ವಿಷಯಕ್ಕೆ ಹೋಗು

ಸದಸ್ಯ:Chaithra.n269/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಪುರಾಣದ ಒಂದು ಪಾತ್ರವಾದ ದಮಯಂತಿ ವಿದರ್ಭ ರಾಜ್ಯದ ರಾಜಕುಮಾರಿಯಾಗಿದ್ದಳು, ಮತ್ತು ಇವಳು ನಿಷಾದ ರಾಜ್ಯದ ರಾಜ ನಳನನ್ನು ಮದುವೆಯಾಗಿದ್ದಳು, ಮತ್ತು ಇವರ ಕಥೆಯು ಮಹಾಭಾರತದಲ್ಲಿ ಹೇಳಲಾಗಿದೆ. ಅವಳು ಎಷ್ಟು ಸುಂದರಿ ಮತ್ತು ಮೋಹಕಳಾಗಿದ್ದಳೆಂದರೆ ದೇವತೆಗಳು ಕೂಡ ಅವಳನ್ನು ಮೆಚ್ಚಿದ್ದರು. ಅವಳು ನಳನನ್ನು ಕೇವಲ ಒಂದು ಸುವರ್ಣ ಹಂಸದಿಂದ ಅವನ ಸದ್ಗುಣಗಳು ಹಾಗು ಸಾಧನೆಗಳನ್ನು ಕೇಳಿ ಪ್ರೀತಿಸಿದಳು.

ದಮಯಂತಿ ಮತ್ತು ಹಂಸ


ವಿದರ್ಭ ರಾಜ್ಯದ ರಾಜ್ಯದ ರಾಜ ಭೀಮ ಮಹಾರಾಜನು ತನ್ನ ಪುತ್ರಿಯಾದ ದಮಯಂತಿಗಾಗಿ ಸ್ವಯಂವರವನ್ನು ಏರ್ಪಡಿಸಿದ್ದರು.ಅನೇಕ ರಾಜಕುಮಾರರು ಮತ್ತು ದೇವರುಗಳಾದ ಅಗ್ನಿ, ವಾಯು, ವರುಣಹಾಗು ಯಮನು ಸ್ವಯಂವದಲ್ಲಿ ಭಾಗವಹಿಸಿದ್ದರು[].ಸ್ವಯಂವದಲ್ಲಿ ಭಗವಹಿಸಿರುವ ಒಬ್ಬರನ್ನು ದಮಯಂತಿಯು ತನ್ನ ಪತಿಯೆಂದು ಆರಿಸಿಕೊಳ್ಳಬೇಕಾಗಿತ್ತು. ದಮಯಂತಿಯು ನಳನನ್ನು ತನ್ನ ಪತಿಯೆಂದು ಆಯ್ಕೆಮಾಡಿಕೊಂಡಳು.ಅತಿಮಾನುಷ ಶಕ್ತಿಯುಳ್ಳ ಕಾಳಿಯು ಸಹ ದಮಯಂತಿಯನ್ನು ಮದುವೆಯಾಗಬೇಕೆಂದು ಕೊಂಡಿರುತ್ತಾನೆ.ಆದರೆ ಅವನು ಬರುವ ಮುನ್ನವೆ ದಮಯಂತಿಯು ನಳನನ್ನು ತನ್ನ ಪತಿಯೆಂದು ಆಯ್ಕೆಮಾಡಿಕೊಂಡಿರುತ್ತಾಳೆ. ಇದರಿಂದ ಕೋಪಗೊಂಡ ಕಾಳಿಯು ನಳನ ಸಾಮ್ರಾಜ್ಯವನ್ನು ನಾಶಮಾಡುತ್ತೇನೆಂದು ಶಪಥ ಮಾಡುತ್ತಾನೆ. ನಳ ಮತ್ತು ದಮಯಂತಿಯು ಮದುವೆಯಾಗುತ್ತಾರೆ.ಇವರಿಬ್ಬರಿಗೆ ಇಬ್ಬರು ಮಕ್ಕಳು.ಮಹಾರಾಜನಾದ ನಿಷಧನದ ನಿಧನದ ಬಳಿಕ ಯುವರಾಜನಾದ ನಳನು ಮಹಾರಾಜನ ಪಟ್ಟಕ್ಕೇರಿದನು.ನಳ ಮಹಾರಾಜನು ಇನ್ನೂ ಅನೇಕ ರಾಜ್ಯಗಳನ್ನು ಗೆದ್ದು ಬಹಳ ಪ್ರಸಿದ್ಧಿಯಾಗುತ್ತಾನೆ. ನಳ ಮಹಾರಾಜನ ಏಳಿಗೆಯನ್ನು ಆತನ ಸಹೋದರನಾದ ಕುವರನನು ಸಹಿಸದಾದನು.