ವಿಷಯಕ್ಕೆ ಹೋಗು

ಸದಸ್ಯ:A. NagaShreya1910157

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

[ಬದಲಾಯಿಸಿ]

ಎಲ್ಲರಿಗೂ ನಮಸ್ಕಾರ.ನನ್ನ ಹೆಸರು ಎ. ನಾಗಶ್ರೇಯ.ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ 19/10/2001 ರಂದು ಜನಿಸಿದೆ.ನನ್ನ ತಂದೆಯ ಹೆಸರು ಎಂ.ಅರವಿಂದ್ ಬಾಬು,ಅವರು ಒಂದು ಉದ್ಯಮಿ.ನನ್ನ ತಾಯಿಯ ಹೆಸರು ಕೆ.ಎಸ್.ನಯನ,ಅವರು ಗೃಹಿಣಿ.ನಾನು ಶಾಲೆಯಿಂದ ಬಂದ ಕೂಡಲೇ ನನ್ನ ತಾಯಿ ನನ್ನ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುತಿದ್ದರು.ಆದರಿಂದ ನಾನು ಪ್ರಥಮ ದರ್ಜೆ ಪಡೆಯಲು ಸಾಧ್ಯವಾಯಿತು.ನಾನು ನನ್ನ ತಾಯಿ ಕೇಳಿದ ಪ್ರಶ್ನೆಗಳಿಗೆ ಬೇಗ ಬೇಗ ಉತ್ತರ ಹೇಳಿ ಆಟದಲು ಹೋಗುತ್ತಿದ್ದೆ.ನಾವು ಕಣ್ಣ ಮುಚ್ಚಾಲೆಯ ಆಟ ಬಹಳ ಆಡುತ್ತಿದ್ದೆವು.ಬುಗುರಿ ಆಟ ಆಡುತ್ತಿದ್ದೆವು.ನಾನು ಸಂಗೀತ ಶಾಲೆಗೆ ಹೋಗುತ್ತಿದೆ,ಕುಚುಪುಡಿ ನಾಟ್ಯ ಕಲೆತಿದ್ದೇನೆ.

ನನ್ನ ಶಾಲೆ

[ಬದಲಾಯಿಸಿ]

ನಾನು ಏಳನೇ ತರಗತಿವರೆಗು ವಿದ್ಯಾನಿಧಿ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಘ ಮುಗಿಸಿದೆ.ಅಲ್ಲಿ 4ನೇ ತರಗತಿಯವರೆಗು ಪ್ರಥಮ ದರ್ಜೆ ಪಡೆದೆ.ಹಾಗೂ 5ನೇ ತರಗತಿಯಿಂದ 7ನೇ ತರಗತಿಯವರೆಗೂ ದ್ವಿತೀಯ ದರ್ಜೆ ಪಡೆದೆ. ಏಳನೇ ತರಗತಿಯಲ್ಲಿ ಹೈದರಾಬಾದ್ನಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಾನು ಹೈಸ್ಕೂಲನ್ನು ಲೀಡರ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮುಗಿಸಿದೆ.ನಾನು ಎಂಟನೇ ತರಗತಿಯಲ್ಲಿ ಪ್ರಥಮ ದರ್ಜೆ ಪಡೆದೆ.ನಾನು ಬರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದೆ. ಹತ್ತನೇ ತರಗತಿಯಲ್ಲಿ 10 ಸಿ.ಜಿ.ಪಿ.ಏ. ಪಡೆದೆ.

ನನ್ನ ಕಾಲೇಜು

[ಬದಲಾಯಿಸಿ]

