ಸದಸ್ಯ:Archana HN/ನನ್ನ ಪ್ರಯೋಗಪುಟ
ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ಪ್ರತೀ ವರ್ಷವು ಭಾರತದ ೧೬ ವರ್ಷದ ಒಳಗಿನ ೨೫ ಮಕ್ಕಳಿಗೆ ನೀದಲಾಗುತ್ತದೆ.[೧] ಈ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ಮತ್ತು ಐಸಿಸಿಡಬ್ಲ್ಯು(ಇಂಡಿಯನ್ ಕೌಂಸಿಲ್ ಫಾರ್ ಚೈಲ್ದ್ರಾ ವೆಲ್ಫೇರ್ ) ಕಡೆಯಿಂದ ನೀಡಲಾಗುತ್ತದೆ.ಈ ಪ್ರಶಸ್ತಿಯು ೧೯೫೭ರಲ್ಲಿ ಸ್ಥಾಪನೆಯಾಯಿತು.
ಪ್ರಶಸ್ತಿಯ ಮಾಹಿತಿಗಳು
[ಬದಲಾಯಿಸಿ]ಈ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯ ೫ ವಿಭಾಗಗಳು
- ಭಾರತ್ ಪ್ರಶಸ್ತಿ
- ಗೀತ ಚೋಪ್ರ ಪ್ರಶಸ್ತಿ
- ಸಂಜಯ್ ಚೋಪ್ರ ಪ್ರಶಸ್ತಿ
- ಭಾಪು ಗೈದನಿ ಪ್ರಶಸ್ತಿ
- ಸಾಧಾರಣ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಪ್ರಾರಂಭವಾದ ರೀತಿ
[ಬದಲಾಯಿಸಿ]೨ ಅಕ್ಟೋಬರ್ ೧೯೫೭ರ ಗಾಂಧಿಜಯಂತಿಯಂದು ಭಾರತದ ಮೊದಲ ಪ್ರಧಾನಮಂತ್ರಿಗಳಾದ,ಜವಹರಲಾಲ್ ನೆಹರುರವರು ಡೆಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿದ್ದ ಆಚರಣೆಯನ್ನು ವೀಕ್ಷಿಸುವ ಸಮಯದಲ್ಲಿ ಶಾರ್ಟ ಸರ್ಕ್ಯೂಟ್ ಕಾರಣದಿಂದ ಬೆಂಕಿಯ ಅವಗಡದಿಂದ ಟೆಂಟ್ ನಾಶವಾಗತ್ತಿರುವ ಸಂದರ್ಭದಲ್ಲಿ ಹರೀಶ್ ಚಂದ್ರ ಮೆಹ್ರಾ,೧೪ ವರ್ಷದ ಸ್ಕೌಟ್ ಧೈರ್ಯದಿಂದ ಚಾಕು ತೆಗೆದುಕೊಂಡು ಉರಿಯುತ್ತಿರುವ ಟೆಂಟ್ ಅನ್ನು ತೆಗೆದು ಸಿಲುಕಿದ್ದ ನೂರು ಜನರ ಪ್ರಾಣಗಳನ್ನು ಉಳಿಸಿದನು. ಈ ಘಟನೆಯಿಂದ ಪ್ರಧಾನಿಯವರು ಅಧಿಕಾರಿಗಳಿಗೆ ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸುವಂತೆ ಹೇಳಿದರು. ಮೊದಲ ಅಧಿಕೃತ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯು ಹರೀಶ್ ಚಂದ್ರ ಮತ್ತು ಮತ್ತೊಬ್ಬ ಪ್ರಶಸ್ತಿನಿಗೆ ೪ ಫೆಬ್ರವರಿ ೧೯೫೮ರಲ್ಲಿ ನೀಡಲಾಯಿತು.[೨] ಈ ರೂಢಿಯನ್ನು ಐಸಿಸಿಡಬ್ಲ್ಯು ಅಂದಿನಿಂದ ಮುಂದುವರೆಸಿತು.ಸಂಜಯ್ ಚೋಪ್ರ ಪ್ರಶಸ್ತಿ ಮತ್ತು ಗೀತಾ ಚೋಪ್ರ ಪ್ರಶಸ್ತಿಯು ೧೯೭೮ ರಲ್ಲಿ ಸ್ಥಾಪನೆಯಾಯಿತು.