ಸದಸ್ಯ:Catherine Cecelia/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕ್ಯಾಡ್ಬರಿ ಯುಕೆ ಲಿಮಿಟೆಡ್

ಕ್ಯಾಡ್ಬರಿ ಕಂಪನಿ ಬ್ರಿಟಿಷ್ ಮಲ್ಟಿನ್ಯಾಷನಲ್ ಕಂಪನಿ.ಕ್ಯಾಡ್ಬರಿ ಕಂಪನಿ ಡೈರಿ ಮಿಲ್ಕ್ ಚಾಕೊಲೇಟ್, ಕ್ರೀಮ್ ಎಗ್ ಮತ್ತು ರೋಸಸ್ ಆಯ್ದ ಬಾಕ್ಸ್, ಮತ್ತು ಅನೇಕ ಇತರ ಮಿಠಾಯಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ.

ಇತಿಹಾಸ[ಬದಲಾಯಿಸಿ]

ಕ್ಯಾಡ್ಬರಿ ಫ್ಯಾಕ್ಟರಿ, ಬೌರ್ನ್ವಿಲ್ಲೆ ಬರ್ಮಿಂಗ್ಹ್ಯಾಮ್, ಇಂಗ್ಲೆಂಡಿನ ದಕ್ಷಿಣ ಭಾಗದಲ್ಲಿ ಇದೆ

೧೮೨೪ರಲ್ಲಿ ಜಾನ್ ಕ್ಯಾಡ್ಬರಿ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ ಸ್ಟ್ರೀಟ್ ನಲ್ಲಿ ಚಹಾ ಕಾಫಿ ಮತ್ತು ಕುಡಿಯುವ ಚಾಕೊಲೇಟ್ ಮುಂತಾದವುಗಳ ಮಾರಾಟವನ್ನು ಆರಂಭಿಸಿದರು. ನಂತರ ೧೯೩೧ರಿಂದ ವಿವಿಧ ಉತ್ಪಾದನೆಯನ್ನು ಮಾರಾಟಮಾಡಿದರು. ೧೮೪೭ರಲ್ಲಿ ಜಾನ್ ತನ್ನ ಸಹೋದರ ಬೆಂಜಮಿನ್ ನೊಡನೆ ಪಾಲುದಾರರಾದರು. ಅವರಿಬ್ಬರು ಸೇರಿ ಕ್ಯಾಡ್ಬರಿ ಬ್ರದರ್ಸ್ ಎಂಬ ಕಂಪನಿ ಸ್ಥಾಪಿಸಿದರು. ೧೮೫೪ರಲ್ಲಿ ರಾಣಿ ವಿಕ್ಟೋರಿಯರವರಿಂದ ಚಾಕೊಲೇಟ್ ಮತ್ತು ಕೋಕೋ ತಯಾರುಕರ ರಾಯಲ್ ವಾರೆಂಟ್ ಪಡೆದರು. ಆದರೆ ೧೮೫೦ರಲ್ಲಿ ಈ ಕಂಪನಿ ಕೊನೆಗೊಂಡಿತು. ೧೮೬೧ರಲ್ಲಿ ಜಾನ್ ಕ್ಯಾಡ್ಬರಿ ಅವರ ಮಕ್ಕಳಾದ ರಿಚರ್ಡ್ ಮತ್ತು ಜಾರ್ಜ್ ಆ ಕಂಪನಿಯನ್ನು ಮತ್ತೆ ಅಸ್ಥಿತ್ವಕ್ಕೆ ತಂದರು. ೧೮೬೪ರ ಹೊತ್ತಿಗೆ ಕ್ಯಾಡ್ಬರಿ ಮತ್ತೆ ಲಾಭದಾಯಕವಾಗಿತ್ತು. ಈ ಇಬ್ಬ ಸಹೋದರರು ತಮ್ಮ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿ ಚಾಕೊಲೇಟ್ ಚಹಾ ಮತ್ತು ಕಾಫಿಯ ಬಗ್ಗೆ ಗಮನ ಚಲಿಸಿದರು. ಇದರಿಂದ ಅವರ ವ್ಯಾಪಾರ ತಿರುಗಿಸಿ ಲಾಭದಾಯಕವಾಗಿತ್ತು.

