ಸದಸ್ಯ:Ambika367/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧][೨][೩][೪] ಸ್ವಾಮೀ ಭಾರತೀ ಕೃಷ್ಣ ತೀರ್ಥ (ಸಂಸ್ಕೃತ: जगद्गुरु स्वामि श्री भारती कृष्ण तीर्थजी महाराज; ಮಾರ್ಚ್ 1884 - 1960 ಫೆಬ್ರವರಿ 2) ೧೯೨೫ರಿಂದ ೧೯೬೦ರ ವರೆಗೆ ಒರಿಸ್ಸಾದ ಪುರಿಯ [[ಗೋವರ್ಧನ ಮಠ]]ದ ಶಂಕರಾಚಾರ್ಯರಾಗಿದ್ದರು. ಅವರು ವಿಶೇಷವಾಗಿ ತಮ್ಮ ಪುಸ್ತಕ ವೈದಿಕ ಗಣಿತಕ್ಕಾಗಿ ಪರಿಚಿತರಾಗಿದ್ದಾರೆ. ವೆಂಕಟರಮಣ ಶಾಸ್ತ್ರಿಗಳ ಜನ್ಮ ಮಾರ್ಚ್ ೧೮೮೪ರಲ್ಲಿ ಒಂದು ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬದಲ್ಲಾಯಿತು.

ಬಾಲ್ಯ ಜೀವನ[ಬದಲಾಯಿಸಿ]

ಸ್ವಾಮೀ ಭಾರತೀ ಕೃಷ್ಣ ತೀರ್ಥರ ಮೊದಲ ಹೆಸರು ವೆಂಕಟರಮಣ ಶಾಸ್ತ್ರೀ.ಇವರು ಪಿ.ನರಸಿಂಹ ಶಾಸ್ತ್ರೀಗಳ ಮಗನಾಗಿ ೧೮೮೪ ರಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಇವರು ಸಾಮಾನ್ಯವಾಗಿ ಯಾವಾಗಲೂ ಗಣಿತ, ವಿಜ್ಞಾನ, ಮಾನವಿಕ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದರು.ಮತ್ತು ತಮ್ಮ ನೆಚ್ಚಿನ ಭಾಷೆಯಾದ ಸಂಸ್ಕೃತ ಭಾಷೆಯಲ್ಲಿ ಹೆಚ್ಚಿನ ಪ್ರಾವಿಣ್ಯತೆಯನ್ನು ಹೊಂದಿದ್ದರು.<gallery> ಚಿತ್ರ:Vedic-Mathematics-Nikhilam.jpg

ಶಿಕ್ಷಣ[ಬದಲಾಯಿಸಿ]

