ಸದಸ್ಯ:Bhavana Jain/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವನೆ

ಶಿವನೆ ಒಂದು ಔಷಧೀಯ ಮರ. ಈ ಮರವು ಅತೀ ವೇಗವಾಗಿ ಬೆಳೆಯುವ ಮರವಾಗಿದ್ದು ಹೆಚ್ಚು ಮಳೆ ಬೀಳುವ ಕಣಿವೆಗಳಲ್ಲಿ ಸುಮಾರು 30 ಮೀ ಎತ್ತರ ಬೆಳೆಯುತ್ತದೆ. ಕಾಂಡದ ಸುತ್ತಳತೆ 1-5 ಮೀಟರ್ ದಪ್ಪ ಇರುತ್ತದೆ. ಇದರ ದಪ್ಪಗಿನ ಕಂದು ಬಣ್ಣದ ತೊಗಟೆಯ ಮೇಲೆ ಬಿಳಿಯ ಬಣ್ಣದ ಮಚ್ಚೆಗಳು ಕಾಣುತ್ತದೆ. ಬೇಸಿಗೆ ಕಾಲದಲ್ಲಿ ಎಲೆಗಳು ಉದುರಿದಾಗ ರೆಂಬೆಗಳ ಕೊನೆಯಲ್ಲಿ ಕಿರಿದಾದ ಕೊಂಬೆಗಳಲ್ಲಿ ಎರಡು ದಳಗಳಿರುವ ಕಂದು ಬಣ್ಣ ಲೇಪಿತ ಹಳದಿ ಬಣ್ಣದ ಹೂವುಗಳ ಗೊಂಚಲು ಕಾಣಸಿಗುತ್ತದೆ.


ಇತರ ಹೆಸರುಗಳು[ಬದಲಾಯಿಸಿ]

ಕಾಶ್ಮೀರಿ ಮರ, ಗಮಾರಿ, ಕೂಲಿ ಮರ

ಉಪಯೋಗಗಳು[ಬದಲಾಯಿಸಿ]

1. ಬೇರು ಮತ್ತು ತೊಗಟೆಯ ಕಷಾಯವು ಹಾವು ಕಚ್ಚಿರುವ ವ್ಯಕ್ತಿಯು ಸೇವಿಸಿದರೆ ವಿಷದಿಂದ ಆಗುವ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ,

2. ಎಳೆಯ ಎಲೆಗಳ ರಸವನ್ನು ಕೆಮ್ಮಿನ ತೊಂದರೆ ಇರುವವರು ಉಪಯೋಗಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

[೧][೨]

  1. ವನಸಿರಿ, ಅಜ್ಜಂಪುರ ಕೃಷ್ಣಸ್ವಾಮಿ, ನವಕರ್ನಾಟಕ ಪಬ್ಲಿಕೇಶನ್ ಪ್ರೈವೆಟ್ ಲಿಮಿಟೆಡ್
  2. ವನಸಿರಿ ದರ್ಪಣ, ಮಹರ್ಷಿ ಡಾ. ಆನಂದ ಗುರೂಜಿ, ಶ್ರೀನಿಧಿ ಪಬ್ಲಿಕೇಶನ್, ಭಾಗ-೩