೧೮೭೮ ರಲ್ಲಿ ಬರ್ಮಿಂಗಾಮ್ ನಿಂದ ನಾಲ್ಕು ಮೈಲು ದೂರದಲ್ಲಿ ಹೊಸ ಕಂಪನಿಯನ್ನು ನಿರ್ವಹಿಸಲು ನಿರ್ಧರಿಸಿದರು. ಅದರಂತೆ ಅವರು ಬರ್ಮಿಂಗ್ಹ್ಯಾಮ್ ನಿಂದ ಹೊರವಲಯದಲ್ಲಿರುವ ಎಸ್ಟೇಟ್ ಕೊಂಡುಕೊಂಡರು.ಆ ಎಸ್ಟೇಟ್ಟನ್ನು ಬರ್ನ್ವಲ್ಲಿ ಎಸ್ಟೇಟ್ಟ್ ಎಂದು ಹೆಸರು ನೀಡಿದರು. ೧೮೯೯ರಲ್ಲಿ ಕ್ಯಾಡ್ಬರಿ ಖಾಸಗಿ ಕಂಪನಿಯಾಗಿತು. ೧೯೦೫ರಲ್ಲಿ ಕ್ಯಾಡ್ಬರಿ ಕಂಪನಿಯವರು ಡೈರಿ ಮಿಲ್ಕ್ ಬಾರ್ ಅನ್ನು ಬಿಡುಗಡೆಮಾಡಿದರು. ಈ ಚಾಕೋಲೇಟ್ ನಲ್ಲಿ ಹೆಚ್ಚು ಹಾಲು ಮತ್ತು ಗುಣಮಟ್ಟದ ಬೆಣ್ಣೆ ಹಾಕಿ ತಯಾರಿಸಿದರು. ಕ್ಯಾಡ್ಬರಿ ವಿಶ್ವದ ಎರಡನೆಯ ಅತಿ ದೊಡ್ಡ ಮಿಠಾಯಿ ಬ್ರ್ಯಾಂಡ್ ಆಗಿದೆ.ಕ್ಯಾಡ್ಬರಿ ಮಿಲ್ಕ್ ಟ್ರೀ ೧೯೧೫ ರಲ್ಲಿ ಉತ್ಪಾದನೆ ಮಾಡಿದರು. ಫಸ್ಟ್ ವಾಲ್ಡ್ವಾರ್ನ ಬ್ರಿಟಿಷರ ಯುದ್ದಕ್ಕೆ ಕ್ಯಾಡ್ಬರಿ ಬೆಂಬಲಿಸಲು ಚಾಕೊಲೇಟ್, ಪುಸ್ತ್ತಕಗಳು ಮತ್ತು ಬಟ್ಟೆ ಒದಗಿಸಿತು. ಜಾರ್ಜ್ ಕ್ಯಾಡ್ಬರಿಯವರು ತನ್ನ ಎರಡು ಕಂಪನಿಯ ಕಟ್ಟಡಗಳನ್ನು ಆಸ್ಪತ್ರೆಗಳಾಗಿ ಪ್ರಯೋಗಿಸಲು ಆ ಸಂದರ್ಭದಲ್ಲಿ ನೀಡಿದರು. ಕ್ಯಾಡ್ಬರಿ ಕಂಪನಿಯ ನೌಕರರು ಯುದ್ದದ ನಂತರ ಗಾಯಗೊಂಡ ಸೈನಿಕರನ್ನು ಕರೆತಂದು ಚಿಕಿತ್ಸೆ ಮಾಡಿದರು. ೧೯೧೯ ರಲ್ಲಿ ಕ್ಯಾಡ್ಬರಿ ಕಂಪನಿ ಜೆ.ಎಸ್. ಫ್ರೈ ಅಂಡ ಸನ್ಸ್ ಅವರೊಡನೆ ಸೇರಿದರು. ಕ್ಯಾಡ್ಬರಿ ಸಿಘ್ರದಲ್ಲೇ ಅನೇಕ ಉತ್ಪನ್ನಗಳನ್ನು ತಯಾರಿಸಿತು. ೧೯೩೫ರಲ್ಲಿ ಫ್ರೈ ಕಂಪನಿಯನ್ನು ಸ್ವತಂ ನಿಯಂತ್ರಣಕ್ಕೆ ಪಡೆಯಿತು. ೧೯೩೫ರಲ್ಲಿ ವೇಳಿಗೆ ಬ್ರಿಟಿಶ್ ಜನಸಂಖ್ಯೆಯಲ್ಲಿ ೯೦ ಪ್ರತಿಶತ ಚಾಕೊಲೇಟ್ ಖರೀದಿಸುವರು ಎಂದು ಅಂದಾಜಿಸಲಾಗಿತು.