ಮದ್ರಾಸ್ ವಿಶ್ವವಿದ್ಯಾನಿಲಯ

ಇವರು ಜನವರಿ, ೧೮೯೯ರಲ್ಲಿ,[[ಮದ್ರಾಸ್ ವಿಶ್ವವಿದ್ಯಾನಿಲಯ]]ದಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ಶಿಕ್ಷಣವನ್ನು ಮುಗಿಸಿದರು.ಆಗೆಯೇ ತಮ್ಮ ಕಾಲೇಜಿನ ದಿನಗಳಲ್ಲಿ ಇತಿಹಾಸ, ಸಮಾಜಶಾಸ್ತ್ರ, ತತ್ವಶಾಸ್ತ್ರ, ರಾಜಕೀಯ ಮತ್ತು ಸಾಹಿತ್ಯದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ.ವೆಂಕಟರಮಣ ಶಾಸ್ತ್ರೀಗಳು ಗೋಪಾಲ ಕೃಷ್ಣ ಗೋಖಲೆಯವರ ಕೆಳಗೆ ಕೆಲವು ದಿನಗಳ ಕಾಲ ಕೆಲಸ ಮಾಡಿದರು.ಇವರು ೧೯೦೮ ರಲ್ಲಿ ಮೈಸೂರಿನ ಶೃಂಗೇರಿ ಮಠದಲ್ಲಿ ಸ್ವಾಮೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಅವರಲ್ಲಿ ವಿದ್ಯೆಯನ್ನು ಕಲಿಯಲು ಸೇರಿದರು. ಪ್ರೊಪೆಸರ್ ವೆಂಕಟರಮಣ ಶಾಸ್ತ್ರೀಗಳು ೩ ವರ್ಷಗಳ ಕಾಲ ಕಾಲೇಜಿನಲ್ಲಿ ಭೋದನೆಯನ್ನು ನೀಡಿದರು.ಆದರೆ ೧೯೧೧ ರಲ್ಲಿ ಇವರು ಕಾಲೇಜನ್ನು ಬಿಟ್ಟು ಮತ್ತೆ ಶೃಂಗೇರಿ ಮಠಕ್ಕೆ ತೆರಳಿದರು.[[ಶೃಂಗೇರಿ]]ಗೆ ಹೋದ ಮೇಲೆ ೮ ವರ್ಷಗಳ ಕಾಲ ವೇದಾಂತವನ್ನು ಸಚ್ಚಿದಾನಂದ ಶಿವಾಭಿನವ ನರಸಿಂಹ ಸ್ವಾಮಿಗಳಿಂದ ವೇದಾಂತ ತತ್ವ ಶಾಸ್ತ್ರವನ್ನು ಕಲಿತರು.ಆ ಹತ್ತಿರದ ಕಾಡುಗಳಲ್ಲಿ ಧ್ಯಾನ, ಬ್ರಹ್ಮಸಾಧನೆ, ಯೋಗ ಸಾಧನ ಅಭ್ಯಾಸಗಳನ್ನು ಕಲಿತರು.ಅದು ಆಧ್ಯಾತ್ಮಿಕ ಉತ್ತುಂಗಕ್ಕೆ ಏರಿತು. ಈ ೮ ವರ್ಷಗಳಲ್ಲಿ ಇವರು ಸಂಸ್ಕೃತ ಮತ್ತು ತತ್ವಶಾಸ್ತ್ರಗಳನ್ನು ಅಲ್ಲಿನ ಸ್ಥಳೀಯ ಶಾಲೆಗಳು ಮತ್ತು ಆಶ್ರಮಗಳಲ್ಲಿ ಭೋಧಿಸಿದರು. ಇವರು ಅತಿಥಿಯ ಪ್ರೊಪೆಸರ್‍ ಆಗಿ ಮುಂಬೈ, ಪುಣೆ,ಕಾನ್‍ದೇಶಗಳ ಸಂಸ್ಥೆಗಳಲ್ಲಿ ಭೋಧಿಸಿದರು.

ಶಾರದಾ ಪೀಠ[ಬದಲಾಯಿಸಿ]

ಶೃಂಗೇರಿಯ ಶಾರದಾ ಪೀಠ

ನಂತರ ಇವರು ೮ ವರ್ಷಗಳ ನಂತರ ಆಧ್ಯಾತ್ಮಿಕ ಅಭ್ಯಾಸ ಮತ್ತು ವೇದಾಂತ ಮತ್ತು ವೈದಿಕ ಶಾಸ್ತ್ರದ ಅದ್ಯಯನವನ್ನು ಪವಿತ್ರ ಆದೇಶವನ್ನಾಗಿ ಆರಂಭಿಸಲಾಯಿತು. ಇವರಿಗೆ ಶೃಂಗೇರಿಯ ಶಾರದಾ ಪೀಠದ ತ್ರಿವಿಕ್ರಮ ತೀರ್ಥರ ಮೂಲಕ ಜುಲೈ ೪, ೧೯೧೯ ರಂದು ಇವರಿಗೆ ಸ್ವಾಮೀ ಮತ್ತು ಸ್ವಾಮೀ ಭಾರತೀ ಕೃಷ್ಣ ತೀರ್ಥ ಎಂದು ವೆಂಕಟಮಣಶಾಸ್ತ್ರಿಗಳಿಗೆ ಹೆಸರು ಬಂದಿತು.೧೯೨೧ ರಲ್ಲಿ ಶಾರದಾ ಪೀಠಗಳಲ್ಲಿ ಕೇವಲ ಎರಡೂ ವರ್ಷಗಳ ನಂತರ ಸ್ವಾಮೀ ಭಾರತೀ ಕೃಷ್ಣ ತೀರ್ಥರು ಹೆಸರಿನಿಂದ ಶಂಕರಚಾರ್ಯ ಎಂದು ಅವರ ಹೆಸರನ್ನು ಪ್ರತಿಷ್ಠಾಪಿಸಲಾಯಿತು. ನಂತರ ಇವರಿಗೆ ಜಗದ್ಗುರು ಎಂಬ ಶೀರ್ಷಿಕೆಯನ್ನು ಇವರಿಗೆ ನೀಡಲಾಯಿತು. ನಂತರ ಇವರು ಭಾರತದ ಹಲವಾರು ಮೂಲೆಗಳಿಗೆ ತೆರಳಿ ತಮ್ಮ ಸನಾತನ ಧರ್ಮ, ವೈದಿಕ ತತ್ವಶಾಸ್ತ್ರ, ಮತ್ತು ವೇದಾಂತ ಉಪನ್ಯಾಸವನ್ನು ನೀಡಿದರು.ಇವರಿಗೆ ಶಾರದಾ ಪೀಠದ ಹೊಸ ಶಂಕರಚಾರ್ಯರಿಗೆ ಸ್ವಾಮೀ ಸ್ವರೂಪನಂದ ಎಂದು ಮರು ಹೊಸದಾಗಿ ಹೆಸರನ್ನು ಪ್ರತಿಷ್ಠಾಪಿಸಲಾಯಿತು.

