ಸದಸ್ಯ:Boss yathin

ವಿಕಿಪೀಡಿಯ ಇಂದ
Jump to navigation Jump to search

ನಾನು ನನ್ನ ಬದುಕು

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಯತೀನ್, ನನ್ನ ತಂದೆಯ ಹೆಸರು ಅರಳಿ ಕುಮಾರ್, ನನ್ನ ತಾಯಿಯ ಹೆಸರು ನಾಗರತ್ನ ಆಗಿರುತ್ತಾರೆ. ನಾನು ಹುಟ್ಟಿದು ಬೆಂಗಳೂರಿನಲ್ಲಿ, ದಿನಾಂಕ ೧೮/೯/೧೯೯೯. ನನ್ನ ಬಾಲ್ಯದ ಬದುಕು ತುಂಬಾ ಸಂತೋಷದಿಂದ ಇತ್ತು. ನಮ್ಮ್ತಕುಟುಂಬವು ೫ ಜನರಿಂದ ಕೂಡಿದ್ದು ತುಂಬ ಸಂತೋಷವಾಗಿದೆ. ತಾಯಿ, ತಾತ-ಅಜ್ಜಿಯ ಜೊತೆಗೆ ಮಮತೆ ವಾತ್ಸಲ್ಯವನ್ನು ಹೀರಿ ಬೆಳೆದ ಜೀವ ನನ್ನದು. ಹಾಗಾಗಿ ನಿಜವಾದ ಪ್ರೀತಿ ಎಂದರೇನು ಎಂಬುದರ ಅರಿವು ನನಗಿದೆ.. ನನಗೆ ಒಬ್ಬ ತಮ್ಮನಿದ್ದಾನೆ, ಹೆಸರು ಪ್ರವೀನ್

ಶಾಲಾ ದಿನಗಳು[ಬದಲಾಯಿಸಿ]

Singing.jpg
YOGASANA.jpg

ನಾನು ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಚುರುಕುತನದಿಂದ ಕೂಡಿದ್ದ ಒಬ್ಬ ಬುದ್ದಿವಂತ ವಿದ್ಯಾರ್ಥಿ ಆಗಿದ್ದೆ. ಪಾಠದಲ್ಲಿ ನನ್ನ ಆಸಕ್ತಿಗಳು ವಿಶೇಷವಾಗಿತ್ತು. ನಾನೊಬ್ಬ ಉತ್ತಮ ಕ್ರೀಡಾಪಟುವಾಗಿದ್ದೆ ಹಾಗು ಉತ್ತಮ ಭಾಷಣಕಾರನಾಗಿಯೂ ಬಹುಮಾನವನ್ನು ಪಡೆದ ನೆನಪು ಇಂದಿಗೂ ಹಸಿರಾಗಿಯೆ ಇರುತ್ತದ್ದೆ. ನಾನು ಖೋ ಖೋ ಮತ್ತು ಥ್ರೋಬಾಲ್ನಲ್ಲಿ ಜಿಲ್ಲಾ ಮಟ್ಟದ ಆಟಗಾರನಾಗಿ ಮೂರು ಬಾರಿ ಎರಡನೇ ಬಹುಮಾನವನ್ನು ಪಡೆದ ಆಟಗಾರನಾಗಿದ್ದೆ.ನಾನು ಗಾಯನ ಮತ್ತು ನಟನೆಯಲ್ಲಿಯೂ ಪರಿಣತನಾಗಿದ್ದೆ. ನಂತರ ನಾನು ನನ್ನ ವಿದ್ಯಾರ್ಥಿ ನಿಲಯದ ದಿನಗಳಲ್ಲಿ ಶಿಸ್ತಿನ ದಿನಚರಿಯನ್ನು ಪಾಲಿಸುತ್ತಿದ್ದೆ. ಅಲ್ಲಿ ನಾನು ಯೋಗ, ಪ್ರಾರ್ಥನೆ, ಅಧ್ಯಯನ ಮತ್ತು ಆಟವಾಡುವ ಅಭ್ಯಾಸವನ್ನು ರೂಡಿಸಿಕೊಂಡಿದ್ದೆ.