ನಂತರ ನಾನು ನನ್ನ ಪಿ.ಯು.ಸಿ.ಯನ್ನು ಲೀಡರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ.ನಾನು ವಾಣಿಜ್ಯ ವಿಭಾಗ ಆಯ್ಕೆ ಮಾಡಿದೆ.ಏಕೆಂದರೆ ನನಗೆ ವ್ಯವಹಾರ ಅಧ್ಯಯನದಲ್ಲಿ ಬಹಳ ಆಸಕ್ತಿ ಇತ್ತು.ನಾನು ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ.ನನ್ನ ಕಾಲೇಜಿನ ದಿನಗಳು ಬಹಳ ನೆನಪಾಗುವ ದಿನಗಳು.ನನ್ನ ಶಿಕ್ಷಕರೆಲ್ಲರೂ ನನಗೆ ಬಹಳ ಆಪ್ತರು.ನಮ್ಮ ಪ್ರಾಂಶುಪಾಲರು ನಮಗೆ ತುಂಬಾ ಧೈರ್ಯ ಮತ್ತು ಸ್ಫೂರ್ತಿ ಕೊಟ್ಟಿದ್ದಾರೆ.ನನಗೆ ವಾಣಿಜ್ಯ ವಿಭಾಗದ ಶಿಕ್ಷಕರೆಂದರೆ ನನಗೆ ಬಹಳ ಇಷ್ಟ.ಅದರಲ್ಲೂ ವ್ಯವಹಾರ ಅಧ್ಯಯನದ ಶಿಕ್ಷಕಿ ಎಂದರೆ ಬಹಳ ಇಷ್ಟ.ಅವರು ನನಗೆ ತಾಯಿಯ ಹಾಗೆ.ನಮ್ಮ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದೆವು.ನಮಗೆ ಐದು ತಿಂಗಳ ಕ್ಯಾಂಪ್ ನಡೆಸಿದ್ದರು.ಹತ್ತನೇ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಶಾಲೆಯಲ್ಲೇ ವಾಸಿಸಬೇಕಾಗಿತ್ತು.ಆ ದಿನಗಳು ಬಹಳ ನೆನಪುಗಳನ್ನು ಕೊಟ್ಟಿವೆ.ನನ್ನ ಸ್ನೇಹಿತರೊಂದಿಗೆ ಕಳೆದ ಕಾಲ,ಆ ಹಾಸ್ಯ ಸಂಗತಿಗಳು,ಅವರಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡಿದ್ದು,ಮುಂತಾದವು ನೆನೆಸಿಕೊಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ.ನನಗೆ ನನ್ನ ಸ್ನೇಹಿತರೆಂದರೆ ಪ್ರಾಣ ಕೊಡುವಷ್ಟು ಇಷ್ಟ.ನನ್ನ ಸ್ನೇಹಿತರು ನನಗೆ ದ್ವಿತೀಯ ಪಿ.ಯು.ನಲ್ಲಿ ಒಳ್ಳೆ ಜೀವನ ಪಾಠಗಳನ್ನು ತಿಳಿಸಿಕೊಟ್ಟಿದ್ದಾರೆ.ನಾನು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ನಾನು ನನ್ನ ದ್ವಿತೀಯ ಪಿ.ಯುನಲ್ಲಿ 97.5% ಪಡೆದು ನಮ್ಮ ಕಾಲೇಜಿಗೆ ಪ್ರಥಮ ಸ್ಥಾನ ಪಡೆದೆ.ನಾನು ನಮ್ಮ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದೇನೆ. ಹಾಗೂ ರಾಜ್ಯದ 11ನೇ ಸ್ಥಾನ ಗಳಿಸಿದ್ದೇನೆ. ನನ್ನ ಪಿ.ಯು ಪಾಲಿತಾಂಶದಿಂದ ನನ್ನ ಎಲ್ಲ ಕುಟುಂಬದ ಸದಸ್ಯರು ಬಹಳ ಸಂತೋಷ ಪಟ್ಟರು.ನಂತರ ರಜೆ ದಿನಗಳಲ್ಲಿ ನನ್ನ ಸ್ನೇಹಿತರೊಂದಿಗೆ ಘಾಟಿ ಕ್ಷೇತ್ರದ ಬಳಿ ಹೋಗಿದ್ದೆ ಹಾಗೂ ಭಾನುವಾರ ಊರಿಗೆ ಹೋಗಿ ನನ್ನ ಸ್ನೇಹಿತರೊಂದಿಗೆ ಮೈದನಹಳ್ಳಿ ಕಾಡಿಗೆ ಹೋಗಿದ್ದೆ. ಅಂದು ನಾವು ಜಿಂಕೆಗಳನ್ನು ನೋಡಿದೆವು.ಆ ಸವಿ ನೆನಪುಗಳು ನನಗೆ ಬಹಳ ಸಂತಸ ಕೊಡುತ್ತದೆ.