ಸದಸ್ಯ:CHANDINI.B/ನನ್ನ ಪ್ರಯೋಗಪುಟ1
ವಿಕಿರಣ ಪಟುತ್ವ
ಪ್ರಕೃತಿಯಲ್ಲಿ ಅನೇಕ ವಿಶಿಷ್ಟ ಘಟನೆಗಳು ನಡೆಯುತ್ತಿರುತ್ತವೆ.ಭೌತಶಾಸ್ತ್ರದ ಚರಿತ್ರೆಯಲ್ಲಿ ದಾಖಲಾದ ವಿಶೇಷ ಘಟನೆಯೆಂದರೆ ವಿಕಿರಣಪಟುತ್ವ ಅಥವಾ ವಿಕಿರಣಕ್ಷಯನವನ್ನು ಪತ್ತೆಮಾಡಿದ್ದು.
ವಿಕಿರಣ ಪಟುತ್ವ ಪತ್ತೆ ಮಾಡಿದ ಕಥೆ
[ಬದಲಾಯಿಸಿ]೧೮೯೬ನೇ ಇಸವಿಯಲ್ಲಿ ಹೆನ್ರಿಬೆಕ್ವೆರೆಲ್ ಎಂಬ ಭೌತಶಾಸ್ತ್ರಜ್ಞನು ಆಕಸ್ಮಿಕವಾಗಿ ವಿಕಿರಣ ಪಟುತ್ವವನ್ನು ಕಂಡುಹಿಡಿದನು.
ಒಂದು ದಿನ ಈತ ಛಾಯಾಚಿತ್ರ ಫಲಕದ ಮೇಲೆ ಯುರೇನಿಯಂ ಲವಣವನ್ನು ಇಟ್ಟು ಕಪ್ಪು ಕಾಗದದಿಂದ ಸುತ್ತಿ ಕತ್ತಲೆಯ ಕೋಣೆಯಲ್ಲಿರಿಸಿದ್ದ .ಛಾಯಾ ಚಿತ್ರ ಫಲಕವನ್ನು ವರ್ಧಿಸಿದ ಬೆಳಕಿನ ದೆಸೆಯಿಂದ ಫಲಕವು ಹಾಳಾಗಿರುವುದು ತಿಳಿದು ಅವನಿಗೆ ಅಚ್ಚರಿಯಾಯಿತು.ಅದೇ ಪ್ರಯೋಗವನ್ನು ಬೇರೆ ಬೇರೆ ಯುರೇನಿಯಂ ಲವಣದಿಂದ ಪುನರಾವರ್ತಿಸಿದಾಗಲೂ ಅದೇ ಫಲಿತಾಂಶವು ದೊರೆಯಿತು.ಆ ಕತ್ತಲೆಯ ಕೋಣೆಗೆ ಬೆಳಕು ಪ್ರವೇಶಿಸಲು ಸಾಧ್ಯವಿಲ್ಲದುದರಿಂದ, ಯುರೇನಿಯಂ ಕಣ್ಣಿಗೆ ಕಾಣದ ಹಾಗು ಛಾಯಾ ಫಲಕಗಳನ್ನು ಹಾಳುಮಾಡುವ ವಿಕಿರಣಗಳನ್ನು ಹೊರ ಸೂಸುತ್ತಿದೆ ಎಂದು ತೀರ್ಮಾನಿಸಿದನು.[೧] "ಒಂದು ಧಾತುವಿನಿಂದ ತನ್ನಷ್ಟಕ್ಕೆ ತಾನೇ ವಿಕಿರಣಗಳು ಉತ್ಸರ್ಜಿಸಲ್ಪಡುವ ಘಟನೆಯನ್ನು ವಿಕಿರಣ ಪಟುತ್ವ ಎನ್ನುತ್ತೇವೆ.ಯಾವ ವಸ್ತುಗಳು ವಿಕಿರಣಗಳನ್ನು ಉತ್ಸರ್ಜಿಸುತ್ತವೆಯೋ ಅವುಗಳನ್ನು ಸ್ವಾಭಾವಿಕ ವಿಕಿರಣಶೀಲ ವಸ್ತುಗಳು ಎನ್ನುತ್ತೇವೆ." [೨]ಈ ರೀತಿ ಉತ್ಸರ್ಜಿಸಲ್ಪಟ್ಟ ಕಿರಣಗಳನ್ನು ಬೆಕ್ವೆರೆಲ್ ಕಿರಣಗಳು ಎನ್ನುತ್ತೇವೆ.