ಸದಸ್ಯ:BeeviFazlaV.K/ನನ್ನ ಪ್ರಯೋಗಪುಟ
ಬುರುಡೆ ಜಲಪಾತ ಅಥವಾ ಬುರುಡೆ ಜೋಗ ಅಥವಾ ದೊಡ್ಡಮನೆ ಜಲಪಾತವು [೧] ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಸುಮಾರು ೯೦ ಮೀ. ಎತ್ತರದಿಂದ ಧುಮುಕುತ್ತದೆ. ಇಲ್ಲಿ 'ಇಳ್ಳಿಮನೆ' ಎಂಬ ಹಳ್ಳಿಯಿರುವುದರಿಂದ ಇದಕ್ಕೆ 'ಇಳ್ಳಿಮನೆ ಜಲಪಾತ' ಎಂದೂ ಕರೆಯುತ್ತಾರೆ.ಇಳ್ಳಿಮನೆ ಹೊಳೆಯಿಂದ ಹರಿದು ಬಂದ ನೀರು ಇಲ್ಲಿ ಧುಮ್ಮಿಕ್ಕಿ ನಂತರ ಅಘನಾಶಿನಿ ನದಿ ಸೇರುತ್ತದೆ.
ಸಿದ್ದಾಪುರದಿಂದ ಸುಮಾರು ೨೮ ಕಿಲೋಮೀಟರ್ ದೂರದಲ್ಲಿದು, ಸಿದ್ಧಾಪುರ-ಕುಮಟಾ ಮಾರ್ಗದ ಮಧ್ಯೆ ಅಳ್ಳಿಮಕ್ಕಿ ಎಂಬಲ್ಲಿಂದ ಮಾರ್ಗ ಬದಲಿಸಿಕೊಂಡು ಸುಮಾರು 3 ಕಿ.ಮೀ. ಬುದಗಿತ್ತಿ ಎಂಬ ಹಳ್ಳಿಯವರೆಗೆ ಮಾರ್ಗ ಸರಿಯಾಗಿದ್ದು ವಾಹನದಲ್ಲಿ ಅಲ್ಲಿಯವರೆಗೂ ಹೋಗಬಹುದು.[೨] (ಅಥವಾ ಸಿದ್ದಾಪುರದಿಂದ ಹೊರಟು ಕ್ಯಾದಗಿ ಊರು ತಲುಪಿ ನಂತರ ಒಳಗೆ ಬೂದಗಿತ್ತಿ ಊರನ್ನು ತಲುಪಬೇಕು). ಅನಂತರ ಅಲ್ಲಿಂದ ಕಾಲುನಡಿಗೆಯಲ್ಲಿ ಹೋಗಬೇಕು ನಂತರ ಸುಮಾರು ೧೦೦ ಮೆಟ್ಟಿಲುಗಳನ್ನು ಇಳಿದು ಗಿಡಮರಗಳ ಬೇರುಗಳ ಸಹಾಯದೊಂದಿಗೆ ಕೆಳಗೆ ಇಳಿಯಬಹುದು.
ಬುರುಡೆ ಜಲಪಾತವು ಎರಡು ಭಾಗವಾಗಿ ಹರಿಯುತ್ತದೆ.ಜಲಪಾತವು ತುಂಬ ಬಂಡೆಕಲ್ಲು ಹಾಗು ರಭಸದಿಂದ ಹರಿಯುವುದರಿಂದ ಈಜಲು ಅನುಕೂಲವಲ್ಲ ಆದರಿಂದ ಅಪಾಯಕಾರಿಯು ಆಗಿರುತ್ತದೆ.ಈ ಜಲಪಾತಕ್ಕೆ ಹೋಗಲು ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭ ಕಾಲ. ಯಾಕೆಂದರೆ ಮಳೆಗಾಲದಲ್ಲಿ ಕಣಿವೆಯನ್ನು ದಾಟುವುದು ಅಸಾಧ್ಯ. ಆದರಿಂದ ಈ ಫಾಲ್ಸ್ ನೋಡಲು ನವಂಬರ್‌ನಿಂದ ಮೇ ತಿಂಗಳವರೆಗೆ ಮಾತ್ರ ಸಾಧ್ಯ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿ ಚಾರಣ ನಡೆಸುವುದಕ್ಕೆ ಅನುಕೂಲವಾಗುವಂತೆ ಸಣ್ಣ ನಾಲೆಯೂ ಇದೆ. ಜಲಪಾತದ ಹತ್ತಿರ ಹಲವು ಮೈನ, ಬುಲ್ ಬುಲ್ ಇತರ ಪಕ್ಷಿಗಳು ಕಾಣಲು ಸಿಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]ಹೊರಕೊಂಡಿಗಳು
[ಬದಲಾಯಿಸಿ]- ಕನ್ನಡ ನೇಟಿವ್ ಪ್ಲಾನೆಟ್
- BURUDE FALLS-UTTARA KANNADA, ಸುತ್ತೋಣಬನ್ನಿ.ಕಾಂ
- burude falls, ಡ್ರೀಮ್ ರೂಟ್ಸ್