ವಿಷಯಕ್ಕೆ ಹೋಗು

ಸದಸ್ಯ:AshlinG 164/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ತ್ರೀವಾದ


ಪರಿಚಯ

[ಬದಲಾಯಿಸಿ]

ಸ್ತ್ರೀವಾದವು ರಾಜಕೀಯ ಚಳುವಳಿಗಳ ಸಿದ್ಧಾಂತಗಳು ಮತ್ತು ಸಾಮಾಜಿಕ ಚಳುವಳಿಯಾಗಿದ್ದು, ರಾಜಕೀಯ, ಆರ್ಥಿಕ, ವೈಯಕ್ತಿಕ ಮತ್ತು ಸಾಮಾಜಿಕ ಸಮಾನತೆಗಳನ್ನು ಸ್ಥಾಪಿಸುವ ಮತ್ತು ಸಾಧಿಸುವ ಗುರಿಯನ್ನು ಹೊಂದಿದೆ . ಇದು ಋಣಾತ್ಮಕ ವರ್ತನೆ ಅಲ್ಲ ಆದರೆ ಪುರುಷರು ಮತ್ತು ಮಹಿಳೆಯರ ನಡುವಿನ ಸಮಾನತೆಯನ್ನು ತರುವುದು.[] []ಸ್ತ್ರೀವಾದವನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಲಾಗುತ್ತದೆ. ಇದು ಏನೂ ಅಲ್ಲ ಆದರೆ ಸಮಾನತೆಯ ಅರ್ಥ. ಸ್ತ್ರೀಯರಿಗೆ ಸಮಾನವಾದ ಮತ್ತು ವಿಭಿನ್ನ ಅವಕಾಶಗಳನ್ನು ಹುಡುಕುವ ಹೊಸ ವಿಧಾನವಾಗಿದೆ. ಮಹಿಳೆಯರಿಗೆ ಹೆಚ್ಚಿನ ಮಟ್ಟದಲ್ಲಿ ಹಾರಲು ಮತ್ತು ತನ್ನ ಗುರಿಯನ್ನು ತಲುಪಲು ಇದು ರೆಕ್ಕೆಗಳನ್ನು ನೀಡುತ್ತದೆ. ಅದು ಯಾವುದೇ ಮಿತಿಯಿಲ್ಲದೆ ತನ್ನ ತೆರೆದ ಸ್ಥಳವನ್ನು ನೀಡುತ್ತದೆ, ಇದರಿಂದಾಗಿ ಅವಳು ತನ್ನ ಹಾದಿಯಲ್ಲಿ ಏನಾದರು ಸಾಧಿಸಬಹುದು. ಸ್ತ್ರೀವಾದವು ಸಾರ್ವಜನಿಕ ಮತದಾನ, ಕೆಲಸ ಮಾಡಲು, ನ್ಯಾಯಯುತ ವೇತನ, ಸಮಾನ ವೇತನ,ಒಪ್ಪಂದಗಳಿಗೆ ಪ್ರವೇಶಿಸಲು, ಮದುವೆಗೆ ಸಮನಾದ ಹಕ್ಕುಗಳನ್ನು ಹೊಂದಲು ಮತ್ತು ಮಾತೃತ್ವ ಹಕ್ಕು ಹೊಂದಲು ಸಹಾಯವಾಗುತ್ತದೆ.[]ಇದು ಮಹಿಳೆಯರು ಮತ್ತು ಹುಡುಗಿಯರನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ವಾಣಿಜ್ಯ ದೃಷ್ಟಿಕೋನದಲ್ಲಿ ಸ್ತ್ರೀವಾದ ಬಹಳ ಮುಖ್ಯ.

ವಾನಿಜ್ಯ ವ್ಯವಹಾರ

[ಬದಲಾಯಿಸಿ]