ಈ ಹೆಸರನ್ನು ಹೆನ್ರಿಬೆಕ್ವೆರೆಲ್‍ನ ಕಠಿಣ ಶ್ರಮಕ್ಕೆ ಗೌರವವಾಗಿ ನೊಬೆಲ್ ಪುರಸ್ಕಾರ ನೀಡಲಾಗಿದೆ. ಅನಂತರ ಮೇರಿ ಕ್ಯುರಿ ಮತ್ತು ಆಕೆಯ ಪತಿ ಪಿಯರಿಕ್ಯುರಿ ರೇಡಿಯಂ ಧಾತುವಿಗೆ ಹೆಚ್ಚು ವಿಕಿರಣ ಪಟುತ್ವವಿದೆ ಎಂಬಂಶವನ್ನು ಸಾಬೀತು ಪಡಿಸಿದರು. ಇಂದು ನಮಗೆ ತಿಳಿದಿರುವಂತೆ ಪರಮಾಣು ಸಂಖ್ಯೆ ,೮೨ಕ್ಕಿಂತ ಜಾಸ್ತಿ ಇರುವ ಸ್ವಾಭಾವಿಕವಾಗಿ ಭಾರವಾದ ಧಾತುಗಳಾದ ಯುರೇನಿಯಂ,ಪೊಲೋನಿಯಂ,ಥೋರಿಯಂ,ಆಕ್ಟೀನಿಯಂ,ರೇಡಿಯಂ ಮುಂತಾದಕ್ಕೆ ಸ್ವಾಭಾವಿಕ ವಿಕಿರಣ ಪಟುತ್ವವಿದೆ.
ವಿಕಿರಣ ಪಟುತ್ವದ ವಿಶಿಷ್ಟ ಲಕ್ಷಣಗಳು :
[ಬದಲಾಯಿಸಿ]- ವಿಕಿರಣ ಪಟುತ್ವವು ಭೌತ ಹಾಗು ರಾಸಾಯನಿಕ ಬದಲಾವಣೆಗಳಿಂದ ಪ್ರಭಾವಿತವಾಗುವುದಿಲ್ಲ.
- ವಿಕಿರಣಪಟುತ್ವವು ತಾಪವನ್ನು ಅವಲಂಬಿಸಿರುವುದಿಲ್ಲ.
- ವಿಕಿರಣಶೀಲ ವಸ್ತುಗಳಿಂದ ತನ್ನಷ್ಟಕ್ಕೆ ತಾನೇ ವಿಕಿರಣಗಳು ನಿರಂತರವಾಗಿ ಉತ್ಸರ್ಜಿಸುತ್ತದೆ.
- ವಿಕಿರಣಪಟುತ್ವದಿಂದ ಧಾತುಗಳ ಪರಿವರ್ತನೆ ಅಂದರೆ ದ್ರವ್ಯಾಂತರಣ ಉಂಟಾಗುತ್ತದೆ.
- ವಿಕಿರಣಶೀಲ ವಸ್ತುಗಳ ನ್ಯೂಕ್ಲಿಯಸ್‍ನಿಂದ ವಿಕಿರಣಗಳು ಉತ್ಸರ್ಜಿತವಾಗುತ್ತದೆ.
ವಿಕಿರಣಶೀಲ ವಸ್ತುಗಳಿಂದ ಉತ್ಸರ್ಜಿಸಲ್ಪಡುವ ವಿಕಿರಣಗಳ ಬಗೆಗಳು
[ಬದಲಾಯಿಸಿ]೧೮೯೮ ರಲ್ಲಿ ರುದರ್ ಫೋರ್ಡ್ ಮತ್ತಿತರರು ವಿಕಿರಣಶೀಲ ವಸ್ತುಗಳಿಂದ ಮೂರು ಬಗೆಯ ವಿಕಿರಣಗಳು ಉತ್ಸರ್ಜಿಸಲ್ಪಡುವುವು ಎಂದು ತೋರಿಸಿದರು.ಅವುಗಳನ್ನು ಆಲ್ಫಾ ಕಣ (α) ಅಥವಾ ಕಿರಣ, ಬೀಟಾ (β) ಕಿರಣ ಮತ್ತು ಗ್ಯಾಮ (ɣ) ಕಿರಣ ಎಂದು ಕರೆದರು.