ಕಾರ್ಯಾಚರಣೆ[ಬದಲಾಯಿಸಿ]

ಪ್ರಧಾನ ಕಚೇರಿ ಆಕ್ಸ್ ಬ್ರಿಡ್ಜ್ ನಲ್ಲಿದೆ. ಕ್ಯಾಡ್ಬರಿ ಅಂತಾರಾಷ್ಟ್ರೀಯವಾಗಿ ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಾನ್ ಕ್ಯಾಡ್ಬರಿ ತನ್ನ ಸಹೋದರ ಬೆಂಜಮಿನ್ ಮತ್ತು ಅವರ ಮಕ್ಕಳಾದ ರಿಚರ್ಡ್ ಮತ್ತು ಜಾರ್ಜ್ ಅವರ ಸಹಾಯದಿಂದ ಕ್ಯಾಡ್ಬರಿ ಅಸ್ತಿತ್ವಕ್ಕೆ ಬಂದಿತು. ಕ್ಯಾಡ್ಬರಿ ತನ್ನ ಮೂಖ್ಯ ಕಚೇರಿಯನ್ನು ಉಕ್ಸಬ್ರಿಜ್ ಇಂಗ್ಲೆಂಡ್ ನಲ್ಲಿ ಹೊಂದಿದೆ.ಈ ಕ್ಯಾಡ್ಬರಿ ಹೌಸ್ ೮೪೦೦೦ ಸ್ಕೊಯರ್ ಫೀಟ್ ಜಾಗದಲ್ಲಿ ಸ್ಥಾಪಿಸಲಾಗಿದೆ. ಕ್ಯಾಡ್ಬರಿ ಲೋಗೋ ವಿಲಿಯಂ ಕ್ಯಾಡ್ಬರಿ ಸಹಿಯಿಂದ ಪಡೆಯಲಾಗಿದೆ ೨೦೦೮ ರಲ್ಲಿ ಟಾಡ್ ಸ್ಟಿಟ್ಜರ್ ಕ್ಯಾಡ್ಬರಿ ಸಿಇಓ ಗೆ $೨೬೬೫೦೦೦ ಬೋನಸ್ ನೀಡಲಾಯಿತು. $೯೮೫೦೦೦ ಮತ್ತು $೪೪೮೦೦೦ ಒಟ್ಟು ಸಂಭಾವನೆ ನೀಡುತ್ತದೆ[೧].

ಮಾರುಕಟ್ಟೆಗಳು[ಬದಲಾಯಿಸಿ]

ಕ್ಯಾಡ್ಬರಿ ವಿವಿಧ ದೇಶಗಳಲ್ಲಿ ತನ್ನ ಸಂಸ್ಥೆಗಳನ್ನು ಹೊಂದಿದೆ.