ನಳಮಹಾರಾಜರ ದೌರ್ಬಲ್ಯವು ಜೂಜು ಎಂದು ತಿಳಿದಿದ್ದ ಕುವರನು ನಳಮಹಾರಾಜರೊಂದಿಗೆ ಜೂಜಿನ ಆಟವನ್ನು ಆಡುತ್ತಾನೆ.ಜೂಜಿನ ಆಟದಲ್ಲಿ ನಳಮಹಾರಾಜರು ತನ್ನ ಸರ್ವಸ್ವವನ್ನು ಕಳೆದುಕೊಂಡರು.ಕುವರನು ಅಧಿಕಾರಕ್ಕೆ ಬರುತ್ತಾನೆ ಹಾಗೂ ನಳನನ್ನು ತನ್ನ ರಾಜ್ಯದಿಂದ ಹೊರಗಾಕುತ್ತಾನೆ.ನಳನು ಅರಣ್ಯಕ್ಕೆ ತೆರಳುತ್ತಾನೆ. ದಮಯಂತಿಯು ತನ್ನ ಮಕ್ಕಳನ್ನು ತನ್ನ ತವರು ಮನೆಗೆ ಕಳುಹಿಸಿ ತಾನೂ ಸಹ ನಳನೊಂದಿಗೆ ಅರಣ್ಯಕ್ಕೆ ಹೋಗುತ್ತಾಳೆ.ಅರಣ್ಯದಲ್ಲಿ ಮೂರು ದಿನ ಆಹಾರವಿಲ್ಲದೆ ಇಬ್ಬರು ಆಯಾಸಗೊಂಡಿದ್ದರು ಆಗ ನಳನು ತನ್ನ ಪತ್ನಿಯಾದ ದಮಯಂತಿಗೆ ತನ್ನನ್ನು ಬಿಟ್ಟು ವಿದರ್ಭ ರಾಜ್ಯಕ್ಕೆ ಹೋಗಲು ಮಾರ್ಗದರ್ಶನ ಮಾಡುತ್ತಾನೆ ಆದರೆ ದಮಯಂತಿಯು ನಳನೊಬ್ಬನ್ನನ್ನೇ ಕಾಡಿನಲ್ಲಿ ಬಿಟ್ಟು ವಿದರ್ಭ ರಾಜ್ಯಕ್ಕೆ ಹೋಗಲು ಒಪ್ಪುವುದಿಲ್ಲ.

ನಳ ಮತ್ತು ದಮಯಂತಿ
ಒಂದು ರಾತ್ರಿಯ ವೇಳೆ ದಮಯಂತಿಯು ನಿದ್ರೆಯಲ್ಲಿದ್ದಾಗ ನಳನು  ಆಕೆಯನ್ನು ಒಂಟಿಯಾಗಿ ಕಾಡಿನಲ್ಲೇ ಬಿಟ್ಟು  ಹೊರಟು ಹೋಗುತ್ತಾನೆ.ನಿದ್ರೆಯಿಂದ ಎಚ್ಚರವಾದಾಗ  ನಳನು ಇಲ್ಲದಿರುವುದನ್ನು  ಕಂಡ ದಮಯಂತಿಯು ನಿರಾಶೆಯಿಂದ ಚೇದಿಯೆಂಬ ರಾಜ್ಯವನ್ನು ತಲುಪಿ ಅಲ್ಲಿಯೇ ಇರುತ್ತಾಳೆ[].ದಮಯಂತಿಯು ತಾನೂ ಇತರ ಪುರುಷರೊಂದಿಗೆ ಮಾತನಾಡುವುದಾಗಲೀ,ವ್ಯವಹರಿಸುವುದಾಗಲೀ ಮಾಡಲಾರೆ ಎಂದು ನಿರ್ಧರಿಸುತ್ತಾಳೆ.  ನಳನು ಒಂಟಿಯಾಗಿ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಧ್ವನಿ ತನ್ನನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಿರುವುದು ಆತನ ಕಿವಿಗೆ ಬೀಳುತ್ತದೆ.ಆ ಧ್ವನಿಯು ಕೇಳಿಬಂದ ದಾರಿಯಲ್ಲೇ ನಳನು ಹೋಗುತ್ತಾನೆ. ಆ ಧ್ವನಿಯು ಸರ್ಪವಿನದ್ದಾಗಿರುತ್ತದೆ.ಆ ಸರ್ಪವು ನಾನೊಂದು ಸರ್ಪರಾಜನಾದ ಕಾರ್ಕೋಟಕ ನನ್ನನ್ನು ಕಾಳ್ಗಿಚ್ಚಿನಿಂದ ರಕ್ಷಿಸಿ ಎಂದು ಬೇಡಿಕೊಳ್ಳುತ್ತದೆ.