ಗೋವರ್ಧನ ಮಠ[ಬದಲಾಯಿಸಿ]

ನಂತರ ಗೋವರ್ಧನ ಮಠದ ಮಧುಸೂದನ ತೀರ್ಥರ ಆರೋಗ್ಯ ವಿಫಲವಾದಾಗ ಅವರು ಸ್ವಾಮೀ ಭಾರತೀ ಕೃಷ್ಣ ತೀರ್ಥರನ್ನು ತನ್ನ ನಂತರ ಮಠಾಧಿಪತಿಯಾಗಬೇಕೆಂದು ಕೇಳಿಕೊಂಡಾಗ ಅದನ್ನು ಸ್ವಾಮೀ ಭಾರತೀ ಕೃಷ್ಣ ತೀರ್ಥರು ಅದನ್ನು ಗೌರವಾನ್ವಿತವಾಗಿ ನಿರಾಕರಿಸಿದರು. ೧೯೨೫ ರಲ್ಲಿ ಸ್ವಾಮೀ ಮಧುಸೂಧನ ತೀರ್ಥರ ಆರೋಗ್ಯ ಗಂಭೀರ ತಿರುವನ್ನು ಪಡೆದುಕೊಂಡಾಗ ಇಂತಹ ಪರಿಸ್ಥಿತಿಯಲ್ಲಿ ಸ್ವಾಮೀ ಭಾರತೀ ಕೃಷ್ಣ ಅವರು ಮಠಾಧಿಪತಿಯಾಗಲು ಒಪ್ಪಿಕೊಳ್ಳಬೇಕಾಯಿತು. ಸ್ವಾಮೀ ಭಾರತೀ ಕೃಷ್ಣ ತೀರ್ಥರು ಗೋವರ್ಧನ ಪೀಠದ ಮಠಾದಿಪತಿಗಳಾದ ಮೇಲೆ ಶಾಂತಿ, ಸಾಮರಸ್ಯ ಮತ್ತು ಭ್ರಾತೃತ್ವ ಮೌಲ್ಯಗಳನ್ನು ಹರಡಲು, ಮತ್ತು ಸನಾತನ ಧರ್ಮದ ಸಂದೇಶವನ್ನು ಹರಡಲು ಮೂವತ್ತೈದು ವರ್ಷಗಳ ಕಾಲ ಅನೇಕ ರಾಷ್ಟ್ರಗಳಲ್ಲಿ ಪ್ರವಾಸಗಳನ್ನು ಕೈಗೊಂಡರು. ಇದರಿಂದ ಇವರು ಭಾರತೀಯ ಸಂಸ್ಕೃತಿಗೆ ತಮ್ಮದೆಯಾದ ಕೊಡುಗೆಯನ್ನು ನೀಡುವುದರ ಮೂಲಕ ಭಾರತೀಯ ಸಂಸ್ಕೃತಿಗೆ ಪುನರುಜ್ಜೀವನವನ್ನು ನೀಡಿದ್ದಾರೆ.ಮತ್ತು ಮಠಾದೀಶರಾದ ಸಂದರ್ಭದಲ್ಲಿ ಧರ್ಮ, ವಿಜ್ಞಾನ, ಗಣಿತ, ವಿಶ್ವ ಶಾಂತಿ, ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕುರಿತು ಹಲವಾರು ಗ್ರಂಥಗಳು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.