  • ಯುನೈಟೆಡ್ ಕಿಂಗ್ಡಮ್ : ಯುಕೆನಲ್ಲಿ ೨೦೦೪ ಆಗಸ್ಟ್ ರಂದು ಮಿಠಾಯಿ ವ್ಯಾಪಾರ ಪ್ರಾರಂಭವಾಯಿತು. ಕ್ಯಾಡ್ಬರಿ ಅಂಗಸಂಸ್ಥೆಗಳಾದ ಕ್ಯಾಡ್ಬರಿ ಯುಕೆ ಹೋಲ್ಡಿಂಗ್ಸ್ ಲಿಮಿಟೆಡ್, ಕ್ಯಾಡ್ಬರಿ ಫೊರ್ ಎಲ್ ಎಲ್ ಪಿ, ಕ್ಯಾಡ್ಬರಿ ಒನ್ ಎಲ್ ಎಲ್ ಪಿ ಯುಕೆನಲ್ಲಿ ಇದೆ.
  • ಐರ್ಲೆಂಡ್ : ಕ್ಯಾಡ್ಬರಿ ಐರ್ಲೆಂಡ್ ಲಿಮಿಟೆಡ್ ಮೂಲದ ಡಬ್ಲಿನ್ ಕ್ಯಾಡ್ಬರಿ ಐರ್ಲೆಂಡ್ ಪ್ರಧಾನ ಇಲ್ಲಿ ಇದೆ. ಐರ್ಲೆಂಡ್ನ ಕ್ಯಾಡ್ಬರಿ ಮಾಡಿದ ಉತ್ಪನ್ನಗಳು ಕ್ಯಾಡ್ಬರಿ ಡೈರಿ ಮಿಲ್ಕ್, ಟ್ವಿರಿಲ್ ಪ್ಲೇಕ್ ಮತ್ತು ಬೂಸ್ಟ್ ಮೊದಲಾದವು.
  • ಯುನೈಟೆಡ್ ಸ್ಟೇಟ್ಸ್ : ಕ್ಯಾಡ್ಬರಿ ಆಡಮ್ಸ್ ಎನ್ನುವ ಕಂಪನಿ ಕ್ಯಾಂಡಿ , ಗಮ್ ,ಮಿನ್ಟಿ ಮೊದಲಾದವು ಉತ್ಪಾದಿಸುತ್ತದೆ. ಇದು ನ್ಯೂಜೆರ್ಸಿನಲ್ಲಿ ನೆಲೆದಿದೆ. ಮೊದಲದವು ಕ್ಯಾಡ್ಬರಿ ಆಡಮ್ಸ್ನಉತ್ಪನ್ನಗಳು ವೈನ್ ಗಮ್ (ಮೂಲ ಮತ್ತು ಹುಳಿ), ಸ್ವೀಡಿಷ್ ಫಿಶ್ , ಸ್ವೀಡಿಷ್ ಬೆರ್ರಿಸ್, ಜ್ಯುಸಿ ಸ್ಕುರಿಟ್ಸ್ (ಹುಳಿಯಾಗುತ್ತದೆ, ಸಿಟ್ರಸ್ ಮತ್ತು ಬೆರ್ರಿ), ಮೂಲ ಗಮ್ಮ್ಸ್, ಫಿಜ್ಸಿ ಪೀಚ್, ಮಿನಿ ಫ್ರುಟ್ ಗಮ್ಸ್, ಫ್ರುಟ್ತ್ ಮನ್ಯ, ಬ್ಲಾಕ್ ಜ್ಯಾಕ್ ಚೂಯಿಂಗ್ ಗಮ್, ಬಬ್ಲು ಬಬಲ್ ಗಮ್, ಬಬ್ಲಿಶಿಯಶಸ್ ಬಬಲ್ ಗಮ್, ಚಿಕ್ಲೆಟ್ಸ್ಕ್ಲೊ, ರೆಟ್ಸ್, ಹಾಲ್ಸ್[೨].
  • ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ : ಕ್ಯಾಡ್ಬರೀಸ್ ಉತ್ಪನ್ನಗಳು ಮೊದಲನೆಯಾಗಿ ಆಸ್ಟ್ರೇಲಿಯಾದಲ್ಲಿ ಮಾರಾಟಮಾಡಲಯಿತು. ೧೯೧೯ ರಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಯಾಡ್ಬರಿ ಕಂಪನಿ ವಿಸ್ತರಿಸುವ ಯೋಜನೆಯ ಭಾಗವಾಗಿ, ಒಂದು ಕಂಪನಿ ಆಸ್ಟ್ರೇಲಿಯಾದಲ್ಲಿ ಕಟ್ಟಿದರು. ಆಸ್ಟ್ರೇಲಿಯಾ ಕಂಪನಿಯ ಮೊದಲ ಉತ್ಪನ್ನಗಳು ೧೯೨೨ರಲ್ಲಿ ಮಾರಾಟವಾಗುತ್ತಿದ್ದವು. ಕ್ಯಾಡ್ಬರಿ ಮೂರು ಆಸ್ಟ್ರೇಲಿಯನ್ ಕಾರ್ಖಾನೆಗಳು ಹಾಗೂ ನ್ಯೂಜಿಲ್ಯಾಂಡ್ನಲ್ಲಿ ಒಂದು ನಿರ್ವಹಿಸುತ್ತದೆ.
  • ಕೆನಡಾ: ಕ್ಯಾಡ್ಬರಿ ಕೆನಡಾ ಉತ್ಪಾದಿಸುವ ಹಲವಾರು ಉತ್ಪನ್ನಗಳನ್ನು ಡೈರಿ ಮಿಲ್ಕ್ (ವಿವಿಧ ಸುವಾಸನೆ), ಸ್ಟರ್ ಬಾರ್, ಕ್ಯಾಡ್ಬರಿ ಕೊಕೊನೆಟ್, ಮಿಸ್ಟರ್ ಬಿಗ್, ಕಾರಮಿಲ್ಕ್, ಕ್ರೀಮ್ ಎಗ್, ಮಿನಿ ಎಗ್ಗ್ಸ್, ಪೆಪ್, ವೈನ್ ಗುಮ್ಸ್, ಸ್ವೀಡಿಷ್ ಬೆರ್ರಿ, ಸ್ವೀಡಿಷ್ ಫಿಶ್, ಜ್ಯುಸಿ ಸ್ಕ್ವಿಟ್ಸ್ ಮೊದಲಾದವು. ಕ್ಯಾಡ್ಬರಿ ಕೆನಡಾ ಈಗ ಮಾಂಡಲಿಸ್ ಕೆನಡಾದ ಭಾಗವಾಗಿದೆ.