ಪ್ರಸ್ತುತ ನಾನು ಬೆಂಗಳೂರಿನ ಪ್ರಸಿದ್ಧ ಕಾಲೇಜು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಚೆಲೋರ್ ಆಫ್ ಕಾಮರ್ಸ್ ಮಾಡುತ್ತಿದ್ದೇನೆ. ನಾನು ಕ್ರೈಸ್ಟ್ ಕಾಲೇಜು ಆಯ್ಕೆ ಮಾಡಲು ಕಾರಣವೇನೆಂದರೆ ನನಗೆ ಎಲ್ಲಾ ರೀತಿಯಲ್ಲೂ ಜ್ಞಾನ ಪಡೆಯುವ ಅವಕಾಶ ಇದೆ ಎಂದು.ನಾನು ನನ್ನ ಕ್ರೈಸ್ಟ್ ಕಾಲೇಜಿಗೆ 11 ಜೂನ್ ರಂದು ಬಂದೆ.ಮೊದಲು ನನಗೆ ಪರಿಚಯವಾದದ್ದು ಪುಷ್ಪ ಎಂಬ ಹುಡುಗಿ.ಎಲ್ಲಿ ಈಗ ನನಗೆ ಒಳ್ಳೆಯ ಗೆಳೆಯರ ಸಂಘ ಸಿಕ್ಕಿದೆ.ನಾನು ನನ್ನ ಸ್ನೇಹಿತರೊಂದಿಗೆ ಒಳ್ಳೆಯ ಕಾಲ ಕಳೆಯುತ್ತಿದ್ದೇನೆ.ಎಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.ಎಲ್ಲಾ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಸುತ್ತಾರೆ.ನಾನು ಕೆಲವೊಂದರಲ್ಲಿ ಭಾಗವಹಿಸಿದ್ದೆ.ಸೆಪ್ಟೆಂಬರ್ 7ರಂದು "ಭಾಷಾ ಉತ್ಸವ" ಎಂಬ ಕಾರ್ಯಕ್ರಮ ಬಹಳ ಅದ್ಭುತವಾಗಿ ನಡೆಯಿತು.ಅಂದು ವಿವಿಧ ರಾಜ್ಯಗಳ ಸಂಸ್ಕೃತಿ,ಉಡುಪುಗಳ ಶೈಲಿಯನ್ನು ತಿಳಿದುಕೊಂಡೆವು.ನಂತರ ನಮ್ಮ ಕುಟುಂಬದ ಬಗ್ಗೆ ಮಾತನಾಡುವುದಾದರೆ ನನ್ನ ತಂದೆ ತಾಯಿಯರು ನನ್ನನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ.ನನ್ನ ಎಲ್ಲಾ ಆಸೆಗಳನ್ನು ಅವರಿಗೆ ಎಷ್ಟೇ ಕಷ್ಟವಿದ್ದರು ಇಲ್ಲ ಅನ್ನದೆ ಪೂರೈಸಿದ್ದಾರೆ.ನನ್ನ ಮಾತಿಗೆ ನಮ್ಮ ಮನೆಯಲ್ಲಿ ಬೆಲೆ ಕೊಡುತ್ತಾರೆ. ನನಗೆ ನನ್ನ ತಂದೆ ತಾಯಿ ಎಂದರೆ ಬಹಳ ಇಷ್ಟ.ನನ್ನ ತಾಯಿ ನನಗೆ ಸ್ನೇಹಿತಳಿದಂತೆ.ನಾನು ಎಲ್ಲಾ ವಿಷಯ ತನ್ನೊಂದಿಗೆ ಹೇಳುತ್ತೇನೆ.ನನ್ನ ಪೋಷಕರು ನನಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಾರೆ.ನಾನು ಇಂತಹ ಪೋಷಕರನ್ನು ಪಡೆಯಲು ಧನ್ಯಳು.ನಾನು ಆ ದೇವರಿಗೆ ಕೋಟಿ ಕೋಟಿ ಧನ್ಯವಾಧಗಳನ್ನು ಹೇಳಲು ಇಷ್ಟಪಡುತ್ತೇನೆ,ಇಂತಹ ತಂದೆ ತಾಯಿಯನ್ನು ನನಗೆ ಕೊಟ್ಟಿದ್ದಕ್ಕೆ.ನನ್ನ ತಂದೆ ತಾಯಿಯರೆ ನನ್ನ ಪ್ರಪಂಚ.ನಾನು ಅವರಿಗೆ ಕೋಟಿ ಕೋಟಿ ವಂದನೆಗಲನ್ನು ಹೇಳಲು ಇಚ್ಛಿಸುತ್ತೇನೆ.ನನಗೆ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಅದರ ಇತಿಹಾಸ,ಅಲ್ಲಿನ ಜನರ ಭಾಷೆ,ಸಂಸ್ಕೃತಿ,ಉಡುಪು ಮತ್ತು ಆಹಾರ ಪದ್ಧತಿಗಳ ಬಗ್ಗೆ ತಿಳಿದುಕೊಳ್ಳಲು ಬಹಳ ಆಸಕ್ತಿ.ನನ್ನ ಈ ಆಸೆಯನ್ನು ನನ್ನ ತಂದೆ ಪೂರಿಸಿದ್ದಾರೆ.ನಾನು ಸಮಯ ಕಳೆಯಲು ಚಿತ್ರಗಳನ್ನು ಬಿಡಿಸುತ್ತೇನೆ,ಕರಕುಶಲ ವಸ್ತುಗಳನ್ನು ಮಾಡುತ್ತೇನೆ.ನಾನು ಈ ಸ್ಥಾನದಲ್ಲಿ ಇರಲು ಕಾರಣವಾದ ನನ್ನ ಪೋಷಕರು,ಗುರುಗಳು ಮತ್ತು ನನ್ನ ಸ್ನೇಹಿತರಿಗೆ ಎಂದಿಗೂ ಋಣಿಯಾಗಿರುತ್ತೇನೆ.ಅವರೆಲ್ಲರಿಗೆ ನನ್ನ ಹೃಡ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