ವಿದೇಶೀಯ ಪ್ರಯಾಣ ಮತ್ತು ವೈದಿಕ ಧರ್ಮದ ಹರಡುವಿಕೆ[ಬದಲಾಯಿಸಿ]

ನಂತರ ೧೯೫೩ ರಲ್ಲಿ ನಾಗ್ಪುರ ಎಂಬಲ್ಲಿ ಇವರು ವಿಶ್ವ ಪುನರ್‍ನಿರ್ಮಾಣ ಸಂಘ (ವಿಶ್ವ ಪುನರ್ನಿರ್ಮಾಣ ಅಸೋಸಿಯೇಷನ್) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.ಈ ಆಡಳಿತ ಮಂಡಳಿಯು ಭಾರತೀ ಕೃಷ್ಣರ ಶಿಷ್ಯರು, ಭಕ್ತರು ಮತ್ತು ಮಾನವೀಯ ಸೇವೆ ತಮ್ಮ ಆಧ್ಯಾತ್ಮಿಕ ಆದರ್ಶಗಳನ್ನು ಹೊದಿದ್ದ ಅಭಿಮಾನಿಗಳನ್ನು ಒಳಗೊಂಡಿತ್ತು.ನಂತರ ಈ ಕಾರ್ಯಾಚರಣೆಗೆ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಬಿಪಿ ಸಿನ್ಹಾ, ಅದರ ಅಧ್ಯಕ್ಷತೆಯ ಕಾರ್ಯವನ್ನು ನಿರ್ವಹಿಸಿದರು. ಮಾಜಿ ಭಾರತದ ಹಣಕಾಸು ಸಚಿವರಾದ ಡಾ, ಸಿಡಿ ದೇಶ್ಮುಖ್‍ ಮತ್ತು ಧನಸಹಾಯ ವಿಶ್ವವಿದ್ಯಾಲಯ ಆಯೋಗದ ಮಾಜಿ ಅಧ್ಯಕ್ಷರು ತನ್ನ ಉಪಾಧ್ಯಕ್ಷ ಕಾರ್ಯವನ್ನು ನಿರ್ವಹಿಸಿದರು.ಫೆಬ್ರವರಿ ೧೯೫೮ ರಲ್ಲಿ [[ಯುನೈಟೆಡ್ ಸ್ಟೇಟ್ಸ್]] ನ ಸಾಗರದಾಚೆಯ ಪ್ರವಾಸವನ್ನುಇವರು ಕೈಗೊಂಡಿದ್ದರು. ಇದರ ಮುಖ್ಯ ಉದ್ದೇಶ ಆ ರಾಷ್ಟ್ರಗಳಲ್ಲಿ ವಿಶ್ವ ಶಾಂತಿ ಮತ್ತು ವೇದಾಂತವನ್ನು ಹರಡುವುದು.ಆದ್ದರಿಂದ ಇವರು ಲಾಸ್ ಏಂಜಲೀಸ್, [[ಕ್ಯಾಲಿಫೋರ್ನಿಯಾ]]ದಲ್ಲಿ ಮೂರು ತಿಂಗಳ ಕಾಲ ಉಳಿದರು. ಇದು ಅವರ ಮೊದಲ ಭಾರತದ ಹೊರಗಿನ ಪ್ರವಾಸವಾಗಿತ್ತು. ಅಮೇರಿಕಾದಲ್ಲಿ ಪರಮಹಂಸ ಯೋಗಾನಂದರು ವೇದಾಂತ ಸಮಾಜವನ್ನು ಸ್ಥಾಪಿಸಿದರು, ಈ ಸಮಯದಲ್ಲಿಯೇ ಆಲ್ಬರ್ಟ್ ರುಡಾಲ್ಫ್ ಇವರ ಶಿಷ್ಯರಾದರು. ಇವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಧಾರ್ಮಿಕ ಸಮಾವೇಶಗಳು ಮತ್ತು ಯೋಗ ಕಾರ್ಯಾಗಾರಗಳಲ್ಲಿ ಹಾಜರಾಗಿರುತ್ತಿದ್ದರು.ಇವರು ೧೯೬೦ ರ ತಮ್ಮ ಸಾವಿನವರೆಗೆ ಗೋವರ್ಧನ ಮಠದಲ್ಲಿ ಶಂಕರಚಾರ್ಯ ಉಳಿದರು.