  • ಮಾಲ್ಟಾ: ೨೦೧೨ ರಲ್ಲಿ ಆಲ್ಫ್ ಮಿಜ್ಸಿ ಅಂಡ್ ಸನ್ಸ್ ಮಾರ್ಕೆಟಿಂಗ್ (ಲಿಮಿಟೆಡ್) ಕ್ಯಾಡ್ಬರೀಸ್ ಉತ್ಪನ್ನಗಳನ್ನು ವಿತರಣೆ ಮಾಡಿದರು. ಕ್ಯಾಡ್ಬರಿ ಕಂಪನಿ ಡೈರಿ ಮಿಲ್ಕ್ ಚಾಕೊಲೇಟ್ ಕ್ರೀಮ್ ಎಗ್ ಮತ್ತೆ ಅನೇಕ ಇತರ ಮಿಠಾಯಿ ಉತ್ಪನ್ನಗಳಿಗೆ ಪ್ರಸಿದ್ಧವಾಗಿದೆ.
  • ಭಾರತ : ೧೯೪೮ರಲ್ಲಿ, ಕ್ಯಾಡ್ಬರಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ೧೯ ಜುಲೈ ೧೯೪೮ ರಲ್ಲಿ, ಕ್ಯಾಡ್ಬರಿ ಇಂಡಿಯಾ ಸಂಘಟಿತವಾಯಿತು.ಇದು ಈಗ ಕೇಂದ್ರಕಾರ್ಯಾಲಯವನ್ನು ಮುಂಬೈನಲ್ಲಿ ಹೊಂದಿದೆ. ಕ್ಯಾಡ್ಬರಿ ಇಂಡಿಯದ ಕೆಲವು ಉತ್ಪನ್ನಗಳನ್ನು ಕ್ಯಾಡ್ಬರಿ ಡೈರಿ ಮಿಲ್ಕ್, 5 ಸ್ಟಾರ್, ಜೆಮ್ಸ್, ಹಾಲ್ಸ್, ಬಬ್ಲು, ಟಾಂಗ್ ಮತ್ತು ಓರೆಯೋ. ಇದು ಚಾಕೋಲೇಟ್ ಮಿಠಾಯಿ ವ್ಯಾಪಾರ ಮಾರುಕಟ್ಟೆಯಲ್ಲಿ ೭೦% ಮಾರ್ಕೆಟ್ ಶೇರ್ ಕೊಂಡುಕೊಂಡಿದೆ. ೨೧ ಏಪ್ರಿಲ್ ೨೦೧೪ರಂದು ಕ್ಯಾಡ್ಬರಿ ಇಂಡಿಯಾ; ಮಾಂಡಲೆಜ್ಸ್ ಭಾರತ ಫುಡ್ಸ್ ಲಿಮಿಟೆಡ್ ಎಂದು ತನ್ನ ಹೆಸರನ್ನು ಬದಲಾಹಿಸಿದೆ. ೨೦೦೮ ರಲ್ಲಿ ಕ್ಯಾಡ್ಬರಿ ಮತ್ತು ಸ್ಕ್ವಿಪ್ಸ್ ಎಂಬ ಕಂಪನಿ ಇಬ್ಬರು ಸೇರಿ ವಿಲೀನಗೊಂಡಿತು. ಆದರೆ ೨ ಮೇ ೨೦೦೮ ರಲ್ಲಿ, ಕ್ಯಾಡ್ಬರಿಸ್ಕ್ವಿಪ್ಸ್ ಎರಡು ಪ್ರತ್ಯೇಕ ಸಂಸ್ಥೆಗಳಾದವು.

