ಸದಸ್ಯ:CHANDINI.B

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾಂದಿನಿ.ಬಿ

ಜನನ[ಬದಲಾಯಿಸಿ]

ನನ್ನ ಹೆಸರು ಚಾಂದಿನಿ.ಇಂದು ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದ ಹೆಮ್ಮೆಯ ವಿದ್ಯಾರ್ಥಿ.ಆದರೆ ಇದಕ್ಕೂ ಮುನ್ನ ನನ್ನ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಈ ಬರವಣಿಗೆಯ ಮುಖಾಂತರ ತಮಗೆಲ್ಲರಿಗೂ ತಿಳಿಸಬೇಕೆಂದು ಈ ಬರವಣಿಗೆಯನ್ನು ಮುಂದುವರೆಸುತ್ತಿದ್ದೇನೆ.ನನ್ನ ಅಮ್ಮ ಹೇಳುವಂತೆ , ನಾನು ಹುಟ್ಟಿದಾಗ ನಮ್ಮ ಕುಟುಂಬದವರಿಗೆಲ್ಲಾ ಅತೀವವಾದ ಸಂತೋಷವಾಯಿತಂತೆ.ನನ್ನ ಅಮ್ಮನ ತಂದೆ ತಾಯಿಯಾದ , ನನ್ನ ಅಜ್ಜಿ -ಅಜ್ಜನಿಗೆ ನಾನು ಮುದ್ದಿನ ಕಣ್ಮಣಿಯಾದೆನಂತೆ. ನನ್ನ ಹುಟ್ಟು ಅವರ ಸಂತೋಷದ ಮೆಟ್ಟಿಲಾಯಿತಂತೆ....

ನನ್ನ ಮುದ್ದಾದ ಬಾಲ್ಯ[ಬದಲಾಯಿಸಿ]

ನಾನು ಪ್ರೀತಿಯ ಕೊರತೆಯಿಲ್ಲದಂತೆ ಬೆಳೆದೆ,ಮೂರು ತಿಂಗಳ ಮಗುವಿನಿಂದಲೇ ನಾನು ನನ್ನ ಅಜ್ಜ ಅಜ್ಜಿಯ ಕಥೆಗಳನ್ನು ಕೇಳುತ್ತಾ, ಅವರ ಆಶೀರ್ವಾದದ ನೆರಳಲ್ಲಿ ಬೆಳೆದೆ. ಪ್ರೀತಿಯಿಂದ ಅವರ ಮಡಿಲು ಸೇರಿದೆ. ನನ್ನ ತುಂಟಾಟದಿಂದ ಉಂಟಾಗುತ್ತಿದ್ದ ಕಿರಿ- ಕಿರಿ ಅವರಿಗೆ ತುಸು ಬೇಸರ ತಂದರೂ,ಮರುಕ್ಷಣವೇ ಅದನ್ನು ಮರೆತು,ಅವರ ಕಂಗಳಲ್ಲಿ ನಗು ಮೂಡಿದಾಗ ,ಆ ನಗು ನನ್ನ ತುಟಿಗಳಲ್ಲಿ ಹಾದುಹೋಗುತಿತ್ತು.ಈ ರೀತಿ ನಾನು ಅವರ ಮನದಾಳದಲ್ಲಿ ನೆಲೆಸಿದ್ದೆ.ಇನ್ನೊಂದೆಡೆ, ಕೆಲಸ ಮುಗಿಸಿಕೊಂಡು ಬರುವ ಅಮ್ಮನಿಗಾಗಿಯೆ ಹಾತೊರೆಯುತ್ತಿದ್ದ ನಾನು, ಅವರು ಬಂದಾಕ್ಷಣ ಅವರ ಮಡಿಲು ಸೇರುತ್ತಿದ್ದೆ. ಅವರ ಪ್ರೀತಿಯಲ್ಲಿ,ಅವರ ಕಂಗಳ ನಗುವಿನಲ್ಲಿ ನಾನು ತೇಲಿಹೋಗುತ್ತಿದ್ದೆ. ಅಮ್ಮನ ಬೆಚ್ಚನೆಯ ಅಪ್ಪುಗೆ ಇಂದೂ ಸಹ ಮರೆಯಲಾಗದ ಅನುಭವ.

