ಸದಸ್ಯ:Bhavana Jain/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್ಜು[ಬದಲಾಯಿಸಿ]

ವ್ಶೆಜ್ಞಾನಿಕ ಹೆಸರು : ವಟೇರಿಯಾಇಂಡಿಕ

ಸಾಮ್ರಾಜ್ಯ : ಪ್ಲಾಂಟ

ಕುಟುಂಬ :ಡಿಪ್ಟೆರೋಕಾರ್ಪೇಸ್

ಇತರ ಹೆಸರು : ಸಾಲುಧೂಪ, ಧೂಪದ ಮರ, ಬಿಳಿ ಗುಗ್ಗುಲ, ಬಿಳಿ ಡಾಮರ್

ವಿವರಣೆ[ಬದಲಾಯಿಸಿ]

ಇದು ಡಿಪ್ಟೆರೋಕಾರ್ಪೇಸಿಯ ಕುಟುಂಬದಲ್ಲಿಒಂದು ಜಾತಿಯ ಸಸ್ಯವಾಗಿದೆ. ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣ ಮರ. ಈ ಮರವು ಸುಮಾರು 30 ಮೀ ಎತ್ತರವಾಗಿದ್ದು, ತೊಗಟೆ 10-12 ಮಿ.ಮೀ.ಇರುತ್ತದೆ.ಉರುಳೆಯಾಕಾರದ ಕಾಂಡ; 6ಮೀ.ಸುತ್ತಿನ ಬೆಳವಣಿಗೆ ಕಾಣುತ್ತದೆ.ಇದು ಬೂದು ಬಣ್ಣದ ನಯವಾದ ತೊಗಟೆಯನ್ನು ಹೊಂದಿದೆ.ಸಾಮಾನ್ಯವಾಗಿ 40-60 ಮೀ.ಎತ್ತರದವರೆಗೆ ಬೆಳೆಯುತ್ತದೆ.ಬೀಜದ ಜೀವಶಕ್ತಿ ಕಡಿಮೆ, ಹೆಚ್ಚೆಂದರೆ 3 ವಾರದವರೆಗೆ ಇರುತ್ತದೆ.ಎಲೆಗಳು ಸರಳವಾಗಿದ್ದೂ ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತದೆ.ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ದಟ್ಟವಾದ ಹಳದಿ ಬಣ್ಣದಿಂದ ಕೂಡಿರುತ್ತವೆ. ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.ಕರ್ನಾಟಕದ ಪಶ್ಚಿಮ ಘಟ್ಟದ ಅರಣ್ಯ ಭಾಗಗಳ 200-500 ಸೆಂ.ಮೀ.ಮೇಲ್ಪಟ್ಟು ಮಳೆ ಬೀಳುವ ಪ್ರದೇಶಗಳಲ್ಲಿ ಇದು ವ್ಯಾಪಿಸಿದೆ.ಜನವರಿ-ಮಾರ್ಚ್ ತಿಂಗಳುಗಳಲ್ಲಿ ಹೂವರಳಿ, ಮೇ-ಜುಲೈನಲ್ಲಿ ಕಾಯಿಗಳು ಬಲಿಯುತ್ತದೆ.ಬೀಜಗಳು ತಾಯಿಮರಗಳ ಸಮೀಪ ಆಸುಪಾಸು ಉದುರಿದ್ದು, ಬೇಗ ಮೊಳೆತು ಸಾಕಷ್ಟು ಸಸಿಗಳು ಮರದ ಸುತ್ತಮುತ್ತ ಕಂಡು ಬರುತ್ತದೆ.ದಕ್ಷಣಕನ್ನಡ ಭಾಗಗಳಲ್ಲಿ ಸಾಮಾನ್ಯವಾಗಿ ಇದನ್ನು ಸಾಲುಮರವಾಗಿ ಬೆಳೆಸುತ್ತಾರೆ.[೧][೨][೩][೪][೫]

ಉಪಯೋಗಗಳು[ಬದಲಾಯಿಸಿ]

  1. “ಬಿಳಿ ಡಾಮರ್” ಎಂದು ವಾಣಿಜ್ಯರಂಗದಲ್ಲಿ ಕರೆಯಲ್ಪಡುವ ಅಂಟುರಾಳವು ಈ ಮರದಿಂದ ಉತ್ಪನ್ನವಾಗುತ್ತದೆ.
  2. ಆಯುರ್ವೇದ ಔಷಧವಾಗಿ ಬಳಸಲಾಗುತ್ತದೆ.
  3. ಬೀಜದಿಂದಎಣ್ಣೆಯನ್ನುತಯಾರಿಸಲಾಗುತ್ತದೆ.
  4. ರಾಳವನ್ನು ಧೂಪದ್ರವ್ಯವಾಗಿ ಬಳಸುತ್ತಾರೆ.
  5. ಇದನ್ನು ಕೈಗಾರಿಕಾ ಕ್ಷೇತ್ರದಲ್ಲಿ , ಪದರ ಹಲಗೆ ಹಾಗೂ ಬೆಂಕಿಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸುತ್ತಾರೆ.
  6. ಭೇದಿ ಜ್ವರ, ಕರುಳು-ಯೋನಿ ಸೋಂಕುಗಳು ಹಾಗೂ ಸಂಧಿವಾತದ ಊತದ ನಿವಾರಣೆಗೆ ಇದರ ಕಷಾಯ ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ವನಸಿರಿ. ಅಜ್ಜಂಪುರ ಕೃಷ್ಣಸ್ವಾಮಿ. ಸ್ವರ್ಣಾಂಬ ಪಬ್ಲಿಕೇಶನ್
  2. https://en.wikipedia.org/wiki/Vateria_indica
  3. http://www.biotik.org/india/species/v/vateindi/vateindi_en.html
  4. http://tropical.theferns.info/viewtropical.php?id=Vateria+indica
  5. http://vikaspedia.in/agriculture/crop-production/package-of-practices/medicinal-and-aromatic-plants/vateria-indica