ವೈದಿಕ ಗಣಿತ[ಬದಲಾಯಿಸಿ]

ವೈದಿಕ ಗಣಿತ

ಸ್ವಾಮೀ ಭಾರತೀ ಕೃಷ್ಣರ [[ವೈದಿಕ ಗಣಿತ]] ಪುಸ್ತಕದಲ್ಲಿ ಹದಿನಾರು ಸೂತ್ರಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾರೆ.ಇದು ಪ್ರಾಚೀನ ಹಿಂದೂ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಈ ವೈದಿಕ ಗಣಿತ ಗ್ರಂಥವು ಅಂಕಗಣಿತ, ಪೂರ್ಣಾಂಕಗಳ ಗುಣಾಕಾರ ಮತ್ತು ಭಾಗಾಕಾರ, ಸರಣಿ ಸಂಕಲನ, ದಶಮಾಂಶಗಳನ್ನು ಪುನರಾವರ್ತಿಸುವ ವಿಧಾನದ ಮಾಹಿತಿಯನ್ನು ನೀಡುತ್ತದೆ.ಹಾಗೆಯೇ ಈ ಗ್ರಂಥವು ಹಲವಾರು ಸಮೀಕರಣಗಳು, ಪೈಥಾಗರಿಯನ್ ಪ್ರಮೇಯ, ಅಪೊಲ್ಲೋನೀಯಸ್ 'ಪ್ರಮೇಯಗಳನ್ನು ಒಳಗೊಂಡಿದೆ.ಹಾಗೆಯೇ ಇದು ತ್ರಿಕೋನ ಮಿತಿ, ಖಗೋಳ ವಿಜ್ಞಾನ, ಭೂಮಿಯ ದೈನಂದಿನ ಸರದಿ, ಸೂರ್ಯ ಮತ್ತು ಭೂಮಿಯ ವಾರ್ಷಿಕ ಸರಧಿ, ಮತ್ತು ಗ್ರಹಣಗಳ ಬಗ್ಗೆ ತಿಳಿಸುತ್ತದೆ. ಇವರು ಅಂತಿಮವಾಗಿ ಅರೆಬಿಕ್ ಸಂಖ್ಯೆಗಳು ಮತ್ತು "ಪೈಥಾಗರಸ್ ಕ್ರಮ" ಪ್ರಮೇಯಗಳನ್ನು ಪ್ರತಿಫಾದಿಸಿದರು.ಇವರು ಮೇ, ೧೯೫೮ ರಲ್ಲಿ ದೂರದರ್ಶನದಲ್ಲಿ ಮಾತುಕತೆ ಮತ್ತು ಗಣಿತದ ಪ್ರದರ್ಶನಗಳನ್ನು ನೀಡಿದ್ದರು.ಸ್ವಾಮೀ ಭಾರತೀ ಕೃಷ್ಣ ತೀರ್ಥರ ವೈದಿಕ ಗಣಿತವು ೧೬ ಸೂತ್ರಗಳನ್ನು ಒಳಗೊಂಡಿದ್ದು, ಪ್ರತೀ ಸೂತ್ರದ ಮೇಲೆ ಹದಿನಾರು ಸಂಪುಟಗಳನ್ನು ಬರೆದಿದ್ದಾರೆ. ಆದರೆ ಹಸ್ತಪ್ರತಿಗಳು ಪರಿಹರಿಸಲಾಗದಂತೆ ಕಳೆದು ಹೋದವು. ನಿಜವಾಗಿಯೂ ಈ "ವೈದಿಕ ಗಣಿತ" ವು ಮಾನವ ಗಣಿತದ ಮೇಲೆ ಬದುಕುಳಿದಿರುವ ಕೃತಿಯಾಗಿದೆ.

ಉಲ್ಲೇಖನಗಳು[ಬದಲಾಯಿಸಿ]

  1. www.mlbd.com/BookDecription.aspx?id=7968
  2. www.amazon.in/.../s?...27%3AJagadguru%20Sw...
  3. www.ms.uky.edu/.../Tirthaji_S.B.K.,_Agarwala_V.S.-Vedic_mathematics_or_sixteen_...
  4. the-wanderling.com/bharati.html