ಶಿಸ್ತಿನ ಶಾಲಾ ಜೀವನ[ಬದಲಾಯಿಸಿ]

ನಾನು ಚೆನ್ನಾಗಿ ಓದಿ ಒಳ್ಳೆಯ ಪ್ರಜೆಯಾಗಬೇಕೆಂಬುದು ಅಮ್ಮನ ಬಯಕೆಯಾಗಿತ್ತು.ಅದರಂತೆ ನನ್ನನ್ನು "ಅಮರ ಜ್ಯೋತಿ ಆಂಗ್ಲ ಶಾಲೆ"ಗೆ ಸೇರಿಸಿದರು. ಆದ್ದರಿಂದ ಅಲ್ಲಿಯೇ ನನ್ನ ಹತ್ತನೆಯ ತರಗತಿಯನ್ನು, ಐ.ಸಿ.ಎಸ್.ಇ ವಿಭಾಗದಲ್ಲಿ ಪೂರೈಸಿದೆ . ಒಳ್ಳೆಯ ಅಂಕಗಳನ್ನು ಪಡೆದು ನನ್ನ ಶಿಕ್ಷಕರ ಮೆಚ್ಚುಗೆಗೆ ಪಾತ್ರಳಾದೆ.ಈ ನನ್ನ ವ್ಯಾಸಂಗದ ಸಮಯದಲ್ಲಿ, ನಾನು ಆರನೆಯ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ನಲ್ಮೆಯ ಅಜ್ಜಿಯನ್ನು ಕಳೆದುಕೊಂಡೆ.ಆ ನೋವು ಇಂದಿಗೂ ಸಹ ನನ್ನನ್ನು ಕಾಡುತ್ತದೆ.ಅಜ್ಜಿಯ ಕೊರತೆಯನ್ನು ಅಜ್ಜನು ನೀಗಿಸಿದರು. ಪ್ರತಿಯೊಂದಕ್ಕೂ,ಅಜ್ಜನಿಗೆ ಅವಲಂಬಿತಳಾದೆ.ನನ್ನ ಅಜ್ಜನಿಂದ ಪೂರ್ಣ ಪ್ರಮಾಣದ ಸಹಕಾರ ದೊರಕುತ್ತಿತ್ತು. ಇನ್ನೊಂದೆಡೆ ನಾನು ಶಾಲೆಯಲ್ಲಿ ಎಲ್ಲಾ ಗುರುಗಳ ಮೆಚ್ಚುಗೆಗೆ ಪಾತ್ರಳಾಗಿದ್ದೆ.ಕಾರಣ... ನನ್ನ ಓದು ಹಾಗೂ ಎಲ್ಲಾ ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ನನ್ನ ಆಸಕ್ತಿ.ಅದಲ್ಲದೆ ಆ ಶಾಲೆಯು ನನಗೆ ಒಳ್ಳೆಯ ಸ್ನೇಹಿತರನ್ನು ಬಳುವಳಿಯಾಗಿ ನೀಡಿತು.ನನ್ನ ಅಪ್ಪ,ಅಮ್ಮ,ಅಜ್ಜಿ,ಅಜ್ಜ ನನ್ನನ್ನು ಎತ್ತಿ ನಿಲ್ಲಿಸಿ ನಡೆಯಲು ಕಲಿಸಿದರೆ,ಆ ನಡಿಗೆಯನ್ನು ಎಂತಹ ಹಾದಿಯಲ್ಲಿ ಮುಂದುವರಿಸಬೇಕೆಂದು ನನ್ನಯ ಗುರುಗಳು ಕಲಿಸಿದರು. ಒಳ್ಳೆಯ ಹಾದಿಯಲ್ಲಿ ನಡೆಯುವಾಗ ಜೊತೆಯಲ್ಲಿ ನಡೆಯಲು ನನ್ನ ಸ್ನೇಹಿತರು ಕೈ ಜೋಡಿಸಿದರು.