ವಿಕಿರಣ ಪಟುತ್ವದ ಧಾತುವಿನ ಬೀಜ ಕೇಂದ್ರದಿಂದ α-ಕಣವನ್ನು ಉತ್ಸರ್ಜಿಸುವ ಪ್ರಕ್ರಿಯೆಯನ್ನು ಆಲ್ಫಾಕ್ಷಯ ಎನ್ನುತ್ತೇವೆ.
α-ಕಣಗಳೆಂದರೆ, ಧನವಿದ್ಯುದಾವಿಷ್ಟ ಕಣಗಳು. α-ಕಣವು ಎರಡು ಪ್ರೋಟಾನ್ ಮತ್ತು ಎರಡು ನ್ಯೂಟ್ರಾನ್‍ಗಳಿಂದಾದ ಹೀಲಿಯಂ ನ್ಯೂಕ್ಲಿಯಸ್. ನ್ಯೂಕ್ಲಿಯಸ್‍ನಿಂದ ಒಂದು α-ಕಣವು ಉತ್ಸರ್ಜಿಸಲ್ಪಟ್ಟಾಗ ಆ ನ್ಯೂಕ್ಲಿಯಸ್ಸಿನ ದ್ರವ್ಯರಾಶಿಯು(A) ೪ ಏಕಮಾನ ಮತ್ತು ಪರಮಾಣು ಸಂಖ್ಯೆ(Z)ಯಲ್ಲಿ ೨ ಏಕಮಾನ ಕಡಿಮೆಯಾಗುತ್ತದೆ.
ಉದಾಹರಣೆ: zXA ನ್ಯೂಕ್ಲಿಯಸ್‍ನಿಂದ α ಕ್ಷಯದಿಂದ z-೨YA-೪ ನ್ಯೂಕ್ಲಿಯಸ್ಸಾಗಿ ದ್ರವ್ಯಾಂತರವಾಗುವುದನ್ನು ಈ ಸಮೀಕರಣದಿಂದ ತಿಳಿಯಬಹುದು.
zXA → z-೨YA-೪ + ೨He೪
ಉದಾಹರಣೆ: ಪರಮಾಣು ದ್ರವ್ಯರಾಶಿ (A)೨೨೬ ಮತ್ತು ಪರಮಾಣು ಸಂಖ್ಯೆ (z) ೮೮ ಉಳ್ಳ ರೇಡಿಯಂ ಧಾತು α-ಕ್ಷಯ ಹೊಂದಿ ಪರಮಾಣು ದ್ರವ್ಯರಾಶಿ (A)೨೨೨ ಮತ್ತು ಪರಮಾಣು ಸಂಖ್ಯೆ(z)೮೬ ಹೊಂದಿರುವ ರೇಡಾನ್ ಧಾತುವಾಗುವುದು.ದ್ರವ್ಯಾಂತರವನ್ನು ಈ ಸಮೀಕರಣದಿಂದ ತಿಳಿಯಬಹುದು.
೮೮Ra೨೨೬ → ೮೬Rn೨೨೨ + ೨He೪
ವಿಕಿರಣ ಧಾತುವೊಂದರ ಪರಮಾಣುವಿನ ನ್ಯೂಕ್ಲಿಯಸ್‍ದಿಂದ β-ಕಣಗಳು ಉತ್ಸರ್ಜಿಸಲ್ಪಡುವುದಕ್ಕೆ β-ಕ್ಷಯ ಎನ್ನುತ್ತೇವೆ.
