ

[ಬದಲಾಯಿಸಿ]

ಮೂತ್ರಜನಕಾಂಗದ ಹೊರಸೀಳಿಕೆಯಲ್ಲಿ ಹೊರಗಿನ ಕಾರ್ಟೆಕ್ಸ್ , ಒಳಗಿನ ಮೆಡುಲ್ಲಾಗಳೆಂಬ ಎರಡು ಭಾಗಗಳಿರುವುದನ್ನು ತೋರಿಸುತ್ತದೆ. ಮೆಡುಲ್ಲಾದಲ್ಲಿ ೮ ರಿಂದ ೧೮ ಪಿರಮಿಡ್ ಆಕಾರದ ರಚನೆಗಳಿರುತ್ತದೆ .ಈ ಪಿರಮಿಡ್ಡುಗಳ ತುದಿಗಳಲ್ಲಿ ರೀನಲ್ ಪ್ಯಾಪಿಲ್ಲಾಗಳೆಂಬ ಸೂಕ್ಷ್ಮ ರಂಧ್ರಗಳಿರುತ್ತವೆ. ಪಿರಮಿಡ್ಡುಗಳು ಒಳಭಾಗದ ಟೊಳ್ಳಾದ ಪೆಲ್ವಿಸ್ ಗೆ ಚಾಚಿಕೊಂಡಿರುತ್ತವೆ.ಮೂತ್ರ ನಾಳ ಪೆಲ್ವಿಸ್ ನಿಂದ ಪ್ರಾರಂಭಗೊಳ್ಳುತ್ತವೆ.ಪ್ರತಿಯೊಂದು ಮೂತ್ರ ಜನಕಾಂಗದಲ್ಲಿ ೧೦,೦೦,೦೦೦ಗಳಷ್ಟು ನೆಫ್ರಾನ್ ಗಳೆಂಬ ಸೂಕ್ಷ್ಮ ನಳಿಕೆಗಳಿವೆ.ಇವುಗಳ ಜೊತೆಗೆ ರಕ್ತಲೋಮನಾಳಗಳು ಮತ್ತು ಸಂಯೊಜಕ ಅಂಗಾಂಶವಿರುತ್ತದೆ.

ನೆಫ್ರಾನಿನ ರಚನೆ

[ಬದಲಾಯಿಸಿ]

ನೆಫ್ರಾನ್ ಮೂತ್ರಜನಕಾಂಗದ ರಚನಾತ್ಮಕ ಮತ್ತು ಕಾರ್ಯ ನಿರ್ವಾಹಕ ಘಟಕವಾಗಿದೆ.ನೆಫ್ರಾನಿನ ಮುಂಭಾಗವು ಬಟ್ಟಲಿನ ಆಕಾರವಾಗಿದೆ. ಇದನ್ನು ಬೌಮನ್ನನ ಬಟ್ಟಲು ಎಂದು ಕರೆಯುತ್ತರೆ. ಈ ಕೋಶದ ಗೋಡೆಯಲ್ಲಿ ಎರಡು ಪದರದ ಅನುಲೇಪಕ ಜೀವಕೋಶಗಳು ಇರುತ್ತವೆ. ಬೌಮನ್ನಿನ ಬಟ್ಟಲಿನ ಮುಂದೆ ನೆಫ್ರಾನಿನ ನಾಳವು ನುಲಿಚಿಕೊಂಡಿರುತ್ತದೆ. ನಂತರ 'U' ಆಕಾರವಾಗಿದೆ. ಇದನ್ನು ಹೆನ್ಲೆಯ ಕುಣಿಕೆ ಎನ್ನುತ್ತಾರೆ. ನಂತರ ನಾಳ ಮತ್ತೆ ನುಲಿಚಿಕೊಂಡು ನೆರೆಯ ನೆಫ್ರಾನ್ ಗಳಿಂದ ಬರುವ ಗ್ರಾಹಕ ನಾಳಕ್ಕೆ ಸೇರಿ ಪಿರಮಿಡ್ಡುಗಳ ತುದಿಯಲ್ಲಿರುವ ರೀನಲ್ ಪ್ಯಾಪಿಲ್ಲಗಳ ಮೂಲಕ ರೀನಲ್ ಪೆಲ್ವಿಸ್ ಗೆ ತೆರೆಯುತ್ತವೆ.ಬೌಮನ್ನನ ಬಟ್ಟಲು ಕಾರ್ಟೆಕ್ಸ್ ನಲ್ಲಿ ಇರುತ್ತದೆ. ಹೆನ್ಲೆ ಯ ಕುಣಿಕೆ ಮೆಡುಲ್ಲಾದಲ್ಲಿದ್ದು, ನಂತರ ನುಲಿಚಿಕೊಂಡಿರುವ ನಾಳ ಕಾರ್ಟೆಕ್ಸ್ ನಲ್ಲಿ ಗ್ರಾಹಕ ನಾಳವನ್ನು ಸೇರುತ್ತದೆ.ರೀನಲ್ ಅಪಧಮನಿಯ ಒಂದು ಕವಲು ಬೌಮನ್ನನ ಬಟ್ಟಲಿನ ಕೊಶದಲ್ಲಿ ಕವಲೊಡೆದು ಸೂಕ್ಷ್ಮ ಅಪಧಮನಿಗಳಾಗುತ್ತವೆ.ಈ ಸೂಕ್ಷ್ಮ ನಾಳಗಳು ಮತ್ತೆ ಕವಲುಗಳಾಗಿ ಲೋಮನಾಳಗಳ ಕುಣಿಕೆಗಳಾಗುತ್ತವೆ. ಇದನ್ನು ಗ್ಲಾಮರುಲಸ್ ಎಂದು ಕರೆಯುತ್ತಾರೆ. ಸೂಕ್ಷ್ಮ ನಾಳಗಳು ಮತ್ತೆ ಕೂಡಿಕೊಂಡು ಸಣ್ಣ ಅಭಿಧಮನಿಗಳಾಗಿ ನೆರೆಯ ನೆಫ್ರಾನ್ ಗಳಿಂದ ಬರುವ ಸಣ್ಣ ಅಭಿಧಮನಿಗಳೊಂದಿಗೆ ಸೇರಿ ರೀನಲ್ ಅಭಿಧಮನಿಗಳಾಗುತ್ತವೆ.

  1. https://en.wikipedia.org/wiki/Kidney
  2. https://www.webmd.com/kidney-stones/picture-of-the-kidneys#1