ಹಾಸ್ಟಲ್ ಜೀವನ[ಬದಲಾಯಿಸಿ]

ನಾವು ಹಾಸ್ಟೆಲ್ನಲ್ಲಿ ಸಂತೋಷವಾಗಿ ಸಮಯವನ್ನು ಕಳೆಯುತ್ತಿದ್ದೆವು. ನಾವು ಶಿಕ್ಷಕರ ಬಗ್ಗೆ ಗೇಲಿ ಮಾಡುತಿದ್ದೆವು. ಒಮ್ಮೆ ನಾನು ನನ್ನ ಹಾಸ್ಟೆಲ್ ವಾರ್ಡನ್ ಅನ್ನು ಹೊಡೆದಿದ್ದರಿಂದ ಆದ್ದರಿಂದ ಒಂದು ವಾರದವರೆಗೆ ಅಮಾನುತನಾಗಿದ್ದೆ. ಅಲ್ಲಿ ನಾವು ನಮ್ಮ ಸ್ವಂತ ಕೆಲಸವನ್ನು ಮಾಡಬೇಕಿತ್ತು. ರಜಾದಿನಗಳಲ್ಲಿ ನಾನು ನನ್ನ ಮನೆಗೆ ಹಿಂತಿರುಗಿ ನನ್ನ ಸ್ನೇಹಿತರೊಂದಿಗೆ ಆನಂದಿಸುತ್ತಿದ್ದೆ. ನಮ್ಮ ಹಾಸ್ಟೆಲ್ನಲ್ಲಿ ನಾವು ಉತ್ತಮ ಶಿಕ್ಷಕರನ್ನು ಹೊಂದಿದ್ದೇವು, ಇದು ನನ್ನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನನಗೆ ಸಹಾಯ ಮಾಡಿತು.ಗುರುಕುಲ ಪದ್ದತಿಯ ವಿದ್ಯಾಲಯದಲ್ಲಿ ನನ್ನ ಪದವಿಪೂರ್ವ ಶಿಕ್ಷಣ ನೆಡೆದಿರುವುದರಿಂದ ನನ್ನ ಶಿಸ್ತಿಗೆ, ಗುರಿಗೆ ಹಾಗೂ ನನ್ನ ಬದುಕಿಗೆ ಹೆಚ್ಚು ಸಹಾಯವಾಯಿತು.

ಗುರಿ[ಬದಲಾಯಿಸಿ]

Christuniversityblock1.jpg

ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಬೇಕೆಂಬ ನನ್ನ ಆಶಯದ ಪ್ರಕಾರ, ನನಗೆ ಒಳ್ಳೆಯ ಮನಸ್ಸು ಇದೆ ಎಂದು ನಾನು ಭಾವಿಸುತ್ತೇನೆ ಮತ್ತು ಭವಿಷ್ಯದಲ್ಲಿ ನನ್ನ ಗುರಿಗಳನ್ನು ಸಾಧಿಸುವ ವಿಶ್ವಾಸವನ್ನು ನಾನು ಹೊಂದಿದ್ದೇನೆ. ಹೀಗೆ ನನ್ನ ಬಾಲ್ಯ ತುಂಬಾ ಸೊಗಸಾಗಿತ್ತು ಹಾಗು ಒಳ್ಳೆಯ ನೆನಪುಗಳಿಂದ ಕೂಡಿತ್ತು ನಾನು ಈಗ ಕ್ರೈಸ್ಟ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದೀನಿ ನನಗೆ ಮೊದಲು ಕಾಲೇಜಿಗೆ ಬರಲು ಇಷ್ಟ ಇರಲ್ಲಿಲ ಆದರೆ ಇಗ ಗೆಳೆಯರೊಂದಿಗೆ ಸೇರಿ ತುಂಬ ಸಂತಸ ಪಡುತ್ತೇನೆ. ನಾನು ಬಿಡುವಿನ ಸಮಯದಲ್ಲಿ ಎಲ್ಲಾ ನನ್ನ ಸ್ನೇಹಿತರೊಡನೆ ಕೂಡಿ ಸಮಯವನ್ನು ಕಳೆಯುತ್ತೇನೆ. ನನ್ನ ಗುರಿ ಬ್ಯಾಂಕ್ ಮಾನೇಜರ್ ಆಗಬೇಕು.ನನ್ನ ತಂದೆ ,ತಾಯಿಯನ್ನು ಸುಖವಗಿ ನೋಡಿಕೊಳ್ಳುತ್ತೇನೆ.