β-ಕಣಗಳೆಂದರೆ ಬರಿ ಎಲೆಕ್ಟ್ರಾನ್‍ಗಳಷ್ಟೆ.β-ಕಣಗಳು ಋಣ ವಿದ್ಯುದಾವಿಷ್ಟ ಕಣಗಳು,β-ಕ್ಷಯನ ನಡೆಯುವ ಸಂದರ್ಭದಲ್ಲಿ ಧಾತುವಿನ ಪರಮಾಣು ದ್ರವ್ಯರಾಶಿಯು ಬದಲಾವಣೆಯಾಗುವುದಿಲ್ಲ. ಆದರೆ ಪರಮಾಣು ಸಂಖ್ಯೆ ಎಂದು ಹೆಚ್ಚಾಗುತ್ತದೆ.ಇದರ ದ್ರವ್ಯರಾಶಿ ಮತ್ತು ವಿದ್ಯುದಂಶವು ಎಲೆಕ್ಟ್ರಾನ್‍ಗಳ ದ್ರವ್ಯರಾಶಿ ಮತ್ತು ವಿದ್ಯುದಂಶಕ್ಕೆ ಸಮವಾಗಿರುವುದು.
ಉದಾಹರಣೆ: zXA ಪರಮಾಣುವು z+೧YA ಪರಮಾಣುವಾಗಿ β-ಕ್ಷಯದಿಂದ ದ್ರವ್ಯಾಂತರ ಹೊಂದುವುದನ್ನು ಈ ಕೆಳಗಿನ ಸಮೀಕರಣದಿಂದ ತಿಳಿಯಬಹುದು.
zXA → z+೧YA + -೧e೦
ಉದಾಹರಣೆ: ರೇಡಿಯಂ ಪರಮಾಣುವು ೮೮Ra೨೨೮ ಬೀಟಾ ಕಣಗಳನ್ನು ಉತ್ಸರ್ಜಿಸಿದರೆ ದೊರೆಯುವ ದ್ರವ್ಯಾಂತರಣ ಬೀಜವು ಆಕ್ಟಿನಿಯಂ ೮೯Ac೨೨8,β-ಕ್ಷಯವನ್ನು ಈ ಸಮೀಕರಣದಿಂದ ತೋರಿಸಬಹುದು.
೮೮Ra೨೨೮ → ೮೯Ac೨೨8 + -೧e೦
ಗ್ಯಾಮಾ ಕಿರಣಗಳು ಗರಿಷ್ಟ ಆವೃತ್ತಿಯ ವಿದ್ಯುತ್‍ಕಾಂತೀಯ ಕಿರಣಗಳು.ಅಂದರೆ ಅವುಗಳು 'ಪ್ರೋಟಾನ್‍ಗಳಿಗೆ' ಸಮನಾದ ದ್ರವ್ಯರಾಶಿ ಮತ್ತು ವಿದ್ಯುದಂಶವಿರುವುದಿಲ್ಲ.ɣ-ಕ್ಷಯದ ಸಂದರ್ಭದಲ್ಲಿ ಧಾತುವಿನ ಪರಮಾಣು ಸಂಖ್ಯೆ ಮತ್ತು ಪರಮಾಣು ದ್ರವ್ಯರಾಶಿಯಲ್ಲಿ ವ್ಯತ್ಯಾಸವಾಗುವುದಿಲ್ಲ.
ಉದಾಹರಣೆ:ಪರಮಾಣುವಿನ ಬೀಜಕೇಂದ್ರದ ɣ-ಕ್ಷಯವನ್ನು ಈ ರೀತಿ ತೋರಿಸಬಹುದು.