ನಳನು ಕಾರ್ಕೋಟಕವನ್ನು ರಕ್ಷಿಸುತ್ತಾನೆ. ಕೂಡಲೇ ಆ ಸರ್ಪವು ನಳನನ್ನು ಕಚ್ಚುತ್ತದೆ.ಕಾರ್ಕೋಟಕದ ವಿಷದ ಪರಿಣಾಮದಿಂದಾಗಿ ನಳನ ರೂಪವು ವಿರೂಪಗೊಳ್ಳುತ್ತದೆ.ಆಗ ಸರ್ಪವು ನಳನ ಬಳಿ ಈ ರೂಪವು ನಿನ್ನನ್ನು ನೀನು ನಿನ್ನ ಶತ್ರುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಎಂದು ಹೇಳುತ್ತದೆ ಮತ್ತು ನಿನ್ನ ಶತ್ರುಗಳ ವಿರುದ್ದದ ಯುದ್ಧದಲ್ಲಿ ನೀನು ಜಯಶಾಲಿಯಾಗುವೆ ಎಂದು ಹೇಳುತ್ತದ್ದೆ. ಅನತಂರ  ಅಯೋಧ್ಯಾನಗರಕ್ಕೆ ತೆರಳಿ ಅಲ್ಲಿಯ ಮಹಾರಾಜನಾದ ಋತುಪರ್ಣನನ್ನು ಭೇಟಿಯಾಗುವುದಕ್ಕೆ ತಿಳಿಸಿ  ನಿನ್ನನ್ನು ನೀನು ಬಾಹುಕನೆಂಬ ಹೆಸರಿನ ಓರ್ವ ಸಾರಥಿ ಏಂದು ನಿನ್ನನ್ನು ನೀನು ಪರಿಚಹಿಸಿಕೋ ಎಂದು  ಹೇಳುತ್ತದೆ.ಮಹಾರಾಜನಾದ ಋತುಪರ್ವನಿಗೆ ನೀನು ಅಶ್ವಹೃದಯದ ಕೌಶಲ್ಯಗಳನ್ನು ಕಲಿಸಿಕೊಡು ಅನಂತರ ನೀನು ಆತನಿಂದ ಅಕ್ಷಹೃದಯದ ಕೌಶಲ್ಯಗಳನ್ನು ಕಲಿತಿಕೋ. ಮಹಾರಾಜನಾದ ಋತುಪರ್ಣನು ನಿನ್ನ ಸ್ನೇಹಿತನಾಗುತ್ತಾನೆ.ಹೆದರಬೇಡ.ನೀನು ನಿನ್ನ ಪತ್ನಿ ಹಾಗೂ ನಿನ್ನ ಮಕ್ಕಳನ್ನು ಹಾಗೂ ನಿನ್ನ ರಾಜ್ಯವನ್ನು ಮರಳಿ ಪಡೆಯುವೆ ಎಂದು ಹೇಳಿ  ಕೆಲವು ವಸ್ತ್ರಗಳನ್ನು ಕೊಟ್ಟು ಇದನ್ನು ಧರಿಸಿಕೊಂಡರೆ ನಿನಗೆ ನಿನ್ನ ನಿಜ ರೂಪ ಬರುತ್ತದೆ ಎಂದು ಹೇಳಿ ಮಾಯಾವಾಗುತ್ತದೆ. ನಳನು ಬೇರೊಂದು ರಾಜ್ಯಕ್ಕೆ ಹೋಗಲು ತಯಾರಾಗುತ್ತಾನೆ.ನಿದ್ರೆಯಿಂದ ಎಚ್ಚರಗೊಂಡ ದಮಯಂತಿಗೆ ನಳನು ಬರೆದಿಟ್ಟಿದ್ದ ಕಾಗದವೊಂದು ಸಿಗುತ್ತದೆ.ಆ ಕಾಗದದಲ್ಲಿ ನಳನು ದಮಯಂತಿಗೆ ತನ್ನ ತವರು ಮನೆಗೆ ಹೋಗುವಂತೆ ಹೇಳಿರುತ್ತಾನೆ.ದಮಯಂತಿಯು ದಟ್ಟ ಅರಣ್ಯದ ಮುಂದೆ ಹೋಗುತ್ತಿರಬೇಕಾದರೆ ರಾಕ್ಷಸನೊಬ್ಬನು ದಮಯಂತಿಗೆ ಎದುರಾಗಿ ಆಕೆಯನ್ನು ತಿಂದುಬಿಡುವೆನೆಂದು ಹೇಳುತ್ತಾನೆ. ಆದರೆ ದಮಯಂತಿಯು ಎದರುವುದಿಲ್ಲ.ಆಕೆಯ ಧೈರ್ಯವನ್ನು ಮೆಚ್ಚಿದ ರಾಕ್ಷಸನು ದಮಯಂತಿಗೆ ತನ್ನ ನಿಜರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ.ವಾಸ್ತವದಲ್ಲಿ ಆತನೊಬ್ಬ ದೇವತೆಯಾಗಿದ್ದು ಹನ್ನೆರಡು ವರ್ಷಗಳ ಬಳಿಕ ದಮಯಂತಿಯು ತನ್ನ ಪತಿಯನ್ನು ಕೂಡಿಕೊಳ್ಳುವ ಸಮಯ  ಒದಗಿ ಬರುವುದೆಂದು ತಿಳಿಸುತ್ತಾನೆ.ದಮಯಂತಿ ತನ್ನ ಪ್ರಯಾಣವನ್ನು ಮುಂದುವರಿಸಿ ಅಚಲಪುರ ರಾಜ್ಯಕ್ಕೆ ತೆರಳುತ್ತಾಳೆ ಹಾಗೂ ಅಲ್ಲಿಯ ರಾಜಕುಮಾರಿಯ ಸೇವಕಿಯಾಗುತ್ತಾಳೆ .ಇತ್ತ  ನಳನು ಸಂಸುಮರ ರಾಜ್ಯಕ್ಕೆ ಹೋಗುತ್ತಾನೆ ಹಾಗೂ ಅಲ್ಲಿಯಾ ರಾಜನ ಸೇವಕನಾಗುತ್ತಾನೆ.ಇದೆ ರೀತಿ ಹಲವು ವರ್ಷಗಳು ಸಾಗುತ್ತವೆ.   ಸ್ವಲ್ಪ ವರ್ಷಗಳ ಬಳಿಕ ದಮಯಂತಿಯನ್ನು ಭೀಮ ಮಹಾರಾಜನ ಭಟರು ಅಚಲಾಪುರದಲ್ಲಿ ಹುಡುಕಿ ತನ್ನ ತಂದೆಯ ಮನೆಗೆ ಕರೆದುಕೊಂಡು ಹೋಗುತ್ತಾರೆ.ನಳನನ್ನು ಹುಡುಕುತ್ತಾರೆ ಆದರೆ ನಳನು ಸಿಗುವುದಿಲ್ಲ.ದಮಯಂತಿಯು ನಳನು ಮತ್ತೆ ಇಲ್ಲಿಗೆ ಬರಬೇಕಾದರೆ ಏನು ಮಾಡಬೇಕೆಂದು ಯೋಚಿಸುತ್ತಾಳೆ.ಅನಂತರ  ಆಕೆಯು ಸುಳ್ಳಿನ ಎರಡನೇ ಸ್ವಯಂವರವನ್ನು ಏರ್ಪಡಿಸುತ್ತಾಳೆ.ನಳನ ಗುರುವು ಸಹ ಸ್ವಯಂವಕ್ಕೆ ಹೋಗುತ್ತಾನೆ . ನಳನು ತನ್ನಗುರುವಿನೊಂದಿಗೆ ಸ್ವಯಂವರಕ್ಕೆ ಬಂದಿರುತ್ತಾನೆ.ದಮಯಂತಿಯು ನಳನನ್ನು ಕಂಡುಹಿಡಿಯುತ್ತಾಳೆ. ನಳನು ಸರ್ಪವು ಕೊಟ್ಟಿದ್ದ ವಸ್ತ್ರಗಳನ್ನು ಧರಿಸಿಕೊಂಡು ತನ್ನ ನಿಜ ರೂಪಕ್ಕೆ ಬರುತ್ತಾನೆ. ಸ್ವಯಂವರದ ದಿನದಂದು ದಮಯಂತಿಯು ಮತ್ತೋಮ್ಮೆ ನಳನ ಕೊರಳಿಗೆ ಹಾರವನ್ನು ಹಾಕುವುದರ ಮೂಲಕ ಮರುವಿವಾಹ ಆಗುತ್ತಾಳೆ.ಮಹಾರಾಜನಾದ ಭೀಮನ ಸೇನೆಯ ಸಹಾಯದಿಂದ ನಳನು ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯುತ್ತಾನೆ ಹಾಗೂ ಮತ್ತೆ ಅಯೋಧ್ಯಾ ನಗರಿಯಾ ಮಹಾರಾಜನಾಗುತ್ತಾನೆ.  ಕಾಡಿನಲ್ಲಿ ಅವಳೊಬ್ಬಲನ್ನೆ ಬಿಟ್ಟು ಹೋಗಿದಕ್ಕೆ ದಮಯಂತಿಯು ನಳನನ್ನು ಕ್ಷಮಿಸುತ್ತಾಳೆ.
  1. https://en.wikipedia.org/wiki/Damayanti
  2. http://godandguru.com/amar-chitra/nala-damayanti.html