ಉತ್ಪನ್ನಗಳು[ಬದಲಾಯಿಸಿ]

ಕ್ಯಾಡ್ಬರಿ ಉತ್ಪತಿ ಮಾಡುವ ಪ್ರಮುಖ ಚಾಕೊಲೇಟ್ ಬ್ರ್ಯಾಂಡ್ಗಳಾದ ಡೈರಿ ಮಿಲ್ಕ್, ಕ್ರನ್ಚಿ, ಕ್ಯಾರಾಮೆಲ್, ಬೂಸ್ಟ್, ಪಿಕ್ನಿಕ್ ಮೊದಲಾದವು ಸೇರಿವೆ.[೩]

  • ೧೮೬೬ ಕೋಕೋ ಎಸ್ಸನ್ಸ್
  • ೧೮೭೫ ಈಸ್ಟರ್ ಎಗ್ಸ್
  • ೧೮೯೭ ಚಾಕೊಲೇಟ್ ಅಂಡ್ ಫಿಂಗರ್ಸ್
  • ೧೯೦೫ ಡೈರಿ ಮಿಲ್ಕ್
  • ೧೯೧೪ ಫ್ರೈಟರ್ಕಿಶ್ ಡಿಲೈಟ್
  • ೧೯೨೬ ಕ್ಯಾಡ್ಬರಿ ಡೈರಿ ಮಿಲ್ಕ್ ಫ್ರಟ್ಸ್ ಅಂಡ್ ನೆಟ್ಸ್
  • ೧೯೨೯ ಕ್ರನ್ಚಿ
  • ೧೯೩೮ ರೋಸಸ್
  • ೧೯೫೮ ಪಿಕ್ನಿಕ್
  • ೧೯೬೦ ಡೈರಿ ಮಿಲ್ಕ್ ಷಾಟ್ಸ್
  • ೧೯೬೮ ಅಜೆಟ್ಕ್
  • ೧೯೭೪ ಡಬಲ್ ಡೆಕ್ಕರ್
  • ೧೯೭೬ ೫ ಸ್ಟಾರ್ ಬಾರ್
  • ೧೯೮೧ ವಿಸ್ಪಾ
  • ೧೯೮೫ ಬೂಸ್ಟ್
  • ೧೯೮೭ ಟ್ವಿರಿಲ್
  • ೧೯೯೨ ಟೈಮ್ ಜಾಟ್
  • ೧೯೯೫ ವಿಸ್ಪಾ ಗೋಲ್ಡ್
  • ೨೦೦೧ ಬ್ರಂಚ್ ಬಾರ್ ಡ್ರೀಮ್ ಅಂಡ್ ಪ್ಲೇಕ್
  • ೨೦೦೯ ಡೈರಿ ಮಿಲ್ಕ್ ಬ್ಲಿಸ್
  • ೨೦೧೦ ಡೈರಿ ಮಿಲ್ಕ್ ಸಿಲ್ಕ್
  • ೨೦೧೧ ಓರಿಯೋ
  • ೨೦೧೨ ಮಾರ್ವೆಲೆಸ್ ಕ್ರಿಯೆಷನ್ಸ್ ಅಂಡ್ ಕ್ರಿಸ್ಪೆಲ್ಲೊ
  • ೨೦೧೪ ಬಬಲ್ಸ್
  • ೨೦೧೭ ಸಿಲ್ಕ್ ಓರಿಯೋ

ಮತ್ತು ಇತರ ಪ್ರಸಿದ್ಧ ಉತ್ಪನ್ನಗಳನ್ನು ಕ್ಯಾಡ್ಬರಿ ಕಂಪನಿ ತಯಾರಿಸಿದೆ.

ಆರೋಗ್ಯ ಮತ್ತು ಸುರಕ್ಷತೆ ವಿವಾದಗಳು[ಬದಲಾಯಿಸಿ]

೧೯ ಜನವರಿ ೨೦೦೬ ರಂದು ಕ್ಯಾಡ್ಬರಿ ಸ್ಕ್ವಿಪ್ಸ್ ನ ಏಳು ಉತ್ಪನ್ನಗಳಲ್ಲಿ ಅಪರೂಪದ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಸೇರಿಕೊಂಡಿತು. ಇದರಿಂದ ಬರ್ಮಿಂಗ್ಹ್ಯಾಮ್ ಸಿಟಿ ಕೌನ್ಸಿಲ್ ಆಹಾರ ರಕ್ಷಣಾ ನೀತಿಗಳನ್ನು ಉಲ್ಲಂಘಿಸಿದಕ್ಕೆ ಒಂದು ಮಿಲಿಯನ್ ಪೌಂಡ್ ದಂಡ ವಿಧಿಸಲಾಯಿತು[೪]. ಕ್ಯಾಡ್ಬರಿ ತನ್ನ ಅನೇಕ ಉತ್ಪನ್ನಗಳಲ್ಲಿ ಹೈಡ್ರೋಜನೀಕರಿಸಿದ ಎಣ್ಣೆಗಳನ್ನು ಬಳಸುವುದನ್ನು ಮುಂದುವರೆಸಿತು.ಇದರಿಂದಾಗಿ ಪೌಷ್ಟಿಕಾಂಶದ ಲೇಬಲ್ ಸುತ್ತಿನಲ್ಲಿ ಮೌಲ್ಯಗಳು ಶೂನ್ಯವಾಗಿದೆ.ಆದರೂ ಕೂಡ ಕ್ಯಾಡ್ಬರಿ ಮಾರುಕಟ್ಟೆಯಲ್ಲಿ ದೊಡ್ಡ ಮತ್ತು ಉತ್ತಮ ಚಾಕೊಲೇಟ್ ಬ್ರ್ಯಾಂಡ್ ಆಗಿದೆ[೫].

ಉಲ್ಲೆಖಗಳು[ಬದಲಾಯಿಸಿ]