zXA → zXA + ɣ
ಗೀಗರ್ ಮುಲ್ಲರ್, ವಿಲ್ಸನ್ ಕ್ಲೌಡ್ ಛೇಂಬರ್ ಮುಂತಾದ ಸಾಧನಗಳಿಂದ ವಿಕಿರಣ ಕಣಗಳನ್ನು ಪತ್ತೆ ಮಾಡಬಹುದು
ಅರ್ಧ್ಯಾಯುಷ್ಯ
[ಬದಲಾಯಿಸಿ]ಸೈದ್ಧಾಂತಿಕವಾಗಿ ಹೇಳುವುದಾದರೆ ವಿಕಿರಣಪಟು ಧಾತುವಿನ ಕ್ಷಯನ ಪ್ರಕ್ರಿಯೆಯು ಎಂದಿಗೂ ಪೂರ್ಣಗೊಳ್ಳದು.ವಿಕಿರಣಶೀಲ ವಸ್ತುಗಳ ಕ್ಷಯಣ ಬೇರೆಬೇರೆಯಾಗಿರುತ್ತದೆ.ಕ್ಷಯನ ಪ್ರಕ್ರಿಯೆಯಲ್ಲಿ ವಿಕಿರಣಶೀಲ ಧಾತುವಿನ ದ್ರವ್ಯರಾಶಿ ಕಡಿಮೆಯಾಗುತ್ತದೆ.ಒಂದು ವಿಕಿರಣ ವಸ್ತುವಿನ ಪ್ರಾರಂಭದ ದ್ರವ್ಯರಾಶಿಯ ಅರ್ಧದಷ್ಟಾಗಲು ಬೇಕಾಗುವ ಕಾಲವನ್ನು ಅರ್ಧಾಯುಷ್ಯ ಎನ್ನುತ್ತೇವೆ.[೩]ಇದನ್ನು 'T' ಎಂಬ ಅಕ್ಷರದಿಂದ ಸೂಚಿಸುತ್ತೇವೆ.
ವಿಕಿರಣ ವಸ್ತುಗಳ ಅರ್ಧಾಯುಷ್ಯ ಅವಧಿಯು ಮೈಕ್ರೋ ಸೆಕೆಂಡ್‍ನಿಂದ ಹಿಡಿದು ಕೆಲವು ಸಾವಿರಾರು ವರ್ಷಗಳ ಬಹುವಿಸ್ತಾರ ವ್ಯಾಪ್ತಿಯಲ್ಲಿರುವುದು.
ಉದಾಹರಣೆ: ಇಂಗಾಲ ೧೪ ರ ಅರ್ಧಾಯುಷ್ಯ ೫೭೦೦ ವರ್ಷಗಳು. ಮರದಲ್ಲಿ ಒಂದು ಗ್ರಾಂ ಇಂಗಾಲ ೧೪ ಇದೆ ಎಂದು ಭಾವಿಸಿದರೆ, ೫೭೦೦ ವರ್ಷಗಳ ನಂತರ ೦.೫ ಗ್ರಾಂ ಇಂಗಾಲ ೧೪ ಇರುತ್ತದೆ.
ಕೆಲವು ಮೂಲ ವಸ್ತುಗಳ ಅರ್ಧಾಯುಷ್ಯವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕೊಟ್ಟಿದೆ.
ಧಾತುಗಳು | ಅರ್ಧಾಯುಷ್ಯ |
---|---|
ಥೋರಿಯಂ-೨೩೨ | ೧೦೧೦ ವರ್ಷಗಳು |
ಯುರೇನಿಯಂ-೨೩೫ | ೪.೫೧*೧೦೯ ವರ್ಷಗಳು |
ರೇಡಿಯಂ-೨೩೬ | ೧೬೨೦ ವರ್ಷಗಳು |
ಸ್ಟ್ರಾನ್ಷಿಯಂ-೮೮ | ೨೮ ವರ್ಷಗಳು |
ಕೋಬಾಲ್ಟ್-೬೦ | ೫.೩ ವರ್ಷಗಳು |
ಫಾಸ್ಪರಸ್-೩೨ | ೧೪.೩ ದಿನಗಳು |
ಬಿಸ್‍ಮತ್-೨೧೦ | ೫ ದಿನಗಳು |
ರೆಡಾನ್-೨೩೨ | ೩.೮೨೫ ದಿನಗಳು |