ವಿಶ್ವದ ಅಭಿವೃದ್ದಿ ಬದಲಾಗುತ್ತಿದ್ದರೂ ಸಹ, ವಾಣಿಜ್ಯ ಕ್ಷೇತ್ರದಲ್ಲಿ ಮಹಿಳೆಯರ ಬೆಳವಣಿಗೆಯ ಕೊರತೆಯಿದೆ. ಇಂದು ಅನೇಕ ಮಹಿಳಾ ಉದ್ಯಮಗಳೂ ಇವೆ,ಇದು ಮಹಿಳೆಯರನ್ನು ಅವರ ಕನಸು ಸ್ಥಾಪಿಸಲು ಮತ್ತು ಅವರ ಗುರಿಗಳನ್ನು ಸಾಧಿಸಲು ಪ್ರೋತ್ಸಾಹಿಸುತ್ತದೆ. ಇದಕ್ಕಾಗಿ ಅಗತ್ಯವಾದ ಸಹಾಯವನ್ನು ಅವರು ಸಹ ಒದಗಿಸುತ್ತಿದ್ದಾರೆ. ಆದರೆ ಜನರು ಸ್ತ್ರೀವಾದವನ್ನು ಬಹಳಷ್ಟು ತಪ್ಪಾಗಿ ಗ್ರಹಿಸುತ್ತಾರೆ. ಸ್ತ್ರೀವಾದವು ಮಹಿಳಾ ಸಬಲೀಕರಣದ ಬಗ್ಗೆ ಹೊರತು ಮಹಿಳೆಯರು ನನ್ನನ್ನು ಮೀರಿಸಬೇಕೆಂದು ಅರ್ಥವಲ್ಲ ಹಾಗಾಗಿ ಇದು ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆಯನ್ನು ತರಲು ಪ್ರಯತ್ನಿಸುತ್ತದೆ.ವಿಶ್ವದಾದ್ಯಂತ ಮಹಿಳಾ ಹಕ್ಕುಗಳ, ವಿಶೇಷವಾಗಿ ಪಶ್ಚಿಮದಲ್ಲಿ ಮಹಿಳಾ ಮತದಾರರ ಸಾಧನೆಗೆ ಪ್ರಮುಖ ಪಾತ್ರವಹಿಸಿದ್ದು ಸ್ತ್ರೀವಾದಿ ಅಭಿಯಾನಗಳು ಎಂದು ಕೆಲವು ಪ್ರಮುಖ ವಿದ್ವಾಂಸರು ಪರಿಗಣಿಸಿದ್ದಾರೆ.ಬೆಲ್ ಹುಕ್ಸ್ ಸೇರಿದಂತೆ ಕೆಲವು ಸ್ತ್ರೀವಾದಿಗಳು ಪುರುಷರ ವಿಮೋಚನೆಗಳನ್ನು ಅದರ ಉದ್ದೇಶಗಳಲ್ಲಿ ಸೇರಿಸಿಕೊಳ್ಳಬೇಕೆಂದು ವಾದಿಸುತ್ತಾರೆ ಏಕೆಂದರೆ ಪುರುಷರು ಸಾಂಪ್ರದಾಯಿಕ ಲಿಂಗ ಪಾತ್ರಗಳಿಂದ ಕೂಡಾ ಹಾನಿಗೊಳಗಾಗುತ್ತಾರೆ ಎಂದು ನಂಬುತ್ತಾರೆ.

ಸಮಾಜ ನಿರ್ಮಾಣಕಾರ ಸಿದ್ಧಾಂತಗಳು

[ಬದಲಾಯಿಸಿ]

ಸ್ತ್ರೀಸಮಾನತಾವಾದಿ ಚಳುವಳಿಗಳಿಂದ ಹುಟ್ಟಿಕೊಂಡ ಸ್ತ್ರೀವಾದಿ ಸಿದ್ಧಾಂತವು, ಮಹಿಳೆಯರ ಸಾಮಾಜಿಕ ಪಾತ್ರಗಳನ್ನು ಪರಿಶೀಲಿಸುವ ಮತ್ತು ಲಿಂಗ ಅಸಮಾನತೆಯ ಸ್ವಭಾವವನ್ನು ಅರ್ಥೈಸುವ ಗುರಿ ಹೊಂದಿದೆ.ಅನೇಕ ಸ್ತ್ರೀವಾದಿ ಚಳುವಳಿಗಳು ಮತ್ತು ಸಿದ್ಧಾಂತಗಳು ವರ್ಷಗಳಿಂದ ಅಭಿವೃದ್ಧಿ ಹೊಂದಿದ್ದು ವಿವಿಧ ದೃಷ್ಟಿಕೋನಗಳು ಮತ್ತು ಗುರಿಗಳನ್ನು ಪ್ರತಿನಿಧಿಸುತ್ತವೆ.

ಸ್ತ್ರೀವಾದದ ಕೆಲವು ಪ್ರಕಾರಗಳು ಕೇವಲ ಬಿಳಿ, ಮಧ್ಯಮ ವರ್ಗದ ಮತ್ತು ಕಾಲೇಜು-ವಿದ್ಯಾಭ್ಯಾಸದ ದೃಷ್ಟಿಕೋನಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದಾರೆ ಎಂದು ಟೀಕಿಸಲಾಗಿದೆ.

ಸಮಾಜ-ತಜ್ಞ ಆರ್ಲಿ ರಸೆಲ್ ಕಂಡುಕೊಂಡ ಪ್ರಕಾರ, ಒಂದು ವೃತ್ತಿಜೀವನದ ದಂಪತಿಗಳು ಇಬ್ಬರು ಸರಾಸರಿಯಾಗಿ ಕೆಲಸ ಮಾಡುತ್ತಾರೆ, ಆದರೆ ಮಹಿಳೆಯರು ಈಗಲೂ ಕೂಡ ಮನೆಕೆಲೆಸದ ಮೇಲೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಸ್ತ್ರೀವಾದವು ೨೦ನೇ ಶತಮಾನದಲ್ಲಿ ಮಹಿಳೆಯರಿಗೆ ಪ್ರಮುಖ ಸ್ಥಾನವನ್ನು ಮತ್ತು ಪುರುಷರಿಗೆ ಸಮಾನರಾಗುವಂತೆ ಎಲ್ಲಾ ತರಹದ ಅವಕಾಶಗಳನ್ನು ತಂದು ಕೊಟ್ಟಿದೆ.

ಉಲ್ಲೇಖ

[ಬದಲಾಯಿಸಿ]
  1. https://en.wikipedia.org/wiki/Special:BookSources/9780742537835
  2. https://en.wikipedia.org/wiki/Special:BookSources/9780761963356
  3. https://en.wikipedia.org/wiki/Special:BookSources/978-0-8166-1787-6