ಮನ ಕಲುಕಿದ ಕ್ಷಣ[ಬದಲಾಯಿಸಿ]

ಹೀಗೆ ನನ್ನ ಪ್ರಾಥಮಿಕ, ಪ್ರೌಢಶಾಲೆ ಮುಗಿಯಿತು.ಆನಂತರ "ಅಮರ ಜ್ಯೋತಿ ಕಾಲೇಜಿಗೆ" ಸೇರಿದೆ. ಪ್ರಥಮ ಪಿ.ಯು.ಸಿ ಓದುವಾಗ ನನ್ನ ಎರಡು ಕಣ್ಣುಗಳಲ್ಲಿ ಒಂದು ಕಣ್ಣಾದ ಹಾಗು ದೇವರ ಸಮಾನರಾದ ನನ್ನ ಅಜ್ಜನನ್ನು ಕಳೆದುಕೊಂಡೆ. ಆಗ ನನ್ನ ಮನಸ್ಸಿಗಾದ ಆಘಾತ ಅಷ್ಟಿಷ್ಟಲ್ಲ. ಈಗಲೂ ಅವರ ಮುದ್ದಾದ ಮಾತು,ಅವರ ನಡವಳಿಕೆ ನನ್ನ ಕಣ್ಣ ಮುಂದಿದೆ. ನನ್ನ ಜೀವವಿರುವ ತನಕ ನನ್ನ ಮುದ್ದಾದ ಅಜ್ಜ-ಅಜ್ಜಿಯನ್ನು ಮರೆಯಲಾರೆ... ಅವರೇ ನನಗೆ ಕಣ್ಣಿಗೆ ಕಂಡಂತ ದೇವರು. ಈಗ ಆ ದೇವರುಗಳು ನಮ್ಮ ಮನೆಯ ಗೋಡೆಯ ಫೋಟೋದಲ್ಲಿದ್ದಾರೆ.ಸೂರ್ಯನು ಭುವಿಗೆ ಬೆಳಕು ಚೆಲ್ಲಿದ್ದಂತೆ,ನನ್ನ ಅಜ್ಜ-ಅಜ್ಜಿಯರು ನನ್ನ ಜೀವನ ಪರ್ಯಂತ ಬೇಕಾಗುವ ಬೆಳಕಿನ ದಾರಿಯನ್ನು ಪಡೆಯುವ ಮಾರ್ಗವನ್ನು ಕಲಿಸಿದ್ದಾರೆ.ಅದರ ಮಾರ್ಗದರ್ಶಕರಾಗಿ ನನ್ನ ತಂದೆ-ತಾಯಿ ಮುಂದಿದ್ದಾರೆ. ಈಗ ನನ್ನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿನ ಸವಾರಿ ಮುಂದುವರೆದಿದೆ.ನನ್ನ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಈ ಕ್ರೈಸ್ಟ್ ವಿಶ್ವವಿದ್ಯಾನಿಲಯವನ್ನು ಮನಃಸ್ಪೂರ್ವಕವಾಗಿ ಆರಿಸಿಕೊಂಡಿದ್ದೇನೆ.ಈ ನನ್ನ ಸಾಧನೆಯ ಪಥದಲ್ಲಿ ,ನನ್ನ ಎಲ್ಲಾ ಶಿಕ್ಷಕ ವೃಂದದವರೂ ಹಾಗು ನನ್ನ ಸ್ನೇಹಿತರು ನನಗೆ ಪ್ರೋತ್ಸಾಹಿಸುತ್ತಾರೆಂದು ನಂಬಿರುತ್ತೇನೆ.

This user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
CHANDINI.B