ಪೊಲೋನಿಯಂ-೨೧೩ | ೪.೨*೧೦-೯ |
ವಿಕಿರಣ ಸಮಸ್ಥಾನಿಗಳು (ರೇಡಿಯೋ ಐಸೋಟೋಪ್‍ಗಳು)
[ಬದಲಾಯಿಸಿ]ಸ್ವಾಭಾವಿಕವಾಗಿ ದೊರೆಯುವ ವಿಕಿರಣ ಸಮಸ್ಥಾನಿಗಳು ಅತಿ ಹೆಚ್ಚು ಪರಮಾಣು ಸಂಖ್ಯೆಗಳನ್ನು ಹೊಂದಿರುತ್ತವೆ.ಹಗುರವಾದ ಧಾತುಗಳನ್ನೂ ಸಹ ಕೃತಕವಾಗಿ ವಿಕಿರಣ ಧಾತುಗಳನ್ನಾಗಿ ಪರಿವರ್ತಿಸಬಹುದು.ಈ ರೀತಿ ಉತ್ಪನ್ನವಾದ ವಿಕಿರಣ ಧಾತುಗಳನ್ನು ಕೃತಕ ವಿಕಿರಣ ಧಾತುಗಳು ಎನ್ನುತ್ತೇವೆ.ಬೇರೆ-ಬೇರೆ ಪರಮಾಣು ದ್ರವ್ಯರಾಶಿ ಹಾಗು ಒಂದೇ ಪರಮಾಣು ಸಂಖ್ಯೆ ಹೊಂದಿರುವ, ವಿಕಿರಣ ಮೂಲ ವಸ್ತುವಿನ ವಿವಿಧ ಪರಮಾಣುಗಳನ್ನು ವಿಕಿರಣ ಸಮಸ್ಥಾನಿಗಳು ಎನ್ನುತ್ತೇವೆ.[೪]
೧೯೩೪ ರಲ್ಲಿ ಕ್ಯುರಿ ಜೂಲಿಯಟ್ ಮತ್ತು ಆಕೆಯ ಪತಿ ಫ್ರೆಡ್ರಿಕ್ ಜೂಲಿಯಟ್ ಮೊದಲಿಗೆ ಕೃತಕ ವಿಕಿರಣ ಪಟುತ್ವವನ್ನು ಕಂಡುಹಿಡಿದರು.೧೯೩೫ ರಲ್ಲಿ ಇವರಿಗೆ ರಸಾಯನ ಶಾಸ್ತ್ರದ ನೊಬೆಲ್ ಪಾರಿತೋಷಕವನ್ನು ಪ್ರದಾನ ಮಾಡಲಾಯಿತು.ಅವರು ಬೋರಾನ್ ಮತ್ತು ಅಲ್ಯುಮಿನಿಯಂ ಪರಮಾಣುಗಳನ್ನು α-ಕಣಗಳಿಂದ ತಾಡಿಸಿದಾಗ, α ಕಣಗಳ ಆಕರವನ್ನು ತೆಗೆದ ನಂತರವೂ ವಿಕಿರಣವನ್ನು ಉತ್ಸರ್ಜಿಸುತ್ತಿರುವುದನ್ನು ಅವರು ಗಮನಿಸಿದರು. ಈ ಉತ್ಸರ್ಜಿತ ವಿಕಿರಣಗಳು ಪಾಸಿಟ್ರಾನ್‍ಗಳು (-೧e೦
).
೧೩Al೨೭ + ೨He೪ → ೧೫P೩೦ + ೦n೧
೧೫P೩೦ → ೧೪Si೩೦ + +೧e೦ (β+)
ಹಗುರವಾದ ಧಾತುಗಳನ್ನು ವೇಗೋತ್ಕರ್ಷಗೊಂಡು ಚಲಿಸುತ್ತಿರುವ α ಕಣಗಳಂತಹ ಭಾರವಾದ ಕಣಗಳಿಂದ ತಾಡಿಸುವುದರಿಂದ ಕೃತಕ ವಿಕಿರಣ ಧಾತುಗಳು ಉಂಟಾಗುತ್ತವೆ.
ವಿಕಿರಣ ಸಮಸ್ಥಾನಿ(ರೇಡಿಯೋ ಐಸೋಟೋಪ್)ಗಳ ಉಪಯೋಗಗಳು (ಇವುಗಳನ್ನು ಸಾಮಾನ್ಯವಾಗಿ ರೇಡಿಯೋ ನ್ಯೂಕ್ಲಿಡ್‍ಗಳು ಎನ್ನುತ್ತಾರೆ.)
ವಿಕಿರಣ ಸಮಸ್ಥಾನಿಗಳು | ಉಪಯೋಗಗಳು |
---|---|
ವಿಕಿರಣ ಕೋಬಾಲ್ಟ್-೬೦ | ಕ್ಯಾನ್ಸರ್ ರೋಗದ ಚಿಕಿತ್ಸೆಯಲ್ಲಿ |
ವಿಕಿರಣ ಸೋಡಿಯಂ-೨೪ | ಔಷಧಿಗಳ ಪರಿಣಾಮವನ್ನು ಅಧ್ಯಯನ ಮಾಡಲು |
ವಿಕಿರಣ ಇರಿಡಿಯಂ | ಯಂತ್ರದ ಭಾಗಗಳ ಸವಕಳಿಯನ್ನು ಪರೀಕ್ಷಿಸಲು |
ಯೂರೇನಿಯಂ-೨೩೫ | ಅಣುಶಕ್ತಿ ಉತ್ಪಾದಿಸಲು |
ವಿಕಿರಣ ಫಾಸ್ಪರಸ್-೩೦ | ಯಾವ ಬೆಳೆಗೆ ಮತ್ತು ಭೂಮಿಗೆ ಎಷ್ಟು ಫಾಸ್ಫಾಟಿಕ್ ಗೊಬ್ಬರವನ್ನು ಹಾಕಬೇಕೆಂಬುದನ್ನು ನಿರ್ಧರಿಸಲು |
ವಿಕಿರಣ ಕಾರ್ಬನ್/ಕಾರ್ಬನ್-೧೪ | ಶಿಲೆಗಳು,ಪಳೆಯುಳಿಕೆ ಮತ್ತು ಪ್ರಾಕ್ತನ ನಮೂನೆಗಳ ವಯಸನ್ನು ನಿರ್ಧರಿಸಲು |
ವಿಕಿರಣ ಐಯೋಡಿನ್-೧೩೧ | ಥೈರಾಯ್ಡ್ ಗ್ರಂಥಿಗಳ ಚಿಕಿತ್ಸೆಯಲ್ಲಿ |
ಅಪಾಯ
[ಬದಲಾಯಿಸಿ]ವಿಕಿರಣಗಳಿಂದ ಪರಿಸರವು ಕಲುಷಿತಗೊಂಡು ಅಪಾಯಕಾರಿ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಚಿಕಿತ್ಸೆಗಳ ಸಮಯದಲ್ಲಿ ವಿಕಿರಣಗಳನ್ನು ಅತಿಯಾಗಿ ಬಳಸುವುದರಿಂದ ಮತ್ತು ಜೀವರಾಶಿಗಳ ಮೇಲೆ ಹೆಚ್ಚು ಬಳಸುವುದರಿಂದ ವಿಕಿರಣ ಪರಿಣಾಮವು ಮಾರಣಾಂತಕವಾಗುವುದು.ಇದನ್ನು ವಿಕಿರಣಗಳ ದುಷ್ಪರಿಣಾಮ ಎನ್ನುತ್ತೇವೆ.
ಆಹಾರ ವಿಕಿರಣೋಪಾಚಾರ
[ಬದಲಾಯಿಸಿ]ಆಹಾರ ಪದಾರ್ಥಗಳ ಮೇಲೆ ಯಾವುದಾದರೂ ಸೂಕ್ತ ವಿಕಿರಣ ಸಮಸ್ಥಾನಿಯಿಂದ ದೊರೆಯುವ ಗ್ಯಾಮ ಕಿರಣಗಳನ್ನು ಹಾಯಿಸುವುದರಿಂದ ಆಹಾರ ವಿಕಿರಣೋಪಚಾರವನ್ನು ಮಾಡಲಾಗುವುದು.ಸಾಮಾನ್ಯವಾಗಿ ಬಳಸಲಾಗುವ ವಿಕಿರಣ ಸಮಸ್ಥಾನಿ ಕೋಬಾಲ್ಟ್-೬೦.ಇದರಿಂದ ಉತ್ಸರ್ಜಿತವಾಗುವ ಗ್ಯಾಮ-ಕಿರಣವನ್ನು ಆಹಾರಗಳ ಮೂಲಕ ಹಾಯಿಸಿದಾಗ ರೋಗಕಾರಕ ಬ್ಯಾಕ್ಟೀರಿಯಾ ಮತ್ತು ಆಹಾರಗಳನ್ನು ಹಾಳುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತವೆ.ಆದರೆ ಇದು ಆಹಾರದ ಗುಣ, ರುಚಿ ಮತ್ತು ರಚನೆಯನ್ನು ಬದಲಾಯಿಸಲಾರದು.ಆಹಾರವು ರೇಡಿಯೋ ಐಸೋಟೋಪ್‍ನೊಂದಿಗೆ ಸಂಪರ್ಕ ಹೊಂದದೇ ಇರುವುದರಿಂದ ಆಹಾರ ಪದಾರ್ಥವೂ ವಿಕಿರಣ ಗುಣವನ್ನು ಹೊಂದುವುದಿಲ್ಲ.
ಧೂಮ ಶೋಧಕ ಮತ್ತು ಅಮೆರಿಷಿಯಂ-೨೪೧
[ಬದಲಾಯಿಸಿ]ನಮ್ಮಲ್ಲಿ ಎಷ್ಟು ಜನರ ಮನೆಯಲ್ಲಿ ಧೂಮಶೋಧಕವಿದೆ? ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಮನೆಯಲ್ಲಿ ಬೆಂಕಿಯನ್ನು ಸೂಚಿಸುವ ಈ ಎಚ್ಚರಿಕೆಯ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಈ ಬಗೆಯ ವ್ಯವಸ್ಥೆಗಳಲ್ಲಿ ಅಮೆರಿಷಿಯಂ-೨೪೧ ಅಲ್ಪ ಪ್ರಮಾಣದಲ್ಲಿರುತ್ತದೆ ಎಂಬುದು ಅನೇಕ ಗ್ರಾಹಕರಿಗೆ ತಿಳಿದೆ ಇಲ್ಲ.ಈ ಧಾತುವಿನ ವಿಕಿರಣ ಗುಣವನ್ನು ಉಪಯೋಗಿಸಿಕೊಂಡು ಬೆಂಕಿಯಿಂದ ಬರುವ ಹೊಗೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಬಹುದು.ಮುಂಚಿತವಾಗಿ ಎಚ್ಚರಿಕೆ ಸೂಚಿಸುವ ಈ ಧಾತುವಿನ ಸಾಮರ್ಥ್ಯ ಅನೇಕ ಜೀವಗಳನ್ನುಳಿಸಿದೆ. ಸಮೀಕ್ಷೆಗಳಿಂದ ನಮಗೆ ತಿಳಿದು ಬಂದದ್ದು ೮೦% ಸುಟ್ಟಗಾಯಗಳು ಮತ್ತು ೮೦% ಮಾರಣಾಂತಿಕ ಬೆಂಕಿಯಿಂದ ಆದ ಸುಟ್ಟ ಗಾಯಗಳು ಧೂಮ ಶೋಧಕವಿಲ್ಲದ ಮನೆಗಳಲ್ಲಿಯೇ ಉಂಟಾಗಿರುವುದು.
ಪ್ರಾಕ್ತನ ಕಾಲನಿರ್ಣಯ
[ಬದಲಾಯಿಸಿ]ಹೆಚ್ಚು ಅರ್ಧಾಯುಷ್ಯವನ್ನು ಹೊಂದಿರುವ ಧಾತುಗಳಾದ K೪೦, Rb೮೭, U೨೩೮ ಮುಂತಾದವುಗಳನ್ನು ಬಳಸಿ ಒಂದು ಶಿಲೆಯ ವಯಸ್ಸನ್ನು ಅಂದಾಜುಮಾಡಲಾಗುವುದು.೯೨U೨೩೮ ನಿರಂತರ ಕ್ಷಯನ ಹೊಂದಿ ದ್ರವ್ಯಾಂತರಣ ಪ್ರಕ್ರಿಯೆಯಿಂದ ಅನೇಕ ಧಾತುಗಳಾಗಿ ಪರಿವರ್ತಿಸಿ ಅಂತಿಮವಾಗಿ ಸೀಸವಾಗುತ್ತದೆ.ಈ ಕ್ರಮದಿಂದ ಭೂಮಿಯ ವಯಸ್ಸು ಸುಮಾರು ೩.೮ ಬಿಲಿಯನ್ ವರ್ಷಗಳು ಎಂದು ಅಂದಾಜು ಮಾಡಲಾಗಿದೆ.